ಚಾತುರ್ಮಾಸ ಪುರಸ್ಕಾರ ಪ್ರಹಸನ

ಚಾತುರ್ಮಾಸ ಪುರಸ್ಕಾರ ಪ್ರಹಸನ

ವಿವಾದದ ನಾಮಣ್ಣ [ಪಕ್ಕದಲ್ಲಿ ಕೂತವರ ಹತ್ತಿರ]: “ನಂಗೆ ಇಂದು ಸನ್ಮಾನ ಮಾಡ್ತೆ ಹೇಳಿದ್ದೊ. ಶೀಗಳ ಕೈಯಿಂದ ಸನ್ಮಾನ ಮಾಡ್ತ್ರು ಹೇಳಿ ಬಹಳ ಖುಷಿಂದ ಕೂತಿದ್ದೆ.”

ಪಕ್ಕದಲ್ಲಿ ಕುಳಿತ ರಾಮ್ ಬಾವ: “ಶೀಗಳ ಕೈಯಿಂದ ಸನ್ಮಾನ ಮಾಡ್ಸಗಂಬಲೆ ನಮ್ಮ ಕಡೆಯವೆಲ್ಲ ಬಹಳ ಜನ ಕಾಯ್ತಾ ಇದ್ದೊ. ನಾಮಣ್ಣ, ಅಲ್ಲ, ನಿನ್ನ ಸೇವೆಯೂ ಬಹಳ ದೊಡ್ದೇಯ ಬಿಡು. ಮನೆಗಿನೆ ಎಲ್ಲ ಬಿಟ್ಗಂಡು ತಿಂಗ್ಳಾನಗಟ್ಲೆ ಮಠದಲ್ಲೆ ಇದ್ದು ಸೌಂಡ್ ಬಿಡ್ತ್ಯಲ. ಅದಕ್ಕೆ ಶೀಗಳಿಗೂ ನಿನ್ನ ಕಂಡ್ರೆ ಬಾಳ ಇಷ್ಟವೇಯ. ನಿಂಗಳಂತೊರೆಲ್ಲ ಇದ್ರೆ ಶೀಗಳ ಏಕಾಂತಕ್ಕೆಲ್ಲ ಬಹಳ ಅನುಕೂಲಾಗ್ತು, ಯಾವ್ದೇ ತೊಂದ್ರೆ ಆಗ್ತಿಲ್ಲೆ ಹೇಳಿ.”

ಮಾತುಕತೆ ಮುಂದುವರಿದಿತ್ತು. ಅಷ್ಟರಲ್ಲಿ ವೇದಿಕೆಯಲ್ಲಿ ಹಳದೀ ತಾಲಿಬಾನ್ ಕೋಟೆಯ ಮಹಾದ್ವಾರದ ಒಂದು ಪಾರ್ಶ್ವದ ಕಾವಲುಗಾರನಾದ ಹಾವಿನಹಳ್ಳಿ ದೊಣ್ಣೆ ನಾಯಕ ಪ್ರತ್ಯಕ್ಷನಾದ.

ಹಾವಿನಹಳ್ಳಿ ದೊಣ್ಣೆ ನಾಯಕ:”ಗುರುಭಕ್ತರಲ್ಲಿ ಒಂದು ವಿನಂತಿ-ಇಂದು ನಮ್ಮ ಗುರುಗಳು ಬಹಳ ದೊಡ್ಡ ತಪಸ್ಸಿನಲ್ಲಿ ಸಮಾಧಿ ಸ್ಥಿತಿಯಲ್ಲಿ ಇರುವುದರಿಂದ ಇಂದು ಪ್ರವಚನ ಮಂತ್ರಾಕ್ಷತೆಗಳು ಇರುವುದಿಲ್ಲ. ಇಂದಿನ ಚಾತುರ್ಮಾಸ ಪುರಸ್ಕಾರ ಕಾರ್ಯಕ್ರಮವನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ಮುಂದೂಡಲಾಗಿದೆ. ದಯಮಾಡಿ ಭಕ್ತಾದಿಗಳು ಸಹಕರಿಸಬೇಕು.”

ಅಷ್ಟರಲ್ಲಿ ಹಳದೀ ತಾಲಿಬಾನ್ ಕೋಟೆಯ ಮಹಾದ್ವಾರದ ಇನ್ನೊಂದು ಪಾರ್ಶ್ವದ ಕಾವಲುಗಾರನಾದ ಸ್ತ್ರೀಧರನೆಂಬ ದೊಣ್ಣೆನಾಯಕ ಓಡೋಡುತ್ತ ಬಂದು ಹಾವನಿಹಳ್ಳಿ ದೊಣ್ಣೆನಾಯಕನ ಕಿವಿಯಲ್ಲಿ [ಗುಟ್ಟಾಗಿ ಹೇಳಿದ್ದು ಮೈಕಿನಲ್ಲೂ ಕೇಳಿಸಿಬಿಟ್ಟಿತು.]: “ಬಾವಯ್ಯ, ಗುರುಗಳ ಬಂಧನ ಹೇಳಿ ಮಾಧ್ಯಮದವರೆಲ್ಲ ಪ್ರಸಾರ ಮಾಡ್ತಾ ಇದ್ದೊ ನನಗೆ ಕಾಂತಮಾಣಿ ಹೇಳ್ದ. ಅಂವ ಟಿವಿ ನೋಡ್ತಾ ಇದ್ನಡ. ಅಂವ ಮತ್ತೆ ಇಲಿಹಿಡ್ಕ ಸೇರಿ ಮುಂದೇನೇನ್ ಸುದ್ದಿ ಬತ್ತು ಹೇಳಿ ನೋಡ್ತಾನೇ ಇದ್ವಡ. ನಾವೇನೋ ಸಮಾಧಿ, ತಪಸ್ಸು ಹೇಳೆಲ್ಲ ಹೇಳ್ತಾ ಇದ್ರೂ ಜನರಿಗೆ ಗೊತ್ತಾಗೊಯ್ದು ಮಾರಾಯ. ಈಗೆಂತ ಮಾಡುದು?”

ಹಾವಿನಹಳ್ಳಿ ದೊಣ್ಣೆನಾಯಕ: “ಅಷ್ಟೇ ಸೈ ಅಲ್ದನ? ಅದಕ್ಕೆಲ್ಲ ಯಾಕ್ ಚಿಂತೆ ಮಾಡ್ತೆ. ಈಗಲೇ ನಮ್ಮ ಸೇನೆ ಎಬ್ಬಸು. ಅವೆಲ್ಲ ಅಲ್ಲಿಗೆ ಹೋಗಿ ಸುತ್ತಮುತ್ತ ನಿಂತು ಬುಡ್ಲಿ. ಮಾವಂದ್ರೆಲ್ಲ ಹೆದರ್ಕೆಂಡು ಗುರುಗಳನ್ನ ಬಿಟ್ ಬುಡ್ತ.”

ಸ್ತ್ರೀಧರ: “ಸೇನೆ ಜನ ಕಾಣ್ತಾ ಇಲ್ಲೆ ಮಾರಾಯ. ಮಾವಂದ್ರು ಬರ್ತಿದ್ದಾಂಗೆ ಒಬ್ಬೊಬ್ರೆ ಇಳಿದು ಹೋದೋರು ಈಗ ಎಲ್ಲಿದ್ವೋ ಎಂತದ, ಯಾರೂ ಕಾಣಸ್ತಾ ಇಲ್ಲೆ.”

ಹಾವಿನಹಳ್ಳಿ:”ಹೌದನ, ಹಾಂಗಾರೆ ಈಗ ಹಳ್ಳಿಕಡಿಗೆಲ್ಲ ಫೋನ್ ಮಾಡಲೆ ಹೇಳವು. ಅರ್ಜೆಂಟು. ಸ್ತ್ರೀಮಾರನ ಬಸ್ಸಿದ್ದನ…ಅದನ್ನೆಲ್ಲ ಅಡ್ಜೆಸ್ಟ್ ಮಾಡ್ಕೆಂಡು ಬಸ್ ಬಸ್ ಜನ ಬಂದ್ಬುಡವು. ರಾತ್ರೋ ರಾತ್ರಿ ಅಲ್ಲಿಂದ ಹತ್ಕಂಡು ಬಪ್ಪಂಗೆ ವ್ಯವಸ್ಥೆ ಆಯಕು. ನಮ್ಮ ಸೇನೆ ಮುಖ್ಯಸ್ಥರಿಗೆಲ್ಲ ತಕ್ಷಣ ಕಾಲ್ ಮಾಡು.”

ಸ್ತ್ರೀಧರ: “ನೀ ಹೇಳಿದ್ದೆಲ್ಲ ಆಗಲೇ ಪ್ರಯತ್ನ ಮಾಡಿದ್ದೆ ಮಾರಾಯ. ನಮ್ ಸೇನೆ ಮುಖ್ಯಸ್ಥರ ಮೊಬೈಲೆಲ್ಲ ಎಂಗೇಜ್ ಇದ್ದು. ತಮ್ಮಣ್ಣನ ಕಲ್ಲು, ತಂಗಿ ಕಲ್ಲು, ಮಡಿವಾಳರ ಗಂಟು, ಮುಗ್ಗಲಬಟ್ಟೆ ಗಂಟು ಎಲ್ಲರ ಮೊಬೈಲೂ ಎಂಗೇಜು. ಯಾರ್‍ಯಾರು ಎಲ್ಲೆಲ್ಲಿ ಇದ್ದೊ ಹೇಳಿ ಗುತ್ತಿಲ್ಲೆ. ಯಂತ ಮಾಡುದು ಹೇಳಿ ಗುತ್ತಾಗ್ತಿಲ್ಲೆ.”

ವಿವಾದದ ನಾಮಣ್ಣ: ” ಎಂತದ್ರ ವಿಷಯ? ಗುರುಗಳು ಸಮಾಧಿ ಸ್ಥಿಥಿಲಿದ್ರು ಹೇಳ್ತಾ ಇದ್ರಿ. ಇಲ್ನೋಡ್ರೆ ನಂಗೆ ವಾಟ್ಸಾಪ್ ನಲ್ಲಿ ಶೀಗಳ ಬಂಧನ ಹೇಳಿ ಮೆಸ್ಸೇಜ್ ಬಂಜು. ಎಲ್ಲ ಎಂತ ನಡೀತಾ ಇದ್ದು. ನಂಗಕೂ ಹೇಳಿ. ಜನರಿಗೆಲ್ಲ ತೆಳಿಸಿ ನಮ್ಮೂರ್ಕಡೆ ಭಕ್ತರನ್ನೆಲ್ಲ ಕರ್ಸವೋ ಹೇಳಿ ಯೋಚನೆ ಮಾಡ್ವ.”

ಹಾವಿನಹಳ್ಳಿ: “ಅಂತದೆಂತು ಇಲ್ಲೆ ನಾಮಣ್ಣ. ನಮ್ಮ ಗುರುಗಳನೆಲ್ಲ ಬಂಧಿಸ ತಾಕತ್ತು ಯಾರಿಗಿದ್ದು ಹೇಳು. ಅವರನ್ನ ಬಂಧಸಿದ್ರೆ ಜಗತ್ತೇ ಪ್ರಳಯಕ್ಕೀಡಾಗ್ತು. ರಾಮದೇವರು ಅಂದ್ರೆಂತ ಸುಮ್ನೇ ಹೇಳ್ ತಿಳ್ಕೈಂದ್ಯ? ಯಾರೋ ಸಮಾನರು ನಿಂಗೆ ಸುಳ್ ಮೆಸ್ಸೇಜ್ ಕಳ್ಸಿದ್ದ ಅಷ್ಟೇಯ. ಗುರುಗಳು ಏಕಾಂತದಲ್ಲಿ ಸಮಾಧಿಗೆ ಹೋಗ್ಬುಟಿದ. ಹೀಂಗಾಗಿ ಅವಕೆ ಎಚ್ಚರ ಅಪ್ಪಲ್ಲಿವರಿಗೆ ಕಾರ್ಯಕ್ರಮ ಎಲ್ಲ ಮುಂದೂಡನ ಹೇಳಿ ಕೋಟೆ ಬಾಗಿಲ ಕಾಯ್ತಾ ಇದ್ದ ನಾವಿಬ್ರು ತೀರ್ಮಾನ ಮಾಡದ್ಯ.”

ವಿವಾದದ ನಾಮಣ್ಣ:”ಓ, ಹಾಂಗಾರೆ ಅದು ಸುಳ್ ಸುದ್ದಿ ಹೇಕಾತು. ಆ ಸಮಾನರೆಲ್ಲ ಹಾಂಗೇಯ ಬಿಡು. ಅವ್ಕೆ ಏನಾರೂ ಸಿಕ್ಕಿರ್ ಸಾಕು, ಕೈಯಿ ಕಾಲು ಸೇರ್ಸಿ, ರೆಕ್ಕೆ ಪುಕ್ಕ ಹಚ್ಚಿ ಇಲ್ದದ್ನೆಲ್ಲ ಹೇಳ್ತಾ ಇರ್ತ. ಹಾಂಗಾಗೇಯ ಸುಳ್ ಪ್ರಕರಣ ಸೃಷ್ಟಿ ಮಾಡಿದ್ದು. ನಂಗೇನು ಡೌಟಿಲ್ಲೆ. ಆದ್ರೆ ನನ್ನ ಹತ್ರ ಕೂತ್ಗಂಜ ನೋಡು..ಓ ಅಲ್ಲಿ….ಅಂವ ರಾಮ್ ಬಾವ ಅಂವ ಕೇಳ್ತಾ ಇದ್ದ ಮಾರಾಯ. ಮಾವಂದಿಕ್ಕೊ ಗುರುಗಳನ್ನು ಕರ್ಕಂಡೋದ್ವಡ ಹೇಳಿ ಅವಂಗೂ ಮೆಸ್ಸೇಜ್ ಬಂಜಡ.”

ಹಾವಿನಹಳ್ಳಿ:”ನಾಮಣ್ಣ, ಒಂದೊಮ್ಮೆ ಸಮಾಧಿ ಸ್ಥಿಥಿಯಿಂದ ಎಬ್ಬಿಸಿ ಕರ್ಕಂಡೋಯ್ದ ಹೇಳೆ ಇಟ್ಗ, ಅಲ್ಲಿ ಅವರೆಲ್ಲ ಬಾಳ ಗೌರವದಿಂದ ನಡಕತ್ವ. ಕುರ್ಚಿ ಮೇಲೇ ಕೂರ್ಸದು, ಎಲ್ಲರೂ ದಬಕ್ ಅಂತ ಅಡ್ಡ ಬಿದ್ದು ಮತ್ರಾಕ್ಷತೆ ತಗತ್ತ. “ಶೀಗಳೆ, ನಮ್ ಕರ್ತವ್ಯ ಅಂತ ನಮಗೆ ವಾರ್ಡ್ರ್ ಆಗಿದೆ. ಹಾಂಗಾಗಿ ಒಂದಷ್ಟು ಫಾರ್ಮಾಲಿಟೀಸು ಮಾಡ್ತೀಮಿ. ನಿಮ್ಗೇನು ತೊಂದ್ರೆ ಆಗ್ದಂಗೆ ನೋಡ್ಕತೀಮಿ. ಜನರ ಕಣ್ಣಿಗೆ ಈಗ ಏನೋ ಮಾಡ್ದಂಗಿರಬೇಕು ಹಂಗ್ ಮಾಡ್ತೀಮಿ. ಆದ್ರೆ ಅಂತಾದ್ದೇನೂ ಮಾಡಂಗಿಲ್ಲ. ನಮಗ್ಗೊತ್ತಿಲ್ವರಾ? ಶೀಗಳು ಬಾಳ ದೊಡ್ಡ ಪವಾಡ ಪುರುಸರು. ಏನೋ ಟೇಮ್ ಚೆನ್ನಾಗಿಲ್ಲ ಪಾಸಿಟಿವ್ ಬಂದ್ಬುಟ್ಟೈತೆ. ಪಾಸಿಟಿವ್ ಬಂದವರ್ನೆಲ್ಲ ಕಂಡ್ರೆ ನಮ್ಗೆ ಬಾಳ್ ಪ್ರೀತಿ. ನಮ್ ಕೆಲಸ ಇರೋದೇ ಅವರ್ತಾವ ಜಾಸ್ತಿ.” ಅಂತ ಅವತ್ತೇ ಹೇಳಿದ. ಅದ್ಕಾಗಿ ಮಾವಂದ್ರು ಕರ್ಕೊಂಡ್ ಹೋದ್ರೂ ಏನೂ ಮಾಡದಿಲ್ಲೆ. ಶೀಗಳು ಎಲ್ಲೇ ಹೋದರೂ ದಿನಾ ಸೀಟ್ ಧೂಳ್ ಹೊಡ್ದು ಅವರಿಗಾಗಿ ಕಾದಿಡ್ತಿ ಹೇಳಿ ಹೇಳಿದ್ದಿ ಆನು.

ಅಷ್ಟರಲ್ಲಿ ಇವರ ಮಾತುಕತೆಯ ಅಂಗಚೇಷ್ಟೆಗಳನ್ನು ದೂರದಿಂದ ನೋಡುತ್ತ ಕೂತಿದ್ದ ರಾಮ್ ಬಾವ ಎದ್ದು ಬಂದ. ಅವನೇನೋ ಸ್ವಲ್ಪ ಬದಲಾಗ್ತಾ ಇರೋ ಹಾಗಿತ್ತು. ಹಳೇಕಾಲದ ಗೋಡೆ ಗಡಿಯಾರಕ್ಕೆ ಕೀಲಿ ತಿರುಗಿಸಿದಾಗ ಸ್ವಲ್ಪ ಸ್ವಲ್ಪ ನಡೆಯಲು ಆರಂಭಿಸುವಂತೆ ಅವನ ತಲೇಲಿ ಚಿಂತನೆ ಆರಂಭವಾಗಿತ್ತು. ಬಂದವನೇ ಮಾತಾಡಿದ: “ಅಲ್ದ ಹಾವಿನಹಳ್ಳಿ ದೊಣ್ಣೆ ನಾಯಕ, ನೀನು ನಮ್ಮ ಹಾಂಗಲ್ಲ. ಶ್ರೀರಾಮನ ನಿತ್ಯ ಸೂರಿ ನೀನು. ಅಂದಂಗೆ ಮಠದ ಬಾವಯ್ಯ ಕಾಣ್ತಾ ಇಲ್ಲೆ ಮೂರ್ ದಿನದಿಂದ ಹೇಳಿ ನಂಗೆ ನಿನ್ನೆ ಮೆಸ್ಸೇಜ್ ಬಂದಿತ್ತು. ಇಲ್ಲಿಗ್ ಬಂದ್ಮೇಲೆ ಗುತ್ತಾತು-ಬಾವಯ್ಯ ಇಲ್ದಿದ್ದು ಹೌದು ಹೇಳಿ. ಬಾವಯ್ಯ ಎಲ್ಲಿಗೋಜ? ಅಂವ ಯಾಕೆ ಈ ಸಮಯದಲ್ಲಿ ಎದ್ರಿಗೆ ಬತ್ನಿಲ್ಲೆ?”

ಹಾವಿನಹಳ್ಳಿ: “ನೀವೆಲ್ಲೋ ಸಮಾನರ ಮಾತ್ ಕೇಳಿ ಹಾಳಾಗ್ತಾ ಇದ್ದಂಗಿದ್ದು. ಒಳ್ಳೇದಲ್ಲ. ಜನ್ಮಜನ್ಮಾಂತರಕ್ಕೂ ಬಪ್ಪ ಗುರುಶಾಪ, ಸಾಮಾಜಿಕ ಬಹಿಷ್ಕಾರ…..ನೆನಪಿರಲಿ. ಯತಿನಿಂದನೆ, “ಅವನ ಬಾವಯ್ಯನ ನಿಂದನೆ ಮಾಡಲಾಗ. ನಮ್ಮ ಮಠದಲ್ಲಿ ಬಾವಯ್ಯ ಅಂದ್ರೆ ಯತಿಗಿಂತ ಒಂದ್ ಕೈ ಮೇಲೆ. ಮಹಾಮಂತ್ರಿ ದುಷ್ಟಬುದ್ಧಿ ಇದ್ದಂಗೇಯ ಅವರು. ಅವಂಗೆ ಅಡ್ ಬಿದ್ರೆ ಗುರ್ಗಳಿಗೆ ಅಡ್ ಬಿದ್ ಹಂಗೇಯ. ಅವನೂ ಮಹಾತಪಸ್ವಿ. ತಪಸ್ಸಿನ ಕಾಲದ ’ತುರ್ಯಾವಸ್ಥೆ’ಯಲ್ಲಿ ಕೋಳಿಮೊಟ್ಟೆ ಆಮ್ಲೇಟು, ಎಣ್ಣೆ ಎಲ್ಲಾ ವ್ಯವಸ್ಥೆಯೂ ಬೇಕಾಗ್ತು” ಹೇಳಿ ಆ ಸಮಾನರು ಹೇಳ್ತಾ ಇರ್ತ. ಅದನ್ನೆಲ್ಲ ನಂಬ್ಕೆಳಡಿ. ಅದೆಲ್ಲ ಸುಳ್ಳೇಯ, ಹೇಳಿದಿ. ಬಾವಯ್ಯಂಗೆ ಆರಾಮಿಲ್ಲೆ. ಅಂವ ಮನೆಲಿ ಮನಕೆಂಡಿದ್ನ. ಅದನ್ನೇ ನೆಪ ಮಾಡ್ಕೆಂಡು ಅಂವ ಕಾಣ್ತಾ ಇಲ್ಲೆ ಹೇಳಿ ಗುಲ್ಲೆಬ್ಬಿಸಿದ್ದ.”

ರಾಮ್ ಬಾವ:”ಅಲ್ದ ದೊಣ್ಣೆನಾಯಕ. ಮತ್ತೆ ಅವಂಗೆತೊ ಎರಡನೇ ಕೇಸ್ ನಲ್ಲಿ ಜಾಮೀನು ಸಿಕ್ಕಿದ್ದಿಲ್ಲೆ ಹೇಳಿ ನಂಗೆ ಮೆಸ್ಸೇಜ್ ಬಂಜು. ಬಾ ಅಲ್ಲಿಗೆ ಹೋಪ, ಅವನ ಮಾತಾಡ್ಸಗಂಡು ಬ್ರೆಡ್ಡು ಹಣ್ಣು ಎಲ್ಲ ಕೊಟ್ಟಿಕಿ ಬಪ್ಪ.”

ಹಾವಿನಹಳ್ಳಿ: “ನೀವೇನೋ ಬದಲಾದಂಗೆ ಕಾಣ್ತು ಯಂಗೆ. ಆನು ಅವರ ಮನಿಗೆಲ್ಲ ಬರದಿಲ್ಲೆ. ಬೇಕಾರೆ ನೀವೇ ಹೋಗ್ ಬನ್ನಿ. ಎನಗೆ ಇಲ್ಲಿ ಕಾವಲು ಕಾಯವು. ಆನ್ ಬಿಟ್ಟಿಕಿ ಹೋದ್ರೆ ಇಲ್ಲಿ ಎಲ್ಲ ಜಗಳ ಸುರುವಾಗೋಗ್ತು. ಅದ್ಕೇ ಶೀಗಳು ಯನಗೆ ಸ್ಪೆಶಲ್ ಕೆಲಸ ಹೇಳಿ ಇದನ್ನ ವಹಿಸಿದ್ದ. ಹೀಂಗಾಗಿ ಆನು ಬತ್ನಲ್ಲೆ.”

ರಾಮ್ ಬಾವ:”ನಾಮಣ್ಣ, ಬಾರ ಬಾವಯ್ಯನ ಮನೆ ವರೆಗೆ ಹೋಗ್ ಬಪ್ಪ. ಈ ಪುರಸ್ಕಾರ ಎಲ್ಲ ಯಾವಾಗ್ ಕೊಡ್ತ್ವೋ ಗುತ್ತಿಲ್ಲೆ. ಕೊಡಲಿ. ತೊಂದ್ರಿಲ್ಲೆ. ನಾಮಣ್ಣ, ಗುಟ್ಟ ಹೇಳ್ತೆ ಕೇಳು, [ಕಿವಿಯಲ್ಲಿ ಉಸುರಿದ]ಈ ಪುರಸ್ಕಾರಕ್ಕೆಲ್ಲ ಯಾವ ಕಿಮ್ಮತ್ತೂ ಇಲ್ಯ. ಕೇಸ್ ನಿಂದ ಬಚಾವಾಗವು ಹೇಳಿ ಪುರಸ್ಕಾರದ ಸಂಖ್ಯೆ ತರಾವರಿ ಹೆಚ್ಚಸಿದ್ದೊ. ಲಾಬಿ ಮೂಲಕ ರಾಜ್ಯೋತ್ಸವದ ಪ್ರಶಸ್ತಿ ಕೊಟ್ಟಾಂಗೇಯ ಮಾರಾಯ.”

ವಿವಾದದ ನಾಮಣ್ಣ: “ಅಂತೂ ನಂಗೆ ಪ್ರಶಸ್ತಿ ಪಡ್ಕಂಬು ಯೋಗ ಇಲ್ಲೆ ಹೇಳ್ದಂಗಾತು. ನಡಿ, ಪಾಯಸನಾರು ಉಂಡ್ಕಂಡ್ ಹೋಗ್ಲಕ್ಕು, ರಾತ್ರಿ ಬಸ್ಸಿಗೆ ಊರಿಗ್ ಕಳ್ಸ್ ಕೊಡ್ತೆ ನಿನ್ನ.”

ರಾಮ್ ಬಾವ:”ಅಯ್ಯಯ್ಯೋ, ನಂಗೆ ಈ ಪಾಯಸ ಪನವಾರ ಎಂತದೂ ಬ್ಯಾಡ ಮಾರಾಯ. ಮಾವಂದಿಕ್ಕೊ ನನ್ನೂ ಎಳಕಂಡೋದ್ರೆ ಕಷ್ಟ. ಈಗಿಂದೀಗ್ಲೇ ನಾನು ಮೆಜೆಸ್ಟಿಕ್ಕಿಗೆ ಹೋಪಂವ. ವಿದ್ಯಾರಣ್ಯಪುರದಲ್ಲಿ ನನ್ ತಂಗಿ ಮಗನ ಮನೆ ಇದ್ದು. ಅಲ್ಲಿಗ್ ಹೋಗಿ, ರಾತ್ರಿಗೋ ನಾಳೆಗೋ ಊರಿಗ್ ಹೋಗ್ತೆ. ಗುರು ಹೇಳ್ ನಂಬಾಗಿತ್ತು, ಕುತ್ಗೆ ಕೊಯ್ದ್ ಬುಟ. ಮತ್ತೆ ನಾನಂತೂ ಇಲ್ಲಿಗ್ ಬಪ್ಪಂವಲ್ಲ. ಮುಂದಿಂದು ದೇವರಿಗ್ ಬಿಟ್ಟಿದ್ದು.”

ವಿವಾದದ ನಾಮಣ್ಣ-ರಾಮ್ ಬಾವ ಮಾತಾಡ್ತಾ ಇರುವ ಅವಸರದಲ್ಲಿ ಜನಜಂಗುಳಿಯ ನಡುವೆ ದೊಣ್ಣೆನಾಯಕರು ಜಾಗ ಖಾಲಿಮಾಡಿದ್ದರು ಎಂಬಲ್ಲಿಗೆ ಪ್ರಹಸನಕ್ಕೆ ಕೀರ್ತನೆ ದಾಸರು ಮಂಗಳ ಪಾಡಿದ್ದಾರೆ-

ಜಯ ಮಂಗಲವಾಗಲಿ ಸರ್ವರಿಗೆ
ಶುಭಮಂಗಲವಾಗಲಿ ಎಲ್ಲರಿಗೆ

ಏಕಾಂತದಲಿ ಮಲಗಿದಗೆ
ಸಾಕೇತವನು ಕಟ್ಟಿದಗೆ

ಚತುರ್ಮೋಸದಲಿ ತೊಡಗಿದಗೆ
ಅತುರದಲಿ ಹೊರ ಸಾಗಿದಗೆ

ಕಾತರದಲಿ ಜನ ಆಕಳಿಸಿ
ನೀತಿಗೆಟ್ಟವನೆಂದು ಉಗುಳಿದಗೆ

ಕೀರ್ತನೆ ದಾಸರು ಶೀಗಳ ಮೇಲಿನ ಕೋಪಕ್ಕೆ ತಬಲೆಯನ್ನು ಡಬಕ್ಕೆಂದು ಜೋರಾಗಿ ಗುದ್ದಿದ್ದರಿಂದ ತಬಲೆ ಕರ್ನವೇ ಕಿತ್ತುಹೋಯಿತು ಎಂಬಲ್ಲಿಗೆ ಪ್ರಹಸನ ಅನಿರೀಕ್ಷಿತ ತಿರುವಿನಲ್ಲಿ ಮುಕ್ತಾಯಗೊಂಡಿತು.

ಭದ್ರಂ ಶುಭಂ ಮಂಗಲಂ

source: https://www.facebook.com/groups/1499395003680065/permalink/1662713107348253/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s