ಅತ್ಯಾಚಾರ ಆರೋಪ ಹಿನ್ನೆಲೆ; ರಾಮಚಂದ್ರ ಮಠಕ್ಕೆ ಸಿಐಡಿ ಅಧಿಕಾರಿಗಳ ದಾಳಿ
ನ್ಯೂಸ್ ಕನ್ನಡ ಮೀಡಿಯ ನೆಟ್ ವರ್ಕ್- ಬೆಂಗಳೂರು: ರಾಘವೇಶ್ವರ ಸ್ವಾಮೀಜಿಯವರ ಮೇಲಿನ ಎರಡನೇ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಗಿರಿನಗರದ ರಾಮಚಂದ್ರ ಮಠಕ್ಕೆ ಇಂದು ಸಿಐಡಿ ಅಧಿಕಾರಿಗಳು ದಿಢೀರ್ ದಾಳಿ ಮಾಡಿ, ತನಿಖೆ ನಡೆಸಿದ್ದಾರೆ.
ಡಿವೈ ಎಸ್ ಪಿ ಧರಣೇಶ್ ನೇತೃತ್ವದ ಸಿಐಡಿ ತಂಡ ಈ ದಾಳಿ ನಡೆಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ ವಿಕ್ಟೋರಿಯ ಆಸ್ಪತ್ರೆಯಲ್ಲಿ ನಡೆಯಬೇಕಿದ್ದ ರಾಮಚಂದ್ರ ಮಠದ ರಾಘವೇಶ್ವರ ಸ್ವಾಮೀಜಿಯವರು ಪುರುಷತ್ವ ಪರೀಕ್ಷೆ, ಸ್ವಾಮೀಜಿಯವರ ಗೈರು ಹಾಜರಿಯೊಂದಿಗೆ ರದ್ದಾಗಿತ್ತು.
ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲೆ ನಡೆದ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆಗೆ ಹಾಜರಾಗಬೇಕೆಂದು ಸಿಬಿಐ ಸ್ವಾಮೀಜಿಯವರಿಗೆ ನೋಟಿಸ್ ಜಾರಿ ಮಾಡಿತ್ತು.
ಆದರೆ, ಶ್ರೀಗಳು ಚಾತುರ್ಮಾಸ ವ್ರತದಲ್ಲಿರುವುದಾಗಿ ನೆಪಹೇಳಿ ವೈದ್ಯಕೀಯ ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದರು. ಇಂದು ಸ್ವಾಮೀಜಿಯವರ ಬೆಂಗಳೂರಿನ ಆಶ್ರಮಕ್ಕೆ ದಿಢೀರನೇ ಭೇಟಿ ನೀಡಿದ ಸಿಐಡಿ ಅಧಿಕಾರಿಗಳು ಹಲವು ಮಾಹಿತಿಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.
source: http://www.newskannada.in/featured-story/ramachandra-matakke-cid-adhikaarigala-dideer-beti/