ಗಿರಿನಗರದಲ್ಲಿ ಸಿಐಡಿಯಿಂದ ರಾಘವೇಶ್ವರ ಶ್ರೀ ವಿಚಾರಣೆ

ಗಿರಿನಗರದಲ್ಲಿ ಸಿಐಡಿಯಿಂದ ರಾಘವೇಶ್ವರ ಶ್ರೀ ವಿಚಾರಣೆ

Posted by: Madhusoodhan Hegde
Updated: Friday, September 11, 2015, 18:23 [IST]

ಬೆಂಗಳೂರು, ಸೆಪ್ಟೆಂಬರ್. 10: ಎರಡು ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಯನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಬೆಂಗಳೂರಿನ ಗಿರಿನಗರ ಶಾಖಾ ಮಠದಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಸ್ವಾಮೀಜಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಕಳೆದ ವರ್ಷ ನೀಡಿದ ದೂರು ಮತ್ತು ಯಕ್ಷಗಾನ ಕಲಾವಿದೆಯೊಬ್ಬರು ಗಿರಿನಗರ ಠಾಣೆಯಲ್ಲಿ ದಾಖಲಿಸಿದ ದೂರು ಎರಡನ್ನು ಸಿಬಿಐ ವಿಚಾರಣೆಗೆ ತೆಗೆದುಕೊಂಡಿದೆ.

ರಾಘವೇಶ್ವರ ಸ್ವಾಮೀಜಿ ಬಂಧನಕ್ಕೆ ಒತ್ತಾಯಿಸಿ ವಿವಿಧ ಮಹಿಳಾ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ್ದವು. ಸ್ವಾಮೀಜಿಗೆ 30 ದಿನಗಳ ನೀರಿಕ್ಷಣಾ ಜಾಮೀನನ್ನು ನ್ಯಾಯಾಲಯ ನೀಡಿತ್ತು.

ಗೃಹಸಚಿವ ಕೆ ಜೆ ಜಾರ್ಜ್ ಸಹ ಎರಡು ಪ್ರಕರಣಗಳನ್ನು ಸಿಐಡಿ ಅಧಿಕಾರಿಗಳೇ ತನಿಖೆ ಮಾಡಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಯಕ್ಷಗಾನ ಕಲಾವಿದೆ ವಿ ಎಸ್ ಉಗ್ರಪ್ಪ ಅವರಿಗೂ ಜನವಾದಿ ಮಹಿಳಾ ಸಂಘಟನೆ ನೆರವಿನೊಂದಿಗೆ ಮನವಿ ಮಾಡಿಕೊಂಡಿದ್ದರು.

source: http://kannada.oneindia.com/news/karnataka/bengaluru-raghaveswara-swamiji-on-cid-inquiry-096835.html

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s