ರಾಘವೇಶ್ವರ ಶ್ರೀ ವಿರುದ್ಧ ಷಡ್ಯಂತ್ರ: ಹರಿಕೃಷ್ಣ ಪುನರೂರು

ರಾಘವೇಶ್ವರ ಶ್ರೀ ವಿರುದ್ಧ ಷಡ್ಯಂತ್ರ: ಹರಿಕೃಷ್ಣ ಪುನರೂರು

Published 25-Sep-2015 22:45 IST

ಮಂಗಳೂರು: ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬ್ಯಾಟಿಂಗ್ ಮಾಡಿದ್ದಾರೆ.

ರಾಘವೇಶ್ವರ ಸ್ವಾಮೀಜಿ ವಿರುದ್ಧ ಷಡ್ಯಂತ್ರ ನಡೆಯುತ್ತಿರುವುದು ಇದು ಪ್ರಥಮವಲ್ಲ. ಈ ಹಿಂದೆ ಗೋಕರ್ಣದಲ್ಲಿ ಕೆಲ ಆರೋಪಿಗಳು ಕೋಟಿಗಟ್ಟಲೆ ವೆಚ್ಚದ ಆಧುನಿಕ ಯಂತ್ರಗಳನ್ನು ಖರೀದಿಸಿ, ಶ್ರೀಗಳನ್ನೇ ಹೋಲುವ ನಕಲಿ ಸಿಡಿ ತಯಾರಿಸಿ ಸಿಕ್ಕಿಬಿದ್ದಿದ್ದರು. ಆರೋಪಿಗಳನ್ನು ಬಂಧಿಸಿದ್ದರೂ ತನಿಖೆ ಪ್ರಗತಿ ಕಾಣಲಿಲ್ಲ. ಆ ಷಡ್ಯಂತ್ರ ಹೂಡುವುದಕ್ಕೆ ಕಾರಣವೇನು? ಶ್ರೀಗಳನ್ನು ಅವಮಾನಿಸಿ ಅವರಿಗೆ ಆಗುವ ಲಾಭವೇನು? ಇದರ ಹಿಂದಿರುವ ಕಾಣದ ಕೈಗಳು ಯಾರದ್ದು ಎಂದು ವಿಚಾರಣೆ, ತನಿಖೆ ನಡೆಯಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಅವರು ತಮ್ಮ ವ್ಯಾಪ್ತಿ ಮೀರಿ ಏಕಪಕ್ಷೀಯವಾಗಿ ಮಾತನಾಡುತ್ತಿರುವುದು ಕೂಡಾ ಅಸಮಂಜಸವಾಗಿದೆ. ಬೆಂಗಳೂರಿನ ಮಹಿಳಾ ಆಯೋಗದ ಸದಸ್ಯೆಯೋರ್ವರು ತಮ್ಮ ಸ್ವಂತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಅವರನ್ನು ಪದಚ್ಯುತಗೊಳಿಸಿದ್ದು, ಲಲಿತಾ ಕುಮಾರಮಂಗಳಂಗೆ ಸರಿಯೆನಿಸುತ್ತದೆಯೇ, ಇದಕ್ಕೆಲ್ಲ ಉತ್ತರಿಸುವ ಧೈರ್ಯವಿದೆಯೇ ಎಂದು ಅವರು ಪ್ರಶ್ನಿಸಿದರು.

source: http://kannada.eenaduindia.com/State/DakshinaKannada/2015/09/25224522/Someone-Playing-Back-of-Raghveshwara-Shree-Harikrishna.vpf

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s