ರಾಘವೇಶ್ವರ ಸ್ವಾಮೀಜಿ ವಿರುದ್ಧ ಮತ್ತೊಂದು ಅತ್ಯಾಚಾರದ ಆರೋಪ

ರಾಘವೇಶ್ವರ ಸ್ವಾಮೀಜಿ ವಿರುದ್ಧ ಮತ್ತೊಂದು ಅತ್ಯಾಚಾರದ ಆರೋಪ

ಬೆಂಗಳೂರು: ಅತ್ಯಾಚಾರ ಹಾಗೂ ವಿವಿಧ ಆರೋಪಗಳಿಗೇ ಪ್ರಚಾರದಲ್ಲಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಮತ್ತೊಂದು ಅತ್ಯಾಚಾರದ ದೂರು ಶನಿವಾರ ಗಿರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ನಗರದ ಗಿರಿನಗರ ಪೊಲೀಸ್ ಠಾಣೆಗೆ ಬಂದ ಹೊಸನಗರದ ಯುವತಿ, ರಾಘವೇಶ್ವರ ಭಾರತೀ ಶ್ರೀಗಳು ತನ್ನ ಮೇಲೆ 2006ರಿಂದ ಇಲ್ಲಿಯವರೆಗೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮುಂದುವರಿದು ರಾಜ್ಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ. ಇಂತಹ ದೂರುಗಳು ರಾಘವೇಶ್ವರ ಸ್ವಾಮಿಗಳ ವಿರುದ್ಧ ಪದೇ ಪದೇ ದಾಖಲಾಗುತ್ತಿರುವುದರಿಂದ ಅವರ ಕಟ್ಟಾ ಅಭಿಮಾನಿಗಳಿಗೂ ಇದೀಗ ಅವರ ಮೇಲೆ ಸಂಶಯದ ಸುಳಿಯೊಂದು ಸುಳಿಯುವಂತಾಗಿದೆ.

ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ದೂರು ಕೊಟ್ಟಿರುವ ಯುವತಿ, ಹೊಸನಗರದವರಾಗಿದ್ದು ರಾಘವೇಶ್ವರ ಸ್ವಾಮೀಜಿಗಳ ರಾಮಚಂದ್ರಾಪುರ ಮಠದಲ್ಲಿಯೇ ಕೆಲಸ ಮಾಡುತ್ತಿದ್ದ ಕಲಾವಿದೆ ಎನ್ನಲಾಗಿದೆ. ತಾನು ಅಪ್ರಾಪ್ತ ವಯಸ್ಕಳಾಗುವ ಮುನ್ನವೇ ರಾಘವೇಶ್ವರ ಶ್ರೀಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಲ್ಲಿಂದ ಇಲ್ಲಿಯ ವರೆಗೂ ನಿರಂತರ ಅತ್ಯಾಚಾರ ತನ್ನ ಮೇಲೆ ನಡೆದಿದೆ. ಸ್ವಾಮೀಜಿಯ ಬೆದರಿಕೆಗೆ ಭಯಪಟ್ಟು ಇಲ್ಲಿವರೆಗೆ ದೂರು ನೀಡಿರಲಿಲ್ಲ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ. ದೂರು ನೀಡಿರುವ ಯುವತಿ ಈಗ 25ರ ಹರೆಯದವಳಾಗಿದ್ದು, ದೂರಿಗೆ ಸಂಬಂಧಿಸಿದ ಎಫ್ ಐ ಆರ್ ಪ್ರತಿ ಕೈ ಸೇರುವ ತನಕ ಪೊಲೀಸ್ ಠಾಣೆಯಲ್ಲೇ ಉಳಿಯುವುದಾಗಿ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ.

ಈ ಹಿಂದೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರೇಮಲತಾ ಅವರ ಪುತ್ರಿ ಅಂಶುಮತಿ ಶಾಸ್ತ್ರಿ ಕೂಡ ತನ್ನ ತಾಯಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ದಾಖಲಿಸಿದ್ದರು. ಈ ಮೊಕದ್ದಮೆಯನ್ನು ಸರಕಾರ ಸಿಐಡಿಗೆ ವಹಿಸಿದ್ದು, ಪ್ರಕರಣ ವಿಚಾರಣೆಯ ಹಂತದಲ್ಲಿದೆ.

ರಾಘವೇಶ್ವರ ಸ್ವಾಮಿಯ ಆರೋಪಗಳಿಗೆ ಸಂಬಂಧಿಸಿ ಯಾವುದೇ ರಾಜಕೀಯ ಪಕ್ಷಗಳು ಪ್ರತಿಭಟನೆ ಕೈಗೆತ್ತಿಕೊಂಡಿಲ್ಲ. ಅದು ಅವರ ಪ್ರಭಾವಕ್ಕೆ ಸಾಕ್ಷಿ ಎನ್ನಲಾಗುತ್ತಿದೆ. ರಾಜಕೀಯ ಮುಖಂಡರ ಮೇಲೆ ಹಿಡಿತ ಸಾಧಿಸಿರುವ ಸ್ವಾಮೀಜಿ, ಗೋ ರಕ್ಷಣೆಯ ಹೆಸರಲ್ಲಿ ಸರಕಾರದ ಕೋಟ್ಯಂತರ ರೂ. ಅನುದಾನ ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ಇದೀಗ ಮತ್ತೊಂದು ಗಂಭೀರ ಆರೋಪ ರಾಘವೇಶ್ವರ ಸ್ವಾಮೀಜಿಯ ವಿರುದ್ಧ ಕೇಳಿ ಬಂದಿದೆ. ಈಗಲಾದರೂ ಸಂಘಟನೆಗಳು, ರಾಜಕೀಯ ಮುಖಂಡರು ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಲು ಮುಂದಾಗುತ್ತಾರೋ ಕಾದು ನೋಡಬೇಕು.

nkspb

ನ್ಯೂಸ್ ಕನ್ನಡ ನೆಟ್ ವರ್ಕ್

source: http://www.newskannada.in/breaking-latest/rape-case-against-ragaveshwara-swamiji/

Advertisements

One thought on “ರಾಘವೇಶ್ವರ ಸ್ವಾಮೀಜಿ ವಿರುದ್ಧ ಮತ್ತೊಂದು ಅತ್ಯಾಚಾರದ ಆರೋಪ

  1. ಹವ್ಯಕರಿಗಾಗಿ ವೆಬ್‌ ಚೆನ್ನಾಗಿದೆ. ಆದರೆ ಇದು ಹವ್ಯಕರ ಪರ ಇರುವ ವೆಬ್‌ ಅಥವಾ ವಿರೋಧಿ ವೆಬ್‌ ಅಂತಾನೋ ತಿಳಿಯುತ್ತಿಲ್ಲ. ಏಕೆಂದರೆ ಕೇವಲ ರಾಘವೇಶ್ವರ ಸ್ವಾಮಿ ವಿರೋಧಿ ಸುದ್ಧಿಗಳನ್ನು ಬಿಟ್ಟರೆ. ಹವ್ಯಕರಿಗಾಗಿ ಅನುಕೂಲವಾಗುವಂಥ ಯಾವುದಾದರೂ ಸುದ್ಧಿ ಪೋಸ್ಟ್‌ಗಳನ್ನು ಮಾಡಿ…ಕೇವಲ ಹವ್ಯಕರಿಗಾಗಿ ಎನ್ನುವ ಹೆಸರಿಟ್ಟುಕೊಂಡರೆ ಸಾಲದು… ಹವ್ಯಕರಿಗಾಗಿ ಎಂದರೆ…ಹವ್ಯಕರ ಉದ್ದಾರವೋ…ಕೇವಲ ರಾಘವೇಶ್ವರ ಸ್ವಾಮಿಗಳ ವಿರೋಧವೋ….ದಯಮಾಡಿ ತಿಳಿಸಿ.. ಹವ್ಯಕರಿಗೆ ಅನುಕೂಲ ಮಾಡಿಕೊಡಿ ಇದು ಒಬ್ಬ ಹವ್ಯಕನಾಗಿ ಮಾಡುವ ವಿನಂತಿ…

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s