ರಾಘವೇಶ್ವರ ಶ್ರೀಗಳ ವಿರುದ್ಧ ಮತ್ತೊಂದು ದೂರು ದಾಖಲು

ರಾಘವೇಶ್ವರ ಶ್ರೀಗಳ ವಿರುದ್ಧ ಮತ್ತೊಂದು ದೂರು ದಾಖಲು

Posted Date : Sunday, September 20th, 2015

ಬೆಂಗಳೂರು: ಅತ್ಯಾಚಾರ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧ ಈಗ ಮತ್ತೊಂದು ದೂರು ದಾಖಲಾಗಿದೆ. ನನಗೆ ಶ್ರೀಗಳಿಂದ ಜೀವ ಬೆದರಿಕೆ ಇದೆ ಎಂದು ರಾಮಕಥಾ ಗಾಯಕಿ ಪ್ರೇಮಲತಾ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಶ್ರೀಗಳ ವಿರುದ್ಧ ದೂರು ನೀಡಿದ್ದಾರೆ.

ಅತ್ಯಾಚಾರದ ದೂರು ಹಿಂಪಡೆಯುವಂತೆ ಶ್ರೀಗಳು ಮತ್ತು ಅವರ ಅನುಯಾಯಿಗಳಿಂದ ತಮಗೆ ನಿರಂತರವಾಗಿ ಅನಾಮಿಕ ಕರೆಗಳು ಬರುತ್ತಿದ್ದು, ಜೀವಹಾನಿ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಿಐಡಿ ತನಿಖೆಗೆ ಪತಿ ದಿವಾಕರ ಶಾಸ್ತ್ರಿ ಇತರ ಊರುಗಳಿಗೂ ತೆರಳುತ್ತಿದ್ದು, ಅಲ್ಲೂ ಪ್ರಾಣ ಬೆದರಿಕೆ ಹಾಗೂ ಆತಂಕದ ವಾತಾವರಣ ಸೃಷ್ಟಿಸಲಾಗುತ್ತಿದೆ.ಈ ಸಂಬಂಧ ಕೊಣಾಜೆ, ಮೈಸೂರು ಹಾಗೂ ಶಿವಮೊಗ್ಗಗಳಲ್ಲಿ ದೂರು ದಾಖಲಿಸಲಾಗಿದೆ. ಇನ್ನು ತಾವು ಅತ್ಯಾಚಾರ ದೂರು ದಾಖಲಿಸಿದ ಬಳಿಕ ಶ್ರೀಗಳು ಮಠದ ಪ್ರವಚನಗಳಲ್ಲಿ ನನ್ನ ಕುಟುಂಬದ ವಿರುದ್ಧ ಹಾಗೂ ನನಗೆ ಬೆಂಬಲ ನೀಡುತ್ತಿರುವವರ ವಿರುದ್ಧ ಅಲ್ಲಸಲ್ಲದ ವಿಷ್ಯಗಳನ್ನು ಹೇಳುತ್ತಾ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಯಾಯಿಗಳನ್ನು ನನ್ನ ವಿರುದ್ಧ ಕಾರ್ಯ ನಿರ್ವಹಿಸುವಂತೆ ಪ್ರಚೋದಿಸುತ್ತಿದ್ದಾರೆ. ಎರಡನೇ ಅತ್ಯಾಚಾರ ಪ್ರಕರಣ ದಾಖಲಾದ ಬಳಿಕ ಫೇಸ್‍ಬುಕ್‍ನಲ್ಲಿ ಹೇಳಿಕೆ ನೀಡಿರುವ ಶ್ರೀಗಳು, ಇಲ್ಲಿಯವರೆಗೂ ನಾನು ಹೋರಾಡಿದ್ದೇನೆ. ಇನ್ನು ಮುಂದೆ ಆಗುವುದಿಲ್ಲ. ವಿರೋಧಿಗಳ ಅಲೆಯನ್ನು ನೀವು ನಿಲ್ಲಿಸಿ. ನಿಮಗೆ ನಾವು ಜೊತೆಯಿರುತ್ತೇವೆ ಎಂದು ತಮ್ಮ ಅನುಯಾಯಿಗಳಿಗೆ ತಿಳಿಸಿದ್ದಾರೆ. ಇದರೊಂದಿಗೆ ಶ್ರೀಗಳು ನನ್ನ ವಿರುದ್ಧ ತಮ್ಮ ಅಧಿಕಾರ, ಹಣಬಲ ಹಾಗೂ ಜನಬಲ ಪ್ರಯೋಗಿಸಲು ಹೊರಟಿದ್ದಾರೆ. ಶ್ರೀಗಳಿಂದಾಗುತ್ತಿರುವ ನಿರಂತರ ಮಾನಸಿಕ ಕಿರುಕುಳ ಹಾಗೂ ಅವರ ಅನುಯಾಯಿಗಳ ಪ್ರಾಣ ಬೆದರಿಕೆಯಿಂದ ಬೇಸತ್ತು ಈ ದೂರನ್ನು ನೀಡುತ್ತಿದ್ದೇನೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ.

2014ರಲ್ಲಿ ಶ್ರೀಗಳ ವಿರುದ್ಧ ಅತ್ಯಾಚಾರ ದೂರು ದಾಖಲಾದಾಗಿನಿಂದ ನಿರಂತರವಾಗಿ ತಮ್ಮ ಕುಟುಂಬಕ್ಕೆ ಶ್ರೀಗಳ ಅನುಯಾಯಿಗಳು ಬೆದರಿಕೆ ಒಡ್ಡುತ್ತಿದ್ದಾರೆ. ಇವರೆಲ್ಲರ ಮಾನಸಿಕ ಕಿರುಕುಳದಿಂದಾಗಿ ತಮ್ಮ ಪತಿ ದಿವಾಕರ ಶಾಸ್ತ್ರಿ ಸಹೋದರ ಶ್ಯಾಮ್‍ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಅಷ್ಟೇ ಅಲ್ಲ ಕಾಳಿ ಯೋಗೇಶ್ ಎಂಬ ಭೂಗತ ಪಾತಕಿಯೊಬ್ಬನಿಂದ ಕರೆ ಮಾಡಿಸಿ ತಮ್ಮನ್ನು ಮುಗಿಸುವುದಾಗಿ ಬೆದರಿಕೆ ಹಾಕಿಸಿದ್ದು ಇವೆಲ್ಲದರ ಬಗ್ಗೆ ನಾನು ಈ ಹಿಂದೆಯೇ ದೂರು ನೀಡಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

source: http://publictv.in/kannada/news/national/archives/52859/threatening-complaint-lodged-against-raghaveshwara-swamiji-in-bengaluru/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s