ರಾಘವೇಶ್ವರಶ್ರೀಗೆ ಸಂಕಷ್ಟ, ನಾಳೆ ಚಾರ್ಜ್ ಶೀಟ್

ರಾಘವೇಶ್ವರಶ್ರೀಗೆ ಸಂಕಷ್ಟ, ನಾಳೆ ಚಾರ್ಜ್ ಶೀಟ್ ; ಆರೋಪ ಸುಳ್ಳಿನ ಕಂತೆ

ಉದಯವಾಣಿ, Sep 25, 2015, 2:38 PM IST

ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಸಿಐಡಿ ನ್ಯಾಯಾಲಯಕ್ಕೆ 680 ಪುಟಗಳ ಜಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದೆ ಎಂದು ಟಿವಿ9 ವರದಿ ಮಾಡಿದೆ.

ಪ್ರಕರಣದಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಕಾನೂನು ತಜ್ಞರು ಗ್ರೀನ್ ಸಿಗ್ನಲ್ ನೀಡಿದ್ದು, ಆ ಹಿನ್ನೆಲೆಯಲ್ಲಿ ಸಿಐಡಿ ತಂಡ ನಾಳೆ ಕೋರ್ಟ್ ಗೆ 680 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಿದೆ ಎಂದು ವರದಿ ವಿವರಿಸಿದೆ.

ರಾಘವೇಶ್ವರ ಶ್ರೀಗಳ ವಿರುದ್ಧ ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ದೂರು ನೀಡಿದ್ದರು. ಈ ಬಗ್ಗೆ ಸಿಐಡಿ ತನಿಖೆ ನಡೆಸಿತ್ತು. ಆರೋಪ ಪಟ್ಟಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಮಾಹಿತಿ ಕೂಡ ಸೇರಿದೆ. ಡಿಎನ್ ಎ ಪರೀಕ್ಷೆಯಲ್ಲಿ ಅತ್ಯಾಚಾರ ನಡೆಸಿದ್ದಕ್ಕೆ ಸಾಕ್ಷ್ಯ ಲಭ್ಯವಾಗಿದೆ. ಅಷ್ಟೇ ಅಲ್ಲ ರಾಮಕಥಾ ಗಾಯಕಿ ಪ್ರೇಮಲತಾ ಬಟ್ಟೆ ಮೇಲಿದ್ದ ವೀರ್ಯ ಶ್ರೀಗಳದ್ದೆಂದೇ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿರುವುದಾಗಿ ವರದಿ ಹೇಳಿದೆ.

ಮೊಬೈಲ್ ಕಾಲ್ ಲಿಸ್ಟ್ ಸಾಕ್ಷ್ಯ ಕಲೆ ಹಾಕಿರುವ ಸಿಐಡಿ ಅಧಿಕಾರಿಗಳು, ಮಠದ ಭಕ್ತರಿಂದಲೇ ಮಾಹಿತಿ ಕಲೆ ಹಾಕಿದ್ದಾರೆ. ಸುಮಾರು 48 ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ. ಆ ಹಿನ್ನೆಲೆಯಲ್ಲಿ ಶ್ರೀಗಳ ವಿರುದ್ಧ ಐಪಿಸಿ ಸೆಕ್ಷನ್ 376(2) ಎಫ್ ನಂಬಿಸಿ ಅತ್ಯಾಚಾರ, ಸೆಕ್ಷನ್ 506, 354 ಮಹಿಳೆ ಮೇಲೆ ದೌರ್ಜನ್ಯ ಸೇರಿದಂತೆ ಮೂರು ಸೆಕ್ಷನ್ ಗಳಡಿ ದೂರು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.

ರಾಘವೇಶ್ವರ ಶ್ರೀ ವಿರುದ್ಧದ ದೂರು ಪೂರ್ವನಿಯೋಜಿತ: ಶರ್ಮಾ
ಶ್ರೀ ಪರ ವಕೀಲ ಶಂಭು ಶರ್ಮಾ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧದ ದೂರು ಪೂರ್ವ ನಿಯೋಜಿತವಾಗಿದೆ. ಶ್ರೀಗಳಿಗೆ ನಿರಂತರವಾಗಿ ತೊಂದರೆ ಕೊಡುವ ಯತ್ನ ಇದಾಗಿದೆ. ಇಬ್ಬರು ಮಹಿಳೆಯರಿಂದ ಶ್ರೀಗಳ ವಿರುದ್ಧ ಸುಳ್ಳು ಆರೋಪ. ಸ್ವಾಮೀಜಿಯಿಂದ ಪೀಠ ಕಿತ್ತುಕೊಳ್ಳಲು ವ್ಯವಸ್ಥಿತ ಸಂಚು ಇದಾಗಿದೆ ಎಂದು ಶ್ರೀಗಳ ಪರ ವಕೀಲರಾದ ಶಂಭು ಶರ್ಮಾ ತಿಳಿಸಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜ್ಯೋತಿಷಿಗಳ ಸಲಹೆ ಮೇರೆಗೆ ಶ್ರೀಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ .ರಾಮಚಂದ್ರಾಪುರ ಮಠದ ಮೇಲೆ ದುಷ್ಟರ ಕಣ್ಣಿದೆ. ಹಾಗಾಗಿ ಶ್ರೀಗಳ ವಿರುದ್ಧ ವ್ಯವಸ್ಥಿತವಾಗಿ ಕಪೋಲ ಕಲ್ಪಿತ ಕಥೆ ಹೆಣೆದಿದ್ದಾರೆ ಎಂದು ಆರೋಪಿಸಿದರು. ಒಂದು ಬಾರಿ ಅಂತ ಹೇಳಿದ್ರೆ ನಂಬಬಹುದು, 196 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂಬುದು ನಂಬುವ ವಿಚಾರವೇ ಎಂದು ಶರ್ಮಾ ಪ್ರಶ್ನಿಸಿದರು.

ಶ್ರೀಗಳ ವಿರುದ್ಧದ ಆರೋಪದ ಹಿಂದೆ ಪ್ರಭಾವಿಗಳ ಕೈವಾಡ ಇದೆ. ಮಠದಿಂದ ಸ್ವಾಮೀಜಿಗಳನ್ನು ದೂರ ಮಾಡಲು ಸಂಚು ನಡೆದಿದೆ. ಶ್ರೀಗಳನ್ನು ಸರ್ಕಾರ ರಕ್ಷಿಸುತ್ತಿದೆ ಎಂಬುದು ಸುಳ್ಳು ಎಂದು ಈ ಸಂದರ್ಭದಲ್ಲಿ ಹೇಳಿದರು.

source: http://www.udayavani.com/kannada/news/%E0%B2%B0%E0%B2%BE%E0%B2%9C%E0%B3%8D%E0%B2%AF/103833/%E0%B2%85%E0%B2%A4%E0%B3%8D%E0%B2%AF%E0%B2%BE%E0%B2%9A%E0%B2%BE%E0%B2%B0-%E0%B2%86%E0%B2%B0%E0%B3%8B%E0%B2%AA%E0%B2%95%E0%B3%8D%E0%B2%95%E0%B3%86-%E0%B2%B8%E0%B2%BE%E0%B2%95%E0%B3%8D%E0%B2%B7%E0%B3%8D%E0%B2%AF-%E0%B2%B2%E0%B2%AD%E0%B3%8D%E0%B2%AF-%E0%B2%86%E0%B2%B0%E0%B3%8B%E0%B2%AA-%E0%B2%B8%E0%B3%81%E0%B2%B3%E0%B3%8D%E0%B2%B3%E0%B2%BF%E0%B2%A8-%E0%B2%95%E0%B2%82%E0%B2%A4%E0%B3%86-%E0%B2%B6%E0%B2%B0%E0%B3%8D%E0%B2%AE%E0%B2%BE

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s