ಅಪ್ರಾಪ್ತಳಿದ್ದಾಗಿನಿಂದಲೇ ರಾಘವೇಶ್ವರ ಶ್ರೀಯಿಂದ ನಿರಂತರ ಅತ್ಯಾಚಾರ:ಯುವತಿಯ ದೂರು

ಅಪ್ರಾಪ್ತಳಿದ್ದಾಗಿನಿಂದಲೇ ರಾಘವೇಶ್ವರ ಶ್ರೀಯಿಂದ ನಿರಂತರ ಅತ್ಯಾಚಾರ:ಯುವತಿಯ ದೂರು

Published 30-Aug-2015 03:27 IST

ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧ ಈಗ ಮತ್ತೊಂದು ಅತ್ಯಾಚಾರ ಆರೋಪ ಕೇಳಿಬಂದಿದೆ. ತನ್ನ ಮೇಲೆ ರಾಘವೇಶ್ವರ ಶ್ರೀಗಳು ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು 25 ವರ್ಷದ ಯುವತಿ ಗಿರಿನಗರ ಪೊಲೀಸ್ ಠಾಣೆಗೆ ಇಂದು ದೂರು ನೀಡಿದ್ದಾಳೆ.

ಮಠದಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರಲಾಗಿದೆ. ತಾನು ಅಪ್ರಾಪ್ತ ವಯಸ್ಸಿನವಳಿದ್ದಾಗಲೇ ಅಂದರೆ 2006ರಲ್ಲಿ ತನ್ನ ಮೇಲೆ ಶ್ರೀಗಳು ಅತ್ಯಾಚಾರ ನಡೆಸಿದ್ದಾರೆ. ಆ ನಂತರವೂ ಹಲವು ಬಾರಿ ನನ್ನ ಮೇಲೆ ಅತ್ಯಾಚಾರ ನಡೆಸಿ ಲೈಂಗಿಕ ಕಿರುಕುಳ ನೀಡಲಾಗಿದೆ.

ಆಗಾಗ ಮಠಕ್ಕೆ ಕರೆಸಿಕೊಂಡು ಶ್ರೀಗಳು ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ತಾನು ಮದುವೆಯಾದ ನಂತರವೂ ಅಂದರೆ 2012ರಲ್ಲಿಯೂ ನನ್ನನ್ನು ಮಠಕ್ಕೆ ಕರೆಸಿಕೊಂಡು ಅತ್ಯಾಚಾರ ನಡೆಸಲಾಗಿತ್ತು ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.

ಶನಿವಾರ ಸಂಜೆ ಜನವಾದಿ ಮಹಿಳಾ ಸಂಘಟನೆಯೊಂದಿಗೆ ಗಿರಿನಗರ ಠಾಣೆಗೆ ಬಂದ ಯುವತಿ ಶ್ರೀಗಳ ವಿರುದ್ಧ ದೂರು ನೀಡಿದ್ದಾಳೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಶ್ರೀಗಳು ಮತ್ತು ಮಠದ ಕೆಲವರು ನನಗೆ ಜೀವಬೆದರಿಕೆ ಹಾಕಿದ್ದರು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಕಳೆದ ವರ್ಷ ಇದೇ ಸಮಯದಲ್ಲಿ ಪ್ರೇಮಲತಾ ದಿವಾಕರ್ ರಾಘವೇಶ್ವರ ಶ್ರೀಗಳ ವಿರುದ್ಧ ದೂರು ದಾಖಲಾಗಿತ್ತು. ಆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಸದ್ಯ ರಾಘವೇಶ್ವರ ಶ್ರೀಗಳು ಚಾತರ್ಮಾಸದ ಆಚರಣೆಯಲ್ಲಿದ್ದಾರೆ. ಕಳೆದ ವರ್ಷವೂ ಶ್ರೀಗಳು ಚಾತುರ್ಮಾಸದ ಆಚರಣೆಯಲ್ಲಿದ್ದಾಗಲೇ ಅವರ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿತ್ತು. ಈ ಬಾರಿಯೂ ಕೂಡ ಮತ್ತೆ ಅದೇ ರೀತಿ ಚಾತುರ್ಮಾಸ ಸಂದರ್ಭದಲ್ಲಿ ದೂರು ದಾಖಲಾಗಿದೆ.

ಯುವತಿ ನೀಡಿರುವ ದೂರನ್ನು ಸ್ವೀಕರಿಸಿರುವ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸಿಗುವ ಮಾಹಿತಿ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

source: http://kannada.eenaduindia.com/News/National/2015/08/30032820/Bengaluru-A-girl-lodged-rape-case-against-Raghveshwar.vpf

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s