ಹಾಗಲಕಾಯಿಗೆ ಬೇವಿನಕಾಯಿಯ ಸಾಕ್ಷಿ

ಹಾಗಲಕಾಯಿಗೆ ಬೇವಿನಕಾಯಿಯ ಸಾಕ್ಷಿ

ಸಮಸ್ತ ಜನತೆಗೆ ೬೯ನೇ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು. ನಮ್ಮ ನೆಚ್ಚಿನ ಮೆಚ್ಚಿನ ಪ್ರಧಾನಿ ನರೇಂದ್ರಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಏನೆಲ್ಲ ಮಾಡಿದ್ದಾರೆ ಎಂಬುದನ್ನು ಇಂದಿನ ಭಾಷಣದಲ್ಲಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮಾಡಬೇಕಾದ ಕೆಲಸ-ಕಾರ್ಯಗಳ ಬಗ್ಗೂ ಹೇಳಿದ್ದಾರೆ. ಅವರ ಒಂದು ಮಾತು ಬಹಳ ನೆನಪಾಗುತ್ತಿದೆ-ಭ್ರಷ್ಟರೇ ಭ್ರಷ್ಟಾಚರ ನಿರ್ಮೂಲನೆಗೆ ಸಲಹೆ ನೀಡುತ್ತಿರುತ್ತಾರೆ. ಅಷ್ಟೇ ಅಲ್ಲ, ಅಧರ್ಮಿಗಳೇ ಧರ್ಮಪಾಲನೆಗೆ ಸಲಹೆ ನೀಡುತ್ತಿರುತ್ತಾರೆ ಎಂಬುದನ್ನು ತುಮರಿ ಅದಕ್ಕೆ ಸೇರಿಸಿದ್ದಾನೆ.

ನಿಷ್ಠಾವಂತನ ಮಾತುಗಳು ಕಲ್ಲು ಹೊಡೆದಂತಿರುತ್ತವೆ. ಅವು ಸತ್ಯವನ್ನಷ್ಟೇ ಹೇಳುತ್ತವೆ, ಸತ್ವಯುತವಾಗಿರುತ್ತವೆ;ಅದಕ್ಕೆ ಮೋದಿಯೇ ಸಾಕ್ಷಿ. ಭ್ರಷ್ಟರ ಮಾತುಗಳು ಸೋಗಿನದಾಗಿರುತ್ತವೆ; ಸುಮ್ಮನೇ ಹೇಳಬೇಕೆಂಬ ಕಾರಣಕ್ಕೆ ಹೇಳಲ್ಪಟ್ಟಿರುತ್ತವೆ. ವಿಪರ್ಯಾಸವೆಂದರೆ ಇಂದು ಭ್ರಷ್ಟರೂ ಅಧರ್ಮಿಗಳೊ ಸಹ ತಾವೇ ಧರ್ಮಬೀರುಗಳಂತೆ, ಧರ್ಮವೇ ಮೂರ್ತಿವೆತ್ತು ಕುಳಿತಿದೆ ಎಂಬಂತೆ ಪೋಸು ಕೊಟ್ಟು ಮಾಡನಾಡುತ್ತಿದ್ದಾರೆ;ಇದಕ್ಕೆ ನಮ್ಮ ಕಳ್ಳ ಸನ್ಯಾಸಿಯೇ ಸಾಕ್ಷಿ.

’ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು’ ಎಂದು ಕನ್ನಡದ ಕವಿಯೋರ್ವರು ಹೇಳಿದ್ದಾರೆ. ಹಂಗಿನರಮನೆಯಲ್ಲಿರುವ ಕನ್ನಡದ ಇತ್ತೀಚಿನ ’ಆಸ್ಥಾನ ಕವಿ’ಯೊಬ್ಬರು ಹಂಗಿಗೆ ಕಟ್ಟುಬಿದ್ದು ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ. ಅವರು ಹೇಳ್ತಾರೆ-ಆ ಹೆಣ್ಣಿನ ಕಣ್ಣುಗಳಲ್ಲಿ ಕಾಮದ ಛಾಯೆ ಇರಲಿಲ್ಲ, ಆದರೆ ಯಾರದೋ ಒತ್ತಡ ಮತ್ತು ಒತ್ತಾಯಕ್ಕೆ ಆಕೆ ದೂರು ನೀಡಿದ್ದಾಳೆ ಅಂತ. ಯಾರದೋ ಒತ್ತಡ-ಒತ್ತಾಯಗಳಿಗೆ ದೂರು ನೀಡಲು ಅವಳು ಆಸ್ಥಾನದ ಕವಿಯಲ್ಲವಲ್ಲ?

ಅಂದಹಾಗೆ ಆಸ್ಥಾನದ ಕವಿಗಳು ಮತ್ತು ಕಳ್ಳ ಸನ್ಯಾಸಿ ಇಬ್ಬರೂ ಮುಳುಗಡೆ ಪ್ರದೇಶದವರೇ. ಅವರಲ್ಲಿ ಪರಮಾಪ್ತ ಬಾಂಧವ್ಯವಿದೆ. ಅವರಿಗೆ ಇವರನ್ನು ಬಿಟ್ಟರಾಗದು, ಇವರಿಗೆ ಅವರನ್ನು ಬಿಟ್ಟರೆ ತೊಂದರೆಯಾಗುವುದು. ಹೀಗಾಗಿ ಅದು ಸಮಾನ ಮನಸ್ಥಿತಿ. ಕಳೆದ ವರ್ಷದಲ್ಲಿ ತಿಂಗಳ ಹಿಂದೆ ಮಹಾನಗರದ ಮಠದ ಕೋಣೆಯಲ್ಲಿ ನಡೆದ ಮೀಟಿಂಗ್ ನಲ್ಲಿ “ಮರ್ಯಾದೆ ಉಳಿಸಿ, ನಾನು ಸೀಟಿಳಿದು ಹೋಗುತ್ತೇನೆ” ಎಂದು ಅಳುತ್ತ ಪ್ರಮುಖರ ಕಾಲಿಗೆ ಬಿದ್ದ ಕಳ್ಳ ಸನ್ಯಾಸಿ, ಕುರಿವಾಡೆಗೆ ಹೋಗಿ ಯೂ ಟರ್ನ್ ಹೊಡೆಯುತ್ತಾನೆ. ತನ್ನ ಮೇಲೆ ದೂರು ನೀಡಬಹುದಾದವರ ವಿರುದ್ಧ ಗುಪ್ತವಾಗಿ ಆಸ್ಥಾನ ಕವಿಗಳ ಮೂಲಕ ದೂರು ದಾಖಲಿಸಿ, ಬಂಧಿಸುವುದರಲ್ಲಿ ಯಶಸ್ವಿಯಾಗುತ್ತಾನೆ. ಕುಳಿತಲ್ಲೇ ಹಲವು ಕುಟಿಲ ಕಾರಸ್ಥಾನ ಮಾಡುವ ಢೋಂಗಿ ಸ್ವಾಮಿ ವೇದಿಕೆಯಲ್ಲಿ ನಮ್ಮ ಪ್ರಯತ್ನವೇ ಇಲ್ಲದೇ ಪವಾಡಗಳು ನಡೆದು ಮಠ ಉಳಿಯಿತು ಅಂತಾನೆ.

ಅವನೇ ಮಠವೇ? ಅಥವಾ ಮಠದಲ್ಲಿ ಅವನೊಬ್ಬ ಅಧಿಕಾರಿಯೇ ಜನ ನಿರ್ಧರಿಸಬೇಕು. ಮಠದ ಮರ್ಯಾದೆ ಹೋಗುತ್ತದೆಂದು ಕಾಮುಕನನ್ನು ಮಠದ ಧಾರ್ಮಿಕ ಮುಖಂಡನ ಹುದ್ದೆಯಲ್ಲಿ ಮುಂದುವರಿಸುವುದು ಯಾವ ಸೀಮೆಯ ನ್ಯಾಯ? ಹಳ್ಳಿಗಳಲ್ಲಿ ಬೆಕ್ಕು, ನಾಯಿ ಮೊದಲಾದ ಪ್ರಾಣಿಗಳು ಹೇತು, ನಂತರ ಹಿಂದಿನ ಕಾಲುಗಳಿಂದ ನೆಲದ ಮಣ್ಣನ್ನು ತೂರಿ ಅದನ್ನು ಮುಚ್ಚುತ್ತವೆ; ಅದು ಅವುಗಳ ಸಹಜ ಧರ್ಮ. ಅದು ಹೊಲಸು ಎಂಬುದು ಅವುಗಳಿಗಾದರೂ ಗೊತ್ತು. ಎಷ್ಟೇ ಮುಚ್ಚಿದರೂ, ಆ ಹಾದಿಯಾಗಿ ಹಾದುಹೋಗುವವರಿಗೆ ವಾಸನೆಯಂತೂ ಬಂದೇ ಬರುತ್ತದೆ. ಇಂದು ಹಾವಾಡಿಗನ ಮಠದ ಕತೆಯೂ ಅಷ್ಟೇ ಆಗಿದೆ. ಹಾವಾಡಿಗನ ’ಕೃಷ್ಣ ಲೀಲೆ’ಗಳು ಲೋಕಕ್ಕೆ ತಿಳಿದುಬಿಟ್ಟಿವೆ; ಇನ್ನು ಅವನೆಷ್ಟೇ ಭೋಂಗು ಬಿಟ್ಟರೂ ಹಳದೀ ಬಳಗವನ್ನುಳಿದು ಬೇರೆ ಯಾರೂ ನಂಬೋದಿಲ್ಲ.

ಅಲ್ರೀ, ಈ ಆಸಾಮಿ ಭಕ್ತರ ಹಣದಲ್ಲಿ ಆಡಿದ ಆಟ ಒಂದೆರಡಲ್ಲ. ಕೆಲವು ಬಸ್ಸು, ಆಸ್ಪತ್ರೆ ಬ್ಯುಸಿನೆಸ್ಸುಗಳಲ್ಲಿ ಬೇನಾಮಿ ಪಾಲುದಾರನಾಗಿದ್ದಾನೆ. ಅದಕ್ಕೆ ಹಣವೆಲ್ಲಿಂದ ಬಂತು. ಅವುಗಳ ಮಾಲೀಕರು ಹಣದ ಕೊರತೆಯಿಂದ ಬಳಲುತ್ತಿದ್ದರು, ಹಣ ಇದ್ದರೆ ವ್ಯವಹಾರ ಜೋರಾಗಿ ನಡೆಸಬಹುದಿತ್ತು; ಆದರೆ ಬ್ಯಾಂಕುಗಳು ಅವರಿಗೆ ಹೆಚ್ಚಿಗೆ ಸಾಲ ನೀಡುತ್ತಿರಲಿಲ್ಲ. ಅವರು ಕಂಡುಕೊಂಡ ದಾರಿಯೆಂದರೆ ಈ ಕಳ್ಳನನ್ನು ಸಂಪರ್ಕಿಸಿ ಸಹಾಯ ಪಡೆಯೋದು. ಅವರಿಗೆಲ್ಲ ಇಂತಹ ಸುವರ್ಣ ಮಂತ್ರಾಕ್ಷತೆಗಳು ಸಿಕ್ಕಿದ್ದರಿಂದ, ಅವರ ಮನೆಗಳಲ್ಲಿ ಯಾವುದೇ ಕಾರ್ಯಕ್ರಮಗಳಾದರೂ ಅದಕ್ಕೆ ಕಳ್ಳನನ್ನು ಕರೆಯುತ್ತಿದ್ದರು. ಇವನೇ ಉದ್ಘಾಟಕ. ಅಂತವರ ಮನೆಗಳಲ್ಲಿ ವರ್ಷಕ್ಕೊಮ್ಮೆ ಕಳ್ಳನ ಭಿಕ್ಷ ಬೇರೆ. ಇದೆಲ್ಲ ಡೊಂಬರಾಟದ ಹಿಂದೆ ಇರುವ ವಾಣಿಜ್ಯ ವ್ಯವಹಾರದ ಸಂಬಂಧ ಯಾರಿಗೂ ಗೊತ್ತಿಲ್ಲ ಎಂದುಕೊಂಡಿರೇನು ಆಸ್ಥಾನ ಕವಿಗಳೇ? ಅಂದಹಾಗೆ ತಮಗೆಷ್ಟು ಸಂದಾಯವಾಗಿದೆ ಎಂದು ಕೇಳಬಹುದೇ?

ಕಾಮಿಯ ವಿರುದ್ಧ ಕೆಲವೇ ಜನ, ಬೆರಳೆಣಿಕೆಯಷ್ಟೇ ಜನ ಎನ್ನುತ್ತಿದ್ದ ಹಳದೀ ತಾಲಿಬಾನಿಗಳು ಒಂದನ್ನಂತೂ ಅರ್ಥಮಾಡಿಕೊಳ್ಳಬೇಕು-ನವಯುಗದ ಜನ ಕಿವಿಯಮೇಲೆ ಬಹಳ ಕಾಲ ಹೂವಿಟ್ಟುಕೊಳ್ಳಲಾರರು. ಅರ್ಧ ದಶಕದ ಹಿಂದೆ ಮಠದ ಆರ್ಥಿಕತೆ ಕಷ್ಟವಿತ್ತು. ಅದಕ್ಕೆ ಕಾರಣಗಳು ಹೀಗಿವೆ-

೧. ಸ್ವಲ್ಪ ಅಹಂಕಾರ, ಕೋಪ ಇವೆಲ್ಲ ಅಂದಿನ ಸ್ವಾಮಿಗಳನ್ನೂ ಬಿಟ್ಟಿರಲಿಲ್ಲ. ದೂರ್ವಾಸನಂತೆ ನೋಡುವ ಅವರಿದ್ದೆಡೆಗೆ ಹಲವು ಜನ ಹೋಗುವುದಕ್ಕೇ ಭಯಪಡುತ್ತಿದ್ದರು.

೨. ದೂರಸಂಪರ್ಕ, ಸಾಗಾಟ ಮತ್ತು ಸಂವಹನಕ್ಕೆ ಇಂದಿನಷ್ಟು ಆಧುನಿಕ ಪರಿಕರಗಳಿರಲಿಲ್ಲ. ಹೀಗಾಗಿ ಭಕ್ತರ ಓಡಾಟ ಮತ್ತು ಸಂವಹನ ವಿರಳವಾಗಿ ನಡೆಯುತ್ತಿತ್ತು.

೩. ನಮ್ಮ ಜನ ಆರ್ಥಿಕವಾಗಿ ಜಮೀನುಗಳ ಆದಾಯವನ್ನೇ ಹೆಚ್ಚಿಗೆ ಅವಲಂಬಿಸಿದ್ದರು. ಮಠಕ್ಕೆ ಕೊಡುವ ಕಾಣಿಕೆಯನ್ನೇ ಸರಿಯಾಗಿ ಕೊಡುವುದಕ್ಕೆ ಆಗದ ಪರಿಸ್ಥಿತಿ ಇತ್ತು. ಆಗಲೂ ಮಠ ಕಟ್ಟಬೇಕೆಂದು ಪಾದಪೂಜೆಗೆ ಅಂದಿನ ಕಾಲಮಾನಕ್ಕೆ ಐದುನೂರಾ ಒಂದು ಎಂದು ಫಿಕ್ಸ್ ಮಾಡಿದ್ದರಿಂದ ಜನ ಅವರನ್ನು ’ಐನೂರಾ ಒಂದ್ರೂಪಾಯ್ ಸ್ವಾಮಿ’ ಎಂದೂ ಕರೆದಿದ್ದಿದೆ. ಇಂದು ಆದಾಯಕ್ಕೆ ಹಲವು ಮೂಲಗಳಿವೆ. ಜಮೀನ್ದಾರರ ಮಕ್ಕಳು ಮಹಾನಗರಗಳಲ್ಲಿ ಸಾಫ್ಟ್ ವೇರ್ ಉದ್ಯೋಗ ಹಿಡಿದಿದ್ದಾರೆ. ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡವರಿದ್ದಾರೆ. ಆರ್ಥಿಕ ಸ್ಥಿತಿಗತಿ ಬದಲಾಗಿದೆ.

ಇಂದು ಈ ಕಳ್ಳ ಫೇಸ್ ಬುಕ್, ವಾಟ್ಸಾಪು ಮತ್ತು ಎಲ್ಲಿಲ್ಲ ಹೇಳಿ? ಸಿಗುವ ಸಕಲ ಸೌಲಭ್ಯಗಳನ್ನು ಚೂರೂ ಬಿಡದಂತೆ ಬಳಸಿಕೊಂಡ ಇವ ಭಕ್ತರಿಗೆ ಹೇಗೆ ಗಾಳ ಹಾಕಬೇಕೆಂಬುದನ್ನು ಯೋಚಿಸಿ ಹಲವು ಯೋಜನೆಗಳಿಗೆ ಇಳಿದ. ಭಕ್ತರನ್ನು ಕಂಡಾಗ ’ಮಂದಹಾಸ’ ಬೀರಿದ; ಯಾಕೆಂದರೆ ದೂರ್ವಾಸನಾದರೆ ಈ ಕಾಲಕ್ಕೆ ಯಾರೂ ಬರುವುದಿಲ್ಲವೆಂದು ಅರ್ಥವಾಗಿತ್ತು. ಜನ ಇವನ ಮಾತಿನ ಮೋಡಿಗೆ, ’ಮಂದಹಾಸ’ಕ್ಕೆ ಮಳ್ಳುಬಿದ್ದರು. ಮಳ್ಳುಬಿದ್ದ ಜನರ ಮೇಲೆ ನಿಧಾನವಾಗಿ ವಶೀಕರಣ ಮತ್ತು ಮಾಟಿಮೋಡಿ ಪ್ರಯೋಗಕ್ಕೂ ಇಳಿದುಬಿಟ್ಟ.

ಸಮ್ಮೋಹಿನೀ ವಿದ್ಯೆಯೆಂಬುದು ಹಿಂದಿನ ಅರುವತ್ನಾಲ್ಕು ವಿದ್ಯೆಗಳಲ್ಲಿ ಒಂದು. ಇತ್ತೀಚೆಗೆ ಚೀನೀ ಬಾಲಕಿಯೊಬ್ಬಳು ಸಮ್ಮೋಹಿನೀ ವಿದ್ಯೆ ಪ್ರಯೋಗಿಸಿ ಪ್ರಾಣಿ, ಪಕ್ಷಿಗಳನ್ನೆಲ್ಲ ಮಲಗಿಸುತ್ತಿರುವ ವೀಡಿಯೋ ಕ್ಲಿಪ್ ಒಂದು ಅಂತರ್ಜಾಲದಲ್ಲಿ ವೈರಲ್ ಆಗಿ ಎಲ್ಲೆಡೆ ಪ್ರಚಾರಗಳಿಸಿತ್ತು. ಅದೇ ವಿಧವಾಗಿ ಈ ಕಳ್ಳನೂ ಸಹ, ಸಭೆಯಲ್ಲಿರುವ ಭಕ್ತರನ್ನು ಬಕರಾ ಮಾಡುವ ವಿದ್ಯೆಯನ್ನು ಕಲಿತುಕೊಂಡಿದ್ದ. ಅವನು ಹೇಳಿದ್ದಕ್ಕೆಲ್ಲಾ ಜೈ, ಯಾವುದೇ ಯೋಜನೆಯಾದರೂ ಸೈ. ಎತ್ತುವಳಿಗೆ ನಿಲುಗಡೆ ಇರಲೇ ಇಲ್ಲ.

ನನ್ನನ್ನೂ ಸೇರಿದಂತೆ ನಮ್ಮ ಸಾಫ್ಟ್ ವೇರ್ ಮಂದಿ ಹಗಲಿನ ಸೂರ್ಯನನ್ನು ನೋಡುತ್ತಿದ್ದುದೇ ಅಪರೂಪ. ಮಠಮಾನ್ಯ, ದೇವಸ್ಥಾನಗಳಿಗೆ ಚಿಕ್ಕಂದಿನಲ್ಲಿ ಅಪ್ಪ-ಅಮ್ಮನ ಒತ್ತಾಯಕ್ಕೆ ಹೋಗಿದ್ದು ಬಿಟ್ಟರೆ ಮತ್ತೆಂದೂ ಹೋಗಿರಲಿಲ್ಲ. ಯಾರೋ ಒಂದಿಬ್ಬರು ಮಠಕ್ಕೆ ಬಂದವರು ಮರುಳಾಗಿ ಇನ್ನಷ್ಟು ಮಂದಿಯನ್ನು ಕರೆತಂದರು. ಸಂಘಟನೆಗಳೆಲ್ಲ ಬೆಳೆಯುವುದು ಹಾಗೇ ತಾನೇ? ಇಲ್ಲೂ ಹಾಗೇ ನಡೆಯಿತು. ಬಂದವರೆಲ್ಲ ಮತ್ತೊಂದಷ್ಟು ಜನರನ್ನು ಕರೆದುಕೊಂಡು ಬರುವುದು ನಡೆಯಿತು. ಮಠಕ್ಕೆ ಹೋಗದಿದ್ದರೆ ಸಾಮಾಜಿಕ ಬಹಿಷ್ಕಾರಕ್ಕೆ ಮತ್ತು ಉಪೇಕ್ಷೆಗೆ ಒಳಗಾಗುತ್ತೇವೆ ಎಂಬ ಭಯದಿಂದಲೇ ಕೆಲವರು ಹೋಗತೊಡಗಿದರು.

ಕಳ್ಳ ಸನ್ಯಾಸಿ ನಾನಾ ನಮೂನೆಯ ಸಮಿತಿಗಳನ್ನು ರಚಿಸಿ ಹುದ್ದೆಗಳನ್ನು ನೀಡತೊಡಗಿದ. ಹುದ್ದೆಗಳನ್ನು ಅಲಂಕರಿಸಿದ ಬುದ್ದುಗಳು ಅವನು ಹೇಳಿದ್ದನ್ನೆಲ್ಲ ಮಾಡತೊಡಗಿದರು. ಐದು ಸಾವಿರ ತರಬೇಕೆಂದರೆ ಐವತ್ತು ಸಾವಿರ ಕಲೆಹಾಕುತ್ತಿದ್ದರು! ಮಠಕ್ಕೆ ಹಣದ ಹೊಳೆಯೇ ಹರಿದುಬಂತು. ಹೊರಡುವ ಒಂದೊಂದು ಕಲರ್ ಪಾಂಪ್ಲೆಟ್ ನೋಡಬೇಕಿತ್ತು; ಮಲ್ಟಿ ನ್ಯಾಷನಲ್ ಕಂಪನಿಯ ಪ್ರಾಡಕ್ಟ್ ಲಿಟರೇಚರ್ ರೀತಿಯಲ್ಲಿರುತ್ತಿದ್ದ ಪಾಂಪ್ಲೆಟ್ ಗಳನ್ನು ಕಂಡು ಇನ್ನಷ್ಟು ಜನ ಮಳ್ಳುಬಿದ್ದರು.

ವಾಸ್ತವವಾಗಿ ಅದೆಲ್ಲ ಬೇಕಾಗಿತ್ತೇ? ಅದಕ್ಕೆ ಹಾಕಿದ ಹಣವನ್ನು ಉತ್ತಮ ಕೆಲಸಕ್ಕೆ ಬಳಸಿಕೊಳ್ಳಬಹುದಿತ್ತಲ್ಲವೇ? ಎಂದು ನೀವು ಕೇಳಬಹುದು, ಇಂದಿನ ದಿನಮಾನದಲ್ಲಿ ಅಂತದ್ದನ್ನು ಕಂಡೇ ಜನ ಮಳ್ಳುಬೀಳುತ್ತಾರೆ. ಸುಮ್ಮನೇ ಪೂಜೆ, ಪುನಸ್ಕಾರ, ಜಪತಪ ಅಂದರೆ ಯಾರೂ ಬರೋದಿಲ್ಲ; ಬಂದರೆ ಆಧ್ಯಾತ್ಮದಲ್ಲಿ ಆಸಕ್ತಿ ಇರುವವರು ಮಾತ್ರ ಬರುತ್ತಾರೆ. ಇದನ್ನರಿತ ’ವಿದ್ವಾನ್’ ಕುಲಪತಿ ಬಾವಯ್ಯ ಕಳ್ಳನೊಡನೆ ಮೀಟಿಂಗ್ ನಡೆಸಿ ತರಹೇವಾರಿ ಪಾಂಪ್ಲೆಟ್ ಗಳನ್ನು ಹೊರಡಿಸಿದ.

ಇದೇ ಬಾವಯ್ಯ ಕುಲಪತಿಯಾಗಿ ನಡೆಸಿದ ಹಾವಾಡಿಗನ ಗುರುಕುಲ ನೆಗೆದು ಬಿದ್ದು ಹೋಯಿತು; ಅಲ್ಲಿ ಕಲಿಯಲು ಸೇರಿಕೊಂಡ ಹೆಣ್ಣುಮಕ್ಕಳಲ್ಲಿ ಕನಿಷ್ಠ ೨೫ ಮಂದಿಯ ಶೀಲ ಹರಣ ಮಾಡಿದ ಬಾವಯ್ಯನಿಗೆ ಜನ ಕಾಯ್ದೆಬದ್ಧವಾಗಿ ಸನ್ಮಾನ ಮಾಡಲಿಕ್ಕೆ ಯಾವುದೇ ಆಧಾರಗಳು ಸಿಗದಂತೆ ಕಳ್ಳ ಸನ್ಯಾಸಿ ಬಾವಯ್ಯ ವ್ಯವಸ್ಥೆ ಮಾಡಿದ. ಹರೆಯಕ್ಕೆ ಆಗಷ್ಟೆ ಕಾಲಿಡುತ್ತಿದ್ದ ಹುಡುಗಿಯರು ಕಾಮಕೇಳಿಗೆ ಒಪ್ಪದಿದ್ದರೆ ಕೋಣೆಯಲ್ಲಿ ಹಾಕಿಕೊಂಡು ಗೋಡೆಗೆ ಅವರ ತಲೆಯನ್ನು ಚಚ್ಚುತ್ತಿದ್ದ ಎಂದು ನೋಡಿದ ಅಲ್ಲಿಯೇ ಇದ್ದ ಜನರೇ ಹೇಳಿದ್ದಾರೆ. ’ಮಹಾಸಂಸ್ಥಾನದ ಬಾವಯ್ಯನ ನಡಾವಳಿ’ಯನ್ನು ಪ್ರಶ್ನಿಸಲು ಅವರು ಅನರ್ಹರಾಗಿದ್ದರು.

ಸಾಗರ ಪ್ರಾಂತದಲ್ಲಿ ಯಾರನ್ನೇ ಕೇಳಿ, ಬಹಿರಂಗವಾಗಿ ತಮ್ಮಮೇಲೆ ದಾಳಿ ನಡೆಸಬಹುದು ಎಂಬ ಕಾರಣಕ್ಕೆ ಮಾತನಾಡದ ಜನ ಗೋಪ್ಯವಾಗಿ ಹೇಳ್ತಾರೆ-ನಮ್ಮ ಸಮಾಜದಲ್ಲಿ ಅತಿ ಬಡವರಾಗಿದ್ದು ಸಾಗರದಲ್ಲಿ ಪಾನೀಪೂರಿ ಮಾರಿ ಜೀವನ ನಡೆಸುತ್ತಿದ್ದ ಕುಟುಂಬದ ಮಗಳನ್ನು ಕುಲಪತಿ ಬಾವಯ್ಯ ಬಸಿರು ಮಾಡಿದ ಕತೆಯನ್ನು. ನಂತರ ಬಾವಯ್ಯ-ಕಳ್ಳಯ್ಯ ಸೇರಿಕೊಂಡು ಆ ಕುಟುಂಬವನ್ನೇ ಚಿತ್ರಾನ್ನ ಮಾಡಿದರು. ಇಂಥವರಿಂದ ಧರ್ಮೋಪದೇಶಗಳನ್ನು ಕೇಳುವುದು ದೌರ್ಭಾಗ್ಯವಲ್ಲದೇ ಮತ್ತಿನ್ನೇನು?

ಮಲ್ಲಿಕೆಯ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲಿಕ್ಕೆ. “ಅವಳು ಎಲ್ಲೋ ಹೋಗುವಾಗ ಯಾರದೋ ಜೊತೆ ಅನಿರೀಕ್ಷಿತವಾಗಿ ಬಂದಿದ್ದಳು” ಎಂದು ಹೇಳಿಕೆ ಕೊಟ್ಟಿದ್ದು, “ಪವಿತ್ರಾತ್ಮ’ ಎಂಬ ಹೇಳಿಕೆ ನೀಡಿದ್ದು ಎಲ್ಲವೂ ನಡೆದುಹೋಯಿತು. ಅವಳು ನಡೆಯುವ ಹಾದಿಯಲ್ಲಿ ಹಾಸಿದ ಎಂಟುನೂರು ತಾವರೆ ಹೂವುಗಳನ್ನು ಗೊತ್ತಿಲ್ಲದೇ ಅಷ್ಟು ಬೇಗ ತಂದಿದ್ದರೇ? ಯಾರು ಕುಲಪತಿ ಬಾವಯ್ಯ ತಂದನೋ ಅಥವಾ ಕಳ್ಳ ಬಾವಯ್ಯನೇ ಸ್ವತಃ ಕಾವಿಯ ಮಡಿಯಲ್ಲಿ ಹೋಗಿ ತಂದನೋ? ಆಗಲೇ “ಮಠದವ ಅಡ್ಡದಾರಿ ಹಿಡಿದಿದ್ದಾನೆ” ಎಂದು ಎಚ್ಚರಿಸಿದ ಪುಣ್ಯಾತ್ಮರಿದ್ದಾರೆ; ಆದರೆ ಅವರನ್ನೆಲ್ಲ ತಲೆಹಿಡುಕರು ಎಂಬಂತೆ ಬಿಂಬಿಸಲಾಗಿತ್ತು. ಈಗ ’ತಲೆಹಿಡುಕರೆಂ’ದು ಗುರುತಿಸಲ್ಪಟ್ಟ ಸಾವಿರರು ಜನ ಮರಳಿ ಒಂದೆಡೆ ಸೇರಿದ್ದಾರೆ; ಯಾಕೆಂದರೆ ಮಠ ಬೇರೆ, ಸನ್ಯಾಸಿ ಬೇರೆ, ಮುಂದೆ ಇದೇ ಅನ್ಯಾಯ, ಅಧರ್ಮ ನಡೆಯಕೂಡದು ಎಂಬುದು ಅವರ ಆಶಯ. ಅವರಾರಿಗೂ ಮಠದ ನಯಾಪೈಸೆಯೂ ಬೇಕಿಲ್ಲ. ಅವರೇ ತಮ್ಮ ಕೈಲಾದಷ್ಟು ದೇಣಿಗೆಗಳನ್ನು ಕೊಟ್ಟಿದ್ದಾರೆ.

ಹೀಗಾಗಿ, ’ಆಸ್ಥಾನ ಕವಿ’ಗಳೇ, ಹಂಗಿನಲ್ಲಿರುವ ತಮಗಂತೂ ಅನಿವಾರ್ಯ, ಆದರೆ ನಿಮ್ಮ ನಿರ್ಧಾರವನ್ನು ಸಮಾಜದ ನಿರ್ಧಾರವೆಂದು ಹೇಗೆ ಮತ್ತು ಯಾಕೆ ಹೇಳುತ್ತೀರಿ? ಎಲ್ಲಿಯವರೆಗೆ ಸಭೆಗೆ ಜನರನ್ನು ಸೇರಿಸುತ್ತೀರಿ? ಎಲ್ಲಿಯವರೆಗೆ ನಿಮ್ಮ ಕಳ್ಳ ಗುರುವಿನ ಕತೆ ನಡೆಯುತ್ತದೆ? ಆತ್ಮವಂಚನೆ ಮಹಾಪಾಪ ಎಂಬುದು ಗೊತ್ತಿದ್ದೂ ಮಾಡಿಕೊಳ್ಳುತ್ತಿದ್ದೀರಿ ಪಾಪ, ಹಂಗು ಎಂಬುದೇ ಹಾಗೆ, ಅದು ದಾಸ್ಯವನ್ನು ಮಾಡಿಸುತ್ತದೆ. ಇಂದು ಹಂಗಿನಲ್ಲಿರುವ ಜನರಷ್ಟೇ ಕಾಮಿಯ ಸುತ್ತ ಜೈಕಾರ ಹಾಕುತ್ತಿದ್ದಾರೆ.

ಒಂದು ಕ್ಷಣ ಯೋಚಿಸಬೇಕು. ಲೌಕಿಕವಾಗಿ ಎರಡು ಪ್ರಮುಖ ಸಂವಿಧಾನಗಳನ್ನು ನಾವು ಆತುಕೊಳ್ಳಬೇಕಾಗುತ್ತದೆ. ಒಂದು ಸನಾತನ ಧಾರ್ಮಿಕ ಸಂವಿಧಾನ ಮತ್ತು ಎರಡನೆಯದು ಈ ದೇಶದ ಸಂವಿಧಾನ. ಸನಾತನ ಧಾರ್ಮಿಕ ಸಂವಿಧಾನ ಬಹಳ ಉದಾರ ನೀತಿಗಳನ್ನು ಹೊಂದಿರುವುದರಿಂದಲೇ ಹಲವರು ಆಟವಾಡಲು ಸ್ವಾತಂತ್ರ್ಯ ಹೊಂದಿದ್ದಾರೆ. ಉಳಿದ ಮತಗಳಲ್ಲಿ ನೋಡಿ, ಹೆಚ್ಚುಕಡಿಮೆ ಏನಾದರೂ ನಡೆದರೆ ಸಂಬಂಧಪಟ್ಟವರನ್ನು ಘೋರ ಶಿಕ್ಷೆಗೆ ಒಳಪಡಿಸುತ್ತಾರೆ. ಇತ್ತೀಚೆಗೆ ಅಂತರ್ಜಾಲದಲ್ಲಿ ಇಪ್ಪತ್ತೊಂದರ ಹರೆಯದ ವ್ಯಕ್ತಿಯ ಕಣ್ಣು ಕೀಳಲು ಫರ್ಮಾನು ಹೊರಡಿಸಿದ ಸುದ್ದಿ ಬಂದಿತ್ತು. ಕೆಲವೊಮ್ಮೆ ತಲೆ, ಕಾಲು, ಕೈ ಕತ್ತರಿಸುವಷ್ಟು ಅಮಾನುಷ ಹಿಂಸಾತ್ಮಕ ತೀರ್ಪುಗಳೂ ಕಾಣುತ್ತವೆ. ಆದರೆ ವೈದಿಕ ಧರ್ಮದಲ್ಲಿ ಹಾಗಿಲ್ಲ; ಹಾಗಿಲ್ಲ ಎನ್ನುವುದರಿಂದಲೇ ದೇವಸ್ಥಾನಗಳಿಗೆ ಹೋದರೂ ನಡೆಯುತ್ತದೆ ಹೋಗದಿದ್ದರೂ ನಡೆಯುತ್ತದೆ. ಬಹಳಷ್ಟು ಜನರಿಗೆ ನಮ್ಮ ಧರ್ಮಗ್ರಂಥಗಳು ಯಾವುದೆಂದು ಗೊತ್ತಿಲ್ಲ.

ಅದಿರಲಿ, ಸೋಗಿನಲ್ಲಿ ಬೂಟಾಟಿಕೆ ನಡೆಸುವವರನ್ನು ಹಿಡಿಯಲು ಹಲವು ಉಪಾಯ ಮಾಡಬೇಕಾಗುತ್ತದೆ. ಮೊನ್ನೆಯಷ್ಟೇ ಅಂತರ್ಜಾಲದಲ್ಲಿ ಇನ್ನೊಂದು ಘಟನೆ ಓದಿದೆ. ಹೆಂಡತಿ ಏನೋ ಗುಟ್ಟಾಗಿ ವ್ಯವಹರಿಸುತ್ತಿದ್ದುದು ಗಂಡನಿಗೆ ಗೊತ್ತಾಯಿತು. ಅನುಮಾನ ನಿಜವೆಂಬುದೂ ಖಾತ್ರಿಯಾಯ್ತು. ಹೆಂಡತಿಯ ಬರ್ತ್ ಡೇ ಪಾರ್ಟಿಗೆ ವ್ಯವಸ್ಥೆ ಮಾಡಿದ. ಅವಳ ತಂದೆ, ತಾಯಿ, ಸಹೋದರ ಸಹೋದರಿಯರು, ನೆಂಟರಿಷ್ಟರು ಎಲ್ಲರನ್ನೂ ಆಹ್ವಾನಿಸಿದ. ತಾನು ಅನಿವಾರ್ಯವಾಗಿ ಆಫೀಸ್ ಕೆಲಸದಲ್ಲಿ ದೂರದ ಊರಿಗೆ ಹೋಗಬೇಕೆಂದೂ ನೀವೆಲ್ಲ ಆಚರಿಸಿರೆಂದೂ ಹೆಂಡತಿಗೆ ಹೇಳಿದ. ಆಕೆಯ ಹುಟ್ಟುಹಬ್ಬದ ದಿನ ಹೊರಗಿನಿಂದಲೇ ಆಕೆಯ ಪರಿವಾರವನ್ನು ಗುಟ್ಟಾಗಿ ಕೂಡಿಕೊಂಡ. ಆಕೆಗೆ ಹೇಳಬೇಡಿ, ಆಕೆಗೆ ಸರ್ಪ್ರೈಸ್ ಕೊಡಬೇಕು ಎಂಬ ಕಾರಣ ಹೇಳಿದ. ಹೆಂಡತಿಯ ತಾಯಿ ಕೇಕ್ ಹಿಡಿದುಕೊಂಡಿದ್ದಳು, ಮತ್ತಾರೋ ಪಾರ್ಟಿಗೆ ಸಂಬಂಧಿಸಿದ ವಿವಿಧ ಪರಿಕರಗಳನ್ನು ಹಿಡಿದುಕೊಂಡಿದ್ದರು. ಹುಟ್ಟುಹಬ್ಬದ ದಿನ ಗೊತ್ತಾದ ಸಮಯಕ್ಕೆ ಮುಂಚೆಯೇ ಆಕೆಯ ತಂದೆ, ತಾಯಿ ಹತ್ತಿರದ ಬಳಗದೊಡನೆ ಮನೆಯ ಬಾಗಿಲು ಬಡಿದ. ಸಂದೇಹವೇ ಇರದ ಆಕೆ ಬಾಗಿಲು ತೆರೆದಾಗ ಪ್ರೇಮಿಯೊಡನೆ ನಗ್ನವಾಗಿ ರತಿಕ್ರೀಡೆಯಲ್ಲಿ ನಿರತಳಾಗಿದ್ದಳು. ಅವಳನ್ನು ಹಾಗೆ ನೋಡಿದ ಮಾತಾ ಪಿತರಿಗೆ ತಲೆಸುತ್ತು ಬಂತು, ಕೇಕ್ ಕೈತಪ್ಪಿ ಕೆಳಗೆ ಬಿತ್ತು. ಎಲ್ಲರೂ ಆಕೆಯ ದುಷ್ಕೃತ್ಯಕ್ಕಾಗಿ ಜರಿದರು. ಅವಳ ಪ್ರಿಯಕರ ಓಡುತ್ತ ಬಟ್ಟೆಹಾಕಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ. ಮುಂದೇನಾಯ್ತು ಎಂಬ ವಿಷಯ ನಮಗೆ ಬೇಕಾಗಿಲ್ಲ.

ಹಾವಾಡಿಗ ಸಂಸ್ಥಾನದ ಕಳ್ಳನನ್ನು ಹಿಡಿಯಲೂ ಸಹ ಇಂತದ್ದೇನಾದರೂ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು. ಹಿಡಿಯುವುದೇನು ಬಂತು? ಜೊತೆಗಿರುವ ಗಿಂಡಿಗಳಿಗೂ ಕಚ್ಚೆಹರುಕತನಕ್ಕೆ ಅವಕಾಶ ಕೊಟ್ಟಿರುವುದರಿಂದ ಕಾಮಿ ಹಾರಲು ಒಳಗೆ ಸೇರಿಕೊಂಡಾಗ ಯಾರೂ ಅಡ್ಡಬರದಂತೆ ಅವರು ಕಾಯುತ್ತಾರೆ. ಹೀಗಾಗಿ, ಕಾಮಿ ನೇರವಾಗಿ ಸಿಕ್ಕಿಬೀಳಲಿಲ್ಲ. ಆದರೆ ನನಗೆ ಬಂದ ಹಲವು ಸಂದೇಶಗಳನ್ನು ಹಾಕಿದರೆ ನೀವೆಲ್ಲ ಬೆಚ್ಚಿ ಬೀಳುತ್ತೀರಿ. ಅವನು ಎಲ್ಲೆಲ್ಲಿ ಹೇಗೇಗೆ ಏಕಾಂತ ನಡೆಸಿದ್ದ ಎಂದು ಹಲವರು ಹೇಳಿದ್ದಾರೆ.

ದೀವಿಗೆ ಬೆಳಗುವ ಯೋಗಸನ್ಯಾಸಿಗಳ ಪುಣ್ಯಕ್ಷೇತ್ರದ ಅಟ್ಟದಲ್ಲಿ ಉಡುದಾರದ ಅಶ್ವಿನಿ ನಕ್ಷತ್ರದೊಡನೆ ನಡೆಸಿದ ಎರಡು ಗಂಟೆಯ ಏಕಾಂತದ ನಂತರ ಬೆವರು ಒರೆಸಿಕೊಳ್ಳುತ್ತ, ಸೀರೆ ಸರಿಪಡಿಸಿಕೊಳ್ಳುತ್ತ ಆಕೆ ಹೊರಗೆ ಬರುತ್ತಾಳೆ. ಏಕಾಂತದಲ್ಲಿ ಹಾಗಾದರೆ ಸೀರೆ ಬಿಚ್ಚುವ ಪ್ರಮೇಯ ಏನಿತ್ತು? ಸೀರೆ ಕುಳಿತಲ್ಲೇ ಜಾರಿ ಹೋಯಿತೇ? ಹೋಗಲಿ ಕಾಮಿಯ ಚಾಳಿ ಗೊತ್ತಿದ್ದೂ ಕೆಲವು ಸದ್ಗುಣಿಗಳು ಸುಮ್ಮನಿದ್ದರಲ್ಲ, ಹಾಗಿರುವುದು ಅಧರ್ಮವಲ್ಲವೇ? ಅವರು ಜೀವನದಲ್ಲಿ ಗಳಿಸಿದ ಪುಣ್ಯ ಖಾಲಿಯಾಗಿ ಹೋಗಬಹುದಲ್ಲವೇ?

ಭಟ್ಟರಿಗೆ ಹೊತ್ತುಹೊತ್ತಿಗೆ ಪರದಾಡುವ ಆರ್ಥಿಕ ಅನಾನುಕೂಲವಿದ್ದಾಗ ಹಿಂದೆ ಮಠದಿಂದ ಸಹಾಯ ಸಿಕ್ಕಿತ್ತು ಎಂಬುದಕ್ಕೆ ಕೃತಜ್ಞತಾ ರೂಪವಾಗಿ ಮಹಾನಗರದಲ್ಲಿ ಬಹುದೊಡ್ಡ ನಿವೇಶನವನ್ನು ದಾನವಾಗಿ ಕೊಟ್ಟರು. ಆ ಜಾಗ ಇಂದು ಕೋಟ್ಯಂತರ ಹಡೆಯುತ್ತದೆ. ಈ ಕಳ್ಳನ ವ್ಯವಹಾರ ಸರಿಯಿಲ್ಲವೆಂದು ಭಟ್ಟರು ಕೊಸರಿದ್ದಕ್ಕೆ ಅವರ ಮೇಲೆ ಸಾಧಿಸಿದ ದ್ವೇಷ ಪ್ರತಿರೋಧಗಳನ್ನು ಗಮನಿಸಬೇಕು. ಒಬ್ಬ ಸನ್ಯಾಸಿಗೆ ಈ ರೀತಿಯ ಗುಣಗಳು ಇರುವುದಿಲ್ಲವಲ್ಲ ಓದುಗ ಬಾಂಧವ ದೊರೆಯೇ? ಭಟ್ಟರು ಅಂತಹ ನಿವೇಶನವನ್ನು ಕೊಡದಿದ್ದರೆ, ಮೊದಮೊದಲು ತಮ್ಮ ಮನೆಯಲ್ಲೇ ಉಳಿಯಲು ಅವಕಾಶ ಮಾಡಿಕೊಡದಿದ್ದರೆ ಹಾವಾಡಿಗ ಮಠ ಮಹಾನಗರದಲ್ಲಿ ಹೀಗೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ ಅಲ್ಲವೇ ಆಸ್ಥಾನ ಕವಿಗಳೇ?

ಹಿಂದಿನವರ ಸಮಯದಲ್ಲಿ ಭಟ್ಟರ ಮನೆಯಲ್ಲಿ ಕ್ಯಾಂಪ್ ಇದ್ದಾಗ ಮಠದ ಕಳ್ಳ ಗಿಂಡಿಯೊಬ್ಬ ಅವರ ಮನೆಯ ಹೊರಗೆ ಇರಿಸಿದ್ದ ಪೈಪ್ ಗಳನ್ನು ಮಾರಿದ್ದ, ಇನ್ನೂ ಕೆಲವರ ನಿವೇಶನದಲ್ಲಿ ಬೆಳೆದ ಕೆಲವು ಫಲಗಳನ್ನು ಕದ್ದಿದ್ದ. ಇಂತಹ ಸಾವಿರ ತೊಂದರೆಗಳನ್ನು ಉದಾರ ಬುದ್ಧಿಯಿಂದ ಹೊಟ್ಟೆಗೆ ಹಾಕಿಕೊಂಡು, ಮಠಕ್ಕೆ ಬೇಕಾದ್ದನ್ನೆಲ್ಲ ಕೊಡುತ್ತ ಮಠ ಕಟ್ಟಲು ಸಹಕರಿಸಿದ ಭಟ್ಟರಿಗೇ ಈಗ ಮಠದಲ್ಲಿ ಜಾಗವಿಲ್ಲ! ಇದಕ್ಕೆಲ್ಲ ಏನು ಹೇಳುತ್ತೀರಿ ಆಸ್ಥಾನ ಕವಿಗಳೇ? ನಾನು ನಿಮ್ಮಲ್ಲಿ ಇನ್ನೂ ಹಲವು ಪ್ರಶ್ನೆಗಳನ್ನು ಕೇಳುವುದು ಬಾಕಿ ಉಳಿದಿದೆ, ಸದ್ಯಕ್ಕೆ ಸಾಕು ಅಂತ ಮುಗಿಸುತ್ತಿದ್ದೇನೆ. ಅರಿವಾಯಿತೇ? ನಿಮ್ಮ ಹಂಗಿನ ದಾಸ್ಯತ್ವ ನಿಮಗಿರಲಿ, ಅದನ್ನು ಸಮಾಜದ ಮೇಲೆ ಹೇರಬೇಡಿ ಆಗದೇ?

Thumari Ramachandra

source: https://www.facebook.com/groups/1499395003680065/permalink/1651833855102845/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s