ಬೈದು ವಿಷಯಾಂತರ ಮಾಡಿ ಜನರಿಗೆ ಬೋಳೆಣ್ಣೆ ಸವರುವ ವಿಧಾನ

ಬೈದು ವಿಷಯಾಂತರ ಮಾಡಿ ಜನರಿಗೆ ಬೋಳೆಣ್ಣೆ ಸವರುವ ವಿಧಾನ

ತುಮರಿಗೆ ದುಡ್ಡು ಕೊಡಲಿಲ್ಲ, ಅದಕ್ಕೇ ಬರಲಿಲ್ಲ ಎಂದುಕೊಂಡಿರಬೇಕು ಹಳದೀ ಪಂಚಾಂಗದ ಹಲವರು. ಅವನ ಬ್ಯಾಟರಿ ಖಾಲಿ ಆಯ್ತೆಂದುಕೊಂಡವರು ಜೈಕಾರದ ಗಿಂಡಿಗಳು. ತುಮರಿ ಬರೆಯಲಿಲ್ಲ ಎಂದ ಮಾತ್ರಕ್ಕೆ ಬರಲಿಲ್ಲ ಎಂದರ್ಥವೂ ಅಲ್ಲ, ಅಲ್ಲವೇ? ತುಮರಿಯ ಬರಹಕ್ಕಾಗಿಯೇ ಯಾರಾದರೂ ಕಾದಿದ್ದರೆ ಕೆಲವು ದಿನ ಬೇಸತ್ತುಕೊಂಡಿರಬಹುದು. ಅಷ್ಟಕ್ಕೂ ಈ ಲೋಕಕ್ಕೆ ತುಮರಿಯೇನು ಶಾಶ್ವತವೇ? ಅವನ ರೀತಿಯ ಹಲವು ಸಾವಿರ ಬರಹಗಾರರು ಸಿಗುತ್ತಾರಪ್ಪ, ಅದರಲ್ಲೇನಿದೆ?

ಯಾರನ್ನೋ ಬೈಯುತ್ತ ಕಾಲಹರಣಮಾಡುವ ಜನರನ್ನು ನೋಡಿದೆ. ತಾಕತ್ತಿದ್ದರೆ ವಿಷಯಾಧಾರಿತವಾಗಿ ಮಾತನಾಡಬೇಕು, ಮಡಿಯನ್ನು ಒದ್ದೆಮಾಡುವ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡಬೇಕು. ಅದನ್ನೆಲ್ಲ ಬಿಟ್ಟು, ವಿಷಯವನ್ನು ಪ್ರಸ್ತಾಪಿಸಿದವರನ್ನೇ ನಿಂದಿಸುತ್ತ ದಿನಕಳೆಯುವುದು [ಹೇಲು]ಹಂದಿಯ ಬದುಕಿನಂತೆಯೇ ಸರಿ.

ಮಠಗಳಲ್ಲಿ ಮೃಷ್ಟಾನ್ನ ಭೋಜನದ ಮೆನು ಇಡಬಾರದು. ಮಠಕ್ಕೆ ಹೋಗುವುದು ಜ್ಞಾನಾರ್ಜನೆ ಮತ್ತು ಆಧ್ಯಾತ್ಮಿಕ ಸಾಧನೆಗೆ ಹೊರತು ಇನ್ಯಾವ ಕಾರಣಕ್ಕೂ ಅಲ್ಲ, ಯತಿವೇಷದವನೊಡನೆ ಏಕಾಂತ ನಡೆಸಲಿಕ್ಕೂ ಅಲ್ಲ. ಸಭೆ-ಸಮಾರಂಭಗಳು ಆಡಂಬರಗಳಿಂದ ಕೂಡಿ ಮಲ್ಟಿ ನ್ಯಾಷನಲ್ ಕಂಪನಿಯ ಈವೆಂಟ್ ಆಗಬಾರದು. ಹೇಳಿಕೇಳಿ ಅದು ಮಠ, ಸನ್ಯಾಸಿಯ ತಂಗುದಾಣ, ಅಲ್ಲಿನ ಸನ್ಯಾಸಿಯೂ ಅಲ್ಲಿಯೇ ಸ್ಥಿರವಲ್ಲ ಮತ್ತು ಅಲ್ಲಿಗೆ ಹೋಗುವವರೂ ಸಹ. ಹರಿವ ನೀರಿನಂತೆ ಬಂದುಹೋಗುತ್ತಿರಬೇಕು, ನಿಂತನೀರು ಬಗ್ಗಡವೆನಿಸಿಕೊಳ್ಳುತ್ತದೆ.

ನಮಗೆ ಯಾವ ಅಣ್ಣ ಹೇಳುವ ನಿಯಮಗಳೂ ಬೇಕಾಗಿಲ್ಲ, ದೊಣ್ಣೆನಾಯಕನ ಅಪ್ಪಣೆಯ ಅಗತ್ಯವೂ ಇಲ್ಲ. ಶಂಕರರು ಹೇಳಿದ ನಿಯಮಗಳಿಗೆ ಬದ್ಧವಾಗಿ ಮಠ ಮತ್ತು ಮಠದ ಯತಿ ನಡೆದುಕೊಳ್ಳುತ್ತಿದ್ದಾವೆಯೇ? ಅಷ್ಟಿದ್ದರೆ ಸಾಕು. ಅದುಬಿಟ್ಟು ಮಠವನ್ನು ಪೈವ್ ಸ್ಟಾರ್‍ ಸಂಸ್ಕೃತಿಯಿಂದ ಮೆರೆಸಬೇಕಾಗಿಲ್ಲ; ಮೆರಸಬಾರದು.

ನಿಯತ್ತುಳ್ಳ ಜನ ಹಿಂದೆಯೂ ಇದ್ದರು ಮತ್ತು ಈಗಲೂ ಇದ್ದಾರೆ; ಆದರೆ ಅಂತವರ ಸಂಖ್ಯೆ ಕಡಿಮೆಯಾಗಿದೆ. ಕೆಲವರು ಸಮಾಜ ಸುಧಾರಕರಂತೆ ಪೋಸು ಕೊಡುತ್ತಿರುತ್ತಾರೆ, ವೈಯಕ್ತಿಕವಾಗಿ ನಯಾಪೈಸೆ ಬಿಚ್ಚಿ ಗೊತ್ತಿರೋದಿಲ್ಲ. ಅಪ್ಪಿತಪ್ಪಿ ಯಾರಿಗಾದರೂ ಸಣ್ಣ ಸಹಾಯ ನೀಡಿಬಿಟ್ಟರೆ ಕೊನೆಯುರಿಸಿನವರೆಗೂ ಸಹಾಯ ಕೊಟ್ಟ ಆ ಪುಣ್ಯಾತ್ಮ ಮರೆಯೋದಿಲ್ಲ, ಸಹಾಯ ತೆಗೆದುಕೊಂಡವನನ್ನು ನಿಂದಿಸುವುದು ಅಥವಾ ಅವಾಚ್ಯ ಪದಗಳಿಂದ ಬೈಯುವುದು ಮಾಡುತ್ತಾರೆ. ಅಂತವರ ಮನೆಗಳಲ್ಲೇ ಲಕ್ಷ್ಮಿ ಬೇಡವೆಂದರೂ ವಾಸವಾಗಿರುತ್ತಾಳೆ! ಪರಮಲೋಭಿಗಳಾದ ಅವರು ಧರಿಸುವ ಮುಖವಾಡಕ್ಕೂ ಅವರ ನಡತೆಗೂ ಯಾವುದೇ ಪರಸ್ಪರ ವಿರುದ್ಧ ದಿಕ್ಕು.

ಬಹಳ ಹಿಂದೆ ವ್ಯಜ್ಕ್ತಿಯೊಬ್ಬನಿಗೆ ಪುಣ್ಯಾತ್ಮ ಉದ್ಯಮಿಯೊಬ್ಬರು ಸಹಾಯ ಮಾಡಿದ್ದಾರೆ. ಅದನ್ನು ಆ ವ್ಯಕ್ತಿ ನಿತ್ಯ ಬೆಳಿಗ್ಗೆ ನೆನೆಯುತ್ತಾನಂತೆ. ಕಾರಣಾಂತರಗಳಿಂದ ಅವನಿಗೆ ಕಾಲ ಕೂಡಿಬರಲಿಲ್ಲ, ತೆಗೆದುಕೊಂಡ ಆರ್ಥಿಕ ಸಹಾಯವನ್ನು ಮರಳಿಸಲು ಸಾಧ್ಯವಾಗಲಿಲ್ಲ, ಆದರೆ ಆ ವ್ಯಕ್ತಿ ಇಂದಲ್ಲ ನಾಳೆ ಅದನ್ನು ಮರಳಿಸುತ್ತಾನೆ ಎಂದು ಕವಳದ ಗೋಪಣ್ಣ ನನಗೊಂದು ಉದಾಹರಣೆ ಕೊಟ್ಟಿದ್ದಾನೆ.

ಇಪ್ಪತ್ತು ವರ್ಷಗಳ ಹಿಂದೆ ಊರಿನಲ್ಲಿ ಅಡಿಕೆ ವ್ಯಾಪಾರ ಹಳ್ಳಿಹಳ್ಳಿಗಳಲ್ಲೂ ಜೋರಾಗಿ ಆರಂಭವಾಯ್ತು. ಒಬ್ಬ ವ್ಯಕ್ತಿ ವ್ಯಾಪಾರ ಆರಂಭಿಸಿದ. ಪ್ರತಿದಿನ ಲಕ್ಷಾಂತರ ಮೊತ್ತಹ ವಹಿವಾಟು. ವಾರಕ್ಕೆರಡು ಲಾರಿ ಅಡಿಕೆ ಮೂಟೆಗಳನ್ನು ಕಳಿಸುತ್ತಿದ್ದ. ಒಮ್ಮೆ ಇದ್ದಕ್ಕಿದ್ದಲ್ಲೇ ದರವೂ ಕುಸಿಯತೊಡಗಿತ್ತು, ಅವನಿಂದ ಖರೀದಿಸುವ ದೂರದ ದೊಡ್ಡ ವ್ಯಾಪಾರಿಯಿಂದ ಅರ್ಧಕೋಟಿಗೂ ಅಧಿಕ ಹಣ ಬರುವುದು ಬಾಕಿ ಇತ್ತು. ಹಾಗಂತ ಈ ಹಳ್ಳಿಯ ವ್ಯಾಪಾರಿ ಕೋಟಿಗಟ್ಟಲೆಯನ್ನು ನಿಭಾಯಿಸುವ ತ್ರಾಣಿಯೇನಲ್ಲ. ಹೊರಗಿನ ವ್ಯಾಪಾರಿಯಿಂದ ಹಣ ಬರಲೇ ಇಲ್ಲ! ಖರೀದಿಸಿ ಇಟ್ಟುಕೊಂಡಿದ್ದ ಹಲವು ಕ್ವಿಂಟಾಲ್ ಅಡಿಕೆಗೂ ದರ ಕಡಿಮೆಯಾಗುತ್ತ ಬಂತು. ವ್ಯಾಪಾರಿ ಕುಸಿದುಹೋದ.

ಹಲವರು ಅವನನ್ನು ಬೈದರು, ಜಗಳವಾಡಿದರು. ಕೆಲವರು ಛೀಮಾರಿ ಹಾಕುವವರೆಗೂ ನಡೆಯಿತು. ಆಗ ಇಂದಿನಂತೆ ಮಾಧ್ಯಮಗಳ ಹಾವಳಿ ಇರಲಿಲ್ಲ; ಹೀಗಾಗಿ ಹಳ್ಳಿಯ ವ್ಯಾಪಾರಿಯ ವಿರುದ್ಧ ತಕೆಗೊಂದರಂತೆ ಮಾತನಾಡುವುದು ಆರಂಭವಾಗಲಿಲ್ಲ. ವಿಷಯ ಹಳ್ಳಿಗಳ ಮಟ್ಟದಲ್ಲೇ ಉಳಿಯಿತು. ಇಲ್ಲದಿದ್ದರೆ ಆ ವ್ಯಾಪಾರಿ ಜೀವಂತ ಉಳಿಯುತ್ತಿರಲಿಲ್ಲ.

ಕೆಲವರಿಗೆ ಮಾತ್ರ ಆ ವ್ಯಾಪಾರಿಯಲ್ಲಿ ವಿಶ್ವಾಸವಿತ್ತು. ವ್ಯಕ್ತಿ ಸೋತಿದ್ದಾನೆ, ನಿಜ, ಆದರೆ ಒಂದಲ್ಲ ಒಂದು ದಿನ ತಮ್ಮ ಹಣ ಬರುತ್ತದೆ ಎಂಬ ಭಾವನೆ ಅವರಲ್ಲಿತ್ತು. ಈಗ ಆ ವ್ಯಕ್ತಿಯ ಬದುಕು ಸ್ವಲ್ಪ ಸುಧಾರಿಸಿದೆ. ಪ್ರಾಮಾಣಿಕ ಜೀವನ ನಡೆಸುತ್ತ ಹಣ ಗಳಿಸಿ ಸಾಲ ತೀರಿಸಲು ಅವನು ಮಾಡಿದ ಹರಸಾಹಸದ ಬಗ್ಗೆ ಹೇಳಿದರೆ ನಿಮಗೆ ಅರ್ಥವಾಗಲಿಕ್ಕಿಲ್ಲ. ಎರಡು ಲಕ್ಷ ಕೊಡಬೇಕಾದವರಿಗೆ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಹಣ ಮರಳಿಸಿದ್ದಾನೆ. ಅದೇ ಕ್ರಮದಲ್ಲಿ ಯಾರಿಗೆಲ್ಲ ಹಣ ಕೊಡಬೇಕಾಗಿತ್ತು ಎಂಬುದರ ಯಾದಿಯನ್ನು ಇಟ್ಟುಕೊಂಡು, ಅವರ ಅಸಲನ್ನು ಮರಳಿಸುವ ಯತ್ನದಲ್ಲಿ ಯಶಸ್ವಿಯಾಗುತ್ತಿದ್ದಾನೆ.

ಅಷ್ಟೆಲ್ಲ ಕಷ್ಟದಲ್ಲಿರುವ ವ್ಯಕ್ತಿಯೂ ಸಹ ಮಠಕ್ಕೆಂದು ಒಂದಷ್ಟು ದೇಣಿಗೆ ನೀಡಿದ್ದಾನೆ. ಇದೊಂದು ಉದಾಹರಣೆಯಷ್ಟೇ. ಇನ್ನೂ ಹಲವರು ಆರ್ಥಿಕವಾಗಿ ತೀರಾ ಸಣ್ಣ ಆದಾಯ ಇರುವವರು ಇಂದಿಗೂ ನಮ್ಮಲ್ಲಿ ಇದ್ದಾರೆ. ಅಂತವರೂ ಸಹ ಆಧ್ಯಾತ್ಮದ ಹೆಸರಿನಲ್ಲಿ ಕೈಲಾದಷ್ಟು ದೇಣಿಗೆ, ಕಾಣಿಕೆ ನೀಡಿದ್ದಾರೆ. ಅವರೆಲ್ಲರ ಹಣ ಇಂದು ದುರ್ವ್ಯಾಜ್ಯಗಳ ಖರ್ಚಿಗೆ ಹೋಗಿರುವುದಂತೂ ಅಪ್ಪಟ ಸತ್ಯ. ಹಿಂದೆ ಅದು ಖಾಸಗೀ ಅಕೌಂಟಿಗೆ ಹೋಗಿದ್ದೂ ಸತ್ಯ.

ಯಾವುದೇ ಸೀಟಿನಲ್ಲಿ ಕೂರಿಸುವ ಅಧಿಕಾರ ಇರುವವರಿಗೆ ಕೆಳಗಿಳಿಸುವ ಅಧಿಕಾರವೂ ಇರುತ್ತದೆ ಎಂಬುದನ್ನು ಸೀಟಿನಲ್ಲಿ ಕೂತವ ಮರೆಯಬಾರದು. ಸಾರ್ವಜನಿಕ ಸ್ವತ್ತಿಗೆ ಅವ ಜವಾಬ್ದಾರಿಯ ಕಾವಲುಗಾರನೇ ಹೊರತು ಅದು ಅವನ ಮತ್ತು ಅವನ ಬಾವಯ್ಯನ ಖಾಸಗೀ ಆಸ್ತಿಯಲ್ಲ. ಹಳದೀ ಪಂಚಾಂಗದವರ ದೇಣಿಗೆಯಿಂದ ಹುಟ್ಟಿದ್ದೂ ಅಲ್ಲ. ಇದನ್ನು ನಮ್ಮ ಜನತೆ ಮನಗಂಡಿದ್ದರೆ ಕನಿಷ್ಠ ಆರು ತಿಂಗಳ ಹಿಂದೆಯೇ ಗ್ರಹಣವೂ ಬಿಡುತ್ತಿತ್ತು, ರಾಂಗ್ ವೇಷಕ್ಕೆ ಹಿಡಿದ ಗ್ರಹಚಾರವೂ ಬಿಡುತ್ತಿತ್ತು.

ಅದ್ಯಾವುದೋ ಸರಕಾರೀ ಸ್ಕೂಲ್‍ನಲ್ಲಿ ಮುಖ್ಯಾಧ್ಯಾಪಕನಾದವ ಇನ್ನಾವುದೋ ಸ್ಕೂಲಿನ ಮುಖ್ಯಾಧ್ಯಾಪಕಿಯೊಡನೆ ಸಂಪರ್ಕ ಬೆಳೆಸಿದ್ದನಂತೆ. ತೀಟೆ ಹೆಚ್ಚಿದಾಗ ಶಾಲಾದಿನದಲ್ಲೇ ಸಂಭೋಗದ ಅವಸರ ಹೆಚ್ಚಿ ಮೊನ್ನೆ ರಜಾ ಘೋಷಿಸಿ ಮಕ್ಕಳನ್ನೆಲ್ಲ ಮನೆಗೆ ಕಳಿಸಿದ್ದಾನೆ. ಸುದ್ದಿಯನ್ನು ನೀವು ಮಾಧ್ಯಮಗಳಲ್ಲಿ ತಿಳಿದಿದ್ದೀರಲ್ಲ? ಅಷ್ಟೆಲ್ಲ ತೀಟೆ ಇರುವ ವ್ಯಕ್ತಿಗಳು ಆ ಜಾಬಿಗೆ ನಾಲಾಯಕ್ಕು ಎಂದರೆ ತಪ್ಪೇ? ಒಂದೊಮ್ಮೆ ವೈಯಕ್ತಿಕ ತೀಟೆ ಇದ್ದರೂ ಶಾಲಾಸಮಯದ ನಂತರ ನಡೆಸಬಹುದಿತ್ತಲ್ಲ? ಒಂದೊಮ್ಮೆ ಅಲ್ಲಿಯೂ ಹಳದೀ ಭಕ್ತರಂತವರು ಸಿಕ್ಕಿದ್ದರೆ ವಿಷಯಾಂತರವಾಗಿ ಬದಲಾಗಿ ಹೋಗುತ್ತಿತ್ತು; ಆದರೆ ಅಲ್ಲಿದ್ದವರೆಲ್ಲ ಮುಗ್ಧ ವಿದ್ಯಾರ್ಥಿಗಳು, ಅನಿರೀಕ್ಷಿತವಾಗಿ ವಿನಾಕಾರಣವಾಗಿ ರಜೆಯೆನ್ನುತ್ತ ಮನಗೆ ಬಂದ ಮಕ್ಕಳು ಪಡೆದ ರಜೆಯನ್ನು ಸಂದೇಹಿಸಿದ ಪಾಲಕರು. ಕುತೂಹಲಿ ಪಾಲಕರು ಶಾಲೆಗೆ ತೆರಳದಿದ್ದರೆ ಮಾಸ್ತರನ ಏಕಾಂತ ಮುಂದುವರಿಯುತ್ತಿತ್ತು. ಪ್ರಾಯಶಃ ಇನ್ನೊಂದಷ್ಟು ರಜೆಗಳು ನೀಡಲ್ಪಡುತ್ತಿದ್ದವು.

ಅನಿತಿಕತೆಗೆ ಯಾವ ನೀತಿ ನಿಯಮಗಳೂ ಇರುವುದಿಲ್ಲ. ಹಾಲಿ ವಿಚಾರಣೆಗೆ ಒಳಗಾಗಿರುವ ಇಂದ್ರಾಣಿ ಮುಖರ್ಜಿಯ ಕತೆಯನ್ನೇ ಗಮನಿಸಿ. ಎಷ್ಟೆಲ್ಲ ಮದುವೆಗಳು, ವಿಚ್ಛೇದನಗಳು, ಬೇಡವಾದ ಮಕ್ಕಳು, ಕೊಲೆ ಅಯ್ಯಯ್ಯೋ, ರಾಮ ರಾಮಾ ಅಂತದ್ದೂ ಜೀವನವೇ? ಆದರೆ ಕಾಮಿಗಳಿಗೆ ಅಂತದ್ದರಲ್ಲೇ ರುಚಿ ಮತ್ತು ಅಭಿರುಚಿ. ಕರುಳಕುಡೊಯನ್ನೇ ಹೊಸಕಿಹಾಕಲಿಕ್ಕೂ ಹಿಂದೆಮುಂದೆ ನೋಡದ ಕಾಮ ಪಿಪಾಸುಗಳೂ ಇರುತ್ತಾರೆ.

ಈ ಲೋಕವೇ ಹಾಗೆ. ಗಂಡಿಗೆ ಹೆಣ್ಣನ್ನು ನೋಡುವುದರಿಂದ ಆಕರ್ಷಣೆ, ಗಂಡಿನ ಜೇಬು ನೋಡುವುದರಿಂದ ಹೆಣ್ಣಿಗೆ ಆಕರ್ಷಣೆ. ಕೆಲವು ಮಹಿಳೆಯರಿಗೆ ಜೇಬಿಗಿಂತಲೂ ಹೆಚ್ಚಾಗಿ ಯಾವುದೋ ರೀತಿಯ ಭೋಗದ ಅಪೇಕ್ಷೆ. ಇಲ್ಲೆಲ್ಲ ವ್ಯಕ್ತಿಗಳು ನಿಜವಾಗಿ ಹುಡುಕುವುದು ಶಾಶ್ವತ ಸುಖವನ್ನು. ಸುಖ ಸಿಗುತ್ತದೆ ಎಂದುಕೊಂಡು ಭೋಗಕ್ಕೆ ತೊಡಗುತ್ತಾರೆ. ಸಿಗುವ ಸುಖ ಶಾಶ್ವತದ್ದಲ್ಲ, ಅದು ಬಿಸಿಲ್ಗುದುರೆ. ಅಲ್ಲೆಲ್ಲ ಆತ್ಮ ಪರಮಾತ್ಮನನ್ನು ಹುಡುಕುವುದಂತೆ; ವಿಲೀನವಾಗಲು ಬಯಸುವುದಂತೆ. ಆದರೆ ಅದು ಸಾಧ್ಯವಾಗುವುದಿಲ್ಲ.

ಹಿಂದೆ ಎಣ್ಣೆಯ ದೀಪಕ್ಕೆ ಇಂದು ವಿದ್ಯುದ್ದೀಪಕ್ಕೆ ಹಾತೆ-ಪತಂಗಾದಿ ಹುಳಗಳು ಮುತ್ತಿಕೊಳ್ಳುತ್ತವೆ. ಪ್ರಕಾಶಮಾನವಾದ ದೀಪದಲ್ಲಿ ಅವುಗಳಿಗೇನೋ ಸುಖ ಸಿಗುವ ಭಾವನೆ ಇರುತ್ತದೋ ಎನಿಸುತ್ತದೆ. ಎಣ್ಣೆಯ ದೀಪಕ್ಕೆ ಮುತ್ತಿಕ್ಕುವ ಅವು ಅರಿವಿಲ್ಲದೇ, ತಮ್ಮನ್ನೇ ದಹಿಸಿಕೊಳ್ಳುತ್ತವೆ. ವಿದ್ಯುದ್ದೀಪದಲ್ಲಿ ನೇರವಾಗಿ ಸುಟ್ಟುಹೋಗದಿದ್ದರೂ ಪಕ್ಕದಲ್ಲಿ ಓಡಾಡುವ ಹಲ್ಲಿಗೆ ಆಹಾರವಾಗುತ್ತವೆ ಅಥವಾ ಬಹಳಹೊತ್ತು ಅಲ್ಲೇ ಸುಳಿಯುತ್ತ ಹಸಿದು ಸಾಯುತ್ತವೆ.

ನಿಸರ್ಗದಲ್ಲಿ ಹೂವು, ಹಣ್ಣು, ಹಕ್ಕಿ, ಗಿಡ-ಮರ, ಬಳ್ಳಿ, ಪ್ರಾಣಿಗಳು ಎಲ್ಲದರಲ್ಲೂ ಪ್ರಭೇದಗಳನ್ನು ಕಂಡೇ ಕಾಣುತ್ತೇವೆ. ಮನುಷ್ಯರಲ್ಲೂ ಅಂತಹ ಪ್ರಭೇದಗಳಿಲ್ಲ ಎಂದು ವೈಜ್ಞಾನಿಕವಾಗಿ ತೆಗೆದುಹಾಕಲು ಸಾಧ್ಯವೇ ಇಲ್ಲ. ಹೊರನೋಟಕ್ಕೆ ಹೋಲಿಕೆಯಿದ್ದ ಮಾತ್ರಕ್ಕೆ ಅಂತಃಕರಣ ಅಂದರೆ ಆತ್ಮಕ್ಕಂಟಿದ ಸ್ವಭಾವ ಒಂದೇ ರೀತಿ ಇರುತ್ತದೆಂದು ಹೇಳಲು ಸಾಧ್ಯವಿಲ್ಲ.

ಒಬ್ಬಳು ’ಮಹಾ ಪತಿವ್ರತೆ’ಯಿದ್ದಳು. ಹಣೆಯಲ್ಲಿ ಕಾಸಿನಗಲದ ಕುಂಕುಮ. ಮೈತುಂಬ, ರವಿಕೆಯನ್ನೂ ಮುಳುಗಿಸುವಷ್ಟು ಮುಚ್ಚಿದ ಸೀರೆ. ಗಂಡ ಬಹಳ ಸಾಚಾ. ಹೆಂಡತಿ ಏನು ಮಾಡ್ತಾಳೆ ಗೊತ್ತಿಲ್ಲ. ಅವಳಿಗೊಬ್ಬ ಅನ್ಯವರ್ಗದ ಮಿಂಡ. ನಾಲ್ಕಾರು ಹೆಣ್ಣುಮಕ್ಕಳು, ಕೊನೆಗೊಬ್ಬ ಮಗ. ಮಹಾಪತಿವ್ರತೆಯ ಹೆಣ್ಣುಮಕ್ಕಳಲ್ಲಿ ಒಬ್ಬಳಂತೂ ತಾಲೂಕಿಗೇ ಫೇಮಸ್ಸು! ಅವಳಿಗೂ ಮದುವೆಯಾಗಿ ಅವಳ ಹೆಣ್ಣುಮಕ್ಕಳೂ ಮದುವೆಗೆ ಬೆಳೆದು ನಿಂತಿವೆ. ಆ ತಳಿಯೇ ಹಾಗೆ. ಹಿಂದಿನ ಜನ ಅದಕ್ಕೇ ’ತಾಯಿಯಂತೆ ಕರು ನಾಯಿಯಂತೆ ಬಾಲ’ ಎಂದು ಹೇಳಿದ್ದಾರೆ. ಹಾದರ ನಡೆಸುವವರ ಮನೆಯಲ್ಲಿ ಹುಟ್ಟಿದವರಿಗೆ ಆ ಸ್ವಭಾವ ಜನ್ಮಜಾತವಾಗಿ ಆತ್ಮಕ್ಕಂಟಿಯೇ ಬರುತ್ತದೆ. ಅದನ್ನು ಅರಿಯಲಾರದವರು “ಸರಿಯಾದವರನ್ನು ಗುರುತಿಸಿಯೇ ಸನ್ಯಾಸ ನೀಡಿದ್ದೇವೆ” ಎಂದುಕೊಳ್ಳುತ್ತಾರೆ. ತಾವೆಲ್ಲಿ ಎಡವಿದ್ದೇವೆ ಎಂಬುದು ಅವರಿಗೆ ಅರ್ಥವಾಗೋದಿಲ್ಲ.

ನಮ್ಮ ಉದ್ದೇಶವೇನು? ಎಲ್ಲಿ ಯಾವುದು ಹೇಗಿರಬೇಕಾಗಿತ್ತೋ ಹಾಗಿಲ್ಲ ಎಂಬುದು ನಮಗೆ ಖಾತ್ರಿಯಿದೆ; ಅದನ್ನು ಸರಿಪಡಿಸಬೇಕು, ಇಲ್ಲದಿದ್ದರೆ ಮುಂದಿನ ಜನಾಂಗವೆಲ್ಲ ಅಡ್ಡತಳಿಯ ಜನಾಂಗವೇ ಆಗುತ್ತದೆ ಎಂಬುದು ಅರ್ಥವಾಗಿದೆ. ಹೀಗಿರುವಾಗ ನಮ್ಮಲ್ಲಿರುವ ಕೆಲವು ನೂರು ಪ್ರಶ್ನೆಗಳಿಗೆ ಸಮಯಮಾಡಿಕೊಂಡು ಉತ್ತರಿಸುವ ಜವಾಬ್ದಾರಿಯನ್ನು ಹಳದೀ ಪಂಚಾಂಗದವರ ಗುರುವಿಗೆ ಸಾಧ್ಯವೇ? ಇಪ್ಪತ್ನಾಲ್ಕಲ್ಲ ನಲ್ವತ್ತೆಂಟಲ್ಲ ಎಪ್ಪತ್ಯೆರಡು ಗಂಟೆ ತೆಗೆದುಕೊಂಡು ಉತ್ತರಿಸಿದರೂ ಪರವಾಗಿಲ್ಲ. ಅದನ್ನು ಬಿಟ್ಟು ಸಮಾಜದ ಹಳೆತಲೆಗಳನ್ನು, ತಮ್ಮ ವಿರುದ್ಧ ದನಿ ಎತ್ತಿದವರನ್ನು ಮಟಾಷ್ ಮಾಡಿಸುವುದು, ಎತ್ತಂಗಡಿ ಮಾಡಿಸುವುದು ಇದೆಲ್ಲ ಬೇಕಾಗಿಲ್ಲ. ವಿಷಯಕ್ಕೆ ಬನ್ನಿ, ತಾಕತ್ತಿದ್ದರೆ ಸಮಾನ ಮನಸ್ಕರೊಂದಿಗೆ ಬಹಿರಂಗ [ಮಠಬಿಟ್ಟು ಹೊರಗೆ]ಚರ್ಚೆಗೆ ಬನ್ನಿ.

Thumari Ramachandra

source: https://www.facebook.com/groups/1499395003680065/permalink/1657386524547578/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s