ರಾಮಚಂದ್ರಾಪುರ ಮಠಕ್ಕೆ 63 ಲಕ್ಷ ರೂ. ದಂಡ

ರಾಮಚಂದ್ರಾಪುರ ಮಠಕ್ಕೆ 63 ಲಕ್ಷ ರೂ. ದಂಡ

ಉದಯವಾಣಿ, Aug 09, 2015, 3:00 AM IST

ಹೊಸನಗರ: ತಾಲೂಕಿನ ಹುಂಚಾ ಹೋಬಳಿ ಮೀಸಲು ಅರಣ್ಯ ಪ್ರದೇಶದಲ್ಲಿ ರಾಮಚಂದ್ರಾಪುರ ಮಠ ಒತ್ತುವರಿ ಮಾಡಿಕೊಂಡಿರುವ 19 ಎಕರೆ ಪ್ರದೇಶವನ್ನು ತೆರವುಗೊಳಿಸುವಂತೆ ಹೊಸನಗರ ಎಸಿಎಫ್‌ ನ್ಯಾಯಾಲಯ ಆದೇಶ ನೀಡಿದೆ. ಅಲ್ಲದೆ, ಪರಿಸರಕ್ಕೆ ಹಾನಿ ಮಾಡಲಾಗಿದೆ ಎಂಬ ಕಾರಣಕ್ಕೆ 62.8 ಲಕ್ಷ ರೂ.ದಂಡ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಎಸಿಎಫ್‌ ನ್ಯಾಯಾಧೀಶ ಆಲ್ವಿನ್‌, ಈ ಆದೇಶ ನೀಡಿದ್ದಾರೆ. ಹುಂಚಾ ಹೋಬಳಿ ಮೀಸಲು ಅರಣ್ಯ ಪ್ರದೇಶದ ಸರ್ವೇ ನಂ.7ರಲ್ಲಿ ಮಠದಿಂದ ಅಕ್ರಮವಾಗಿ ಮೀಸಲು ಅರಣ್ಯ ಪ್ರದೇಶ ಒತ್ತುವರಿಯಾಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 62.8 ಲಕ್ಷ ರೂ.ಗಳನ್ನು ಸರ್ಕಾರಕ್ಕೆ ಪಾವತಿಸಬೇಕು. 19 ಎಕರೆ ಒತ್ತುವರಿ ಭೂಮಿಯನ್ನು 30 ದಿನಗಳೊಳಗೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಒತ್ತುವರಿ ಪ್ರದೇಶದಲ್ಲಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕೋರ್ಟ್‌ ಎಚ್ಚರಿಕೆ ನೀಡಿದೆ. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ವೃತ್ತ ಮುಖ್ಯಅರಣ್ಯ ಸಂರಕ್ಷಣಾಧಿಧಿಕಾರಿಯವರಲ್ಲಿ 30 ದಿನಗಳೊಳಗೆ ಅಪೀಲಿಗೆ ಅವಕಾಶ ನೀಡಲಾಗಿದೆ. ಆದೇಶವನ್ನು ಜು.25ರಂದೇ ನೀಡ ಲಾಗಿದ್ದು, ಅಲ್ಲಿಂದ 30 ದಿನಗಳ ಅವಕಾಶ ನೀಡಲಾಗಿದೆ.

source: http://www.udayavani.com/kannada/news/%E0%B2%B0%E0%B2%BE%E0%B2%9C%E0%B3%8D%E0%B2%AF/89731/%E0%B2%B0%E0%B2%BE%E0%B2%AE%E0%B2%9A%E0%B2%82%E0%B2%A6%E0%B3%8D%E0%B2%B0%E0%B2%BE%E0%B2%AA%E0%B3%81%E0%B2%B0-%E0%B2%AE%E0%B2%A0%E0%B2%95%E0%B3%8D%E0%B2%95%E0%B3%86-63-%E0%B2%B2%E0%B2%95%E0%B3%8D%E0%B2%B7-%E0%B2%B0%E0%B3%82-%E0%B2%A6%E0%B2%82%E0%B2%A1

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s