ಧರ್ಮಗುರುಗಳ ರಕ್ಷಣೆಗೆ ಮಹಿಳಾ ಸೇನೆ ಸ್ಥಾಪನೆಗೆ ನಿರ್ಧಾರ

ಧರ್ಮಗುರುಗಳ ರಕ್ಷಣೆಗೆ ಮಹಿಳಾ ಸೇನೆ ಸ್ಥಾಪನೆಗೆ ನಿರ್ಧಾರ

ವಿಕ ಸುದ್ದಿಲೋಕ| Sep 5, 2015, 04.00 AM IST

-ನಾರಿ ಸುರಕ್ಷಾ ಸಮಿತಿ ಸಂವಾದದಲ್ಲಿ ತೀರ್ಮಾನ-
ಬೆಂಗಳೂರು: ಧರ್ಮ ಹಾಗೂ ಧರ್ಮಗುರುಗಳ ನಾಶಕ್ಕೆ ಕೆಲ ನಾರಿಯರು ಹಾಗೂ ಕೆಲ ಸಂಘಟನೆಗಳು ಮುಂದಾಗಿವೆ. ಇಂಥ ಶಕ್ತಿಗಳನ್ನು ಮಟ್ಟ ಹಾಕಲು ಮಹಿಳೆಯರು ಒಗ್ಗೂಡಿ ಸೇನೆ ಕಟ್ಟಬೇಕೆಂಬುದು ಸೇರಿದಂತೆ ಐದು ನಿರ್ಣಯಗಳನ್ನು ನಾರಿ ಸುರಕ್ಷಾ ವೇದಿಕೆ ತೆಗೆದುಕೊಂಡಿದೆ.

ನಗರದ ಶಿಕ್ಷಕರ ಸದನದಲ್ಲಿ ಶುಕ್ರವಾರ ನಾರಿ ಸುರಕ್ಷಾ ವೇದಿಕೆ ಹಮ್ಮಿಕೊಂಡಿದ್ದ ‘ಸ್ವಸ್ಥ ಸಮಾಜಕ್ಕಾಗಿ ಮಹಿಳಾ ಜಾಗೃತಿ ಸಮಾವೇಶ’ದಲ್ಲಿ ಐಪಿಸಿ ಸೆಕ್ಷನ್ 376 ಕಾನೂನಿನ ದುರ್ಬಳಕೆ ಮಾಡುತ್ತಿರುವುದನ್ನು ತಡೆಯುವುದು, ಸ್ವಾಮೀಜಿಗಳ ವಿರುದ್ಧ ಸುಳ್ಳು ಮೊಕದ್ದಮೆ ಹೂಡಿ ಚಾರಿತ್ರ್ಯಹರಣ ಮಾಡುವುದನ್ನು ದಮನಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಮಾತನಾಡಿದ ನ್ಯಾಯವಾದಿ ಪ್ರಮೀಳಾ ನೇಸರ್ಗಿ ”ಧರ್ಮ ಹಾಗೂ ಧರ್ಮ ಗುರುಗಳನ್ನು ನಾಶ ಮಾಡಲು ಶೂರ್ಪನಕಿಯರು ಜನ್ಮ ತಾಳಿದ್ದು, ಇವರಿಂದ ಸ್ವಾಮೀಜಿಗಳ ರಕ್ಷಿಸಲು ಮಹಿಳೆಯರೆಲ್ಲರೂ ಒಗ್ಗೂಡಿ ಸೇನೆಯೊಂದನ್ನು ಕಟ್ಟಬೇಕಿದೆ,” ಎಂದು ಹೇಳಿದರು.

”ಅತ್ಯಾಚಾರ ಪ್ರಕರಣವನ್ನು ಸಿಐಡಿಗೆ ವಹಿಸಿ, ಕಿರು ನಾಟಕ ಮಾಡಲಾಗುತ್ತಿದೆ. ಉಗ್ರ ನರಸಿಂಹನ ಅವತಾರದ ಉಗ್ರಪ್ಪ ಅವರನ್ನು ಲೈಂಗಿಕ ಕಿರುಕುಳ ತಡೆ ಕುರಿತ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ,” ಎಂದು ವ್ಯಂಗ್ಯವಾಡಿದರು.

”ಸಿಐಡಿ ಅಧಿಕಾರಿಗಳು ಸ್ವಾಮೀಜಿ ಅವರನ್ನು ಬಂಧಿಸಲು ಮುಂದಾದರೆ, ಮಹಿಳೆಯರೆಲ್ಲರೂ ಸೆಟೆದು ನಿಲ್ಲಬೇಕು. ಜೈಲಿಗೆ ಹೋಗಲೂ ಹಿಂಜರಿಯಬಾರದು. ಶೂರ್ಪನಕಿಯರನ್ನು ಮಟ್ಟ ಹಾಕಲು ನಾರಿ ಸುರಕ್ಷಾ ವೇದಿಕೆ ಹುಟ್ಟಿಕೊಂಡಿದೆ. ಕೆಲ ಸಂಘಟನೆಗಳ ಕಣ್ಣು ಕಾವಿ ಮೇಲೆ ಬಿದ್ದಿದ್ದು, ಸುಳ್ಳು ಮೊಕದ್ದಮೆ ದಾಖಲಿಸುವ ಕೆಲಸ ಮಾಡುತ್ತಿವೆ. ಇಂಥ ಸಂಘಟನೆಗಳನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ,” ಎಂದರು.

ನಿರಂತರ ಅತ್ಯಾಚಾರ ಅಸಾಧ್ಯ

ರಾಜ್ಯ ಮಹಿಳಾ ಆಯೋಗದ ಸದಸ್ಯೆ ಸುಮನ್ ಹೆಗಡೆ ”ಮಾಧ್ಯಮಗಳಲ್ಲಿ ಸುದ್ದಿ ಆಗಲು, ಪ್ರತಿಷ್ಠಿತರ ಚಾರಿತ್ರ್ಯವಧೆ ಮಾಡಲು ಸುಳ್ಳು ಮೊಕದ್ದಮೆ ದಾಖಲಿಸಲಾಗುತ್ತಿದೆ. ಪುರುಷ ಮತ್ತು ಮಹಿಳೆಯ ಸಮ್ಮತಿಯಿಂದ ಮಾತ್ರ ಲೈಂಗಿಕ ಸಂಪರ್ಕ ನಡೆಯಲು ಸಾಧ್ಯ. ಇದನ್ನು ಬಲಾತ್ಕಾರ ಎನ್ನಲಾಗುವುದಿಲ್ಲ. ನಿರಂತರವಾಗಿ ಅತ್ಯಾಚಾರವೆಸಗಲು ಸಾಧ್ಯವೇ ಇಲ್ಲ,” ಎಂದರು.

”ಅಧ್ಮಾತ್ಮದಲ್ಲಿ ತೊಡಗಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರಿಂದ ಮಠದ ಭಕ್ತರ ಮನಸ್ಸಿಗೆ ನೋವಾಗಿದೆ,” ಎಂದು ಹೇಳಿದರು.

ಹಾಲಕ್ಕಿ ಸಮಾಜದ ಸುಕ್ರಿ ಗೌಡ ”ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸಲು ಬಿಡುವುದಿಲ್ಲ. ಅವರ ಮೇಲೆ ಸುಳ್ಳು ಕೇಸು ಹಾಕಲಾಗಿದೆ,” ಎಂದರು.

ಹವ್ಯಕ ಸಮುದಾಯದ ಪ್ರತಿನಿಧಿ ಈಶ್ವರಿ ಶಾಮ್ ಭಟ್, ಮುಕ್ರಿ ಸಮಾಜದ ಗಂಗೆ ನಾರಾಯಣ ಮುಕ್ರಿ ಮತ್ತಿತರರು ಉಪಸ್ಥಿತರಿದ್ದರು.

ಖಂಡನಾ ನಿರ್ಣಯಗಳು

* ಐಪಿಸಿ ಸೆಕ್ಷನ್ 376 ಕಾನೂನಿನ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಸರ್ವಾನುಮತದಿಂದ ಖಂಡನೆ

* ದುರುದ್ದೇಶಪೂರಿತ ಸುಳ್ಳು ಆರೋಪ ಮಾಡುವವರನ್ನು ತನಿಖೆಗೊಳಪಡಿಸಿ, ಕ್ರಮ ಕೈಗೊಳ್ಳಬೇಕು

* ಸ್ವಯಂ ಘೋಷಿತ ಹುಸಿ ಸಂತ್ರಸ್ತೆಯರು ಮತ್ತು ಅವರನ್ನು ಬೆಂಬಲಿಸುತ್ತಿರುವವರಿಂದಾಗಿ ನಿಜವಾದ ಸಂತ್ರಸ್ತೆಯರನ್ನೂ ಸಹ ಸಂಶಯದಿಂದ ಕಾಣಲಾಗುತ್ತಿದೆ. ಇದು ಖಂಡನೀಯ.

* ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಮುನ್ನ ಪರಿಶೀಲನೆ ನಡೆಸಿ, ಪೂರ್ವಭಾವಿಯಾಗಿ ಕ್ರಮ ಕೈಗೊಳ್ಳಬೇಕು

* ಮಹಿಳೆಯರ ರಕ್ಷಣೆಗಿರುವ ಕಾನೂನುಗಳ ದುರುಪಯೋಗ ನಿಲ್ಲಬೇಕು.

source: http://vijaykarnataka.indiatimes.com/state/the-decision-setting-up-the-defense-of-the-womens-army-priest/articleshow/48823031.cms

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s