ತಜ್ಞರ ಸಮಿತಿಗೆ ಸಂತ್ರಸ್ತೆ ದೂರು

ಅತ್ಯಾಚಾರ ಪ್ರಕರಣ: ತಜ್ಞರ ಸಮಿತಿಗೆ ಸಂತ್ರಸ್ತೆ ದೂರು

ವಿಕ ಸುದ್ದಿಲೋಕ| Sep 3, 2015, 04.00 AM IST

ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ಮಹಿಳೆ ಈ ಸಂಬಂಧ ತಮಗೆ ನ್ಯಾಯ ದೊರಕಿಸುವಂತೆ ಕೋರಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ,ಲೈಂಗಿಕ ಕಿರುಕುಳ ತಡೆ ಕುರಿತ ತಜ್ಞರ ಸಮಿತಿಗೆ ಬುಧವಾರ ದೂರು ಸಲ್ಲಿಸಿದ್ದಾರೆ.

ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ ಮತ್ತು ಇತರರೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ಅವರು ದೂರು ಪತ್ರ ನೀಡಿದರು.

” ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಕ್ಕೆ ಸಂಬಂಧಿಸಿ ಸಮಿತಿಗೆ ಸಾಕಷ್ಟು ದೂರುಗಳು ಬಂದಿವೆ. ಆದರೆ, ಸನ್ಯಾಸಿ ಒಬ್ಬರಿಂದ ಇಂತಹ ಕೃತ್ಯ ನಡೆದ ಬಗ್ಗೆ ಮಹಿಳೆಯೊಬ್ಬರು ಈಗ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವ ಭರವಸೆ ನೀಡಲಾಗಿದೆ,” ಎಂದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ಉಗ್ರಪ್ಪ ತಿಳಿಸಿದರು.

” ಹೊಸನಗರ ಮಠದ ಸ್ವಾಮೀಜಿ ವಿರುದ್ಧ ದೂರು ನೀಡಿರುವ ಮಹಿಳೆ, 2006 ರಿಂದಲೂ ತನ್ನ ವಿರುದ್ಧ ದೌರ್ಜನ್ಯ ನಡೆದಿದ್ದಾಗಿ ತಿಳಿಸಿದ್ದಾರೆ. ಈಕೆಯನ್ನು ಕಾಸರಗೋಡಿನ ಶಾಲೆಯಲ್ಲಿ ಓದಿಸಿದ್ದಲ್ಲದೆ, 18 ವರ್ಷವಾಗುತ್ತಿದ್ದಂತೆ ಮಠದ ಪರಿವಾರದ ವ್ಯಕ್ತಿಯೊಬ್ಬರಿಗೆ ಮದುವೆ ಮಾಡಿಸಲಾಗಿದೆ. ನಂತರ ಗಿರಿನಗರ ಸಮೀಪದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಈಕೆಯ ಗಂಡ ಚಟಕ್ಕೆ ಬಿದ್ದಿದ್ದರಿಂದ ವಿಚ್ಛೇದನ ಕೋರಿದ್ದು, ಈ ಕುರಿತ ವಿಚಾರಣೆ ಶಿರಸಿಯ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸ್ವಾಮೀಜಿ ವಿರುದ್ಧ ಈ ಹಿಂದಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ದೂರುದಾರರ ಪರ ಸಾಕ್ಷಿ ಹೇಳದಂತೆ ಈ ಮಹಿಳೆಗೆ ಮಠದ ಕಡೆಯವರು ಒತ್ತಡ ಹಾಕಿದ್ದರು. ಆ ಸಂದರ್ಭದಲ್ಲಿ ಸಿಐಡಿಗೆ ಹೇಳಿಕೆ ನೀಡದಂತೆಯೂ ಮಠದ ವ್ಯಕ್ತಿಗಳು ಒತ್ತಡ ತಂದಿದ್ದರು. ಹೀಗಾಗಿ ಮಾನಸಿಕವಾಗಿ ನೊಂದ ಈಕೆ ಈಗ ದೂರು ನೀಡಿದ್ದಾಳೆ. ಸಮಿತಿಗೆ ನೀಡಿರುವ ಮನವಿಯಲ್ಲಿ ಈ ಅಂಶವನ್ನು ಪ್ರಸ್ತಾಪಿಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಗಿರಿನಗರ ಪೊಲೀಸರ ವರ್ತನೆ ಅಚ್ಚರಿ ತಂದಿದೆ,”ಎಂದು ಉಗ್ರಪ್ಪ ಹೇಳಿದರು.

ಹೆಸರು ಬಳಸಿದ್ದಕ್ಕೆ ಆಕ್ಷೇಪ

” ರಾಮಚಂದ್ರಾಪುರ ಮಠದ ಪರ ವಕೀಲ ಅರುಣ್ ಶ್ಯಾಂ ಎನ್ನುವವರಿಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ತಮ್ಮ ಹೆಸರನ್ನು ಬಳಸಿದ್ದಾರೆ. ಇದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ದೂರುದಾರ ಮಹಿಳೆ ನೋವು ತೋಡಿಕೊಂಡಿದ್ದಾರೆ. ಇದರಿಂದ ತಮ್ಮ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಗೌಪ್ಯತೆ ಕಾಪಾಡಿಕೊಳ್ಳಲು ಸೂಚಿಸಿ ತಮಗೆ ನ್ಯಾಯ ದೊರಕಿಸಿ ಕೊಡುವಂತೆ ಕೇಳಿಕೊಂಡಿದ್ದಾರೆ,”ಎಂದು ಇದೇ ವೇಳೆ ಉಗ್ರಪ್ಪ ಹೇಳಿದರು.

” ಭದ್ರತೆ ಒದಗಿಸುವ ಬಗ್ಗೆ ಪರಿಶೀಲಿಸುವುದಾಗಿ ಮಹಿಳೆಗೆ ತಿಳಿಸಲಾಯಿತು. ಭದ್ರತೆಯ ಅಗತ್ಯವಿಲ್ಲವೆಂದು ಆಕೆ ಹೇಳಿದ್ದಾರೆ. ಆದರೆ, ಈ ಮಹಿಳೆಯ ಸುರಕ್ಷತೆ ನಿಟ್ಟಿನಲ್ಲಿ ಗಮನ ಹರಿಸುವಂತೆ ನಗರ ಪೊಲೀಸ್ ಆಯುಕ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಲಾಗುವುದು. ಹಾಗೆಯೇ ಸಂಬಂಧಿಸಿದ ಡಿಸಿಪಿ ಅವರಿಗೂ ಮಾತನಾಡಲಾಗುವುದು,”ಎಂದು ಹೇಳಿದರು.

ಸಮನ್ಸ್ ಜಾರಿ ಅಧಿಕಾರವಿದೆ

” ಈ ಪ್ರಕರಣದಲ್ಲಿ ಅಗತ್ಯ ಕಂಡರೆ ಸ್ವಾಮೀಜಿ ಅವರಿಗೆ ಸಮನ್ಸ್ ಜಾರಿ ಮಾಡುವ ಅಧಿಕಾರ ಸಮಿತಿಗೆ ಇದೆ. ಹಾಗೆಯೇ ಅರುಣ್ ಶ್ಯಾಂ ಎನ್ನುವವರಿಗೆ ನಿರೀಕ್ಷಣಾ ಜಾಮೀನು ಕೊಡಬಹುದು ಎಂದು ಕೋರ್ಟ್ ಮುಂದೆ ಹೇಳಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೂ ಸಮನ್ಸ್ ಜಾರಿ ಮಾಡಲು ಪರಿಶೀಲಿಸಲಾಗುವುದು. ಈ ಕುರಿತು ಮಾಹಿತಿ ತರಿಸಿಕೊಳ್ಳಲಾಗುವುದು,”ಎಂದು ಉಗ್ರಪ್ಪ ಹೇಳಿದರು. **

ನಿರೀಕ್ಷಣಾ ಜಾಮೀನಿಗೆ ಶ್ರೀಗಳ ಅರ್ಜಿ
ಬೆಂಗಳೂರು: ಶಿರಸಿ ಮೂಲದ ಕಲಾವಿದೆಯೊಬ್ಬರು ಗಿರಿನಗರ ಠಾಣೆಯಲ್ಲಿ ದಾಖಲಿಸಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಜಾಮೀನು ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯ ತಕರಾರು ಸಲ್ಲಿಸಲು ಸರಕಾರಿ ಅಭಿಯೋಜಕರಿಗೆ ಸೂಚನೆ ನೀಡಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. ಈ ನಡುವೆ ಸಂತ್ರಸ್ತ ಮಹಿಳೆ ತಮ್ಮ ಮೇಲೆ ನಡೆದ ದೌರ್ಜನ್ಯದ ವಿವರಗಳನ್ನು ನ್ಯಾಯಾಧೀಶರ ಎದುರು ದಾಖಲಿಸಿದ್ದಾರೆ.

vk20150903

source: http://vijaykarnataka.indiatimes.com/state/raghaveshwar-swamiji-rape-case/articleshow/48780141.cms

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s