ರಾಘವೇಶ್ವರ ಅತ್ಯಾಚಾರ ಪ್ರಕರಣ ಚಾರ್ಜ್‌ಶೀಟ್‌ಗೆ ಮೋಕ್ಷ

ರಾಘವೇಶ್ವರ ಅತ್ಯಾಚಾರ ಪ್ರಕರಣ ಚಾರ್ಜ್‌ಶೀಟ್‌ಗೆ ಮೋಕ್ಷ

ಬೆಂಗಳೂರು,ಸೆ.25-ರಾಮಕಥಾಗಾಯಕಿ ಪ್ರೇಮಲತಾ ಅವರ ಮೇಲೆ ರಾಮಚಂದ್ರಪುರ ಮಠದ ರಾಘವೇಶ್ವರ ಶ್ರೀಗಳು ಅತ್ಯಾಚಾರ ನಡೆಸಿರುವುದು ಧೃಡಪಟ್ಟಿರುವ ಸುಮಾರು 680 ಪುಟಗಳ ಆರೋಪಟ್ಟಿ(ಚಾರ್ಚ್‍ಶೀಟ್)ಯನ್ನು ಸಿಐಡಿ ಅಧಿಕಾರಿಗಳು ನಾಳೆ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

ಪ್ರೇಮಲತಾ ಅವರ ಮೇಲೆ ರಾಘವೇಶ್ವರ ಶ್ರೀಗಳು ಅತ್ಯಾಚಾರ ನಡೆಸಿರುವುದು ರಕ್ತ,ಡಿಎನ್‍ಎ,ವೀರ್ಯ ಹಾಗೂ ಮೊಬೈಲ್ ಸಂಭಾಷಣೆಗಳಿಂದ ಧೃಡಪಟ್ಟಿದೆ.ಆರೋಪಪಟ್ಟಿಯಲ್ಲಿ ಸುಮಾರು 48 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.

ರಾಘವೇಶ್ವರ ಶ್ರೀಗಳು ಅತ್ಯಾಚಾರ ನಡೆಸಿರುವ ಸಂಬಂಧ ಪ್ರೇಮಲತಾ ಅವರು ಬನಶಂಕರಿ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ದೂರಿನ ಅನ್ವಯ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಹಲವರನ್ನು ವಿಚಾರಣೆ ಗೊಳಪಡಿಸಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಆರೋಪಪಟ್ಟಿ ಸಿದ್ಧಪಡಿಸಿ ಕಾನೂನು ತಜ್ಞರ ಸಮ್ಮತಿ ಪಡೆದುಕೊಂಡಿದ್ದಾರೆ.

ಪ್ರೇಮಲತಾ ಅವರ ಮೇಲೆ ಅತ್ಯಾಚಾರ ನಡೆಸಿರುವ ಸಂಬಂಧ ರಾಘವೇಶ್ವರ ಶ್ರೀಗಳ ಮೇಲೆ 376(2)(ಎಫ್)ನಂಬಿಸಿ ಅತ್ಯಾಚಾರ,506ಬೆದರಿಕೆ,354 ಮಹಿಳೆಯ ಮೇಲೆ ದೌರ್ಜನ್ಯ ಸೇರಿದಂತೆ ಮೂರು ಸೆಕ್ಷನ್‍ಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು,ದೆಹಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರೇಮಲತಾ ಅವರ ಮೇಲೆ ಶ್ರೀಗಳು ಅತ್ಯಾಚಾರ ನಡೆಸಿರುವುದಕ್ಕೆ ಸಾಕ್ಷ್ಯಾಧಾರಗಳನ್ನು ಸಿಐಡಿ ಅಧಿಕಾರಿಗಳು ಕಲೆಹಾಕಿದ್ದಾರೆ. ಪ್ರೇಮಲತಾ ಹಾಗೂ ಶ್ರೀಗಳ ಬಟ್ಟೆಯ ಮೇಲೆ ದೊರೆತ ರಕ್ತ,ವೀರ್ಯ ಪರೀಕ್ಷೆ ಹಾಗೂ ಡಿಎನ್‍ಎ ಪರೀಕ್ಷೆಯಲ್ಲಿ ಇಬ್ಬರ ನಡುವೆ ಲೈಂಗಿಕ ಸಂಪರ್ಕ ನಡೆದಿರುವುದು ಧೃಡಪಟ್ಟಿದೆ.

ಇದಲ್ಲದೇ ಅತ್ಯಾಚಾರಕ್ಕೆ ಸಾಕ್ಷಿಯಾಗಿ ಇಬ್ಬರ ಮೊಬೈಲ್ ಸಂಭಾಷಣೆ ಜೊತೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳು ವಾಸ್ತವ್ಯ ಹೊಡಿದ್ದ ಸ್ಥಳಗಳ ಮಾಹಿತಿ ಅಲ್ಲಿನವರ ಹೇಳಿಕೆಗಳು ಸೇರಿದಂತೆ ಹಲವು ಮಹತ್ವದ ಸಾಕ್ಷಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪ್ರೇಮಲತಾ ಅವರನ್ನು ನೂರಕ್ಕೂ ಹೆಚ್ಚು ಕಡೆಗಳಿಗೆ ಕರೆದೊಯ್ದಿದ್ದ ಶ್ರೀಗಳು ಅಲ್ಲೆಲ್ಲಾ ಆಕೆಯ ಮೇಲೆ ಅತ್ಯಾಚಾರ ನಡೆಸಿರುವುದು ದೇವರ ಹೆಸರಿನಲ್ಲಿ ಬೆದರಿಕೆ ಹಾಕಿರುವುದು ಅಲ್ಲದೇ ದೌರ್ಜನ್ಯ ನಡೆಸಿರುವುದಕ್ಕೆ ಸಾಕ್ಷಗಳನ್ನು ಕಲೆಹಾಕಲಾಗಿದೆ.ಶ್ರೀಗಳು ನಗರದ ಗಿರಿನಗರದ ಮಠದಲ್ಲೇ ಪ್ರೇಮಲತಾ ಅವರ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿರುವುದು ಪತ್ತೆಯಾಗಿದೆ.

ದೂರು ದಾಖಲಾಗಿ ಸಿಐಡಿಗೆ ವರ್ಗಾವಣೆಗೊಂಡ ನಂತರ ಸುಮಾರು ಒಂದು ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರಿಗಳು ತನಿಖೆ ನಡೆಸಿದ್ದಾರೆ ಅಲ್ಲದೇ ಶ್ರೀಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸಲಾಗಿತ್ತು.

ಪ್ರಕರಣದ ಸಂಬಂಧ ಸಿದ್ಧಪಡಿಸಿರುವ ಸುಮಾರು 680 ಪುಟಗಳ ಆರೋಪಪಟ್ಟಿಯನ್ನು ನಾಳೆ ಸಿಐಡಿ ಅಧಿಕಾರಿಗಳು ಸಲ್ಲಿಸಲಿದ್ದಾರೆ.

ಶ್ರೀಗಳ ಪರ ವಕೀಲ ಶಂಭುಶರ್ಮ ಅವರು ಅತ್ಯಾಚಾರ ಪ್ರಕರಣದಲ್ಲಿ ಶ್ರೀಗಳ ವಿರುದ್ಧ ಇಲ್ಲಸಲ್ಲದ ಆರೋಪಮಾಡಲಾಗಿದ್ದು ಇದರಲ್ಲಿ ಯಾವುದೇ ರೀತಿಯ ಸತ್ಯಾಂಶಗಳು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಘವೇಶ್ವರ ಶ್ರೀಗಳು ರಾಮಕಥಾ ಕಾರ್ಯಕ್ರಮದಲ್ಲಿ ಅವಕಾಶ ಮಾಡಿಕೊಡುವುದಾಗಿ ನಂಬಿಸಿ ಮಠದಲ್ಲಿದ್ದ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದರು ಎಂದು ಪ್ರೇಮಲತಾ ದೂರು ಸಲ್ಲಿಸಿದ್ದರು. ದೂರಿನ ಜೊತೆ ಬಟ್ಟೆ, ಇನ್ನಿತರ ಸಾಕ್ಷಾಧಾರಗಳನ್ನು ಹಾಕಿ ಒದಗಿಸಿದ್ದರು.

ಅತ್ಯಾಚಾರ ಪ್ರಕರಣವನ್ನು ದಾಖಲಿಸಿ ಬನಶಂಕರಿ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಅದರ ಗಂಭೀರತೆ ಅರಿತು ಪ್ರಕರಣವನ್ನು ಸಿಐಡಿಗೆ ಸರ್ಕಾರ ವಹಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಸಿಐಡಿ ಅಧಿಕಾರಿಗಳು ಪ್ರಕರಣದ ಕುರಿತು ವಿಸ್ತøತ ತನಿಖೆ ನಡೆಸಿದ್ದರು. ಸಿಐಡಿ ಅಧಿಕಾರಿಗಳ ತಂಡವು ರಾಮಚಂದ್ರಾಪುರ ಮಠದ ವಿವಿಧ ಶಾಖೆಗಳು, ಶ್ರೀಗಳು ವಾಸ್ತವ್ಯ ಹೂಡುತ್ತಿದ್ದ ದೆಹಲಿ ಇನ್ನಿತರ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದರು.

ಎಲ್ಲಾ ಮಾಹಿತಿಗಳನ್ನು ಒಳಗೊಂಡ ಆರೋಪ ಪಟ್ಟಿಯನ್ನು ಸಿದ್ಧಪಡಿಸಿ ಅದನ್ನು ಕಾನೂನು ತಜ್ಞರ ಗಮನಕ್ಕೆ ತಂದು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.ಪ್ರಕರಣದ ತನಿಖೆ ನಡೆಸಿದ ವೇಳೆ ಸಿಐಡಿಯಲ್ಲಿ ಡಿಐಜಿಯಾಗಿ ಬಿಪಿನ್ ಗೋಪಾಲಕೃಷ್ಣ ಅವರಿದ್ದು ಅವರ ನಿವೃತ್ತಿಯ ನಂತರ ಕಿಶೋರ್ ಚಂದ್ರ ಅವರು ತ್ವರಿತ ಗತಿಯಲ್ಲಿ ಆರೋಪಪಟ್ಟಿಗೆ ಮೋಕ್ಷ ನೀಡಿದ್ದಾರೆ.

ಪ್ರೇಮಲತಾ ಮೇಲೆ ರಾಘವೇಶ್ವರ ಅತ್ಯಾಚಾರ

ಅತ್ಯಾಚಾರ ನಡೆಸಿರುವ 680 ಪುಟಗಳ ಆರೋಪಪಟ್ಟಿ ಸಿದ್ಧ

ಸಿಐಡಿ ಸಿದ್ಧಪಡಿಸಿದ ಆರೋಪಪಟ್ಟಿ ನಾಳೆ ಕೋರ್ಟ್‍ಗೆ ಸಲ್ಲಿಕೆ

ರಾಘವೇಶ್ವರ ಶ್ರೀಗಳ ವಿರುದ್ಧ 3 ಸೆಕ್ಷನ್‍ಗಳಲ್ಲಿ ಪ್ರಕರಣ

ರಕ್ತ,ಡಿಎನ್‍ಎ,ವೀರ್ಯ ಪರೀಕ್ಷೆಯಲ್ಲಿ ಅತ್ಯಾಚಾರ ಪತ್ತೆ

ಗಿರಿನಗರ ಮಠದಲ್ಲಿ ಹಲವು ಬಾರಿ ಅತ್ಯಾಚಾರ

source: http://www.sanjevani.com/today/bengaluru.html

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s