ಕಳ್ಳಯ್ಯ ಮತ್ತು ಕುಳ್ಳಯ್ಯರಿಗೆ ನಾರ್ಕೋ ನಡೆಸಿದರೆ ಮಾತ್ರ ವ್ಯವಹಾರ ಬಯಲಾಗುತ್ತದೆ

ಕಳ್ಳಯ್ಯ ಮತ್ತು ಕುಳ್ಳಯ್ಯರಿಗೆ ನಾರ್ಕೋ ನಡೆಸಿದರೆ ಮಾತ್ರ ವ್ಯವಹಾರ ಬಯಲಾಗುತ್ತದೆ

ದೊಡ್ಡ ಸಮಾಜ ಮುಖಿ ಸಂಸ್ಥೆ ಎನಿಸಿಕೊಂಡ ಮಹಾಸಭೆಯ ಕೆಲವರು ಗಣ್ಯರೊಬ್ಬರಲ್ಲಿ ದೇಣಿಗೆಗಾಗಿ ಹೋಗಿದ್ದರು. ಕಟ್ಟಡ ಕಟ್ಟುವುದಕ್ಕೆ ಮೂರು ಲಕ್ಷ ಕೊಡಬೇಕೆಂದು ಆಗ್ರಹ ಪಡಿಸಿದರು. ಆಗ ಆ ಗಣ್ಯವ್ಯಕ್ತಿ ವರ್ಗಿಣಿಗೆ ಬಂದವರಲ್ಲಿ ಕೇಳಿದರು, ” ಸಮಾಜದ ಒಬ್ಬ ಮಹಿಳೆಯ ಕಣ್ಣೀರನ್ನು ಒರೆಸಲಾಗದ ನೀವು ಕಟ್ಟಡ ಕಟ್ಟುವುದು ಯಾರ ಉದ್ಧಾರಕ್ಕಾಗಿ?ಯಾವ ಪ್ರಕರಣದಲ್ಲಿ ಮಹಾಸಭೆ ಮುಂದಾಗಿ ನ್ಯಾಯವನ್ನು ಕೊಡಿಸಬೇಕಾಗಿತ್ತೋ ಅದರಲ್ಲಿ ಕಾಮಿಯ ಪರವಾಗಿ ಸಭೆಯ ಮಾಸಪತ್ರಿಕೆಯಲ್ಲಿ ವಕಾಲತ್ತು ಹಾಕಿದ್ದೀರಿ. ಅದೂ ಒಂದೆರಡು ಸಲ ಅಲ್ಲ. ಒಂದಾದಮೇಲೊಂದರಂತೆ ಮೂರು ನಾಲ್ಕು ಲೇಖನಗಳು. ಈ ಭಾಗ್ಯಕ್ಕಾಗಿ ನಾವೆಲ್ಲ ಹಣವನ್ನು ಕೊಡಬೇಕೇ? ಪೈಸೆಯನ್ನೂ ಕೊಡುವುದಿಲ್ಲ, ದಯಮಾಡಿ ತೆರಳಿ” ಎಂದು ಅಟ್ಟಿದ್ದಾರೆ.

ನಮ್ಮ ಸಮಾಜದ ಹಲವರು ಇದೇ ರೀತಿ ಮಾಡಿದರೆ ಆಗ ಮಹಾಸಭೆಯಲ್ಲಿರುವ ಹಳದೀ ಬಾವಯ್ಯಂದಿರಿಗೆ ಬುದ್ಧಿ ಬರುತ್ತದೆ. ಮಠಕ್ಕೂ ಮಹಾಸಭೆಗೂ ಅಂತರವೇ ಇಲ್ಲವೇ? ಮಹಾಸಭೆ ಎಂಬುದು ಮಠದ ವಕ್ತಾರಕೇಂದ್ರವೇ? ಪ್ರತಿನಿಧಿಯೇ? ಅಷ್ಟಕ್ಕೂ ಮಹಾಸಭೆ ಮಧ್ಯಸ್ಥಿಕೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲು ಶಿಕ್ಷಿಸಲು ಅವಕಾಶ ಕಲ್ಪಿಸಬೇಕಾಗಿತ್ತು. ಅದನ್ನು ಬಿಟ್ಟು ಜೈಕಾರದ ಬಳಗದಲ್ಲಿ ಮಹಾಸಭೆ ತನ್ನನ್ನೂ ಗುರುತಿಸಿಕೊಂಡಿರುವುದರಿಂದ ಅದಕ್ಕೆ ದೇಣಿಗೆ ಕೊಡಬೇಕಾದ ಔಚಿತ್ಯವಾದರೂ ಏನಿದೆ? ಅಲ್ಲವೇ?

ಈಗ ಕಳ್ಳಯ್ಯ ಕುಳ್ಳಯ್ಯರ ಕತೆಗೆ ಮರಳೋಣ. ಮಠದಲ್ಲೆಲ್ಲಾ ಪಲ್ಲವಿಸಿದ ಕಚ್ಚೆಹರುಕನ ಕತೆಯಲ್ಲಿ ದಾಖಲಾದ ದೂರಿನನ್ವಯ ಕಳ್ಳಯ್ಯ ಕುಳ್ಳಯ್ಯ ಮತ್ತು ಇನ್ನಿತರ ಕೆಲವರನ್ನು ಬಂಧಿಸುವುದು, ವಿಚಾರಿಸುವುದು ನಡೆಯಬೇಕಿತ್ತು. ಇದನ್ನು ತಿಳಿದ ಕಳ್ಳಯನ ಬಳಗ ಅಪರಾತ್ರಿಯಲ್ಲೇ ಫೋನಾಯಿಸಿ ಅರುಣೋದಯದ ಹೊತ್ತಿನಲ್ಲೇ ಅಡ್ಡಗೇಟನ್ನು ಕಳಿಸಿ ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸಿತು. ಕೆಲವರಿಗೆ ಸಿಕ್ಕಿದೆಯಂತೆ, ಕೆಲವರಿಗೆ ಇನ್ನೂ ಸಿಕ್ಕಿಲ್ಲವೋ ಏನೋ!

ಕಳ್ಳಯ್ಯನ ಬಾವ ಕುಳ್ಳಯ್ಯ ಕಳ್ಳಯ್ಯನಿಗಿಂತ ದೊಡ್ಡ ಕಳ್ಳಯ್ಯ ಎಂಬುದನ್ನು ತುಮರಿ ನಿಮಗೆ ಹಿಂದಿನಿಂದ ಹೇಳುತ್ತಲೇ ಬಂದಿದ್ದಾನೆ. ದೂರುದಾರರು ಚಾಪೆ ಕೆಳಗೆ ತೂರಿದರೆ ಕಳ್ಳಯ್ಯ-ಕುಳ್ಳಯ್ಯ ರಂಗೋಲಿ ಕೆಳಗೆ ನುಸುಳುವಷ್ಟು ನಿಸ್ಸೀಮರು. ಹೊರಡುವ ಮುನ್ನ ಸಂಸ್ಥಾನದ ಖಾತೆಗಳಲ್ಲಿರುವುದನ್ನೆಲ್ಲ ತಮ್ಮ ಬೇನಾಮಿ ಖಾತೆಗೆಳಿಗೆ ಬಸಿದುಕೊಂಡು, ಸಂಸ್ಥಾನದ ಚರ-ಸ್ಥಿರಾಸ್ತಿಗಳನ್ನು ವಿವೇಲಾರಿ ಮಾಡಿದರೂ ನಷ್ಟ ಭರಿಸಲಾಗದಷ್ಟು ಸಾಲ ಮಾಡಿಟ್ಟು ಹೋಗುತ್ತಾರೆ. ನಂತರ ಆ ಹೊಂಡವನ್ನು ಸಮಾಜವೇ[ಸಾಧ್ಯವಾದರೆ] ಮುಚ್ಚಿಕೊಳ್ಳಬೇಕು.

“ನಮ್ಮ ಗುರುಗಳು ಬಹಳ ಬುದ್ಧಿವಂತರು, ತಾಕತ್ತುಳ್ಳವರು, ಸಾಮಾಜಿಕ ಕೆಲಸಗಳನ್ನು ಮಾಡಿ ಪಡೆಸಿ ’ಕ್ಯಾತ’ರಾಗಿದ್ದನ್ನು ನೋಡಲಾಗದ ಜನ ಅವರ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಘಟ್ಟದ ಮೇಲಿನ ಜನರಿಗೆ ಅವರನ್ನು ಕಂಡರೆ ಆಗೋದಿಲ್ಲ, ಹೇಗಾದರೂ ಮಾಡಿ ಕೆಳಗಿಳಿಸಬೇಕೆಂದು ಹಠ ಹೊತ್ತಿದ್ದಾರೆ. ಪ್ರತೀ ಸರ್ತಿಯೂ ಚಾತುರ್ಮಾಸದ ಸಮಯದಲ್ಲೇ ತೊಂದರೆಕೊಡುತ್ತಿದ್ದಾರೆ” ಎಂದು ಕುರಿವಾಡೆಯ ಕೆಲವು ಭಕ್ತರು ಹಲುಬುತ್ತಿದ್ದಾರಂತೆ.

ಎಲ್ಲಾ ಕ್ರಿಮಿನಲ್‍ಗಳೂ ಬುದ್ಧಿವಂತರೇ ಆಗಿರ್ತಾರೆ. ಆದರೆ ಅವರ ಬುದ್ಧಿ ನೆಗೆಟಿವಿಟಿಯತ್ತ ಸಾಗುತ್ತದೆ. ಋಣಾತ್ಮಕ ಅಥವಾ ದುಷ್ಕೃತ್ಯಗಳತ್ತ ಸಾಗುತ್ತದೆ. ನೂರಾರು ಜನರನ್ನು ಬಲಿಪಡೆಯುವ ಬಾಂಬ್ ಇಡುವ ಪಾಕಿಸ್ತಾನ ಪ್ರೇರಿತ ಉಗ್ರನಲ್ಲೂ ಸಹ ಒಂದು ಮಟ್ಟದ ಬುದ್ಧಿವಂತಿಕೆ ಇದ್ದೇ ಇರುತ್ತದೆ. ಸದ್ಯ, ಈ ಕಾಮಿಯ ಬುದ್ಧಿವಂತಿಕೆ ಅದಕ್ಕಿಂತ ಸ್ವಲ್ಪ ಬೇರೆ ರೂಪದಲ್ಲಿದೆಯೇ ಹೊರತು ಸಾಚಾ ಯೋಚನೆಯಲ್ಲ. ಸಾಧು ಯೋಚನೆಯೂ ಅಲ್ಲ.

ಚಾತುರ್ಮಾಸ ಎಂಬುದೂ ಸಹ ಒಂದು ನಾಟಕ ಅಷ್ಟೇ. ಈ ಸಲ ಮಾಹನಗರದಲ್ಲೇ ಚತುರ್ಮೋಸ ನಡೆಸುತ್ತಿರುವುದೇಕೆಂದರೆ ಬೇಕಾದವರಿಗೆ ಬೇಕಾದ್ದನ್ನು ಕೊಟ್ಟು ಕೇಸಿನಿಂದ ತಪ್ಪಿಸಿಕೊಳ್ಳಲಿಕ್ಕೆ. ಅಪರಾಧವೆಸಗಿ ತಪ್ಪಿಸಿಕೊಳ್ಳುವುದರಲ್ಲಿ ಕುಳ್ಳಯ್ಯ ಕಳ್ಳಯ್ಯನಿಗಿಂತ ದೊಡ್ಡ ಕಳ್ಳಯ್ಯ. ಇವರನ್ನೆಲ್ಲ ಹಾಗೇ ಬಿಟ್ಟರೆ ಇಡೀ ಸಮಾಜದ ಸಂಸ್ಕೃತಿಯನ್ನೇ ಸಂಪೂರ್ಣ ಆಪೋಶನ ತೆಗೆದುಕೊಂಡು ಕಚ್ಚೆಹರುಕರ ವಂಶವನ್ನು ಬೆಳೆಸುತ್ತಾರೆ; ಅದು ಆಗಬಾರದು ಎಂಬ ಕಾರಣಕ್ಕೆ ಸಮಾಜದ ಹಿತೈಷಿಗಳು, ಕುರಿಗಳಲ್ಲದವರು ಪ್ರಯತ್ನಿಸುತ್ತಿದ್ದಾರೆ.

ವರ್ಷದ ಉಳಿದ ಸಮಯದಲ್ಲಿ ಕಳ್ಳಯ್ಯ ಕುಳ್ಳಯ್ಯನ ಗ್ಯಾಂಗು ಊರೂರು ಅಲೆಯುತ್ತಿರುತ್ತದೆ. ದೂರು ದಾಖಲಿಸುವವರನ್ನು ಗುಂಡಿಟ್ಟು ಕೊಲ್ಲಲೂ ಹೇಸದ ರೌಡಿಸಂ ಅವರಲ್ಲಿದೆ. ಹೀಗಾಗಿ ಕಾವಿ ವೇಷ ದಲ್ಲಿರುವ ರೌಡಿಯನ್ನು ಸಮಾಜದ ಚಿಂತಕರು ಗುರುತಿಸಿದ್ದಾರೆ, ಸಂತ್ರಸ್ತರು ಇನ್ನಾರಿಗೂ ಹಾಗಾಗದಿರಲಿ ಎಂದು ದೂರು ದಾಖಲಿಸಿದ್ದಾರೆ. ಬೆಂಕಿಯಿಲ್ಲದೆ ಹೊಗೆ ಏಳುವುದಿಲ್ಲ; ಬೆಂಕಿ ಕಣ್ಣಿಗೆ ಕಾಣದಿದ್ದರೂ ಶಾಖ ಉತ್ಪತ್ತಿಯಂತೂ ಆಗಿರಲೇಬೇಕು. ಸಮಾಜದಲ್ಲಿ ಎಷ್ಟೆಲ್ಲ ಸನ್ಯಾಸಿಗಳಿದ್ದಾರೆ, ಯಾರ ವಿರುದ್ಧವೂ ಇರದ ಆಕ್ಷೇಪಣೆ, ಆರೋಪ ಕಳ್ಳಯ್ಯನ ವಿರುದ್ಧ ಮಾತ್ರ ಕೇಳಿಬರುತ್ತಿದೆ ಏಕೆ? ಯಾಕೆಂದ್ರೆ ಕಳ್ಳಯ ಕಚ್ಚೆಹರುಕಯ್ಯ ಎಂಬುದು ರೂಪಾಯಿಗೆ ಹದಿನಾರಾಣೆ ಸತ್ಯ.

ಅನ್ಯ ಸಂಸ್ಥಾನಗಳ ಸನ್ಯಾಸಿಗಳು ಯಾವುದೇ ಹೆಣ್ಣಿನ ಮೈ ಮುಟ್ಟುವುದಿಲ್ಲ, ಕೆನ್ನೆ ಸವರುವುದಿಲ್ಲ, ಕನ್ಯಾಸಂಸ್ಕಾರಕ್ಕೆ ಕರೆದು ರೂಮಿನೊಳಗೆ ಅಪ್ಪಿಕೊಂಡು ಚುಂಬಿಸುವುದಿಲ್ಲ, ಮಹಿಳೆಯರು ಮತ್ತು ಹುಡುಗಿಯರೊಡನೆ ಎರಡೆರಡು ಗಂಟೆ ಏಕಾಂತದ “ಮೀಟಿಂಗ್’[ಮೇಟಿಂಗ್] ನಡೆಸುವುದಿಲ್ಲ. ಹೀಗಾಗಿ ಅವರಾರೂ ಕಳ್ಳಯ್ಯನ ಸಾಲಿಗೆ ಸೇರುವುದಿಲ್ಲ. ಕಳ್ಳಯ್ಯನನ್ನು ಬೆಂಬಲಿಸುವುದೂ ಇಲ್ಲ.

ಕಳ್ಳಯ್ಯನ ಗ್ಯಾಂಗು ಸಮಾಜದ ಉನ್ನತ ಸಂಸ್ಕೃತಿಗೆ ಬದಲಾಗಿ ನೀಚತನವನ್ನೇ ಮೈಗೂಡಿಸಿಕೊಂಡಿದೆ. ಯಾರಾದರೂ ಸೊಲ್ಲೆತ್ತಿದರೆ ಅವರ ಹುಟ್ಟಡಗಿಸಿಬಿಡುವ ರೌಡಿಗಳಿದ್ದಾರೆ ಬಳಗದಲ್ಲಿ. ನಮ್ಮ ಸಮಾಜದಲ್ಲಿ ಇಂತವರೆಲ್ಲಾ ಇದ್ದಾರಲ್ಲಾ ಎನ್ನಲಿಕ್ಕೇ ನಾಚಿಕೆ ಮತ್ತು ವಿಷಾದ. ಚತುರ್ಮೋಸದ ನೆಪದಲ್ಲಿ ಕಾಮಿ ಒಂದೆಡೆ ಕುಳಿತಾಗ ಹಾಡಹಗಲೇ ಬೇರೆಡೆಗೆ ಓಡಿಹೋಗಲು ಸಾಧ್ಯವಾಗುವುದಿಲ್ಲ, ರಾತ್ರಿಯ ಸೀಮೋಲ್ಲಂಘನ ಬಿಡಿ, ಅದೆಷ್ಟು ಸಲ ನಡೆದಿದೆಯೋ ಶಿವನೇ ಬಲ್ಲ; ಮಹಾಬಲನೇ ಬಲ್ಲ. ರಾತ್ರಿಯ ಸೀಮೋಲ್ಲಂಘನ ಯಾವ ಯಾವ ಉದ್ದೇಶಗಳಿಗಾಗಿ ನಡೆಯಿತು ಎಂಬುದನ್ನು ತಿಳಿದರೂ ನೀವು ಚಕಿತರಾಗುತ್ತೀರಿ.

ಇನ್ನು ಹೊರನೋಟಕ್ಕೆ ಯಾವುದೇ ಅಧಿಕಾರಿ, ಪರೀಕ್ಷಕ ಬಂದರೂ ಕಾಮಿಗಳು ಮಹಾನ್ ತಪಸ್ವಿಗಳಂತೆ ಪೋಸುಕೊಡುವುದು ಇದ್ದೇ ಇದೆ. ಧರ್ಮಕ್ಕೆ ಅಂಜುವವರು ಕಾವಿವೇಷಕ್ಕಷ್ಟು ಬೆಲೆ ಕೊಟ್ಟೇ ಕೊಡುತ್ತಾರೆ. ಘಟನೆ ಸುಳ್ಳೇ ಸತ್ಯವೇ ಎಂಬ ದ್ವಂದ್ವದಲ್ಲೇ ಕೆಲವು ಸಮಯ ಕಾಲಹಾಕುತ್ತಾರೆ. ಮೇಲಾಗಿ ಸೂಟ್ ಕೇಸ್ ತೆಗೆದುಕೊಂಡವರು ಯಾವ ರೀತಿ ಅಪ್ಪಣೆ ಕೊಡಿಸುತ್ತಾರೋ ಹಾಗೆ ಮಾಡುತ್ತಾರೆ.

ಕಳೆದ ವರ್ಷ ಮಂಗಲ ಪಾಂಡೆಯ ಮೂಲಕ ಹೈಕೈವರೆಗೆ ವ್ಯವಹಾರ ನಡೆದಿತ್ತು. ಅದಕ್ಕೆ ಮಡಿವಾಳರ ಸಹಾಯ ಲಭಿಸಿತ್ತು. ಅಲ್ಲಿಂದ ನಿದ್ದಣ್ಣನ ವರೆಗೆ ತೀರ್ಥ ಹರಿದುಬಂತು. ಹೀಗಾಗಿ ನಿದ್ದಣ್ಣ ಕಂಡರೂ ಕಾಣದಂತೆ ನಿದ್ದೆಮಾಡುತ್ತ ಕಳೆದ. ಈ ಸಲ ಮಾತ್ರ ಅವೆಲ್ಲ ನಡೆಯೊಲ್ಲ. ಒಂದುವರ್ಷದಿಂದ ಸರ್ಕಸ್ಸಿನಲ್ಲಿ ನಾಯಿ ಕುಣಿಸಿದ ಹಾಗೆ ಕಾಮಿಯನ್ನು ಕುಣಿಸಿದ್ದಕ್ಕೆ ಮೊದಲ ದೂರುದಾರರಿಗೆ ಸಮಾಜ ಕೃತಜ್ಞತೆ ಸಲ್ಲಿಸಬೇಕು.

ಯಾರೋ ಪುಣ್ಯಾತ್ಮರು ಹೇಳಿದರು-“ಅವರಿಗೆ ವಿದ್ಯಾಭೂಷಣರಂತೆ ಗೌರವಯುತ ಬಾಳ್ವೆ ನಡೆಸಲು ಅವಕಾಶ ಮಾಡಿಕೊಡಿ”ಅಂತ. ವಿದ್ಯಾಭೂಷಣರು ಮಠದ ದುಡ್ಡನ್ನು ತಿನ್ನಲ್ಲಿಲ್ಲ. ಒಂದೇ ಹುಡುಗಿಗೆ ಮನಸ್ಸು ಕೊಟ್ಟರು, ಸೋತರು, ಸನ್ಯಾಸದಿಂದ ಸಂಸಾರಕ್ಕೆ ಮರಳುವುದಾಗಿ ಘೋಷಿಸಿ, ಹಾಗೇ ನಡೆದುಕೊಂಡು ಸುಂದರ ಸಾಂಸಾರಿಕ ಜೀವನವನ್ನು ನಡೆಸಿದರು. ಆದರೆ ಈ ಪ್ರಾಣಿ ಒಂದರ ಪ್ರೀತಿಗಾಗಿ ಹಾತೊರೆದದ್ದಲ್ಲ. ಈ ಕಚ್ಚೆಹರುಕನ ಕತೆಯಲ್ಲಿ ನೂರಾರು ಮಹಿಳೆಯರು, ಹುಡುಗಿಯರು ಇದ್ದಾರೆ. ಮರ್ಯಾದೆ ಹೋಗುತ್ತದೆಂದು ಕೆಲವರು ದೂರು ದಾಖಲಿಸಲಿಲ್ಲ, ಹೊಡೆದುಹಾಕಿಬಿಡ್ತಾರೆ ಎಂಬ ಭಯದಿಂದ ಮತ್ತಷ್ಟು ಜನ ದೂರು ನೀಡಲಿಲ್ಲ. ಅದಿಲ್ಲದಿದ್ದರೆ ಇಷ್ಟೊತ್ತಿಗೆಲ್ಲ ಕಾಮಿಯ ’ವಿಜಯಯಾತ್ರೆ’ಜರುಗಿ ಪರಪ್ಪವನದಲ್ಲಿ ಪವಡಿಸಿ ಆರುತಿಂಗಳಾದರೂ ಆಗುತ್ತಿತ್ತು.

ಇಂದಿನ ದಿನಮಾನ ಹೇಗಿದೆ ಎಂದರೆ ಫೇಸ್ ಬುಕ್, ಟ್ವಿಟರ್‌ಗಳಲ್ಲಿ ಹೇಳಿಕೆ ಕೊಟ್ಟದ್ದಕ್ಕೆ ವ್ಯಕ್ತಿಗಳನ್ನು ಬಂಧಿಸಿರುವುದನ್ನು ನಿನ್ನೆ-ಮೊನ್ನೆ ನಾವು ಕೇಳಿದ್ದೇವೆ. ಯಕ್ಕಶ್ಚಿತ ಹೇಳಿಕೆಯೇ ಮಹಾಪರಾಧವೆನಿಸುವುದಾದರೆ ಅತ್ಯಾಚಾರ ಎಸಗಿದವರದ್ದು ಯಾವ ಮಟ್ಟದ ಅಪರಾಧವಾಗಿರಬೇಡ? ವಿಚಿತ್ರವೆಂದರೆ ನೂರು ರೂಪಾಯಿ ಲಂಚ ಸ್ವೀಕರಿಸಿದ ಚಿಲ್ಲರೆ ಜವಾನ ಸಿಕ್ಕಿಬಿದ್ದು ಕೆಲಸ ಕಳೆದುಕೊಳ್ಳುತ್ತಾನೆ; ನೂರುಕೋಟಿ ಹೊಡೆದುಕೊಂಡ ಅಧಿಕಾರಿ, ಮಂತ್ರಿಮಹೋದಯ ಹಾಯಾಗಿ ಬದುಕುತ್ತಾನೆ. ಇದಕ್ಕೆಲ್ಲ ಕಾರಣಗಳನ್ನು ನಾನು ಹೇಳಬೇಕಾಗಿಲ್ಲ. ಇಲ್ಲಿಯೂ ಹಾಗೆಯೇ; ಅಪರಾಧವೆಸಗಿದ ಆಪಾದಿತ ಮತ್ತು ಅವನ ಬಳಗ ಹಾಯಾಗಿದ್ದಾವೆ; ಸಂತ್ರಸ್ತರನ್ನೇ ಪರೀಕ್ಷಿಸಿ ಮುಗಿಯೋದಿಲ್ಲ.

ಅದ್ಯಾವಳೋ ಬೀದಿನಾಯಿಯಂತಹ ಕೆಟ್ಟ ಹೆಂಗಸಿನ ರಹಸ್ಯಗಳು ಒಂದೊಂದಾಗಿ ಹೊರಬರ್ತಿವೆಯಲ್ಲ? ಅದೇ ರೀತಿಯಲ್ಲಿದೆ ಕಳ್ಳಯ್ಯ-ಕುಳ್ಳಯ್ಯರ ಕತೆ. ಈ ಕಳ್ಳಯ್ಯ-ಕುಳ್ಳಯ್ಯ ಒಟ್ಟಿಗೇ ಇಲ್ಲೇ ಇದ್ದರೆ ಮುಂದೆ ನಡೆಯುವ ಅನಾಹುತಕ್ಕೆ ಸಮಾಜ ಈಗ ತೆತ್ತಿದ್ದಕ್ಕಿಂತ ದೊಡ್ಡ ಬೆಲೆ ತೆರಬೇಕಾಗುತ್ತದೆ.

ಕಳ್ಳಯ್ಯ ಕುಳ್ಳಯ್ಯಂದಿರು ದಿನಕ್ಕೊಂದು ನೆಪವೊಡ್ಡಿ ಎಲ್ಲ ಪರೀಕ್ಷೆಗಳಿಂದ ತಪ್ಪಿಸಿಕೊಳ್ಳುತ್ತಾರೆ. ಎತ್ತಾಕೊಂಡೋಗಿ ಏರೋಪ್ಲೇನ್ ಹತ್ತಿಸಿದರೂ ಅವರ ಭಂಡತನ ಬಿಡೋದಿಲ್ಲ. ಅವರೀರ್ವರನ್ನೂ ನಾರ್ಕೋ ಅನಲಿಸಿಸ್‍ಗೆ ಒಳಪಡಿಸಿದಾಗ ಮಾತ್ರ ಸತ್ಯಾಸತ್ಯತೆ ಹೊರಬರುತ್ತದೆ. ನೆಲದ ಕಾನೂನಿನಲ್ಲಿ ಕಾವಿಗೇ ಬೇರೆ, ಖಾದಿಗೇ ಬೇರೆ, ಖಾಕಿಗೇ ಬೇರೆ ಎಂದಿಲ್ಲ. ಹೀಗಾಗಿ ಸತ್ಯವನ್ನು ಅನಾವರಣಗೊಳಿಸುವಾಗ ನಾರ್ಕೋ ನಡೆಸಲೇ ಬೇಕು. ನಾರ್ಕೋ ನಡೆಸುವುದರಿಂದ, ಕಚ್ಚೆಹರುಕ “ಬ್ರಹ್ಮಚರ್ಯ” ಭಂಗವಾಗುತ್ತದೆ ಎನ್ನುವುದೂ ಸಹ ತಪ್ಪುತ್ತದೆ. ನಾರ್ಕೊ ಫಲಿತಾಂಶ ಬಂದಾಗ ಹಳದಿ ಶಾಲಿನ ಬಾವಯ್ಯಂದಿರು ಓಡಿಹೋಗ್ತಾರೆ. ಆಗ ಕಾಮಿಯ ’ಕಿರೀಟೋತ್ಸವ’ ಆರಂಭಗೊಳ್ಳುತ್ತದೆ.

Thumari Ramachandra

source: https://www.facebook.com/groups/1499395003680065/permalink/1658868811066016/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s