ರಾಘವೇಶ್ವರ ಪ್ರಕರಣ: ಸಿಐಡಿ ಸಲ್ಲಿಸಿರುವ ಚಾರ್ಜ್‍ಶೀಟ್‍ನಲ್ಲಿ ಏನಿದೆ?

ರಾಘವೇಶ್ವರ ಪ್ರಕರಣ: ಸಿಐಡಿ ಸಲ್ಲಿಸಿರುವ ಚಾರ್ಜ್‍ಶೀಟ್‍ನಲ್ಲಿ ಏನಿದೆ?

Posted Date : Tuesday, September 29th, 2015

ಅರವಿಂದ್ ಸಾಗರ

ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣ ಎದುರಿಸುತ್ತಿರುವ ಹೊಸನಗರ ರಾಮಂಚಂದ್ರಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧ ತನಿಖೆ ಪೂರ್ಣಗೊಂಡಿದ್ದು ಸಿಐಡಿ ಪೊಲೀಸರು 1ನೇ ಎಸಿಎಂಎಂ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಚಾರ್ಜ್‍ಶೀಟ್‍ನಲ್ಲಿ ಅನೇಕ ಸತ್ಯಗಳು ಅಡಗಿದ್ದು, ಆರೋಪ ಪಟ್ಟಿಯಲ್ಲಿ ಏನಿದೆ ಎನ್ನುವುದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ರಾಮಕಥಾ ಗಾಯಕಿ ಪ್ರೇಮಲತಾ ನೀಡಿರುವ ದೂರಿನ ತನಿಖೆಯನ್ನು ಪೂರ್ಣಗೊಳಿಸಿ 1341 ಪುಟಗಳ ಚಾರ್ಜ್‍ಶೀಟ್‍ನ್ನು ಶನಿವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಚಾರ್ಜ್‍ಶೀಟ್ ಸಲ್ಲಿಕೆ ಬಳಿಕ ವಿಚಾರಣೆ ಮುಂದುವರಿಯಲಿದ್ದು, ಮತ್ತೆ ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಚಾರ್ಜ್‍ಶೀಟ್ ಸಲ್ಲಿಸಲಾಗುವುದು ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.

ಚಾರ್ಜ್‍ಶೀಟ್‍ನಲ್ಲಿ ಏನಿದೆ?
ರಾಘವೇಶ್ವರಶ್ರೀ ಗಾಯಕಿ ಪ್ರೇಮಲತಾರ ಮೇಲೆ ರೇಪ್ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ನಂಬಿಕಸ್ಥ ಸ್ಥಾನದಲ್ಲಿದ್ದುಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡ ಶ್ರೀಗಳು ಪ್ರೇಮಲತಾರ ಮೇಲೆ ಮೋಹಗೊಂಡಿದ್ದರು. ಅಲ್ಲದೇ `ಶ್ರೀರಾಮ’ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಲೈಂಗಿಕ ತೀಟೆ ತೀರಿಸಿಕೊಳ್ಳಲು ಮುಂದಾಗಿದ್ದರು. ಇದಕ್ಕೆ ಪ್ರೇಮಲತಾ ಒಪ್ಪದಿದ್ದಾಗ ಬಲವಂತವಾಗಿ ಶ್ರೀರಾಮನ ಮೇಲೆ ಆಣೆ ಮಾಡಿಸಿ ಕುಂಕುಮ ನೀಡಿ ಬಲವಂತವಾಗಿ ಅತ್ಯಾಚಾರ ಮಾಡಿದ್ದರು. ಒಂದು ವೇಳೆ ತಾನು ಹೇಳಿದ ಹಾಗೇ ಕೇಳದಿದ್ದಾಗ ಅಸಂತೋಷಕ್ಕೆ ಪಾತ್ರಳಾಗುತ್ತಿಯಾ ಎಂದು ಹೆದರಿಸಿದ್ದರು ಎಂದು ಹೇಳಿರುವ ಅಂಶ ಚಾರ್ಜ್‍ಶೀಟ್‍ನಲ್ಲಿದೆ.

ರಾಘವೇಶ್ವರಶ್ರೀ, ಪ್ರೇಮಲತಾರ ಮೇಳೆ 2011ರಿಂದ 2014ರವರೆಗೆ ಅತ್ಯಾಚಾರ ಎಸಗಿದ್ದು, ಕರ್ನಾಟಕದ 9 ಜಿಲ್ಲೆಗಳಲ್ಲದೇ ಜೋಧ್‍ಪುರ, ದೆಹಲಿ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಸಹ ರಾಮಕಥಾ ನಡೆಯುವ ವೇಳೆ ಬಲತ್ಕಾರ ಮಾಡಿ ಸಂಭೋಗ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೇ ಸಭೆ ಎಂದು ಕರೆಸಿ ಪ್ರತ್ಯೇಕವಾಗಿ ತಮ್ಮ ಕೊಠಡಿಗೆ ಕರೆಸಿ ಬಲತ್ಕಾರ ಮಾಡಿದ್ದರು. ಡಿಎನ್‍ಎ ಪರೀಕ್ಷೆಯಲ್ಲಿ ಸಹ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ. ಗಾಯಕಿ ಶ್ರೀಗಳ ಮೇಲೆ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅತ್ಯಾಚಾರ ಎಸಗಿದ್ದಕ್ಕೆ ಐಪಿಸಿ ಸೆಕ್ಷನ್ 376(2)(ಎಫ್), ಆಶ್ರಯದಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಐಪಿಸಿ ಸೆಕ್ಷನ್ 376(2)(ಎನ್), ದೇವರು ಧರ್ಮದ ಹೆಸರಿನಲ್ಲಿ ಭಯ ಹುಟ್ಟಿಸಿ ಅತ್ಯಾಚಾರ ಎಸಗಿದ್ದಕ್ಕೆ ಸೆಕ್ಷನ್ 508 ಹಾಕಿರುವ ಅಂಶ ಆರೋಪ ಪಟ್ಟಿಯಲ್ಲಿದೆ.

Source: http://publictv.in/kannada/news/national/archives/53801/ramachandrapura-mutt-rape-case-chargesheet-filed-against-seer/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s