ಮಹಿಳಾ ಸಂಘಟನೆಗಳು ನನ್ನ ಬೆಂಬಲಕ್ಕೆ ನಿಂತಿದ್ದರಿಂದ ತನಿಖೆ ಈ ಮಟ್ಟಕ್ಕೆ: ಪ್ರೇಮಲತಾ

ರಾಘವೇಶ್ವರ ಶ್ರೀ ವಿರುದ್ಧ ಬೃಹತ್ ಪ್ರತಿಭಟನೆ:

ಮಹಿಳಾ ಸಂಘಟನೆಗಳು ನನ್ನ ಬೆಂಬಲಕ್ಕೆ ನಿಂತಿದ್ದರಿಂದ ತನಿಖೆ ಈ ಮಟ್ಟಕ್ಕೆ: ಪ್ರೇಮಲತಾ

Posted By: Karnataka News BureauPosted date: September 29, 2015 1:18 am

ಬೆಂಗಳೂರು, ಸೆ. 28: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶೀಘ್ರ ತನಿಖೆ ಹಾಗೂ ಆರೋಪಿಗಳಿಗೆ ಶೀಘ್ರ ಶಿಕ್ಷೆ ನೀಡಬೇಕು ಎಂದು ಶಿಫಾರಸು ಮಾಡಿರುವ ನ್ಯಾಯಮೂರ್ತಿ ವರ್ಮಾ ಅವರ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ವಿವಿಧ ಮಹಿಳಾ ಸಂಘಟನೆಗಳು ಒತ್ತಾಯಿಸಿವೆ.

ಅತ್ಯಾಚಾರದ ಆರೋಪಿ ರಾಮಚಂದ್ರಾಪುರ ಮಠದ ರಾಘ ವೇಶ್ವರ ಭಾರತಿ ಸ್ವಾಮಿ ಮೇಲಿನ ಸಿಐಡಿ ತನಿಖೆಯನ್ನು ಶೀಘ್ರಗೊಳಿಸಿ ಕಾನೂನು ಕ್ರಮಕೈಗೊಳ್ಳುವಂತೆ ವಿವಿಧ ಮಹಿಳಾ ಸಂಘಟನೆಗಳು ಸೋಮವಾರ ನಗರ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದವು.ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತ ನಾಡಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿಮಲಾ, ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣಗಳ ತನಿಖೆಗಳು ಶೀಘ್ರಗತಿಯಲ್ಲಿ ನಡೆದು ಆರೋಪಿಗಳಿಗೆ ಶೀಘ್ರ ಶೀಕ್ಷೆ ನೀಡಬೇಕೆಂದು ನ್ಯಾ.ವರ್ಮಾ 2013ರಲ್ಲಿ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಕೂಡಲೇ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು. ಸ್ವಾಮೀಜಿ ವಿರುದ್ಧದ ಮೊದಲ ಪ್ರಕರಣದಲ್ಲಿ ರಾಜ್ಯ ಸರಕಾರ ಹಾಗೂಪೊಲೀಸ್ ಇಲಾಖೆ ಹಲವಾರು ಲೋಪಗಳನ್ನು ಎಸಗಿವೆ ಎಂದು ದೂರಿ ದ ಅವರು, ಸ್ವಾಮಿಗಳ ವಿರುದ್ಧ ಮೊದಲ ಪ್ರಕರಣದಲ್ಲಿ ಸಿಐಡಿ ಸಲ್ಲಿಸಿರು ವ ಆರೋಪ ಪಟ್ಟಿಗೆ ಅನುಗುಣವಾಗಿ ಸರಕಾರಿ ಅಭಿಯೋಜಕರು ಸಮರ್ಥವಾಗಿ ವಾದಿಸುವಂತೆ ನೋಡಿಕೊಳ್ಳಬೇಕು ಹಾಗೂ ಎಚ್ಚರ ವಹಿಸಬೇಕು ಎಂದು ಅವರು ಹೇಳಿದರು.

ಎರಡು ಅತ್ಯಾಚಾರ ಪ್ರಕರಣಗಳ ಆರೋಪಿಗೆ ಸುಲಭವಾಗಿ ಜಾಮೀನು ಸಿಗುತ್ತದೆ ಎಂದಾದರೆ, ನಮ್ಮ ಸರಕಾರಿ ಅಭಿಯೋಜಕರು ಯಾವ ರೀತಿಯ ವಾದವನ್ನು ಮಂಡಿಸುತ್ತಿದ್ದಾರೆ ಎಂಬುದು ತಿಳಿಯು ತ್ತದೆ. ಹೀಗಾಗಿ ಸಮರ್ಥ ಅಭಿಯೋಜಕರನ್ನು ನೇಮಿಸಬೇಕು ಎಂದು ಮನವಿ ಮಾಡಿದರು.

ಸರಕಾರ ಕೂಡಲೇ ರಾಘವೇಶ್ವರ ಶ್ರೀ ಅವರಿಗೆ ನೀಡಿರುವ ಮಧ್ಯಾಂತ ರ ಹಾಗೂ ನಿರೀಕ್ಷಣಾ ಜಾಮೀನು ರದ್ದತಿಗೆ ಕ್ರಮ ಕೈಗೊಂಡು ಸಿಐಡಿ ತನಿಖೆಯನ್ನು ಚುರುಕುಗೊಳಿಸಬೇಕು. ಎರಡನೆ ಪ್ರಕರಣದ ಆರೋಪ ಪಟ್ಟಿಯನ್ನು ಕೂಡಲೇ ಸಲ್ಲಿಸುವಂತೆ ಸಿಐಡಿಗೆ ಸೂಚಿಸಬೇಕು ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ಪ್ರಕರಣ ದಾಖಲಾದ ವೇಳೆ ನಡೆಸಲಾಗಿತ್ತು. ಆದರೆ, ಆರೋಪಿಯ ವೈದ್ಯಕೀಯ ಪರೀಕ್ಷೆಯನ್ನು ಈಗ ಮಾಡಲು ಹೊರಟಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಗೆ ಟೂ ಫಿಂಗರ್ ಪರೀಕ್ಷೆ ನಡೆಸುವುದು ಅವೈಜ್ಞಾನಿಕವೆಂದು, ಈ ಪರೀಕ್ಷೆಯನ್ನು ನಡೆಸಬಾರದು ಎಂದು ಆದೇಶ ನೀಡಿದ್ದರೂ, ಎರಡನೆ ಪ್ರಕರಣದಲ್ಲಿ ಯುವತಿಯನ್ನು ಈ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಆರೋಗ್ಯ ಇಲಾಖೆಯ ಯಾವುದೇ ಅಧಿಕಾರಿ ಇದನ್ನು ಪ್ರತಿರೋಧಿಸಿಲ್ಲ ಎಂದು ಕಿಡಿಕಾರಿದರು.

ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ಮೊದಲ ಪ್ರಕರಣದ ಸಂತ್ರಸ್ತೆ ಪ್ರೇಮಲತಾ ಅವರು ಮಾತನಾಡಿ, ಮಹಿಳಾ ಸಂಘಟನೆಗಳು ನನ್ನ ಬೆಂಬಲಕ್ಕೆ ನಿಂತಿದ್ದರಿಂದ ತನಿಖೆ ಈ ಮಟ್ಟಕ್ಕೆ ಬಂದಿದೆ. ಸಂಘಟನೆಗಳು ನನ್ನ ಬೆಂಬಲಕ್ಕೆ ನಿಲ್ಲದಿದ್ದರೆ, ಸ್ವಾಮಿಗಳು ತಮ್ಮ ಪ್ರಭಾವ ಬಳಸಿ ಕೇಸು ಮುಚ್ಚಿಸುತ್ತಿದ್ದರು ಎಂದ ಅವರು, ‘ದಿನವೂ ಬೆಳಗುವ ಬಾನೊಳು ರಕ್ತದ ಕಲೆಗಳ ಛಾಯೆ….’ ಎಂಬ ಗೀತೆಯ ಮೂಲಕ ತಮ್ಮ ನೋವನ್ನು ಹೊರಹಾಕಿದರು.

ಸಭೆಯ ಬಳಿಕ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿಗಳ ಮುಖ್ಯಕಾರ್ಯದರ್ಶಿ ಸಿಂಧೆ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿಪತ್ರ ನೀಡಿದರು. ಪ್ರತಿಭಟನಾ ಸಭೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ದುಡಿಯುವ ಮಹಿಳೆಯರ ಸಮನ್ವಯ ಸಮಿತಿ, ಭಾರತ ವಿದ್ಯಾರ್ಥಿ ಫೆಡರೇಷನ್, ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಗಳ ಮಹಿಳಾ ಘಟಕಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಸ್ವಾಮಿಗಳ ವಿರುದ್ಧ ಮೊದಲ ಪ್ರಕರಣದಲ್ಲಿ ಸಿಐಡಿ ಸಲ್ಲಿಸಿರುವ ಆರೋಪ ಪಟ್ಟಿಗೆ ಅನುಗುಣವಾಗಿ ಸರಕಾರಿ ಅಭಿಯೋಜಕರು ಸಮರ್ಥವಾಗಿ ವಾದಿಸುವಂತೆ ನೋಡಿಕೊಳ್ಳಬೇಕು, ಎಚ್ಚರ ವಹಿಸ ಬೇಕು.ಎರಡು ಅತ್ಯಾಚಾರ ಪ್ರಕರಣಗಳ ಆರೋಪಿಗೆ ಸುಲಭವಾಗಿ ಜಾಮೀನು ಸಿಗುತ್ತದೆ ಎಂದಾದರೆ, ನಮ್ಮ ಸರಕಾರಿ ಅಭಿಯೋಜಕರು ಯಾವ ರೀತಿಯ ವಾದವನ್ನು ಮಂಡಿಸುತ್ತಿದ್ದಾರೆ ಎಂಬುದು ತಿಳಿಯು ತ್ತದೆ. ಹೀಗಾಗಿ ಸಮರ್ಥ ಅಭಿಯೋಜಕರನ್ನು ನೇಮಿಸಬೇಕು.
-ವಿಮಲಾ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ

Source: http://kannadigaworld.com/kannada/karnataka-kn/202389.html

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s