ಪಾಪ ಗುರುಗಳು

ಪಾಪ ಗುರುಗಳು
—————–

ಛೆ.. ಇದೆಂಥಾ ಸ್ಥಿತಿ ಬಂದಿದೆ ನಮ್ಮ ಗುರುಗಳಿಗೆ! ಎಲ್ಲವನ್ನೂ ಬಿಟ್ಟು ಸನ್ಯಾಸ ಸ್ವೀಕರಿಸಿದವರಿಗೆ ಪೀಠ ಬಿಡಲಾಗುತ್ತಿಲ್ಲ. ಜನರಿಗೆ ಸ್ವಲ್ಪವಾದರೂ ಬುದ್ಧಿ ಬೇಡವೆ? ಆಕಡೆ ಬಿಟ್ಟು ಹೋಗಿ ಅಂತ ಒಂದಿಷ್ಟು ಜನ.. ಈ ಕಡೆ ಬಿಡಬೇಡಿ ಅಂತ ಇನ್ನೊಂದಿಷ್ಟು ಜನ. ಸ್ವತಃ ಅವರ ಅಭಿಪ್ರಾಯವನ್ನೇ ಕೇಳುತ್ತಿಲ್ಲ. ತನ್ನ ಅಭಿಪ್ರಾಯ ಆ ರಾಮನಿಗೆ ಹೇಳೋಣ ಅಂದರೆ ಅವನು ಮಠ ಬಿಟ್ಟು ಓಡಿ ಹೋಗಿ ವರ್ಷಗಳೇ ಆಗಿಹೋಗಿದೆ. ಉಳಿದಿರುವವನು ತನ್ನ ಭಕ್ತ ರಾಮಚಂದ್ರ ಎಂದು ಅವನಿಗೆ ಏನೋ ಮೂರ್ನಾಲ್ಕು ಮತು ಹೇಳಲಿಕ್ಕೆ ಹೋದರೆ ಅದರ ಆಡಿಯೋ ರೆಕಾರ್ಡ್ ಮಾಡಿ ಜನರಿಗೆ ಹಂಚಿಬಿಟ್ಟಿದ್ದಾರೆ ಕೆಲವರು. ಇವಕ್ಕೆಲ್ಲಾ ಎಲ್ಲಿಂದ ಪರಿಹಾರ ಹುಡುಕುವುದು ನಮ್ಮ ಗುರುಗಳು. ಭಗವಂತನೇ ತಾನಾಗಿರುವಾಗ ಬೇರೆಯವರ ಕಷ್ಟಗಳನ್ನು ಲೀಲಾಜಾಲವಾಗಿ ಪರಿಹರಿಸಿಬಿಡಬಹುದು. ಮಕ್ಕಳಾಗದಿದ್ದವರಿಗೆ ಮಕ್ಕಳು ಮಾಡಿಸಿ ಕೊಟ್ಟುಬಿಡಬಹುದು. ಜಾತಕ ದೋಷವಿರುವವರಿಗೆ ಏಕಾಂತದಲ್ಲಿ ಪರಿಹಾರ ನೀಡಿ ಕಳುಹಿಸಬಹುದು. ಗಂಡನ ಜೊತೆ ಸರಿ ಇಲ್ಲದವರಿಗೆ ಸಂಸಾರ ಏನೆಂದು ತೋರಿಸಿಕೊಡಬಹುದು. ಆದರೆ ತನಗೇ ಬಂದಿರುವ ಸಮಸ್ಯೆಯನ್ನು ಭಕ್ತರು ಪರಿಹರಿಸಬೇಕಲ್ಲವೇ.. ತಾನೇ ಎಷ್ಟು ಎಂದು ಹೋರಾಟ ಮಾಡಿಯಾನು? ಇಂತಹ ಪರಿಸ್ಥಿತಿ ರಾಮ, ಕೃಷ್ಣರಿಗೂ ಬಂದಿರಲಿಲ್ಲ.

ಅತ್ಯಾಚಾರ ಎಂದರೇನು? ಒಪ್ಪಿಗೆ ಇಲ್ಲದೆಯೇ ಅವರನ್ನು ಹಾಸಿಗೆಗೆ ಎಳೆಯುವುದೇ? ಅದು ದೈಹಿಕವಾಗಿ ಮಾಡುವಂಥದು. ಒಂದು ಬಾರಿ ಮಾಡಿ ಮುಗಿಸಿಬಿಟ್ಟರೆ ಆಯಿತು. ಅದು ಅಂತಹ ದೊಡ್ಡ ವಿಷಯವೇನಲ್ಲ. ಮರೆತುಬಿಡಬಹುದು. ಆದರೆ ಆ ಗುಟ್ಟು ರಟ್ಟಾದಾಗ ಸಮಾಜದಲ್ಲಾಗುವ ಮಾನಸಿಕ ಯಾತನೆಯಿದೆಯಲ್ಲಾ ಅದು ನಿಜವಾದ ಅತ್ಯಾಚಾರ. ಏನೋ ದುಡುಕು ಬುದ್ಧಿ.. ಹೆಣ್ಣುಚಪಲ.. ಪೀಠದಲ್ಲಿ ಕೂತಾಕ್ಷಣ ಎಲ್ಲಾ ಬಿಟ್ಟುಬಿಡಬೇಕೆ? ತೀರಿಸಿಕೊಂಡರಪ್ಪಾ.. ನಮ್ಮ ಗುರುಗಳ ಕೆಪಾಸಿಟಿ ಸ್ವಲ್ಪ ಜಾಸ್ತಿಯೇ. ಸ್ವಲ್ಪ ಏನು.. ಪುರುಷ ಪುಂಗವ ಅವರು. ನಮ್ಮೆಲ್ಲರಿಗಿಂತ ಜಾಸ್ತಿಯೇ ಎಂದಿಟ್ಟುಕೊಳ್ಳೋಣ. ಒಂದುಸಲಕ್ಕೇ ತೀರಲಿಲ್ಲ. ನೂರಾರು, ಸಾವಿರಾರು ಸಲ ಬೇಕಾಯಿತು. ಆದರೂ ತೀರುತ್ತಿಲ್ಲ. ಆದರೆ ತೀರುವ ತನಕ ಜನ ಕಾಯಬಾರದೆ? ಏನಂತಹ ನಷ್ಟವಾಗುತ್ತಿದ್ದುದು? ರಾಮನ ಪ್ರಸಾದ ಕೈತುತ್ತಿನಷ್ಟು ತಿಂದರೇನು ಕೇಜಿಗಟ್ಟಲೆ ತಿಂದರೇನು.. ಪ್ರಸಾದ ಪ್ರಸಾದವೇ ಅಲ್ಲವೆ. ತಿಂದು ಜೀರ್ಣಿಸಿಕೊಳ್ಳಲಿಕ್ಕಾಗಲಿಲ್ಲ. ಹಾಗೆ ನೋಡಿದರೆ ಒಬ್ಬರಿಗೇ ಕೇಜಿಗಟ್ಟಲೆ ಪ್ರಸಾದ ಕೊಟ್ಟಿದ್ದು ನಮ್ಮ ಗುರುಗಳ ತಪ್ಪೇ.. ಲಕ್ಷಾಂತರ ಹೆಣ್ಣುಮಕ್ಕಳು ಪ್ರಸಾದಕ್ಕಾಗಿ ಕಾತು ಕುಳಿತಿರುವಾಗ ಕೆಲವರಿಗೇ ಎಲ್ಲ ಹಂಚಿದರೆ ಹೇಗೆ. ಪ್ರಸಾದ ಸಿಗದ ಆ ಎಲ್ಲ ಹೆಂಗಳೆಯರ ಶಾಪ ಇರಬೇಕು ಇದು. ಪ್ರಸಾದ ಕೊಟ್ಟ ತಪ್ಪಿಗೆ ಮಾನಸಿಕ ಹಿಂಸೆ ಅನುಭವಿಸುತ್ತಿರುವುದು.

ನೀವೇ ಯೋಚನೆ ಮಾಡಿ, ಒಳಗಡೆ ಜ್ವಾಲಾಮುಖಿಯೇ ಕುದಿಯುತ್ತಿದ್ದರೂ ಹೊರಗಡೆಯಿಂದ ಮುಗುಳ್ನಗೆ ಸೂಸುವುದು ಎಷ್ಟು ಕಷ್ಟ ಎಂದು ಅದನ್ನು ಮಾಡಿನೋಡಿದವರಿಗಷ್ಟೇ ಗೊತ್ತು. ಪ್ರತೀ ಸುಂದರ ಹುಡುಗಿಯನ್ನು ಕಂಡಾಗ ಅವಳನ್ನು ಅನುಭವಿಸಬೇಕು ಎಂದೆನಿಸಿದರೂ ಮರುಕ್ಷಣವೇ ತಾನು ಕುಳಿತಿರುವುದು ಸಾವಿರಾರು ವರ್ಷಗಳ ಇತಿಹಾಸ ಇರುವ ಶಂಕರ ಪೀಠದಮೇಲೆ ಎಂದು ತನ್ನನ್ನು ತಾನು ಸಂತೈಸಿಕೊಂಡು “ತಂಗಿ.. ನಿಂಗ್ ಎಲ್ಲಾತೆ” ಎಂದು ಕೇಳುವುದು ಸುಲಭದ ಕೆಲಸವೇ? ಯಾವ ಯಾವುದೋ ಕಾರಣಗಳಿಗೆ ನೊಂದಿರುವ ಹೆಣ್ಣುಜೀವಗಳನ್ನು ನನ್ನ ಜೊತೆ ಮಲಗಿದರೆ ಶ್ರೀರಾಮನ ಕೃಪೆ ಆದಂತೆಯೇ ಎಂದು ನಂಬಿಸುವುದು ಸುಲಭದ ಮಾತೆ? ಹೀಗೆ ಕಂಡಕಂಡವರ ಸಮಸ್ಯೆಗಳನ್ನು ಪರಿಹಾರಮಾಡಿ ಜಗದೋಧ್ದ್ಧಾರ ಮಾಡಿದ ನಮ್ಮ ಗುರುಗಳು ಇವತ್ತು ತಮ್ಮೆಲ್ಲಾ ಶಕ್ತಿಯನ್ನು ಧಾರೆ ಎರೆದರೂ ಸಮಸ್ಯೆಯಿಂದ ಹೊರಬರಲಾಗದೇ ಒದ್ದಾಡಿತ್ತುರುವುದನ್ನು ಕಂಡು ಯಾವ ಮನುಷ್ಯನಿಗಾದರೂ ಅಯ್ಯೋ ಎನಿಸದೆ? ಇದರಿಂದ ಗೊತ್ತಾಗುವುದೊಂದೇ.. ಗುರುಗಳಲ್ಲಿ ದೋಷವಿಲ್ಲದಿದ್ದರೂ ಅವರ ಭಕ್ತರಲ್ಲೇ ಸಂಶಯ ಆವರಿಸಿದಂತಿದೆ. ದೇವರಿಗೆ ಶಕ್ತಿ ದೊರೆಯುವುದು ಆತನ ಭಕ್ತರ ನಿಶ್ಕಲ್ಮಶ ಭಕ್ತಿಯಿಂದ ಮತ್ತು ಆತನ ಶೃದ್ಧೆಯಿಂದ. ಅಂದು ಆ ಹೆಂಗಳೆಯರೆಲ್ಲಾ ನಮ್ಮ ಗುರುಗಳನ್ನು ಶ್ರೀರಾಮನೆಂದು ನಂಬಿದ್ದರಿಂದಲೇ ಅಲ್ಲವೇ ತಾವು ಸೀತಾಮಾತೆಯ ಅಪರಾವತಾರ ಎಂದುಕೊಂಡು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದು.. ಆದರೆ ಆ ತಾಟಕಿ ಎಲ್ಲಿಂದ ಬಂದಳೋ.. ಅವಳ ಮನಸ್ಸಿನಲ್ಲಿ ಸಂಶಯವಿದ್ದುದರಿಂದಲೇ ಇವತ್ತು ಇಂತಹ ಸಮಸ್ಯೆ ಎದುರಾಗಿರುವುದು!

ವಿಚಾರಮಾಡಿ ನೋಡಿ. ಈಗೀಗ ಎಲ್ಲೇ ಪಾದಪೂಜೆಗೆ ಹೋದರೂ, ಯಾರೇ ದರ್ಶನಕ್ಕೆ ಬಂದರೂ ಅವರೆಲ್ಲಾ ಒಮ್ಮೆ ಗುರುಗಳನ್ನು ಸ್ವಲ್ಪ ದಿಟ್ಟಿಸಿ ನೋಡಿದರೂ ಸಾಕು, ಅವರೆಲ್ಲಾ ಮನಸ್ಸಿನಲ್ಲಿ ಏನು ಯೋಚಿಸುತ್ತಿರಬೆಕು ಎಂದು ಗುರುಗಳಿಗೆ ಹೆದರಿಕೆಯಾಗದೆ? ಮೊದಲೆಲ್ಲಾ ನನ್ನನ್ನು ನೋಡಲು ಬರುವವರೆಲ್ಲಾ ಮೂರ್ಖರೇ.. ಏನೇ ಹೇಳಿದರೂ ನಂಬುತ್ತಾರೆ.. ಅರಾಮಾಗಿ ಯಾಮಾರಿಸಬಹುದು ಎಂದುಕೊಂಡು ಬೀಗುತ್ತಿದ್ದ ಗುರುಗಳ ಇಂದಿನ ಪರಿಸ್ಥಿತಿಯೇನು? ಎದುರಿರುವವನು ಯಾವ ಮನಸ್ಕನೋ.. ಯಾವ ಪಕ್ಷದವನೋ.. ಎಲ್ಲಿ ಮೊಬೈಲಿನಲ್ಲಿ ರೆಕಾರ್ಡ್ ಮಾಡುತ್ತಿದ್ದಾನೋ.. ಯಾವಾಗ ಯಾವ ಪ್ರಶ್ನೆ ಕೇಳುತ್ತಾನೋ.. ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದಾನೋ ಎಂದೆಲ್ಲಾ ಯೋಚನೆ ಮಾಡಿಯೂ ಮುಖದಮೇಲೆ ಅವೆಲ್ಲವನ್ನು ಕಿಂಚಿತ್ತೂ ತೋರಿಸಿಕೊಳ್ಳದೆ, ಎಂದಿನಹಾಗೆಯೇ ಮುಗುಳ್ನಕ್ಕು ಅವನನ್ನು ಹರಸಿ ಕಳುಹಿಸಬೇಕೆಂದರೇನು ತಮಾಶೆಯೇ? ಯಾವ ಮನುಷ್ಯನಾದರೂ ಮಾಡಬಹುದೇ? ನಮ್ಮ ಗುರುಗಳು ದೈವಾಂಶಸಂಭೂತರೇ ಇರಬೇಕು. ಇಂತಹ ಅದ್ಭುತ ನಟನಾ ಕೌಶಲದ ಹಿಂದಿನ ಅವರ ಮಾನಸಿಕ ಹಿಂಸೆ ಯೋಚಿಸಲೂ ಅಸಾಧ್ಯ. ಇಂತಹ ಹಿಂಸೆಯನ್ನು ನಮ್ಮ ಗುರುಗಳಿಗೆ ತಂದೊಡ್ಡಿದ ಈ ಜನರೆಲ್ಲರೂ ಮುಂದಿನ ಜನ್ಮದಲ್ಲಿ ಕ್ರಿಮಿಕೀಟಗಳಾಗಿ ಹುಟ್ಟುವುದರಲ್ಲಿ ಸಂಶಯವಿಲ್ಲ.

ಜಗತ್ತೇ ಒಂದು ರೀತಿಯಲ್ಲಿ ಯೋಚಿಸುತ್ತಿದ್ದರೆ ಗುರುಗಳೇ ಇನ್ನೊಂದು ರೀತಿ ಯೋಚಿಸುತ್ತಿದ್ದರು. ಇದಲ್ಲವೇ ಮಹಾನುಭಾವರ ಲಕ್ಷಣಗಳು? ಆದರೆ ಈಗ ಏನಾಗಿಹೋಯಿತು. ಗುರುಗಳಿಗೆ ಅತ್ತ ಪೀಠ ಬಿಟ್ಟು ಇಳಿಯುತ್ತೇನೆ ಎಂದರೆ ಮುಂದೆ ಅವರ ಪರಿಸ್ಥಿತಿ ಏನಾಗುವುದೋ ಎಂಬ ಭಯ. ಪೀಠದಲ್ಲೇ ಇರಲು ಕೆಲವು ಜನ ಬಿಡುವಂತೆ ಕಾಣುತ್ತಿಲ್ಲ. ಸಕಲ ಹವ್ಯಕ ಸಮಾಜೋದ್ಧಾರದ ಹೊಣೆ ಹೆಗಲ ಮೇಲೆ. ತನ್ನನ್ನು ನಂಬಿ ಕಂಡಕಂಡಕಡೆ ಹಫ್ತಾ ವಸೂಲಿ ಮಾಡಿ, ಎಲ್ಲ ಹೆಂಗಸರನ್ನೂ ತಮ್ಮ ಸ್ವತಃ ಹೆಂಡಂದಿರು ಎಂದೇ ಭಾವಿಸಿದ ತನ್ನ ಪರಿವಾರದವರ ಹೊಣೆ ಇನ್ನೊಂದುಕಡೆಗೆ. ಅಂದುಕೊಂಡಷ್ಟು ದುಡ್ಡು ಮಾಡಲಾಗಿಲ್ಲ, ಮಾಡಿದ್ದೆಲ್ಲಾ ಈಗ ಕೋರ್ಟುಕಚೇರಿಗೆ ಖರ್ಚಾಗುತ್ತಿದೆಯಲ್ಲಾ ಎಂಬ ಬೇಸರ ಇನ್ನೊಂದುಕಡೆಗೆ. ಪೀಠ ಬಿಟ್ಟು ಹೋದರೆ ಮುಂದೆ ಬರುವವನು ತನ್ನ ಮಾತು ಕೇಳುವಂಥವನಿರುತ್ತಾನೆಯೇ ಎಂಬ ಭಯ ಬೇರೆ. ಅಬ್ಬಬ್ಬಾ.. ಆ ಶ್ರೀರಾಮನೂ ಇಂತಹ ಮಾನಸಿಕ ಯಾತನೆ ಅನುಭವಿಸಿರಲಾರ. ನಮ್ಮ ಗುರುಗಳು ಶ್ರೀರಾಮನನ್ನೂ ಮೀರಿಬಿಟ್ಟಿದ್ದಾರೆ! ಇಂತಹ ಮನಸ್ಥಿತಿಯನ್ನೂ ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲವಲ್ಲಾ ಎನ್ನುವುದೊಂದೇ ನನಗೆ ಬೇಸರವಾಗುತ್ತಿರುವುದು. ಅವರ ಅಂಧಭಕ್ತರು ಇವತ್ತಿಗೂ ಅವರೇ ಎಲ್ಲಾ ಸರಿಮಾಡಿಬಿಡುತ್ತಾರೆ ಎಂದು ನಂಬಿದ್ದಾರೆ. ವಿರೋಧಿಗಳು ಅವರನ್ನು ಮಣ್ಣುಮುಕ್ಕಿಸಲಿಕ್ಕೇ ಹವಣಿಸುತ್ತಿರುವುದು. ಇವೆಲ್ಲವುಗಳ ಮಧ್ಯ ಗುರುಗಳನ್ನು ಅರ್ಥಮಾಡಿಕೊಂಡು ಅವರ ಬಗ್ಗೆ ಕನಿಕರ ವ್ಯಕ್ತಪಡಿಸುವ ಜನರೇ ಇಲ್ಲವಲ್ಲಾ.. ಛೆ.. ಪಾಪ ಗುರುಗಳು…

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s