ಧರ್ಮದ ಸೋಗಿನಲ್ಲಿ ಎಲ್ಲರಿಗೂ ಮೂರುನಾಮ

ಧರ್ಮದ ಸೋಗಿನಲ್ಲಿ ಎಲ್ಲರಿಗೂ ಮೂರುನಾಮ

ಈ ಕಳ್ಳ ಬಂದಾಗಿನಿಂದಲೂ ಮಾಡಿದ್ದು ಅದೇ ಕೆಲಸ. ಯಾರು ಎಲ್ಲಿ ಹೇಗೆ ತನಗೆ ಬೇಕಾದಂತೆ ನಡೆದುಕೊಳ್ಳಬಹುದು ಮತ್ತು ಯಾರ್‍ಯಾರಿಂದ ಎಷ್ಟೆಷ್ಟು ಕೆಲಸ ಮತ್ತು ಹಣ್ಣ ತೆಗೆದುಕೊಳ್ಳಬಹುದು-ಇದಷ್ಟೇ ಅವನ ಲೆಕ್ಕಾಚಾರ. ನಾವೆಲ್ಲ ವ್ಯಕ್ತಿಯನ್ನು ಸ್ವಲ್ಪ ಸಮಯ ನೋಡಿದರೆ ಕಾಮುಕನಲ್ಲವೋ ಹೌದೋ ಎಂದು ಹೇಳುತ್ತೇವೆ. ಅವನು ಹಾಗಲ್ಲ, ಒಂದೇ ನೋಟದಲ್ಲೇ ಎದುರಾಗುವ ವ್ಯಕ್ತಿ ತನಗೆಷ್ಟು ಸಹಕರಿಸಬಹುದು ಎಂದು ಅಳೆದುಬಿಡುತ್ತಾನೆ.

ಸಿಗುತ್ತಾರೆ ಎಂಬವರನ್ನು ಮಾತಿನಲ್ಲಿ ಅಟ್ಟಹತ್ತಿಸಿ ಕೂರಿಸುತ್ತಾನೆ. ಬಲೆಯನ್ನು ಹೆಣೆಯುವ ಜೇಡ ಕೆಲಸಮಾಡಿದಂತೆ ಅವನ ಕೆಲಸ. ಸಿಕ್ಕಿದ ವ್ಯಕ್ತಿಗಳು ಆರ್ಥಿಕವಾಗಿ ಸಬಲರಾಗಿದ್ದರೆ ಅವರ ಗತಿ ಗಾಣಕ್ಕೆ ಕೊಟ್ಟ ಕಬ್ಬಿನಂತಾಗಿಬಿಡುತ್ತದೆ. ಊರಲ್ಲಿ ಅಲ್ಲಿಯ ಸದಸ್ಯತ್ವದ ದೇಣಿಗೆ, ಮಹಾನಗರದಲ್ಲಿ ಅಲ್ಲಿನ ಪರಿಷತ್ತಿನ ಮೂಲಕ ದೇಣಿಗೆ,ಐಟಿ-ಬಿಟಿ ಬಳಗದಲ್ಲಿದ್ದರೆ ಅಲ್ಲಿಂದ ಇನ್ನೊಮ್ಮೆ ದೇಣಿಗೆ, ಜಾಲತಾಣದಲ್ಲಿದ್ದರೆ ಅಲ್ಲಿಂದ ಮತ್ತೊಮ್ಮೆ ದೇಣಿಗೆ. ಇದಷ್ಟೇ ಅಲ್ಲ, ಆಗಾಗ ಹಂಗಾಮಿನಲ್ಲಿ ಹಾಕುವ ಹಲವು ಹತ್ತು ಯೋಜನೆಗಳಿಗೆ ನಾಮಕೇವಾಸ್ಥೆ ಹುದ್ದೆಯ ಹೆಸರನ್ನು ನೀಡಿ ಎಷ್ಟು ಕೆಲಸ ತೆಗೆದುಕೊಳ್ಳಬೇಕೋ ಅಷ್ಟನ್ನೂ ಮಾಡುತ್ತಾನೆ.

ಮಾಡಬಾರದ್ದೆಲ್ಲವನ್ನೂ ಮಾಡುತ್ತಲೇ ಇರುವುದು ಮತ್ತು ಅಬ್ಬರದ ಪ್ರಚಾರ ನಡೆಸುವುದು ಕಳ್ಳ ಸನ್ಯಾಸಿಯ ಕೆಲಸ. ಅದಕ್ಕೆ ಅನುಕೂಲವಾಗಿ ಇಮ್ಮಡಿ ವಿಶ್ವೇಶ್ವರಯ್ಯ, ತಿರುಪತಿ ತಿಮ್ಮಪ್ಪ, ಕತ್ತಲೆಕೋಣೆ ಮನೆಯವ ಎಲ್ಲರೂ ಸಿಕ್ಕಿದ್ದಾರೆ. ಅವನ್ಯಾವನೋ ಬಿಕನಾಸಿ ಪವಾಡದ ಬಗ್ಗೆ ಷರಾ ಬರೆಯುತ್ತಾನೆ. ಕಾಸು ಬಿಸಾಕಿದರೆ ಏನು ಕಾಮಿ ಹೂಸು ಬಿಟ್ಟಿದ್ದನ್ನೂ ಚಿತ್ರ ಸಮೇತ ಹಾಕುತ್ತಾರೆ. ನಿನ್ನೆ ಯಾರೋ ಇನ್ ಬಾಕ್ಸಿಗೆ ಸಂದೇಶ ಕಳಿಸಿದ್ದರು, ಅವರ ಪ್ರಶ್ನೆ ಈ ಸುದ್ದಿಗಾರರಿಗೆಲ್ಲ ಸಮೂಹ ಸನ್ನಿಯೋ ಅಥವಾ ಹಣದ ಸನ್ನಿಪಾತವೋ ಎಂಬುದು. ಇದು ತಲೆಯಿರುವವರ ಜಿಜ್ಞಾಸೆಗೆ ಬಿಟ್ಟ ವಿಚಾರ ಅಂತ ಹೇಳಿದ್ದೇನೆ.

ಅಂದಹಾಗೆ ನಾಡಿದ್ದು ಮತ್ತೆ ಬಾವಯ್ಯ ಪೂಜೆಯನ್ನು ಇಟ್ಟುಕೊಂಡಿದ್ದಾನಂತೆ. ಪರಿಕರಗಳೇನೂ ಬೇಡ, ಸುತ್ತಲೂ ವಿಧವಿಧವಾದ ದೀಪಗಳನ್ನು ಹಚ್ಚಿಕೊಂಡು ಮಧ್ಯೆ ಮಲ್ಲಿಕಾ ಮೊದಲಾದವರ ಧ್ಯಾನದಲ್ಲಿ ಕೂತುಕೊಳ್ಳುವುದು. ಕನ್ನಡಕ್ಕೆ ಸನ್ನಿಲಿಯಾನ್ ತಡವಾಗಿ ಬಂದಿದ್ದಾಳೆ. ಇಲ್ಲದಿದ್ದರೆ ಅವಳನ್ನು ಕರೆಸಿ, ಅವಳು ಬರುವ ಹಾದಿಯಲ್ಲಿ ಹತ್ತುಸಾವಿರ ತಾವರೆ ಹೂವುಗಳನ್ನು ಹಾಸಲಾಗುತ್ತಿತ್ತು. ಅವಳೊಡನೆ ಏಕಾಂತಕ್ಕೆ ಮಲ್ಲಿಗೆಯ ಪಲ್ಲಂಗವನ್ನು ತಯಾರಿಸಲಾಗುತ್ತಿತ್ತು. ಮಿತ್ಯಾನಂದ ಸುತ್ತಮುತ್ತ ಸೀಮೆ ಎಣ್ಣೆ ಬೆಂಕಿ ಹಾಕಿಸಿಕೊಂಡು ’ಪಂಚಾಗ್ನಿ ತಪಸ್ಸ’ನ್ನು ನಡೆಸಿದ್ದ. ಇಂತಹ ಕಳ್ಳಕೊರಮರಿಗೆ ಆಯಾಯ ಪದದ ಅರ್ಥಗಳೇ ಗೊತ್ತಿಲ್ಲ; ಭಕ್ತಕುರಿಗಳ ಗಮನವನ್ನು ಬೇರೆಡೆಗೆ ಸೆಳೆಯಲು ನಡೆಸುವ ತಂತ್ರವಿದು. ಬಾವಯ್ಯನ ಪೂಜೆಗೆ ಅಕ್ಕಯ್ಯಂದಿರು ಹೂವು ಹಿಡಿದು ನಿಲ್ಲಬೇಕಾಯ್ತು, ಆರತಿ ಬೆಳಗಬೇಕಾಯ್ತು, ನಂತರ ಅಲ್ಲೇ ಏಕಾಂತವಂತೂ ಇದ್ದೇ ಇರುತ್ತದೆ.

ನೀವು ವೈದಿಕ ಧರ್ಮದ ಯಾವುದೇ ನಿಘಂಟಿನಲ್ಲಿ ನೋಡಿ, ಚಾತುರ್ಮಾಸ್ಯ ಎಂದರೆ ಸನ್ಯಾಸಿಯ ತಪಸ್ಸಿನ ಕಾಲ. ಅದನ್ನು ಆಡಂಬರದ ಡಂಬಾಚಾರಕ್ಕೆ ಬಳಸಬಾರದು. ಆದರೆ ಇಲ್ಲಿ ಹಾಗಲ್ಲ. ಚಿತ್ರವಿಚಿತ್ರವಾದ ಕಾರಣಗಳನ್ನು ಹುಡುಕುವುದು ಮತ್ತು ಏನಾದರೊಂದು ವರದಿಯನ್ನು ಜನರ ಮುಂದೆ ಇರಿಸುವುದು. “ಪರಮಪೂಜ್ಯ ಮಹಾಸ್ವಾಮಿಗಳು ಪುಷ್ಯ ನಕ್ಷತ್ರದಲ್ಲಿ ಮೈಕಿನ ಮುಂದೆ ಕುಂಡೆ ಹಿಡಿದು ಪೂಂಕ್ ಬಿಡಲಿದ್ದಾರೆ. ಪೂಂಕ್ ಲೋಪಾರ್ಪಣೆಗೆ ಪ್ರಮುಖ ರಾಜಕೀಯ ಮುಖಂಡರೂ ಬರುತ್ತಾರೆ. ಭಕ್ತರು ….ಪಾವತಿಸಿ ಸೇವೆಯಲ್ಲಿ ಪಾಲ್ಗೊಳ್ಳಬಹುದು” ಎಂದು ಮಹಾಮಂತ್ರಿ ದುಷ್ಠಬುದ್ಧಿ ಬಾವಯ್ಯನವರು ಪಾಂಪ್ಲೆಟ್ ಹೊರಡಿಸುತ್ತಾರೆ. ಮೇಲೆ ಹೇಳಿದ ಹಣದಾಹಿ ಮೊಸಳೆಗಳೆಲ್ಲ ತಪರೋ ತಿಪರೋ ಅಂತ ಮಾರನೇ ದಿನವೇ ಸುದ್ದಿ ಪ್ರಕಟಿಸುತ್ತವೆ.

ಯಾರದೋ ಬೋಳಿಗೆ ಎಣ್ಣೆ ಸವರಿ ಅಗ್ಗದಲ್ಲಿ ಹೊಡೆದುಕೊಂಡ ಜಾಗದಲ್ಲಿ ಉಡುದಾರದ ಅಶ್ವಿನಿ ನಕ್ಷತ್ರಕ್ಕೆ ಮನೆ ನಿರ್ಮಾಣವಾಗುತ್ತಿದೆ. ಅದು ಯಾರಪ್ಪನ ಖರ್ಚಿನಲ್ಲಿ ನಡೆಯುತ್ತದೆ? ಅದನ್ನು ಅಲ್ಲೇ ಏಕೆ ಕಟ್ಟಬೇಕಾಗಿತ್ತು? ಯಾವಯಾವ ಏಕಾಂತ ಫಲಾನುಭವಿಗಳಿಗೆ ಎಲ್ಲೆಲ್ಲಿ ಅಂತಹ ಮನೆಗಳನ್ನು ಕಟ್ಟಲಾಗುತ್ತಿದೆಯೋ ಯಾರಿಗ್ಗೊತ್ತು? ಲೆಕ್ಕ ಕೇಳಿದರೆ “ಮಠದ ಕೋಣೆಯ ನಾಲ್ಕು ಗೋಡೆಯ ನಡುವೆ ಕೂತು ಮಾತನಾಡೋಣ” ಎನ್ನುವವರ ಕಚ್ಚೆ ಗಟ್ಟಿ ಇಲ್ಲದ್ದರಿಂದಲೇ ಹಾಗೆ ಕರೆಯುವುದಾಗಿದೆ. ನಾವೆಲ್ಲ ಇದನ್ನು ಹೇಳಿ ಹೇಳಿ ಬಹಿರಂಗ ಮಾಡಿದ್ದರಿಂದ, ಈಗೀಗ ಕಣ್ಣೊರಸಲಿಕ್ಕೆ ಕೆಲವು ಲೆಕ್ಕಪತ್ರಗಳನ್ನು ಹುಟ್ಟಿಸಿರಬಹುದಷ್ಟೆ.

ವಾಸ್ತವವಾಗಿ ಸರಿಯಾದ ಸನ್ಯಾಸಿ ಕ್ಷಣ ಕ್ಷಣಕ್ಕೂ ಪ್ರಚಾರವನ್ನು ಬಯಸುವುದಿಲ್ಲ. ಸುದ್ದಿ ಕಿವಿಯಿಂದ ಕಿವಿಗೆ ತಂತಾನೇ ಹರಡುವುದು ಬೇರೆ, ಪ್ರಚಾರ ಬೇಕಂತಲೇ ಮಾಡಿಸೋದು ಬೇರೆ. ವಿರಾಗಿಗಳು ಹೇಗಿರುತ್ತಾರೆ ಎಂಬುದನ್ನು ಹಿಮಾಲಯದ ಎತ್ತರದ ಗುಹೆಗಳಲ್ಲಿ ವಾಸಮಾಡುವ ತಪೋಜನರಿಂದಲೇ ತಿಳಿಯಬೇಕು. ನಾವು ದಿನನಿತ್ಯ ಭೂಕಂಪ, ಭೂಕುಸಿತ, ಮೇಘಸ್ಫೋಟ ಮೊದಲಾದ ಸುದ್ದಿಗಳನ್ನು ಮಾತನಾಡುತ್ತಲೇ ಇರುತ್ತೇವೆ. ಹಾಗಾದರೆ ಹಿಮಾಲಯದಲ್ಲಿರುವ ಸಹಸ್ರಾರು ವಿರಾಗಿಗಳ ಕತೆಯೇನು? ಅವರಿಗೆ ಜೀವವಿಲ್ಲವೇ? ಅವರು ಬದುಕುವುದಿಲ್ಲವೇ? ಅವರನ್ನೆಲ್ಲ ಯಾರು ಕಾಪಾಡುತ್ತಾರೆ? ಸುರಿವ ಮಳೆ, ಕೊರೆವ ಚಳಿ, ಸುಡುವ ಬಿಸಿಲಿನಲ್ಲಿ ಅವರು ಹೇಗೆ ಬದುಕುತ್ತಾರೆ? ಅವರಿಗೆ ಆ ಎತ್ತರದಲ್ಲಿ ನಿತ್ಯ ಆಹಾರವನ್ನು ಒದಗಿಸುವವರಾರು?

ಸಮರ್ಥರ ಕತೆಯನ್ನು ಹೇಳುತ್ತ ಅವರ ಘೋರ ತಪಸ್ಸಿನ ಬಗೆಗೆ ಸ್ವಲ್ಪ ಹೇಳಿದ್ದೆ. ಹಿಮಾಲಯದ ಸಂತರಿಗೂ ಸಮರ್ಥರಿಗೂ ವ್ಯತ್ಯಾಸವೇ ಇರಲಿಲ್ಲ. ಶಿವಥರ ಘಳ ಎಂಬ ಪ್ರದೇಶ ಇಂದಿಗೂ ಚಾರಣಿಗರು ಹೋಗಿ ತಲುಪಲು ಹರಸಾಹಸ ಮಾಡಬೇಕಾದ ಜಾಗ. ಅಂತಹ ಜಾಗದಲ್ಲಿ ಐದಾರು ಶತಮಾನಗಳ ಹಿಂದೆ [ಅಂದು ಕಾಡುಗಳೇ ಹೆಚ್ಚಿದ್ದ ಕಾಲ] ಏಕಾಂಗಿಯಾಗಿ ಹನ್ನೆರಡು ವರ್ಷಗಳ ಕಾಲ ತಪಸ್ಸು ಮಾಡಿದ ರಾಮದಾಸರಿಗೆ ಅನ್ನಾಹಾರಗಳನ್ನು ಇತ್ತವರು ಯಾರು? ಅವರ ಬೇಕು-ಬೇಡಗಳನ್ನು ಕೇಳಿದವರಾರು?

ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲೆ ಆಹಾರ ಇತ್ತವರು ಯಾರು?
ಬಲ್ಲಿದನು ಕಾಗಿನೆಲೆ ಆದಿ ಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ

ಈಗ ಹೇಗಾಗಿದೆ ಎಂದರೆ ದಿನಕ್ಕೊಂದು ಮೆರವಣಿಗೆ, ಹೋದಲ್ಲೆಲ್ಲ ಪುರಪ್ರವೇಶದ ಅಬ್ಬರ. ಇದೆಲ್ಲ ಹಿಂದಕ್ಕೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಇದ್ದಿದ್ದು ಕಾಣಿಸುವುದಿಲ್ಲ. ಅನುಭವದ ಪ್ರಕಾರ ಸನ್ಯಾಸಿಗೆ ಮಠದಲ್ಲೋ ಆಶ್ರಮದಲ್ಲೋ ಬಡತನವಿದ್ದರೆ ಸನ್ಯಾಸಿ ಹೆಚ್ಚಿಗೆ ತಪಸ್ಸಿನಲ್ಲಿ ಕಾಲ ಕಳೆಯಲು ಅನುಕೂಲವಾಗುತ್ತದೆ; ಆಗ ಜನರಿಗಿಂತ ದೇವರನ್ನೇ ಸನ್ಯಾಸಿ ಹೆಚ್ಚು ಆಧರಿಸಿರುತ್ತಾನೆ. ಯಾವಾಗ ಮಠಮಾನ್ಯಗಳಲ್ಲಿ ಅಗಣಿತ ಸಂಪತ್ತು ಸೇರುತ್ತದೋ ಆಗ ಸನ್ಯಾಸಿಗೆ ಸಂಸಾರಿಗಿಂತ ಹೆಚ್ಚಿನ ಲೋಕಾಸಕ್ತಿ ಬರುವ ಸಾಧ್ಯತೆ ಇರುತ್ತದೆ.

ಮೇಲಾಗಿ ಇಂದಿನ ಮಠಮಾನ್ಯಗಳಲ್ಲಿ ಮಹಿಳೆಯರೂ ಬಂದು ಸುಳಿಯುವುದರಿಂದ ಸನ್ಯಾಸಿಯ ಇಂದ್ರಿಯ ನಿಗ್ರಹವೆಂಬ ವಿಷಯ ಪುಸ್ತಕದ ಬದನೆಕಾಯಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿರುವ ಉದಾಹರಣೆಗಳು ನಮಗೆ ಕಾಣುತ್ತಿವೆ. ಇತ್ತ ಸಂಸಾರಿಗಳಿಗೆ ಆಧ್ಯಾತ್ಮವಿದ್ಯೆಯ ಲವಲೇಶವೂ ಗೊತ್ತಿರದ ಕಾರಣ ಧರ್ಮಾಚರಣೆಗೂ ಅಧರ್ಮಾಚರಣೆಗೂ ವ್ಯತ್ಯಾಸವೇ ಗೊತ್ತಾಗದು. ಹೀಗಿರುವಾಗ ಸನ್ಯಾಸಿಯ ಮನದಲ್ಲಿರುವ ’ಬೆಕ್ಕು’ ಕದ್ದು ’ಹಾಲು’ಕುಡಿಯುವ ಚಟಕ್ಕೆ ಬೀಳಬಹುದು.

ಸನ್ಯಾಸಿಯೇಕೆ ಮಹಿಳೆಯರಿಗೆ ಮಠಮಾನ್ಯಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ಕೊಡಬಾರದು ಎಂಬುದಕ್ಕೆ ಕಾರಣ ಈಗ ಬಹುತೇಕರಿಗೆ ಸಿಕ್ಕಿರುತ್ತದೆ. ಸರ್ವಸಂಗ ಪರಿತ್ಯಾಗಿಯಾಗಿರಬೇಕಾದ ಸನ್ಯಾಸಿಯು ಸರ್ವಸಂಗ ಸುಖೋಪಭೋಗಿಯಾಗುತ್ತ, ಹೆಂಗಳೆಯರಕಡೆಗೆ ಗಮನ ಹರಿಸಿ ಕಚ್ಚೆಹರಿದುಕೊಳ್ಳುವುದಕ್ಕೆ ಕಾರಣವಾಗುತ್ತದೆ ಎಂಬುದಕ್ಕಾಗಿ ಮಹಿಳೆಯರನ್ನು ಹತ್ತಿರ ಸೇರಿಸಬಾರದು ಎಂಬ ನಿಯಮ ಮಾಡಿಟ್ಟಿದ್ದಾರೆ.

ದಾನ ಮತ್ತು ಅಪಹರಣ ಎರಡನ್ನೂ ಗಮನಿಸಿ, ಯಾರಿಂದಲೋ ಅವರು ಕೊಟ್ಟಾಗ ಪಡೆಯುವುದು ದಾನ, ಅವರಿಂದ ಕಸಿದುಕೊಳ್ಳುವುದು ಅಥವಾ ಒತ್ತಾಯಪೂರ್ವಕವಾಗಿ ಪಡೆದುಕೊಳ್ಳುವುದು ಅಪಹರಣ. ವ್ಯಕ್ತಿಯೊಬ್ಬನಿಗೆ ಬಡತನದ ಬವಣೆಯಿತ್ತು. ಸುತ್ತಮುತ್ತ ಬಂಗಾರದ ಆಭರಣಗಳನ್ನು ಹಾಕಿಕೊಂಡವರ ಮೆರುಗನ್ನು ಕಂಡ ಅವನಿಗೆ ತನಗೂ ಬಂಗಾರವಿದ್ದರೆ ಎನಿಸಿತು. ಬಂಗಾರದ ಖರೀದಿಯಂತೂ ದೂರದ ಮಾತು. ಹೀಗಾಗಿ, ಕೊನೆಗೊಮ್ಮೆ ಕದ್ದಾದರೂ ಬಂಗಾರವನ್ನು ಉಪಯೋಗಿಸಬೇಕು ಎನಿಸಿತು. ಆಲೋಚನೆ ಮನದಲ್ಲಿ ಇರದಿದ್ದಾಗ ಆತ ಶುದ್ಧನಿದ್ದ. ಕಳುವ ಆಲೋಚನೆ ಮನದಲ್ಲಿ ಹುಟ್ಟಿದಾಗ ಆತ ಅರ್ಧ ಅಶುದ್ಧನಾದ. ಆದರೆ ಸಮಾಜಕ್ಕೆ ಅದು ಗೊತ್ತಾಗಲಿಲ್ಲ. ಕಳುವು ಮಾಡಿದಾಗ ಆತ ಪೂರ್ತಿ ಅಶುದ್ಧನಾದ; ಸಮಾಜ ಅವನನ್ನು ಕಳ್ಳ ಎಂದು ಗುರಿತಿಸಿ ದಂಡಿಸಿತು.

ಸನ್ಯಾಸಿಗೆ ಇಂದ್ರಿಯ ನಿಗ್ರಹ ಎಂಬುದೇ ಮೊದಲ ತಪಸ್ಸು. ಲೌಕಿಕ ಶ್ರೀಮಂತಿಕೆ ಮತ್ತು ಭೋಗವಸ್ತುಗಳನ್ನು ಕಂಡು ಅತ್ತಕಡೆಗೇ ಮನಸ್ಸು ಹರಿದುಹೋಗುತ್ತಿರುತ್ತದೆ. ಕಂಡಲ್ಲಿ ಹೋಗುವ ಮರ್ಕಟ ಮನಸ್ಸನ್ನು ಯೋಗಾಚರಣೆಯ ಮೂಲಕ ಒಂದೆಡೆ ಬಂಧಿಸಬೇಕು. ಹಾಗೆ ಮನಸ್ಸನ್ನು ಬಂಧಿಸುತ್ತ ಅದನ್ನೇ ಅಭ್ಯಾಸಮಾಡಿಕೊಳ್ಳಬೇಕಾಗುತ್ತದೆ. ಆ ತಾಲೀಮು ನಡೆಯುತ್ತಿರುವಾಗಲೇ ಮೇನಕೆಯರು ಅತಿಹತ್ತಿರ ಬಂದುಬಿಟ್ಟರೆ, ಸಲುಗೆ ಬೆಳೆದು ಸನ್ಯಾಸಿಯ ಕೌಪೀನ ಎತ್ತರಕ್ಕೆ ಟೆಂಟು ಹಾಕಲು ಆರಂಭಿಸುತ್ತದೆ. ಚಿತ್ತವೃತ್ತಿಯ ನಿಗ್ರಹಕ್ಕಾಗಿಯೇ ಪತಂಜಲಿಗಳು ಯೋಗವನ್ನು ಹೇಳಿದ್ದಾರೆ. ಯೋಗ ಪತಂಜಲಿಗಳ ಆವಿಷ್ಕಾರವಲ್ಲ; ಆದರೆ ಪತಂಜಲಿಗಳು ಅದಕ್ಕೊಂದು ಉತ್ತಮ ಗ್ರಂಥ ಬರೆದು ನಿಯಮಗಳನ್ನು ಹಾಕಿಕೊಟ್ಟಿದ್ದಾರೆ. ಯೋಗದ ಮಹಿಮೆಯನ್ನು ಮುಕುಂದೂರು ಸ್ವಾಮಿಗಳೂ ಸಹ ಸ್ವತಃ ಅನುಭವದಿಂದ ಹೇಳಿದ್ದಾರೆ.

ಇಂದಿನ ಕಳ್ಳ ಸನ್ಯಾಸಿಗಳಿಗೆ ಮಹಿಳೆಯರು ಮತ್ತು ಪುರುಷರು ಎಂಬ ಭೇದವಿಲ್ಲವಂತೆ. ಮಹಿಳೆಯರೂ ಹತ್ತಿರ ಹತ್ತಿರ ಹತ್ತಿರ ಬಂದು ಒತ್ತುಕೊಂಡು ನಿಂತರೇ ಅವರಿಗೆ ನೆಮ್ಮದಿ. ಹೀಗಾಗಿ ಹಾದರಗಿತ್ತಿಯರನ್ನು ಪಕ್ಕಕ್ಕೆ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಳ್ಳುತ್ತಾರೆ. ಯಾವುದು ರೀತಿ ಯಾವುದು ನೀತಿ ಅರಿಯಲಾಗದ ಹಲವು ಜನ ಮತ್ತು ಎಲ್ಲವೂ ಗೊತ್ತಿದ್ದೂ ಸ್ವಹಿತಾಸಕ್ತಿಯಿಂದ ಜೈಕಾರ ಹಾಕುವ ಕೆಲವು ಜನ ಸೇರಿ ಕಾಮಿ ಮಾಡಿದ್ದೇ ಸರಿ ಎನ್ನುತ್ತಾರೆ. ಇದೇ ಕಾರಣದಿಂದ ರಾಂಗ್ ವೇಷ ವರನೂ ವಂಶಪಾರಂಪರ್ಯವಾಗಿ ಮೊದಲೇ ದೇಣಿಗೆಯಾಗಿ ಮೈಯಲ್ಲಿ ಹರಿದಿದ್ದ ಕಚ್ಚೆಹರುಕುತನಕ್ಕೆ ಮೆರುಗುಕೊಟ್ಟು ಏಕಾಂತ ನಡೆಸುವುದನ್ನು ಮಾಮೂಲಿ ಮಾಡಿಕೊಂಡಿದ್ದಾನೆ. “ಧರ್ಮಮಾರ್ಗದಲ್ಲೇ ನಡೆಯುತ್ತಿದ್ದೇವೆ ನಾವು” ಎನ್ನುತ್ತ ಸಮಾಜಕ್ಕೇ ಮೂರುನಾಮ ತೀಡುತ್ತಿದ್ದಾನೆ.

Thumari Ramachandra

source: https://www.facebook.com/groups/1499395003680065/permalink/1651376605148570/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s