ಇದೇ ಛಲ-ಧೈರ್ಯ-ವಿಶ್ವಾಸದಿಂದ ಶಿವಮೆಚ್ಚುವ ರೀತಿಯಲ್ಲಿ ಮುನ್ನುಗ್ಗುತ್ತೇವೆ.

ಇದೇ ಛಲ-ಧೈರ್ಯ-ವಿಶ್ವಾಸದಿಂದ ಶಿವಮೆಚ್ಚುವ ರೀತಿಯಲ್ಲಿ ಮುನ್ನುಗ್ಗುತ್ತೇವೆ.

ಶ್ರೀ ಕ್ಷೇತ್ರ ಗೋಕರ್ಣ ಹಿತರಕ್ಷಣಾಸಮಿತಿಯ ಪರವಾಗಿ, ಸಮಿತಿಯ ಅನುಭವದ ಅನಿಸಿಕೆಯನ್ನು ಅದು ಅಸ್ತಿತ್ವಕ್ಕೆ ಬಂದ ಏಳನೇ ವರ್ಷದ ಈ ದಿನ ಈ ಪೋಸ್ಟಿಂಗ್ ನ ಮುಖೇನ ತಮ್ಮಗಳೆದುರು ಹಂಚಿಕೊಳ್ಳುತ್ತಿದೆ.

ಅನ್ಯಾಯದ ಮಾರ್ಗದಲ್ಲಿ ಯಾರಾದರೂ ಯಾವುದಾದರೂ ಕಾರ್ಯಸಾಧನೆಯನ್ನು ಮಾಡಿಕೊಂಡರೆ ಅದನ್ನು ಖಂಡಿಸುವುದು ನಿಷ್ಪಕ್ಷಪಾತ ನಾಗರಿಕನ ಕರ್ತವ್ಯ ಈ ಸಮಾಜದಲ್ಲಿ. ಅದರಲ್ಲೂ ಈ ಸಮಾಜಕ್ಕೆ ಧರ್ಮ- ನೈತಿಕತೆ- ನ್ಯಾಯಮಾರ್ಗ ಗಳ ಬೋಧನೆ ಮಾಡಬೇಕಾದ ಪೀಠದ ಅಧ್ಯಕ್ಷೀಯ ಸ್ಥಾನದಲ್ಲಿದ್ದವರು ಇಂಥಾದ್ದೇನಾದರೂ ಆಕ್ಷೇಪಣೀಯ ಕೃತ್ಯವನ್ನೆಸಗಿದರೆ ಅದನ್ನು ನಿಸ್ಸಂಕೋಚವಾಗಿ ಪ್ರಶ್ನಿಸಬೇಕು, ಸ್ಪಂದಿಸದಿದ್ದರೆ ಖಂಡಿಸಬೇಕು, ಆಗಲೂ ಪ್ರತಿಕ್ರಿಯಿಸದಿದ್ದರೆ ವಿರೋಧಿಸಬೇಕು, ಅದನ್ನೂ ತಿರಸ್ಕರಿಸಿದರೆ ಅವರ ಈ ಅಕ್ರಮದ ಓಟವನ್ನು ತಡೆಯಲೇಬೇಕು. ಈ ನಿಟ್ಟಿನಲ್ಲಿ ಅಕ್ರಮವಾಗಿ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಳವನ್ನು ವಶಮಾಡಿಕೊಂಡ ರಾ ಮಠದ ಅನ್ಯಾಯ-ಅನೈತಿಕತೆಯನ್ನು ಖಂಡಿಸಲು ಹುಟ್ಟಿಕೊಂಡಿದ್ದೇ ಗೋಕರ್ಣ ರಕ್ಷಣಾಸಮಿತಿ.
ನೋಡುವ ಟೀಕಾಕಾರರಿಗೆ ಇದು ತಟಸ್ಥರಕ್ಷಣಾ ಸಮಿತಿಯೋ, ಸ್ವಹಿತರಕ್ಷಣಾಸಮಿತಿಯೋ ಅಥವಾ ಅವರವರ ವಿಕೃತ ಯೋಚನೆಯ ರೂಪದಲ್ಲಿ ತೋರಿರಬಹುದು. ಆದರೆ ನಾವು ಈ ಏಳು ವರ್ಷ ಅಧರ್ಮ, ಅನ್ಯಾಯದ ವಿರುದ್ಧ ಸೆಟೆದುನಿಲ್ಲುವ ಪ್ರಯತ್ನ ಮಾಡುತ್ತಾ ಬಂದಿದ್ದೇವೆ ಎನ್ನುವ ತೃಪ್ತಿ ಇದೆ. ಆದರೂ ಹೋರಾಟ ಇಷ್ಟು ದೀರ್ಘಕಾಲ ಸವೆಸಿದರೂ ಇತ್ಯರ್ಥ ಕಾಣದ್ದರ ಬಗೆಗೆ ಅಸಮಾಧಾನವೂ ಇದೆ. ನಮ್ಮ ಕಳೆದ ದಿನಗಳ ಹೋರಾಟವನ್ನು ಅವಲೋಕಿಸುದಾದರೆ….
1) ಮೊದಲನೆಯದಾಗಿ ಅಸಂವಿಧಾನಿಕ ರೀತ್ಯಾ ನಡೆದ ದೇವಾಲಯ ಹಸ್ತಾಂತರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇವೆ.
2) ಅಮೃತಾನ್ನ ಭೋಜನಶಾಲೆಯ ಅಕ್ರಮ ನಿಯಮಬಾಹಿರ ಕಟ್ಟಡ ನಿರ್ಮಾಣಕ್ಕೆ ತಡೆಯೊಡ್ಡಿದ್ದೇವೆ.
3) ಅಶೋಕೆಯಲ್ಲಿ ಮಠದ ಹೆಸರಿನಿಂದ ಅಕ್ರಮ ಕೃಷಿಭೂಮಿ ಖರೀದಿಯನ್ನು ಪ್ರಶ್ನೆಮಾಡಿ ಖಂಡಿಸಿದ್ದೇವೆ.
4) ಭದ್ರಕಾಳಿ, ಗಣಪತಿ, ವೆಂಕಟ್ರಮಣ ದೇವಾಲಯಗಳ ವಶೀಕರಣವನ್ನು ತಡೆದಿದ್ದು.
5) ಹನುಮಾನ ಜನ್ಮಭೂಮೀ ಎಂದು ಜನರಿಗೆ ಸುಳ್ಳು ಪ್ರಚಾರಮಾಡಿ, ಆ ಕಾರ್ಯಕ್ಕೆ ಮಲ್ಲಿಕಾಳನ್ನು ತಂದು ಸ್ಥಳಪಾವಿತ್ರ್ಯತೆಯನ್ನು ಹಾಳುಮಾಡಿದ್ದನ್ನು ಸಮಾಜಕ್ಕೆ ಸಾರಿದ್ದೆವೆ.
6)ಕೋಟಿತೀರ್ಥದ ವಾಸ್ತು ಸರಿಯಿಲ್ಲವೆಂದು ಅದರನ್ನು ಪುನರ್ ನಿರ್ಮಿಸುವ ನೆಪದಲ್ಲಿ ಕೆಡಗುವುದನ್ನ ತಡೆದಿದ್ದು.
7) ಸ್ವಾಮಿಗಳು ವಿದೆಶೀ ಹಣ ನಿಯಮದ ಕಾನೂನು ವಿರುದ್ಧವಾಗಿ ವರ್ತಿಸಿದ್ದು, ನೆರೆಪರಿಹಾರ ಹಣದ ದುರುಪಯೋಗ ವನ್ನು ಪತ್ತೆ ಹಚ್ಚಿದ್ದು.
ಅಲ್ಲದೇ ಎಲ್ ಐ ಸಿ ಪಾಲಿಸಿಯಲ್ಲಿ ಸರ್ಟಿಫಿಕೇಟ್ ಅನ್ಯಾಯದ ಮೂಲ ಅದಕ್ಕೆ ಪಾವತಿಸಲ್ಪಡುವ ಹಣದ ವಿಷಯ ಪ್ರಶ್ನಾರ್ಹ, ಸ್ವಾಮಿಗಳ ಪ್ರಭಾವಕ್ಕೆ ಕೆಲವು ನ್ಯಾಯಾಧೀಶರು, ಸರಕಾರೀ ಅಧಿಕಾರಿಗಳು ಒಳಗಾಗಿ ಅವರ ಪಕ್ಷವಾಗಿ ಕೆಲಸಗೈದುದನ್ನು ನಿರೂಪಿಸಿದ್ದೇವೆ. ಅಲ್ಲದೇ ಇನ್ನೂ ಕೆಲವು ಸಮಾಜಮುಖೀ ಕೆಲಸಗಳನ್ನು ಯಾರದೇ ಪ್ರಭಾವವಿಲ್ಲದೇ ಮಾಧ್ಯಮಗಳ ಸಹಕಾರವಿಲ್ಲದೇ ಸಮಾಜದಲ್ಲಿ ಬಹುಜನರ ಬೆಂಬಲವಿಲ್ಲದೇ ನಮ್ಮ ಧ್ಯೇಯ ಉದ್ದೇಶಗಳ ಮೇಲಿನ ನಿಷ್ಠೆಯಿಂದ,ಶ್ರೀಮಹಾಬಲೇಶ್ವರ ನ ಸೇವೆ ಎಂಬ ಏಕೈಕ ಉದ್ದೇಶದಿಂದಲೇ ಭಾವನೆಯಿಂದಲೇ ಸಾಧಿಸಿದ್ದೇವೆ. ಇದರ ನಡುವೆ ಮಠದವರ ಕಡೆಯಿಂದ ಐದಾರು ದಮನಕಾರೀ ಕ್ರಿಮಿನಲ್ ಕೇಸುಗಳು ಮಾಡಿದ್ದಾರಲ್ಲದೇ ಮೂರ್ನಾಲ್ಕು ಕಾನೂನು ಉಲ್ಲಂಘನೆ ಯೂ ಮಠದಿಂದ ನಡೆದಿದೆಯಾದರೂ ಅನ್ಯಾಯದ ವಿರುದ್ಧ ದನಿಯೆತ್ತುವ ನಮ್ಮನ್ನು ಹತ್ತಿಕ್ಕುವ ದೌರ್ಜನ್ಯವನ್ನು, ಯಾವುದೇ ಕಷ್ಟಗಳನ್ನೂ ಅಂಜಿಕೆಯಿಲ್ಲದೇ ಎದುರಿಸಿ ಎಲ್ಲರೂ ನಿಸ್ವಾರ್ಥದಿಂದ, ಒಗ್ಗಟ್ಟಿನಿಂದ ಎಲ್ಲವನ್ನೂ ಆ ಸಾರ್ವಭೌಮನ ದಯೆಯಿಂದಲೇ ಎದುರಿಸಿದ್ದೇವೆ ಮೂವತ್ತಕ್ಕೂ ಅಧಿಕ writ pititions ಹಾಕಿದ್ದೇವೆ. ಮುಂದೆಯೂ ನಮ್ಮ ಗುರಿ ತಲುಪುವ ವರೆಗೂ ಇದೇ ಛಲ-ಧೈರ್ಯ-ವಿಶ್ವಾಸದಿಂದ ಶಿವಮೆಚ್ಚುವ ರೀತಿಯಲ್ಲಿ ಮುನ್ನುಗ್ಗುತ್ತೇವೆ.
ಹರ ಹರ ಮಹಾದೇವ.

Gopal S Gayatri Gayatri

source: https://www.facebook.com/gopalsgayatri.gayatri/posts/1047460228606772

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s