ರಾಘವೇಶ್ವರ ಸ್ವಾಮೀಜಿಗೆ ವೈದ್ಯ ಪರೀಕ್ಷೆ ಇಂದು

ರಾಘವೇಶ್ವರ ಸ್ವಾಮೀಜಿಗೆ ವೈದ್ಯ ಪರೀಕ್ಷೆ ಇಂದು

ವಿಕ ಸುದ್ದಿಲೋಕ| Sep 29, 2015, 08.42 PM IST

-ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಲ್ವರು ತಜ್ಞ ವೈದ್ಯರ ತಂಡದಿಂದ ಪರೀಕ್ಷೆ-

ಬೆಂಗಳೂರು: ಗಾಯಕಿ ಪ್ರೇಮಲತಾ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ಬುಧವಾರ ವೈದ್ಯ ಪರೀಕ್ಷೆ ನಡೆಸಲಿದೆ.

ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪುರುಷತ್ವ, ದೈಹಿಕ ಮತ್ತು ವೀರ್ಯ ಪರೀಕ್ಷೆಗಳು ನಡೆಯಲಿವೆ. ಖಾಲಿ ಹೊಟ್ಟೆಯಲ್ಲಿ ಆಸ್ಪತ್ರೆಗೆ ಬರುವಂತೆ ವೈದ್ಯಾಧಿಕಾರಿಗಳು ಸ್ವಾಮೀಜಿಗೆ ತಿಳಿಸಿದ್ದಾರೆ. ವೈದ್ಯ ಪರೀಕ್ಷೆಗೆ ಹಾಜರಾಗುವಂತೆ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಸ್ವಾಮೀಜಿಗೆ ನೋಟಿಸ್ ನೀಡಿದ್ದರು.

ಜೆನೆಟಿಲ್ ಎಕ್ಸಾಮಿನೇಷನ್, ಸೆಮನ್ ಅನಾಲಿಸಿಸ್, ಡೋಪ್ಲರ್ ಅಲ್ಟ್ರಾಸೌಂಡ್, ಪೆಪವರೈನ್ ಟೆಸ್ಟ್‌ಗಳನ್ನು ಮಾಡಲಾಗುತ್ತದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಮುಖ್ಯ ಅಧೀಕ್ಷಕ ಡಾ. ದುರ್ಗಣ್ಣ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.

ಸಿಐಡಿ ಅಧಿಕಾರಿಗಳ ಕೋರಿಕೆಯಂತೆ ಕ್ರಮಬದ್ಧ ಪರೀಕ್ಷೆ ನಡೆಸಲಾಗುತ್ತದೆ. ವೈದ್ಯ ಪರೀಕ್ಷೆಗಳ ಪೈಕಿ ಅವರು ಯಾವುದಕ್ಕೆ ಒಪ್ಪುತ್ತಾರೋ ಆ ಪರೀಕ್ಷೆಗಳನ್ನು ಮಾತ್ರ ಮಾಡಲಾಗುತ್ತದೆ. ಅವರು ಯಾವುದಾದರೂ ಪರೀಕ್ಷೆ ಬೇಡ ಎಂದರೆ ನಾವು ಏನೂ ಮಾಡಲಾಗದು ಎಂದು ಡಾ.ದುರ್ಗಣ್ಣ ಹೇಳಿದರು. ಈ ಪರೀಕ್ಷೆಗಳನ್ನು ನಡೆಸುವುದಕ್ಕೆ ಸ್ವಾಮೀಜಿ ವಿರೋಧಿಸಿದ್ದರು. ವೈದ್ಯ ಪರೀಕ್ಷೆಗೆ ಹಾಜರಾಗುವಂತೆ ಸಿಐಡಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಸ್ವಾಮೀಜಿ ಹೈಕೋರ್ಟ್ ಮೊರೆ ಹೋಗಿದ್ದರೂ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಇನ್ನೂ ಕೈಗೆತ್ತಿಕೊಂಡಿಲ್ಲ.

ತಜ್ಞರ ತಂಡದಲ್ಲಿ ಯಾರಿದ್ದಾರೆ? ವಿಕ್ಟೋರಿಯಾ ಆಸ್ಪತ್ರೆ ಮನೋ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಚಂದ್ರಶೇಖರ್, ವಿಧಿ ವಿಜ್ಞಾನ ಪ್ರಯೋಗಾಲಯದ ಸಹ ಪ್ರಾಧ್ಯಾಪಕ ಡಾ.ಎಸ್.ವೆಂಕಟರಾಘವನ್, ನೆಪ್ರೋಯುರಾಲಜಿ ವಿಭಾಗದ ಮುಖ್ಯಸ್ಥ ಡಾ. ಕೇಶವಮೂರ್ತಿ, ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ವೀರಣ್ಣ ಗೌಡ ಪರೀಕ್ಷೆ ನಡೆಸಲಿದ್ದಾರೆ.

ಮೂತ್ರ, ರಕ್ತ ಮತ್ತು ಇಸಿಜಿ ಪರೀಕ್ಷೆ ಮತ್ತು ಲ್ಯಾಬ್ ಟೆಸ್ಟ್‌ಗಳು ಸೇರಿದಂತೆ ಇತರ ಸಾಮಾನ್ಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಂಗಾಂಗ ಪರೀಕ್ಷೆ ಮೂಲಕ ದೇಹದ ಮೇಲಿನ ಎಲ್ಲ ರೀತಿಯ ಕುರುಹುಗಳನ್ನು ಪತ್ತೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. —

ಪರೀಕ್ಷೆ ನಡೆಸಿ ವರದಿ
ಸಿಐಡಿ ಅಧಿಕಾರಿಗಳ ಕೋರಿಕೆಯಂತೆ ರಾಘವೇಶ್ವರ ಸ್ವಾಮೀಜಿಯನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಪರೀಕ್ಷೆ ನಡೆಸಲಾಗುವುದು. ಎರಡರಿಂದ ಮೂರು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು. – ಡಾ.ಟಿ.ದುರ್ಗಣ್ಣ, ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಅಧೀಕ್ಷಕ

Source: http://vijaykarnataka.indiatimes.com/state/raghaveshwara-shree-to-be-examined-tomorrow/articleshow/49156742.cms

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s