ಚೋರ ಗುರುವಿಗೆ ಇನ್ನೆಂತಹ ಶಿಷ್ಯನಿರಲು ಸಾಧ್ಯ?

ಚೋರ ಗುರುವಿಗೆ ಇನ್ನೆಂತಹ ಶಿಷ್ಯನಿರಲು ಸಾಧ್ಯ?

ಸೂಜಿ ಭಟ್ಟನ ಕತೆಯನ್ನು ಮೊದಲೇ ಕೇಳಿದ್ದೀರಿ, ಕುರಿವಾಡೆಯಲ್ಲಿ ಕಳೆದ ವರ್ಷದ ಚತುರ್ಮೋಸ ನಡೆದ ತರುವಾಯ ಹೊಸ ಕಾರನ್ನು ಖರೀದಿಸಿದ್ದು ಈಗ ಹಳೇ ಕತೆ. ಅವನ ಮಗರಾಯ ಮೊನ್ನೆ ರಾಂಗ ವೇಷ್ ವರನ ಮೇಲೆ ಭಕ್ತಿ ಗೀತೆಯೊಂದನ್ನು ರೆಕಾರ್ಡ್ ಮಾಡಿ ಅಂತರ್ಜಾಲಕ್ಕೆ ಏರಿಸಿ ಕುರಿಮೆಂದೆಗೆ ಹರಿದು ಬಿಟ್ಟಿದ್ದನಂತೆ. ಅದನ್ನು ನೀವೆಲ್ಲ ಕೇಳಿದ್ದೀರಿ ಎಂದು ನಮ್ಮ ಸುದ್ದಿ ಮೂಲಗಳು ಹೇಳಿವೆ.

ಆದರೆ ತಾಜಾ ಸುದ್ದಿ ಅದಲ್ಲ, ಕೈಗೆ ಸಿಗದ, ಕಣ್ಣಿಗ ಕಾಣದ ದೇವರ ಹೆಸರಲ್ಲಿ ಇನ್ಶೂರನ್ಸ್ ಮಾಡಿಸಿದ ಕತೆ; ಅಂದರೆ ದೇವರ ಹೆಸರಲ್ಲಿ ಇನ್ಶೂರನ್ಸ್ ಮಾಡಿಸುತ್ತೇನೆಂದು ಭೋಂಗು ಬಿಟ್ಟು ಸಮಾಜದ ಭಕ್ತರ ಹಣದಲ್ಲಿ ಹೆಂಡತಿ ಮತ್ತು ಮಗನ ಹೆಸರಲ್ಲಿ ಇನ್ಶೂರನ್ಸ್ ಮಾಡಿಸಿದ ಕತೆ.

ಇದು ನಡೆದು ಕೆಲವು ವರ್ಷಗಳೇ ಕಳೆದಿವೆ. ಆಗ ಸೂಜಿಭಟ್ಟ ಅವನೂರಿನ ದೇವಸ್ಥಾನದ ಕಾರ್ಯದರ್ಶಿಯಾಗಿದ್ದನಂತೆ. ಸೂಜಿ ಭುಟ್ಟ ವೃತ್ತಿಯಿಂದ ಮಾಸ್ತರ, ಪ್ರಾಂಶುಪಾಲ. ಕುರಿವಾಡೆಯಲ್ಲಿ ಅಡ್ಡಡ್ಡ ಮಲಗಿ ಕಾಮಿಯನ್ನು ಮಾವಂದಿರಿಂದ ಕಾಪಾಡಲು ಬಂದಿದ್ದರಲ್ಲ? ಅದೇ ತಲೆಯಿಲ್ಲದ ಜನಾಂಗದ ಮಂದಿ ಈ ಮಾಸ್ತರನಿಗೆ ಪ್ರೀತಿಯಿಂದ ಅವರ ಗ್ರಾಮ್ಯ ಭಾಷೆಯಲ್ಲಿ “ಮೈಸ್ತರು”, “ಮೈತ್ತರು”ಎಂದು ಕರೆಯುತ್ತಾರೆ.

ಈ ಮೈತ್ತರು ಹರಡಿದ ಅತ್ತರು ಬಹಳ ಪರಿಮಳದ್ದು. ಹುಡುಗಿಯರ ಹೆಚ್ಚಿನ ವಿದ್ಯೆ, ಉದ್ಯೋಗ, ಕೆಲಸದಲ್ಲಿ ವರ್ಗಾವರ್ಗಿ ಮೊದಲಾದ ಕಾರ್ಯಗಳನ್ನಿಟ್ಟುಕೊಂಡು ಮೈತ್ತರು ಅವರೊಟ್ಟಿಗೇ ರಾಜಧಾನಿ ಮಹಾನಗರಕ್ಕೆ ಬಿಜಯಂಗೈಯುತ್ತಿದ್ದರು. ಕೆಲಸ ಮಾಡಿಸಿಕೊಳ್ಳಬೇಕಾದ ಹುಡುಗಿ ಮತ್ತು ಮೈತ್ತರು ಇಬ್ಬರೇ ಮಹಾನಗರಕ್ಕೆ ಬಂದು ವಸತಿ ಗೃಹಗಳಲ್ಲಿ ಇರುತ್ತಿದ್ದರು. ಈ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಬೇಕಾಗಿಲ್ಲ.

ಇಂತಹ ’ಮಹನೀಯ’ ಮೈತ್ತರು ಕೆಲವು ವರ್ಷಗಳ ಹಿಂದೆ ಅವರ ಊರಿನ ದೇವಾಲಯದ ಕಾರ್ಯದರ್ಶಿಯಾಗಿದ್ದರಂತೆ. ಆಗ ಊರೆಲ್ಲ ತಿರುಗಿ ದೇವಸ್ಥಾನದ ಜೀರ್ನೋದ್ಧಾರ ಮೊದಲಾದ ಕೆಲಸಗಳಿಗಾಗಿ ದೇಣಿಗೆ ಒಟ್ಟುಮಾಡಿದ್ದರಂತೆ. ಬಳಗದಲ್ಲಿ ಒಬ್ಬ ಜೀವವಿಮೆ ಏಜೆಂಟನೂ ಇದ್ದು, ಅವನ ಮೂಲಕ ದೇವರಿಗೆ ವಿಮೆ ಮಾಡುವುದಾಗಿ ಮೈತ್ತರ್ ಮಹಾತ್ಮರು ಹೇಳಿದ್ದರಂತೆ!

ಜೀವ ಇದ್ದು ಎದುರಿಗೆ ಸಿಗುವವರಿಗೇ ವಿಮೆ ನೀಡುವುದು ಕಷ್ಟವಾದ ಈ ದಿನಗಳಲ್ಲಿ ಕೈಗೆ ಸಿಗದ, ಕಾಣದ, ಆದರೆ ವಿಗ್ರಹ ರೂಪದಲ್ಲಿ ಮಾತ್ರ ಕಾಣುವ ದೇವರಿಗೆ ಜೀವ ವಿಮೆ ಇಳಿಸುವುದು ಸಾಧ್ಯವೇ? ದೇವರಿಗೆ ವಿಮೆ ಮಾಡಿಸಿದ್ದೇವೆ ಅಂತ ಈ ಮೈತ್ತರು ಗ್ರಾಮದ ಸಜ್ಜನರಿಗೆ ಬೋಳೆಣ್ಣೆ ಸವರಿದ್ದರು. ಈಗ ಆಡಳಿತ ಮಂಡಳಿ ಬದಲಾಗಿ, ಜೀರ್ಣೋದ್ಧಾರದ ಕೆಲಸ ತ್ವರಿತಗೊಂಡಿರುವುದರಿಂದ ಹಳೆಯ ಸಮಿತಿ ನಡೆಸಿದ ಭಾನಗಡಿಗಳನ್ನೆಲ್ಲ ಬಹಿರಂಗಗೊಳಿಸಿದೆ. ಮೈತ್ತರು ಮತ್ತು ಬಳಗ, ಸಮಿತಿಗೆ ಸೇರುವುದಕ್ಕೂ ಮೊದಲು ದೇವರ ಹೆಸರಿನಲ್ಲಿ ದುಡ್ಡು ಹೊಡೆದವರು ಇರಲಿಲ್ಲವಂತೆ. ಆದರೆ ಮೈತ್ತರು ಮಾತ್ರ ದೇವರಿಗೇ ನಾಮ ಹಾಕಿಬಿಟ್ಟರು!

ಮೊನ್ನೆ ಮೊನ್ನೆ ನಡೆದ ಸಂಶೋಧನೆಯಂತೆ ಮೈತ್ತರು ಏನು ಮಾಡಿದ್ದರಂತೆ ಗೊತ್ತೇ? ಸೀದಾ ಬಳಗದಲ್ಲೇ ಇದ್ದ ಏಜೆಂಟನ ಮುಖಾಂತರ ತನ್ನ ಹೆಂಡತಿ ಮತ್ತು ಮಗನ ಹೆಸರಿನಲ್ಲಿ ಒಂದೂವರೆ ಲಕ್ಷಕ್ಕೆ ವಿಮೆ ಇಳಿಸಿಬಿಟ್ಟಿದ್ದರಂತೆ. ಸಮಿತಿಯ ಅಧ್ಯಕ್ಷನ ಅನಾರೋಗ್ಯವೋ ಎನೋ ಆಂತೆ. ಉಳಿದ ಸದಸ್ಯರೆಲ್ಲ ನಾಮ್ ಕೇ ವಾಸ್ಥೆಗೆ ಇದ್ದವರಂತೆ. ಹೀಗಾಗಿ ಸಂಗ್ರಹಿಸಿದ ಹಣ ಎಲ್ಲಿಹೋಯ್ತು ಎಂದು ಕೇಳಲಿಕ್ಕೆ ಯಾರೂ ಇರಲಿಲ್ಲ. ಹೀಗಾಗಿ ದೇವರಿಗೆ ಜೀವವಿಮೆ ಇಳಿಸಿದ್ದೇವೆ ಎಂದು ಹೇಳುತ್ತಿದ್ದರಂತೆ ಮೈತ್ತರು.

ನೋಡಿ, ಗುರು ಕಳ್ಳನಾದರೆ ಅವನನ್ನು ಆರಾಧಿಸುವ, ಅನುಮೋದಿಸುವ, ಅನುಕರಿಸುವ ಶಿಷ್ಯರೂ ಸಹ ಕಳ್ಳರೇ ಆಗುತ್ತಾರೆ. ಅದಕ್ಕಾಗಿಯೇ ಕನ್ನಡದಲ್ಲಿ ’ಚೋರ ಗುರುವಿಗೆ ಚಾಂಡಾಲ ಶಿಷ್ಯ’ ಎಂಬ ಗಾದೆ ಹುಟ್ಟಿಕೊಂಡಿದೆ. ಈ ಕತೆಯನ್ನು ಹೇಳುತ್ತಿರುವಾಗಕೇ ರಸವತ್ತಾದ ಇನ್ನೊಂದು ಸುದ್ದಿಯನ್ನು ನೀವೆಲ್ಲ ಕೇಳಿದ್ದೀರಿ. ಹಿಂದೆ ತುಮರಿ ಹೇಳಿದ್ದ ಕಾಮಿಯ ರಂಗಿನಾಟದ ಒಂದು ಕತೆಯ ಅನಾವರಣ ಇಂದು ನಡೆದಿದೆ. ಮುಂದೆ ಇನ್ನಷ್ಟು ಕತೆಗಳು ಬಹಿರಂಗಗೊಳ್ಳಬಹುದು.
ಅಚ್ಚೇ ದಿನ್ ಆಯಾ ಹೈ. ಸಮಾಜಕ್ಕೆ ಉತ್ತಮ ದಿನಗಳು ಹತ್ತಿರವಾಗುತ್ತಿವೆ. ಜೈ ಶ್ರೀರಾಮ್.

ಗೋವಿಂದಾ ಹರಿ ಗೋವಿಂದಾ
ಗೋಕುಲ ನಂದನ ಗೋವಿಂದಾ

ಯಾರಲ್ಲಿ? ಅಡ್ಡಡ್ಡ ಮಲಗಲಿಕ್ಕೆ ವ್ಯವಸ್ಥೆ ಮಾಡಬೇಕೆಂದು ಅಪ್ಪಣೆಯಾಗುತ್ತಿದೆ….

Thumari Ramachandra

source: https://www.facebook.com/groups/1499395003680065/permalink/1657874251165472/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s