ವಿಷಯಾಸಕ್ತಿ ಎಂಬುದೊಂದು ಸ್ಟ್ರಾಂಗ್ ಕರೆಂಟ್; ಮಹಾಕಾಮಿಗಳ ಜೀನ್ಸ್ ನಲ್ಲೆ ಆ ಕರೆಂಟ್ ಅಡಕವಾಗಿದೆ.

ವಿಷಯಾಸಕ್ತಿ ಎಂಬುದೊಂದು ಸ್ಟ್ರಾಂಗ್ ಕರೆಂಟ್; ಮಹಾಕಾಮಿಗಳ ಜೀನ್ಸ್ ನಲ್ಲೆ ಆ ಕರೆಂಟ್ ಅಡಕವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ಹುಡುಗ ಅಥವಾ ಗಂಡಸು ಖಾತೆ ತೆರೆದರೆ ಅವನು ಕಳಿಸುವ ಸಾವಿರ ಸ್ನೇಹಾಕಾಂಕ್ಷೆಗಳಿಗೆ ಒಪ್ಪಿಗೆ ಸಿಗುವುದು ಐವತ್ತಕ್ಕೋ ಅರವತ್ತಕ್ಕೋ ಮಾತ್ರ, ಉಳಿದೆಲ್ಲವೂ ನಿರುತ್ತರವಾಗುತ್ತವೆ. ಒಬ್ಬ ಹುಡುಗಿ ಅಥವಾ ಹೆಂಗಸು ಖಾತೆ ತೆರೆದರೆ ಒಂದೇ ದಿನದಲ್ಲಿ ಅವಳಿಗೆ ಸಾವಿರಾರು ರಿಕ್ವೆಸ್ಟ್ ಗಳು ಹುಡುಕುತ್ತ ಬರುತ್ತವೆ! ಅದರಲ್ಲಂತೂ ಪ್ರೊಫೈಲ್ ಫೋಟೋ ಸುಂದರವಾಗಿದ್ದರಂತೂ ಕೇಳುವುದೇ ಬೇಡ.

ನದಿಯಲ್ಲಿ ಕೆಲವೆಡೆ ಸುಳಿ ಎಂದು ಇರುವುದಂತೆ. ಸುಳಿಗೆ ಸಿಕ್ಕಿದ ಜೀವಿಗಳು ಜೀವಂತ ಮರಳುವುದು ಕಷ್ಟ ಎಂಬುದು ನೋಡಿದವರ ಹೇಳಿಕೆ. ಸುಳಿಯಲ್ಲಿ ನೀರು ತಿರುಗುವ ರಭಸಕ್ಕೆ ಒಂದು ರೀತಿಯ ಕರೆಂಟ್ ಉತ್ಪಾದನೆಯಾಗಿ ಮಿಸುಕಾಡಲೂ ಆಗದಂತೆ ಸೆಳೆಯುತ್ತದೆ ಎನ್ನುತ್ತಾರೆ. ಹಾಗೆ ವಿಷಯಾಸಕ್ತಿ ಎಂಬುದು ಈ ಪ್ರಪಂಚದ ಸುಳಿಯೆಂದು ಹೇಳುತ್ತಾರೆ ವೇದಾಂತಿಗಳು. ನಮ್ಮ ಮಹಾಕಾಮಿಗೆ ಇದೆಲ್ಲ ಬೇಕಾಗುವುದಿಲ್ಲ ಬಿಡಿ.

ಆಧ್ಯಾತ್ಮ ಮಾರ್ಗದಲ್ಲಿರುವವರು ವಿಷಯಾಸಕ್ತಿಗೆ ವಿರುದ್ಧವಾದ ಪಥದಲ್ಲಿರುತ್ತಾರೆ. ಮಲ್ಲಿಕಾ ಶರಬತ್ತು ತಯಾರಿಸಿದಾಗಲೇ ಜನ ಇದು ಆಧ್ಯಾತ್ಮ ಮಾರ್ಗದಲ್ಲಿಲ್ಲ ಎಂದು ಅರ್ಥಮಾಡಿಕೊಳ್ಳಬೇಕಿತ್ತು, ಹಾಗಾಗಲಿಲ್ಲ. ನಿಜವಾದ ಸನ್ಯಾಸಿ ಐಫೋನ್, ಐಪ್ಯಾಡ್, ಇಂಟರ್ ನೆಟ್, ಸಾಮಾಜಿಕ ಜಾಲತಾಣ ಇವುಗಳನ್ನೆಲ್ಲ ಬಳಸುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನೀವೆಲ್ಲ ವಿಹರಿಸುತ್ತೀರಲ್ಲ? ಯಾರ್ಯಾರು ಯಾವ್ಯಾರ ರೀತಿಯ ಪೋಸುಗಳ ಫೋಟೋಗಳನ್ನು ಹಾಕುತ್ತಾರೆ, ಎಂತೆಂತಹ ವಿಷಯಗಳನ್ನೆಲ್ಲ ಬರೆಯುತ್ತಾರೆ ಎಂಬುದು ನಿಮಗೆಲ್ಲ ಗೊತ್ತೇ ಇರುತ್ತದೆ. ಸನ್ಯಾಸಿ ನೋಡಬಾರದ, ಓದಬಾರದ ವಿಷಯಗಳೂ ಇಲ್ಲಿರುತ್ತವೆ. ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿ ಸರ್ವರ ಸಂಗಕ್ಕಾಗಿ ಹಾತೊರೆಯುತ್ತ ಜಾಲತಾಣಗಳಲ್ಲಿ ಕಾಣಿಸಿಕೊಂಡಾಗಲಾದರೂ ಸಮಾಜ ಎಚ್ಚೆತ್ತುಕೊಳ್ಳಬೇಕಿತ್ತು, ಅದೂ ಆಗಲಿಲ್ಲ.

ಅದೂ ಇರಲಿ, ಗಾಡಿ ಹಳಿ ತಪ್ತಾ ಇದೆ, ಯಾಕೆ? ಎಂದು ವಿವರ ಕೇಳಿದ ವೈದ್ಯನನ್ನು ಹೊಡೆದು ಅಂಗಿ ಹರಿದರೂ ಸಮಾಜ ಎಚ್ಚೆತ್ತುಕೊಳ್ಳಲಿಲ್ಲ. ಶೀಲ ಕೆಡಿಸಿಕೊಂಡು ಕಾಮಿ ಹೇಳಿದಂತೆ ವರ್ತಿಸತೊಡಗಿದಾಗ ತಮ್ಮ ಹುಡುಗಿಯರ ರಕ್ಷಣೆಗೆ ಅವರ ಪಾಲಕರು ಮಠದ ಸರ್ವೋಚ್ಚ ಅಧಿಕಾರಿಯನ್ನು ಸಂಪರ್ಕಿಸಲು ಬಂದು ಸರಿಯಾದ ಉತ್ತರ ಸಿಗದೇ ಹೋದಾಗಲೂ ಕೂಡ ಸಮಾಜಕ್ಕೆ ಅಂತಹ ಸುದ್ದಿಗಳು ರವಾನೆಯಾಗಲಿಲ್ಲ.

ನಮ್ಮ ಜನ ಅದಾಗಲೇ ಕಾಮಿ ಹಾಕುವ ಬಿಸ್ಕಿಟಿಗೆ ಬಾಯ್ದೆರೆಯುವ ನಾಯಿಗಳಾಗಿದ್ದರು. ತುಮರಿಗೆ ಪ್ರತಿನಿತ್ಯ ಬರುತ್ತಿರುವ ಸಂದೇಶಗಳಲ್ಲಿ ಹಲವು ಬೆಚ್ಚಿ ಬೀಳಿಸುವ ವಿಷಯಗಳು ಅನಾವರಣಗೊಳ್ಳುತ್ತಿವೆಯಾದರೂ ಎಲ್ಲವನ್ನೂ ಇಲ್ಲಿ ಹಾಕುತ್ತಿಲ್ಲ. ಕೆಲವನ್ನು ಮಾತ್ರ ನೀವಿಲ್ಲಿ ನೋಡಬಹುದಷ್ಟೆ.

ದಕ್ಷಿಣದ ಕಾಶ್ಮೀರವೆಂದು ಖ್ಯಾತವಾದ ಕರ್ನಾಟಕದ ಜಿಲ್ಲೆಯೊಂದರ ಸೆಲೆಬ್ರಿಟಿ ದಂತವೈದ್ಯನೊಬ್ಬನಿಗೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು. ರಾಜಕಾರಣಿಗಳು, ಸಿನಿಮಾನಟರು ಎಲ್ಲರ ಜೊತೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಈ ದಾತರರು ಸದಾ ಬೀಜಿ ಅಂತಾರೆ. ಅವನೂ ಅವನ ತ್ರಿಪುರಸುಂದರಿಯೂ ಸೇರಿ ಕಾಮಿಯ ಅಕ್ಕಪಕ್ಕದಲ್ಲಿ ನಿಂತು ಸಾಕಷ್ಟು ಸೆಲ್ಫಿ ತೆಗೆದುಕೊಂಡಿದ್ದಾರೆ. ಸೆಲೆಬ್ರಿಟಿಯಂತೆ ಅಬ್ಬರದ ಪ್ರಚಾರದ ಗಿಟ್ಟಿಸುವ ಮೂಲಕ ತಾನು ನಡೆಸುತ್ತಿರುವ ಅತ್ಯಾಚಾರ ಅನಾಚಾರಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದ ಕಾಮಿಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಅವರಿಗೆ ಪ್ರತಿಷ್ಠೆಯ ಪ್ರಶ್ನೆ. ದಂತವೈದ್ಯನ ಹೆಂಡತಿ ಮಠದ ಏಜೆಂಟರೊಂದಿಗೆ ಸೇರಿ ಕಾಮಿಯನ್ನು ಸೇಫ್ ಗಾರ್ಡ್ ಮಾಡಲು ಕಳೆದವರ್ಷ ಬಹಳ ಬೆಂಬಲ ನೀಡಿದ್ದಾಳೆ. ಕನ್ಯಾಸಂಸ್ಕಾರದ ಪಿಂಪ್ ಆಗಿರುವ ಆಕೆಗೆ ಈಗಲೂ ಬುದ್ಧಿ ಬಂದಿಲ್ಲ.

ಬೇರ್ಪಡುವ ಊರಿನ ದಂಪತಿಗಳಿಗೆ ಮಕ್ಕಳಿಲ್ಲ. ಗಂಡ ಹಾವಾಡಿಗ ಮಠದಲ್ಲಿ ಅಡುಗೆ ಉಸ್ತುವಾರಿಯನ್ನು ನೋಡುಕೊಳ್ಳುತ್ತಾನೆ. ಮಕ್ಕಳಿಗಾಗಿ ಹಂಬಲಿಸುತ್ತಿದ್ದ ಅವರಿಗೆ ಮಕ್ಕಳನ್ನು ಕೊಡುವ ಪವಾಡ ನಡೆಸಲು ಮಹಕಾಮಿಗಳು ಹಲವು ನೂರು ಬಾರಿ ಹಾರಿದರು. ಅದೇಕೋ ಅವಳಲ್ಲೇ ಏನೋ ತೊಂದರೆಯಿರುವುದರಿಂದ ಮಠದ ಹೋರಿಯ ವೀರ್ಯ ಗರ್ಭಾಶಯ ಸೇರಿದರೂ ಪ್ರಯೋಜವವಾಗಲಿಲ್ಲ. ಹೀಗಾಗಿ ಇದು ರಾಂಗಾನುಗ್ರಹದಲ್ಲಿ ಪ್ರಕಟಗೊಳ್ಳಲಿಲ್ಲ. ಯಾವುದೇ ಹುಡುಗಿ ಅಥವಾ ಹೆಂಗಸು ಏಕಾಂತಕ್ಕೆ ಸಿಗದ ಸಮಯದಲ್ಲಿ ಮಹಾಕಾಮಿಗಳು ಈ ಕರುಣಾಮಹೇಶ್ವರಿಯ ಮೇಲೆ ದಯೆತೋರುತ್ತಾರೆ. ಮಹಾಕಾಮಿಗೆ ಆಗಾಗ ನಡೆಯುತ್ತಲೇ ಇರುವ ಅಷ್ಟಾಂಗ ಸೇವೆಗಳಲ್ಲಿ ಇದೂ ಒಂದು.

ಭ್ರಷ್ಟಮೂರ್ತಿ ಎಂಬವ ಹಾವಾಡಿಗ ಮಠ ನಡೆಸುವ ಲ್ಯಾಂದ್ ಡೀಲಿಂಗ್ ಗಳ ಫಲಾನುಭವಿ. ಭ್ರಷ್ಟಮೂರ್ತಿ ಮತ್ತು ಮೇಲೆ ಹೇಳಿದ ಅಡುಗೆ ಉಸ್ತುವಾರಿಯ ವ್ಯಕ್ತಿ ಇಬ್ಬರಿಗೂ ಮಠ ನಡೆಸುವ ಲ್ಯಾಂಡ್ ಡೀಲಿಂಗ್ ಗಳಲ್ಲಿ ಸಾಕಷ್ಟು ಲಾಭ ದೊರೆತಿದೆ ಅಂದರೆ ಬಂದ ಲಾಭದಲ್ಲಿ ಮಠಕ್ಕೆ ಅರ್ಧ, ಉಳಿದರ್ಧದಲ್ಲಿ ಈ ಇಬ್ಬರಿಗೂ ಅರ್ಧರ್ಧ. ಮಾಧ್ಯಮಗಳಲ್ಲಿ ಮಹಾಕಾಮಿಯ ಪರವಾಗಿ ವಾದಿಸುವವರಲ್ಲಿ ಭ್ರಷ್ಟಮೂರ್ತಿಯೂ ಇದ್ದಾನೆ. ಈ ಹಿಂದೆ ಹೊಡೆದುಕೊಂಡ ಮಠದ ಸ್ಥಾಪಕನಾಗಿದ್ದ ಸನ್ಯಾಸಿಯ ಕಿಡ್ನಾಪ್ ಕೇಸ್ ನಡೆದಾಗ ಬ್ರಷ್ಟಮೂರ್ತಿಗಳ ಸವಾರಿ ಅಲ್ಲಿಗೂ ತೆರಳಿ ಕಾಮಿಯ ಸುರಕ್ಷತೆಗೆ ಸಹಕರಿಸಿತ್ತು. ಇವರೆಲ್ಲ ಮಹಾಕಾಮಿಯ ಏಕಾಂತಕ್ಕೆ ಮಟೀರಿಯಲ್ ಕಂಫರ್ಟ್ ಅಂದರೆ ವ್ಯವಸ್ಥಾಪಕರಾಗಿ, ಪಿಂಪ್ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ; ಪ್ರತಿಯಾಗಿ ಮಠದಿಂದ ಸಿಗುತ್ತಿರುವ ಲಾಭ ತಿಳಿದಿರಲ್ಲ?

ಕೆಲವು ಸೋಕಾಲ್ಡ್ ’ಕಲಾವಿದ’ರು ಹಿಂದೆ ತಾವು ಪಡೆಯುತ್ತಿದ್ದ ಸುವರ್ಣ ಮಂತ್ರಾಕ್ಷತೆಯ ನೆನಪಿನಲ್ಲಿ ಮತ್ತೆ ಸದಾ ತಮಗೆ ಅಂತಹ ’ಸುವರ್ಣಾವಕಾಶ’ ಸಿಗುತ್ತಲೇ ಇರಲೆಂಬ ಕಾರಣಕ್ಕಾಗಿ ಕಾಮಿಯ ಏಕಾಂತ ನಡೆದೇ ಇಲ್ಲವೆಂದು ಸಮರ್ಥಿಸುತ್ತಾರೆ. ಊರಲ್ಲಿ ಯಾರೋ ಸತ್ತರೂ ಅವರೆಲ್ಲ ಮಹಾಕಾಮಿಗಾದ ಅವಮಾನಕ್ಕೆ ನೋವನ್ನು ಸಹಿಸಲಾರದೆ ಸತ್ತರೆಂದು ಅಂತಹ ಮರುಳುಕಲಾವಿದರು ಹೇಳಿಕೆ ಕೊಡುತ್ತಾರೆ. ಹೀಗೇ, ಹೇಳುತ್ತ ಹೋದರೆ ಹಾವಾಡಿಗ ಮಠದಲ್ಲಿ ಇಂದು ಕಾರ್ಯಪ್ರವೃತ್ತರಾಗಿರುವ ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿ ಮಠವನ್ನು ಆಶ್ರಯಿಸಿದ್ದಾರೆ.

ಜನರನ್ನು ಸೆಳೆದು ಉಂಡೆನಾಮ ತೀಡಲು ಐಟಿ-ಬಿಟಿಗಳಲ್ಲಿ ಕೆಲಸಮಾಡುವ ಟೆಕ್ನಿಶಿಯನ್ ಗಳ ಅಗತ್ಯತೆ ಮಹಾಕಾಮಿಗೆ ಇದ್ದೇ ಇರುತ್ತಿತ್ತು. ಸಾಮಾಜಿಕ ತಾಣಗಳಲ್ಲಿ ಅಬ್ಬರದ ಪ್ರಚಾರ ಮತ್ತು ವಿರೋಧಿಗಳ ಹಣಿಯುವಿಕೆ ಎರಡೂ ಕೆಲಸಗಳಿಗಾಗಿ ಅಂತವರನ್ನು ಬಳಕೆಮಾಡುತ್ತಿರುವ ಮಹಾಕಾಮಿಗಳು ಅವರಿಗೆಲ್ಲ ನಿತ್ಯನಿರಂತರ ಸುವರ್ಣಮಂತ್ರಾಕ್ಷತೆಯನ್ನು ನೀಡುತ್ತಲೇ ಬಂದಿದ್ದಾರೆ. ಮಹಾಕಾಮಿಯ ಏಕಾಂತಕ್ಕೆ ಇವರೆಲ್ಲರ ಸಂಪೂರ್ಣ ಬೆಂಬಲ ಮತ್ತು ಸಹಕಾರವಿದೆ.

ದಂಡ ಖಂಡ

ಇದು ತುಮರಿ ಹಿಂದೊಮ್ಮೆ ಹೇಳಿದ್ದ, ಹದಿನೆಂಟು ಖಂಡಗಳ ರಾಂಗ್ ವೇಷ ವರ ಮಹಾತ್ಮೆ ಅಥವಾ ರಾಂಗಾಯಣಕ್ಕೆ ಇತ್ತೀಚೆಗೆ ಸೇರ್ಪಡೆಗೊಂಡ ಒಂದು ಖಂಡ. ಈ ಕಂಡವನ್ನು ’ದಂಡ ಕಂಡ’, ’ದುರ್ದಂಡ ಕಂಡ’ ಮೊದಲಾದ ಹೆಸರುಗಳಿಂದ ಕರೆದುಕೊಳ್ಳುವುದಕ್ಕೆ ಓದುಗರಿಗೆ ಸಂಪೂರ್ಣ ಹಕ್ಕಿರುವುದರಿಂದ ’ಮಚ್ಚೆ ಮತ್ತು ಕೊಳಚೆ ನಿರ್ಮೂಲನಾ ಖಂಡ’ ಎನ್ನುತ್ತೇನೆ ಎಂದಿದ್ದು ನಮ್ಮ ಕವಳದ ಗೋಪಣ್ಣ. “ಸ್ವಚ್ಛ್ ಭಾರತ್ ಅಭಿಯಾನದಲ್ಲಿ ಸರಕಾರದಿಂದ ಇದಕ್ಕೆ ಏನಾದರೂ ಅನುದಾನ ಸಿಗುತ್ತದೋ ನೋಡುವುದಕ್ಕೆ ಹೇಳು” ಎಂದು ಗೋಪಣ್ಣ ಒತ್ತಿ[ಇದು ಒತ್ತುವುದರ ಕುರಿತ ವಿಷಯವಾದ್ದರಿಂದ] ಹೇಳಿದ್ದಾನೆ. ದಂಡದಮೇಲಿರುವ ಮತ್ತು ಇತರೆಡೆಗಳಲ್ಲಿರುವ ಗುರುತು ಚಹರೆಗಳನ್ನು ವಿಮೋಚನೆಗೊಳಿಸುವುದರ ಅಂದರೆ ನಿರ್ಮೂಲನೆಗೊಳಿಸುವುದರ ವಿವರಣೆ ಈ ಖಂಡದಲ್ಲಿ ಬರಲಿಕ್ಕಿದೆ.

ತನ್ಮಧ್ಯೆ ವಾಮಾಚಾರ ಖಂಡದಲ್ಲಿ ವಾಮಾಚಾರಿಗಳು ವಿಚಾರಣೆಯ ಹಾಲ್ ಗೆ ಕುಂಕುಮ ಎರಚಿ ಅವರು ಕೊಡುವ ತಾಯತವೊಂದನ್ನು ಗುಪ್ತವಾಗಿ ಅಲ್ಲಿರಿಸಲು ಹೇಳಿದ್ದಾರೆ. ಮಹಾಕಾಮಿಗಳು ಹೇಳುತ್ತಾರೆ-“ತೀರ್ಪುನೀಡುವವರ ಕೈಗೆ ಕಟ್ಟಿ” ಎಂದಿದ್ದರು, ಕ್ಷುಲ್ಲಕ ಪ್ರಶ್ನೆಗಳನ್ನು ಕೇಳುತ್ತ ಮತ್ತು ಸ್ಪಷ್ಟೀಕರಣ ನೀಡುತ್ತ ನಮ್ಮನ್ನು ರಕ್ಷಿಸಲು ಹೆಸರಾದ ನಮ್ಮ ಬಳಗದಿಂದ “ಅದು ಸಾಧ್ಯವಾಗುವುದಿಲ್ಲ” ಎಂದು ನಮ್ಮ ಭ್ರಷ್ಟಮೂರ್ತಿಗಳು ಸ್ಪಷ್ಟೀಕರಣ ನೀಡಿದ ಮೇಲೆ, ತಮ್ಮನಕಲ್ಲು ತಂಗಿಕಲ್ಲಿನಮೇಲೆ ಬಿದ್ದಂತಾಗಿ, ಕೈಗೆ ಕಟ್ಟುವ ಬದಲು “ಅಲ್ಲಿ ಗುಪ್ತವಾಗಿ ಇಟ್ಟುಬಿಡಿ” ಎಂದು ಹೇಳಿರುತ್ತಾರೆ.

ಬುಸ್ಸಪ್ಪ ಹೆಡೆಯಾಡದ ಹಾಗೆ ತಾತ್ಕಾಲಿಕ ವ್ಯವಸ್ಥೆ ಏನಾದರೂ ಉಂಟೋ ಎಂದು ಗೂಗಲ್ ನಲ್ಲಿ ನಮ್ಮ ಮ್ಯಾಂಗೋಕುಳಿಗಳ ಜೊತೆಗೆ ಕೂತು ನಾವು ಹುಡುಕುತ್ತಿದ್ದೇವೆ. ಇದೊಂದು ಪರೀಕ್ಷೆಯ ಸಲುವಾಗಿ ಪರ್ಮನೆಂಟಾಗಿ ಡಿಸೇಬಲ್ ಆಗುವಂತೆ ಇಂಜೆಕ್ಷನ್ ತೆಗೆದುಕೊಂಡರೆ ನಮ್ಮನ್ನೇ ನಂಬಿಕೊಂಡ ನಮ್ಮ ತಾಲಿಬಾನಿಗಳ ಹೆಂಗಸರು ಮತ್ತು ಹೆಣ್ಣುಮಕ್ಕಳ ಕತೆಯೇನು? ಅವರಿಗೆಲ್ಲ ’ಸಂಸ್ಕಾರ’ ಕೊಡಬೇಕಾದ ಗುರುಸ್ಥಾನದ ಹೊಣೆಗಾರಿಕೆ ನಮ್ಮ ಮೇಲಿರುವುದರಿಂದ ಅರ್ಧದಿನ ಮಾತ್ರ ಸುಮ್ಮನೆ ಸತ್ತ ಹಾವಿನ ರೀತಿ ಮಲಗುವ ಯಾವುದಾದರೂ ವ್ಯವಸ್ಥೆ ಇದೆಯೋ ಎಂದು ಪರಿಶೀಲಿಸುತ್ತಿದ್ದೇವೆ. ಸಿಕ್ಕಿದರೆ ನಮ್ಮಂತ ಕಚ್ಚೆಹರುಕರಿಗೆಲ್ಲ ಅನುಕೂಲವಾಗುತ್ತದೆ ಎಂಬುದರಲ್ಲಿ ಸಂದೇಹವೆ ಇಲ್ಲ.

ಇದರ ಜೊತೆಗೆ ಯಾವುದೇ ಪರೀಕ್ಷೆಗಳಲ್ಲೂ ಯಾವ ಪುನರುತ್ಪಾದಕ ಲಕ್ಷಣವೂ ಕಾಣಿಸದಂತೆ ಏನು ಮಾಡಬೇಕು ಎಂಬುದರ ಬಗ್ಗೆ, ಮಂಗನಕಟ್ಟೆ ಕ್ಷೌರಿಕನ ಸಹಾಯ ನಿರೀಕ್ಷಿಸಿ ವಿಫಲವಾದ ನಮ್ಮ ತಜ್ಞ ಸಲಹಾ ಮಂಡಳಿ ವಿಪರೀತ ಪರಿಶ್ರಮದಿಂದ ತಯಾರಿ ನಡೆಸುತ್ತಿದೆ.”

ಪುಸ್ತಕದಲ್ಲಿನ ಸಂಭಾಷಣೆಗಳ ವಿವರಗಳನ್ನೋದಿದ ನಮ್ಮ ಗೋಪಣ್ಣ ಮತ್ತೆ ಮೈಮೇಲೆ ಕವಳ ಬೀಳಿಸಿಕೊಳ್ಳುವಷ್ಟು ನಕ್ಕು, “ಒಂದಿನದ ಮಟ್ಟಿಗೆ ಸಾಮಾನೆ ಇಲ್ಲೆ ಹೇಳಿ ಮಾಡಕ್ ಬತಲ್ಯನ?” ಎಂದುಕೊಂಡು ನಗು ಮುಂದುವರಿಸಿದ.

ಅದೇನೇ ಇರಲಿ, ಸನ್ಯಾಸಿಯ ಕಾಮದಂಡ ಕೆಲಸ ಮಾಡಬಾರದು. ಅವರದ್ದೇನಿದ್ದರೂ ಯೋಗದಂಡ ಮಾತ್ರ. ಯೋಗವನ್ನು ಪ್ರಮಾಣಬದ್ಧವಾಗಿ ಅನುಸರಿಸಿ, ತಪಸ್ಸನ್ನಾಚರಿದರೆ ಮಾತ್ರ ಯೋಗ ದಂಡಕ್ಕೊಂದು ಅರ್ಥವಿರುತ್ತದೆ. ತಪಸ್ಸು ಹೆಣ್ಣುಗಳ ಕುರಿತಾಗಿ ನಡೆದರೆ ಆ ವ್ಯಕ್ತಿ ಯೋಗಿ ಎನಿಸುವುದಿಲ್ಲ. ಸಾಮಾನ್ಯರಿಗಿಂತ ನಾಲಾಯ್ಕ್ ಎನಿಸುತ್ತಾನೆ. ಆಧ್ಯಾತ್ಮವನ್ನು ಶಿಖರಕ್ಕೆ ಹೋಲಿಸಿದ್ದಾರೆ. ಮೌಂಟ್ ಎವರೆಸ್ಟ್ ನಂತಹ ಮಹೋನ್ನತ ಪರ್ವತಗಳನ್ನು ಏರಲು ಹೋದವರು ಆಯ ತಪ್ಪಿದರೆ ಪ್ರಪಾತಕ್ಕೆ ಉರುಳಿ ಅಸುನೀಗುತ್ತಾರೆ. ಏರಿದರೆ ಜಗತ್ತು ಅವರನ್ನು ಗುರುತಿಸಿ, ಗೌರವಿಸುತ್ತದೆ. ಆಧ್ಯಾತ್ಮ ಶಿಖರ ಕೂಡ ಅದೇರೀತಿ. ಮಾರ್ಗದಲ್ಲಿ ಎಡವಟ್ಟು ಮಾಡಿಕೊಂಡು ಕಂಡಿದ್ದಕ್ಕೆ ಕೈಹಚ್ಚಿದರೆ ಆಗಬಾರದ್ದೇ ಆಗುತ್ತದೆ. ಅದನ್ನು ಮುಚ್ಚಲು ಕೋಟಿಗಳಲ್ಲಿ ವ್ಯಯಿಸಿದರೂ ಜನರಿಗೆ ಅದರ ವಾಸನೆ ಬಂದೇಬರುತ್ತದೆ.

ಇಂದೇನಾಗಿದೆ ಎಂದರೆ, ಐಶಾರಾಮದಲ್ಲಿ ಮೆರೆಯುತ್ತಿರುವ ಈ ಬೂಟಾಟಿಕೆಯವರಿಗೆ ಅವರ ಸೋ ಕಾಲ್ಡ್ ಸನ್ಯಾಸ ದಂಡ ಹಿಡಿದುಕೊಳ್ಳಲಿಕ್ಕೂ ಜೊತೆಗೊಬ್ಬ ಇರಬೇಕಾಗಿದೆ. ಹಿಂದೆ ಆದಿಗುರುಗಳು ಅವರ ಸನ್ಯಾಸ ದಂಡವನ್ನು ಅವರೇ ಹಿಡಿದುಕೊಂಡು ಓಡಾಡುತ್ತಿದ್ದರು.

Thumari Ramachandra

https://www.facebook.com/groups/1499395003680065/permalink/1670358139917083/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s