ರಾಘವೇಶ್ವರ ಶ್ರೀ ಜಾಮೀನು ಅರ್ಜಿ: 30ಕ್ಕೆ ತೀರ್ಪು

ರಾಘವೇಶ್ವರ ಶ್ರೀ ಜಾಮೀನು ಅರ್ಜಿ: 30ಕ್ಕೆ ತೀರ್ಪು

ಉದಯವಾಣಿ, Sep 23, 2015, 3:45 AM IST

ಬೆಂಗಳೂರು: ಯಕ್ಷಗಾನ ಕಲಾವಿದೆ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಸೆಷನ್ಸ್‌ ನ್ಯಾಯಾಲಯ ಸೆ.30ಕ್ಕೆ ಕಾಯ್ದಿರಿಸಿದೆ.

ನಿರೀಕ್ಷಣಾ ಜಾಮೀನು ಅರ್ಜಿ ಕುರಿತಂತೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿತು. ಸ್ವಾಮೀಜಿಯವರಿಗೆ ನ್ಯಾಯಾಲಯ ಸೆ. 29ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಇದಕ್ಕೆ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಆರೋಪಿ ಸ್ಥಾನದಲ್ಲಿರುವ ಸ್ವಾಮೀಜಿ ವಿರುದ್ದ ಎರಡು ಅತ್ಯಾಚಾರ ಆರೋಪ ಪ್ರಕರಣಗಳಿದ್ದು, ತನಿಖೆಗೆ ಸಹಕರಿಸುತ್ತಿಲ್ಲ. ಎರಡನೇ ಪ್ರಕರಣದಲ್ಲಿ ಒಮ್ಮೆ ಮಾತ್ರ ವಿಚಾರಣೆಗೆ ಹಾಜರಾಗಿದ್ದಾರೆ. ಅಲ್ಲದೆ, ಎರಡನೇ ಪ್ರಕರಣದಲ್ಲೂ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಿದೆ. ಹೀಗಾಗಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದೆಂದು ಅಭಿಯೋಜಕ ಪೊನ್ನಣ್ಣ ವಾದ ಮಂಡಿಸಿದರು.

ಈ ನಡುವೆ, ಅತ್ಯಾಚಾರ ಪ್ರಕರಣದಲ್ಲಿ 8ನೇ ಆರೋಪಿಯಾಗಿರುವ ಮಹಿಳೆಯ ಪತಿ ಮಂಜುನಾಥ ಹೆಬ್ಟಾರ್‌ ಅವರ ಪರವಾಗಿ ವಕೀಲರು ನ್ಯಾಯಾಲಯಕ್ಕೆ ಲಿಖೀತ ಅರ್ಜಿ ಸಲ್ಲಿಸಿದರು. ಅತ್ಯಾಚಾರ ದೂರು ನೀಡಿರುವ ಮಹಿಳೆ ತನ್ನ ಕಕ್ಷಿದಾರರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಈಗಾಗಲೇ ವಿಚ್ಛೇದನ ಕೋರಿ ಶಿರಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಹಂತದಲ್ಲಿದೆ. ಪತಿಗೆ ಮನೆಯಿಂದ ಹಾಗೂ ಮಠದಿಂದ ಹಣ ತರುವಂತೆ ಮಹಿಳೆ ಪೀಡಿಸುತ್ತಿದ್ದಳು. ಇದಕ್ಕೆ ತಮ್ಮ ಕಕ್ಷಿದಾರರು ಒಪ್ಪದಿದ್ದಾಗ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಮಂಜುನಾಥ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

source: http://www.udayavani.com/kannada/news/%E0%B2%B0%E0%B2%BE%E0%B2%9C%E0%B3%8D%E0%B2%AF-%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%A8%E0%B2%97%E0%B2%B0/103079/%E0%B2%B0%E0%B2%BE%E0%B2%98%E0%B2%B5%E0%B3%87%E0%B2%B6%E0%B3%8D%E0%B2%B5%E0%B2%B0-%E0%B2%B6%E0%B3%8D%E0%B2%B0%E0%B3%80-%E0%B2%9C%E0%B2%BE%E0%B2%AE%E0%B3%80%E0%B2%A8%E0%B3%81-%E0%B2%85%E0%B2%B0%E0%B3%8D%E0%B2%9C%E0%B2%BF-30%E0%B2%95%E0%B3%8D%E0%B2%95%E0%B3%86-%E0%B2%A4%E0%B3%80%E0%B2%B0%E0%B3%8D%E0%B2%AA%E0%B3%81

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s