ಸಂಗೀತದ ಹುಚ್ಚೆದ್ದಾಗ ಹಾಡೂ ಒಂದೆ ಹಾಡಿನ ಪಲ್ಲವಿಯೂ ಒಂದೇ

ಸಂಗೀತದ ಹುಚ್ಚೆದ್ದಾಗ ಹಾಡೂ ಒಂದೆ ಹಾಡಿನ ಪಲ್ಲವಿಯೂ ಒಂದೇ

“ಈಗ ನಮ್ಮಲ್ಲಿ ಜನರ ಅಭಾವ ಆಗ್ತಾ ಇದೆ. ನಮ್ಮ ತಾಲೀಬಾನ್ ಕಾರ್ಯಕರ್ತರಲ್ಲಿ ಕೆಲವರು ಇದ್ದಲ್ಲೇ ಮಾಯವಾಗಿದ್ದಾರೆ. ಇನ್ನೂ ಕೆಲವರು “ಬೇಸಿಗೆ ಕೆಲಸ ಅರ್ಜೆಂಟಾಗಿ ಮುಗಿಸಿ ಬರುತ್ತೇನೆ” ಎಂದು ಹೋದವರು ತಮ್ಮನ್ನೂ ಬಂಧಿಸಬಹುದು ಎಂದು ಮರಳಿ ಬರುತ್ತಿಲ್ಲ.

ಊರ್‍ಅಕಡೆಗೆ ಕತೆ ಕೊಚ್ಚಲಿಕ್ಕೆ ಎಲ್ಲಿ ಜಾಗ ಸಿಗುತ್ತದೆ ಎಂದು ನೋಡುತ್ತಿದ್ದೇವೆ ನಾವು. ದುಡ್ಡು ನಾವೇ ಕೊಡೋದಾದ್ರೂ ಪರವಾಗಿಲ್ಲ ವ್ಯವಸ್ಥೆಗೆ ಸಹಾಯ ಮಾಡಿದ್ರೆ ಸಾಕು. ಮತ್ತೆ ಊರ್ತುಂಬ ಅಪಪ್ರಚಾರ ಹೆಚ್ಚಿಸುತ್ತಿದ್ದೇವೆ.

ಹಾವಾಡಿಗರಾದ ನಮಗೆ ’ಸಂಗೀತ’ದ ಹುಚ್ಚೆದ್ದಾಗ ಹಳೆಯ ಸಂಗೀತ ಆದರೂ ಸರಿ, ಹೊಸ ಪಲ್ಲವಿಯೂ ಸರಿ. ಒಟ್ನಲ್ಲಿ ನಮಗೆ ’ವಿಶ್ರಾಂತಿ’ ಸಿಗಬೇಕು ಅಷ್ಟೆ.

ಬಹಳ ಹಿಂದೆ ನಾವು ಲಂಗೋಟಿ ತೊಡುವುದಕ್ಕಿಂತ ಮೊದಲೆ ಮಾಣಿಯೆಂದು ಕರೆಸಿಕೊಳ್ಳುತ್ತಿದ್ದಾಗ ಹಳ್ಳಿಕೊಂಪೆಯೊಂದರ ದೇವಸ್ಥಾನ ಒಂದರಲ್ಲಿ ಒಂದೆರಡು ದಿನ ಪೂಜೆ ಮಾಡಿದ್ವಿ ನಾವು. ಅದನ್ನೆಲ್ಲ ಸಂಶೋಧಿಸಿ ಕರಪತ್ರ ತಯಾರಿಸಿ ಜನರನ್ನು ಒಟ್ಟಾಕಲು ಪ್ರಯತ್ನಿಸುತ್ತಿದ್ದೇವೆ ನಾವು.

ಕಾಗೋಡು ಹೆಸರಿನಂತದ್ದೇ ಇನ್ನೊಂದು ಊರಿದೆ ಸಾಗರದಲ್ಲಿ. ಅಲ್ಲಿ ಮೇ ತಿಂಗಳಲ್ಲಿ ನಮ್ಮ ತಾಲೀಬಾನ್ ನವರು ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ಈಗ ನಮಗೇ ಅನುಮಾನ, ಯಾಕೆಂದ್ರೆ….ಯಾಕೆಂದ್ರೆ……ಯಾಕೆಂದ್ರೆ ಎಷ್ಟೊತ್ತಿಗೆ ಎಲ್ಲಿ ನಮ್ಮನ್ನ ಎತ್ತಾಕ್ಕೊಂಡೋಗ್ತಾರೋ ಗೊತ್ತಿಲ್ಲ. ಅದ್ಕೇ ಕಾರ್ಯಕ್ರಮ ಮುಂದೂಡಿ ಎನ್ನುತ್ತಿದ್ದೇವೆ ನಾವು.

ನಾವು ಆಸ್ವಾದಿಸಿ ಅನುಭವಿಸಿದ ಮಧುರ ಸಂಗೀತ ಪಲ್ಲವಿಗಳಿಂದ ನಮ್ಮ ಲೌಕಿಕ ಯಾತನೆಗಳೆಲ್ಲ ಶಮನಗೊಂಡಿವೆ. ಇಷ್ಟು ದಿನ ಅಲಕಾಪುರಿಯ ಅಧೀಶ ಕುಬೇರನ ಬೊಕ್ಕಸಕ್ಕೆ ಬರುವಷ್ಟು ಹಣ ಹರಿದುಬರುತ್ತಿತ್ತು. ಆದರೆ ಈಗ ಅದೆಲ್ಲ ನಿಂತು ನಾವು ಮೇಲೆ ಕೆಳಗೆ ನೋಡುತ್ತಿದ್ದೇವೆ.

ಹೀಗೇ ಆದರೆ ಕಾರಿಗೆ ಪೆಟ್ರೋಲು ಹಾಕಿಸಲೂ ತುಟ್ಟಿಯಾಗುವ ದಿನಗಳು ದೂರವಿಲ್ಲ. ಎತ್ತುವಳಿಗೆ ಯಾವ ಪ್ರಾಜೆಕ್ಟು ಹಾಕಿಕೊಂಡರೂ ಜನರ ಬೆಂಬಲ ಸಿಗುತ್ತಿಲ್ಲ. “ಏ ಹೋಗ್ರಿ ಸನ್ಯಾಸಿಯಾದವನಿಗೆ ಅಷ್ಟೆಲ್ಲ ಆಸ್ತಿ ಮಾಡುವ ಚಪಲ ಯಾಕಂತೆ? ಎಲ್ಲಾದ್ರೂ ಗುಡ್ಡ ಹತ್ತಿ ಕುಳ್ತು ತಪಸ್ಸು ಮಾಡಕ್ಕೆ ಹೇಳಿ” ಎನ್ನುತ್ತಾರಂತೆ.

ನಮ್ಮ ಬಾವಯ್ಯನೂ ಕುರಿಗಳ ಬೋಳಿಗೆ ಎಣ್ಣೆ ಹಚ್ಚಿ ವಿದ್ವತ್ಪೂರ್ಣವಾಗಿ ತಿಕ್ಕಿ ತಿಕ್ಕಿ ಕೈನೋವು ಬರಿಸಿಕೊಂಡು ಕೋಪಗೊಂಡು ’ಸಾಮಾನು’ ಕತ್ತರಿಸಿದ ಗಂಡುಹಂದಿ ಕೂಗಿದ ಹಾಗೆ ಕೂಗ್ತಾ ಇದಾನೆ. ಕೋಪಗೊಂಡಾಗ ಅವನ ಮುಖ ನೋಡುವ ಧೈರ್ಯವೂ ನಮಗಿಲ್ಲ. ದೇವರು ಹಾಗೆಲ್ಲ ನೋಡಕೂಡದು. ಯಾಕೆಂದ್ರೆ….ಯಾಕೆಂದ್ರೆ…..ದೇವರು ನಿರ್ಗುಣ. ಅವನು ಎಲ್ಲವನ್ನೂ ಬಿಟ್ಟವನು.

ಮೊದಲೆಲ್ಲ ನಮ್ಮ ಕಾರ್ಯಕ್ರಮ ವರ್ಷಗಟ್ಲೆ ಮೊದಲೇ ಬುಕ್ ಆಗುತ್ತಿತ್ತು. ಬೇಕಾದರೆ ಭಕ್ತ ಕುರಿಗಳು ಕಾಯಬೇಕಿತ್ತು. ಈಗ ಹಾಗಲ್ಲ ನಾವೇ ಬರುತ್ತೇವೆ ಕಾರ್ಯಕ್ರಮ ಮಾಡಿ ಎಂದು ಹೇಳಿದರೂ ಮುಂದಾಗುವವರು ಕಾಣುತ್ತಿಲ್ಲ. ಚೊಂಬು ಹಿಡಿಯುವವರಿಂದ ಹಿಡಿದು ಪಾದಪೂಜೆ ಮಾಡುವವರ ವರೆಗೂ ಕಣ್ಣಿನಲ್ಲಿ ಏನೇನೋ ಭಾವನೆಗಳು ಕಾಣಿಸ್ತಾ ಇವೆ ನಮಗೆ.

ಪಾದಪೂಜೆಗೆ ಕಾಸು ಹಾಕದೇ ಇದ್ರೂ ಪರವಾಗಿಲ್ಲ ಕತೆ ಕರ್ಚು ನಮ್ಮದೇ ಆದರೂ ತೊಂದ್ರೆಯಿಲ್ಲ ಫೋಟೋ ವೀಡಿಯೋ ಮಾಡಿಸ್ಕೆಳಕಾದರೂ ಅವಕಾಶ ಕೊಡಿ ಅಂದ್ರೆ ಪ್ರತಿ ಊರಿನಲ್ಲೂ ಅರ್ಧ ಜನ ಬೇಡ ಅಂತಾರಂತೆ.

ಅತ್ಲಾಗಿ ಅವನ್ಯಾರೋ ಅಚ್ಚುಗಿಚ್ಚು ಎಲ್ಲ ಗಚ್ಚಾಗಿ ಸರಿಯಾಗಿದೆ ಶೀಘ್ರವೇ ಹಾಕ್ತೀವಿ ಅಂತ ಬೇರೆ ಗುಟರ್‍ತಾ ಇದಾನೆ. ಹೊಳೆಯುವ ನಕ್ಷತ್ರಗಳನ್ನೂ ಪ್ರಕಾಶಮಾನವಾದ ’ಸೂರ್ಯಚಂದ್ರ’ರನ್ನೂ ಸರಿಯಾಗಿ ನೋಡ್ಲಿಕ್ಕೇ ಆಗ್ತಾ ಇಲ್ಲ. ವಿಶ್ರಾಂತಿ ಸರಿಯಾಗಿ ಆಗ್ತಾ ಇಲ್ಲ. ಅದಕ್ಕೇ ಹೇಳ್ದೆ ಕೇಳ್ದೆ ಕಂಡಲ್ಲೆಲ್ಲ ವಿಶ್ರಾಂತಿ ತಗೊಳೊದಕ್ಕೆ ನೋಡ್ತೇವೆ ನಾವು.

ಒಂದೊಂದ್ಸಲ ಅನ್ಸೋದಿದೆ. ನಾವು ’ಇಷ್ಟೆಲ್ಲ ಮಾಡಿದ್ವಿ’ ನಮಗೆ ಸಮಾಜ ಏನು ಕೊಡ್ತು? ನಾವು ಸಮಾಜದ ಹಲವು ಮಹಿಳೆಯರಿಗೆ ಕೊಟ್ಟ ’ಮುಕ್ತ ಸ್ವಾತಂತ್ರ್ಯ’ಕ್ಕೆ ಸಮಾಜ ನಮಗೆ ಕೊಡುವ ಪ್ರತಿಫಲ ಇದೇನಾ? ಬೇಡಬೇ ಬೇಡ ಅನ್ನಿಸ್ತದೆ ನಮಗೆ. ಆದರೂ ಇದ್ದಕ್ಕಿದಲ್ಲೆ ಹಾವು ಹೆಡೆಯೆತ್ತಿ ಬುಸ್ ಅನ್ನೋದಿದ್ಯಲ್ಲ. ಅದ್ಕೊಂದಕ್ಕಾಗಿ ಸಾಯ್ತಾ ಇದೇವೆ ನಾವು.

ನಾವು ಪರಪ್ಪನವನಕ್ಕೆ ಹೋದ್ರೆ ಎಲ್ಲಿ ನಮಾಮಿ ಗ್ರೂಪಿನ ಜನ ನಮ್ಮನ್ನು ಬಿಟ್ಟು ಹೋಗ್ತಾರೋ ಎಂಬ ಭಯ ಮತ್ತು ಆತಂಕ ನಮ್ಮಲ್ಲಿದೆ. ನಮ್ಮ ವಿದ್ವಾನ್ ಬಾವಯ್ಯ ಅವರಿಗೆ ಹಚ್ಚಿದ್ದು ವಿದೇಶೀ ಮೂಲದ ಬೋಳೆಣ್ಣೆ. ಅವರಿಗೆಲ್ಲ ಕೂದಲು ಕಮ್ಮಿ ಇದ್ದಿದ್ರಿಂದ ದೇವರು ಕೊಟ್ಟ ಗಟ್ಟಿ ಹಣೆಯಿಂದ್ಲೇ ಬದುಕ್ತಾ ಇರೋ ಜನ ಅವರು. ನಮ್ಮ ಬಾವಯ್ಯನಿಗೆ ಅಂತವರು ಸಿಕ್ಕಿದ್ರೆ ಕೇಳಬೇಕೆ?

ನಮ್ಮ ಒತ್ತಾಯಕ್ಕೆ ಫೋನಿನಲ್ಲಿ ಹರುಕು ಪುರ್ಕು ಹಿಂದಿಯಲ್ಲಿ ನಾವು ಮಾತನಾಡಿದಾಗ ಉತ್ತರಿಸುತ್ತಾರೆ. ಆದರೂ ಅವರಿಗೆ ನಮ್ಮ ಮೇಲೆ ಮೊದಲಿನ ಗೌರವ ಇಲ್ಲ ಅನ್ನೋದು ಗೊತ್ತಾಗ್ತಾ ಇದೆ. ಅವರೆಲ್ಲರ ಮನೆಲೂ ರಾಟೆ ತಿರುಗಿಸಿ ದಾರ ಹೊಸೆಯಲು ಯತ್ನಿಸಿದ್ದೇವೆ ನಾವು. ನಮ್ಮ ಬಾವಯ್ಯನ ಪ್ರಯತ್ನಕ್ಕೆ ನಾವೂ ಸಾಥ್ ಕೊಡಬೇಕಲ್ಲ?

ಉತ್ತರದ ಮಹಿಳೆಯರಲ್ಲಿ ಕೆಲವರು ಬಹಳ ಧಾರಾಳಿಗಳು. ಅವರು ಬಹಳ ಮುಕ್ತ ಮನಸ್ಸಿನವರು. ಎಲ್ಲಿಯೇ ಸ್ಪರ್ಶಿಸಿದರೂ ಒದೆಯದ ಬಡಗೋವಿನಂತವರು. ಅದನ್ನೆಲ್ಲ ಅನುಭವಕ್ಕೆ ತೆಗೆದುಕೊಂಡಿದ್ದೇವೆ ನಾವು. ” ಪರಮಾತ್ಮ ಕಾ ಪರಿಪೂರ್ಣ್ ಕೃಪಾ ಕಟಾಕ್ಷ್ ಮಿಲತಾ ಹೈ ಆಪ್ಕೋ” ಎಂದರೆ ಸಾಕು ಮೈಗೆ ಅಂಟಿಕೊಂಡೇ ಸಮಾಧಾನ ನೀಡುತ್ತಿದ್ದರು ಅವರೆಲ್ಲ.

ದೇವರನ್ನು ಭೂಮಿಯಲ್ಲಿ ಕಾಣುವುದು ಬಹಳ ಕಷ್ಟ. ಅನಾಯಾಸವಾಗಿ ತಾವು ಸಾಕ್ಷಾತ್ ದೇವರನ್ನೆ ನೋಡುತ್ತಿದ್ದೇವೆ ಎಂದುಕೊಂಡು ನಮ್ಮ ಕುಲಪತಿ ವಿದ್ವಾನ್ ಬಾವಯ್ಯನ ಪೌರೋಹಿತ್ಯದ ಅಧ್ವರ್ಯುತನದಲ್ಲಿ ಎರಡೂ ಕಿವಿಗಳ ಮೇಲೆ ಪ್ಲಾಸ್ಟಿಕ್ ಹೂವುಗಳನ್ನು ಇಟ್ಟುಕೊಂಡಿದ್ದಾರೆ.

ಉತ್ತರದವರೂ ನಮ್ಮ ಕೈಬಿಟ್ಟರೆ ನಮ್ಮ ಕಾರುಗಳ ಗತಿಯೇನು? ಮಿಥ್ಯಾನಂದನಂತೆ ದೇಶ ವಿದೇಶಗಳಿಗೆ ಹಾರುತ್ತ ಮತ್ತು ಅಲ್ಲೆಲ್ಲ ಹಾರುತ್ತ ಹಾವಾಡಿಸುತ್ತ ಎಲ್ಲ ಮಹಿಳೆಯರಿಗೂ ’ವಿಶ್ವರೂಪದರ್ಶನ’ವನ್ನು ಕರುಣಿಸುವ ನಮ್ಮ ಪ್ಲಾನಿನ ಕತೆಯೇನು?

ಬಾವಯ್ಯ ಬೋಳೆಣ್ಣೆ ಹಿಡಿದು ಎಲ್ಲೋ ಬೇಟೆಗೆ ಹೋಗಿದ್ದಾನೆ. ಬರಲಿ ಏನಾಗ್ತದೆ ಎಂದು ನೋಡೋಣ. ಬರೇ ಕಾಮ….ಬರೇ ಕಾಮ”

Thumari Ramachandra

source: https://www.facebook.com/groups/1499395003680065/permalink/1608278666125031/

Advertisements

ತನಿಖಾ ಸಂಸ್ಥೆಗಳು – ಇದು ಚರ್ಚೆಗಾಗಿ ಮಾತ್ರ

ತನಿಖಾ ಸಂಸ್ಥೆಗಳು – ಇದು ಚರ್ಚೆಗಾಗಿ ಮಾತ್ರ

“ತನಿಖಾ ಸಂಸ್ಥೆಗಳು ವರದಿ ಕೊಟ್ಟ ಮಾತ್ರಕ್ಕೆ ನ್ಯಾಯಾಲಯದಲ್ಲಿ ಇರುವ ಪ್ರಕರಣವೊಂದು ಸತ್ಯವೆಂದು ಅದು ನಡೆದಿದೆಯೆಂದು ಸಾಮಾನ್ಯರು ನಂಬಲಿಕ್ಕಾಗದು. ಏಕೆಂದರೆ ಈ ಹಿಂದೆ ತನಿಖಾ ಸಂಸ್ಥೆಗಳು ಕೊಟ್ಟ ವರದಿಗಳನ್ವಯ ನ್ಯಾಯಾಲಯ ಅದೇ ಸತ್ಯವೆಂದು ಎಷ್ಟು ನಿರ್ಣಯಗಳನ್ನು ಕೊಟ್ಟಿದೆ. ಹಾಗಾಗಿ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಓದಿಕೊಂಡು ಒಂದು ಪ್ರಕರಣದ ಸತ್ಯಾಸತ್ಯತೆಯನ್ನು ನಿರ್ಣಯಿಸುವುದಕ್ಕಾಗುವುದಿಲ್ಲ. ಏನೇ ಇದ್ದರೂ ನ್ಯಾಯಾಲಯವೇ ತೀರ್ಪನ್ನು ಕೊಡಬೇಕು ಮತ್ತು ಅದು ಸತ್ಯವಾಗಿರುತ್ತದೆ”
………………………………………………………………
ಇದು ಇನ್ನೂ ನಮ್ಮ ಅನೇಕ ಜನರಲ್ಲಿ ಪ್ರಕರಣದ ಸತ್ಯಾಸತ್ಯತೆಯ ಕುರಿತಾಗಿ ಇರುವ ಅಂಬೋಣಗಳು. ಏನೇ ಇರಲಿ ಸದ್ಯಕ್ಕೆ ನ್ಯಾಯಾಲಯಗಳನ್ನಾದರೂ ನಂಬುವ ಸ್ಥಿತಿಯಲ್ಲಿದ್ದಾರಲ್ಲಾ ಎಂಬುದೇ ಸಂತಸದ ವಿಚಾರ.
ನ್ಯಾಯ ಮತ್ತು ಕಾನೂನು ಎಂಬ ವಿಚಾರ ಬಂದಾಗ ನಮ್ಮ ಜನಸಾಮಾನ್ಯರಲ್ಲಿ ಇರುವ ಒಂದು ತಿಳುವಳಿಕೆಯೆಂದರೆ ನ್ಯಾಯಾಲಯಗಳೆಂದು ಕರೆಸಿಕೊಳ್ಳುವ ನಮ್ಮ ’ಕೋರ್ಟ್’ ಗಳು ನಮಗೆ ನ್ಯಾಯವನ್ನು ಕೊಡುತ್ತವೆ ಕೋರ್ಟುಗಳು ಕೊಟ್ಟಿದ್ದು ನ್ಯಾಯ ಎಂಬ ತೀರ್ಮಾನಕ್ಕೆ ಬಂದುಬಿಡುತ್ತೇವೆ. ಹಾಗಾದರೆ ನ್ಯಾಯಾಲಯಗಳು ನ್ಯಾಯವನ್ನು ಹೇಗೆ ಹೇಳಬಲ್ಲವು..? ಅವೂ ಕೂಡಾ ಸ್ಥಾಪಿತ ತನಿಖಾ ಸಂಸ್ಥೆಗಳು ಒಂದು ಪ್ರಕರಣದ ಕುರಿತು ನಡೆಸಿದ ತನಿಖೆಯ ವರದಿಯ ಆಧಾರದ ಮೇಲೆಯೇ ತಮ್ಮ ನ್ಯಾಯ ದಾನ ಪ್ರಕ್ರಿಯೆಯನ್ನು ನಡೆಸುತ್ತವೆ.ಹೊರತೂ ಖುದ್ದಾಗಿ ತಾನೇ ಯಾವ ಪ್ರಕರಣದ ತನಿಖೆಯನ್ನೂ ನಡೆಸುವುದಿಲ್ಲ. ಹೀಗೆ ತನಿಖಾ ಸಂಸ್ಥೆಯೊಂದು ನೀಡಿದ ವರದಿಯನ್ನು ಪ್ರಸ್ತುತ ಲಗತ್ತಾಗಿರುವ ದಂಡ ಸಂಹಿತೆಯ ಒರೆಗೆ ಹಚ್ಚಿ ಪ್ರಕರಣದಲ್ಲಿರುವ ಅಂಶಗಳು ಇಂದಿನ ಕಾನೂನಿನ ಅಂಶಗಳಿಗೆ ಹೋಲಿಸಿದ್ದು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ನ್ಯಾಯವಾದಿಗಳ ಮೂಲಕ ಚರ್ಚಿಸಿ ಅಲ್ಲಿ ಕಂಡುಬರುವ ವಿವಿಧ ದಂಡ ಸಂಹಿತೆಯ ಅಂಶಗಳನ್ನು ವಿಸ್ತರಿಸಿ ತೀರ್ಪನ್ನು ಕೊಡುತ್ತವೆ.
..
ಹೀಗಾಗುವಾಗ ಕೆಲವೊಮ್ಮೆ. ಹಗ್ಗವನ್ನು ಕಂಡು ಹಾವೆಂದು ಭ್ರಮಿಸಿ ಹೆದರಿದ್ದು ಸತ್ಯವಾಗಿದ್ದರೂ ಹಗ್ಗವು ಹಾವಲ್ಲ( ತನಿಖೆಯಕಾಲಕ್ಕೆ ಅಲ್ಲಿ ಹಾವು ಕಾಣಬರದೇ ಕೇವಲ ಹಗ್ಗ ಕಂಡಿದೆ) ಎಂಬ ಕಾರಣಕ್ಕಾಗಿ ಹೆದರಿದ್ದು ಸುಳ್ಳು ಎಂದು ತೀರ್ಪು ಕೊಡಬಹುದಾದ ಸಂದರ್ಭಗಳೂ ಇಲ್ಲದಿಲ್ಲ.(ಹಾವು ಇದ್ದಿದ್ದು ಸುಳ್ಳೆಂದು ತೀರ್ಪು ಕೊಡಬಹುದೇ ಹೊರತೂ ಹೆದರಿದ್ದು ಸುಳ್ಳು ಎಂದು ತೀರ್ಪು ಕೊಟ್ಟರೆ ಅದು ನ್ಯಾಯ ದಾನ ಎನ್ನಿಸಿಕೊಳ್ಳಬಹುದೇ..?)
…….
ಹಾಗಾದರೆ ತನಿಖಾ ಸಂಸ್ಥೆಗಳು ತನಿಖೆಯನ್ನು ನಡೆಸುತ್ತಿರುವಾಗ ಹೊರಬಂದ ಅಂಶಗಳನ್ನು ಸಾರ್ವಜನಿಕ ಮಾಹಿತಿಗೆ ನೀಡಬಹುದೇ..? ಕೂಡದು. ಏಕೆಂದರೆ ತನಿಖಾ ಸಂಸ್ಥೆಗಳು ಯಾರಿಂದ ಒಂದು ಪ್ರಕರಣದ ತನಿಖೆ ನಡೆಸುವುದಕ್ಕಾಗಿ ನಿರ್ದೇಶಿಸಲ್ಪಟ್ಟಿವೆಯೋ ಅವರಿಗೆ ಮಾತ್ರ ತಾನು ನಡೆಸಿದ ತನಿಖೆಯ ಮಾಹಿತಿಗಳನ್ನು ಕೊಡಬೇಕಾಗುತ್ತದೆ. ಆಗಲೂ ತನಿಖಾ ಸಂಸ್ಥೆಯೊಂದು ಪ್ರಕರಣ ತನಿಖೆಯನ್ನು ವಿವಿಧ ಮಜಲುಗಳಲ್ಲಿ ಮಾಡುತ್ತಿರುವಾಗ ಅದಕ್ಕೆ ಸಂಬಂಧ ಪಟ್ಟ ವ್ಯಕ್ತಿಗಳ ಸಹಭಾಗಿತ್ವದಿಂದಾಗಿ ತನಿಖೆಯ ಗತಿಯನ್ನು ಅರಿತುಕೊಳ್ಳುವುದಕ್ಕೆ ಸಾಮಾನ್ಯನಿಗೂ ಸಾಧ್ಯವಾಗಿಬಿಡುತ್ತದೆ.ಆಗ ತನಿಖೆಯಲ್ಲಿ ಕಂಡುಬಂದ ಅಂಶಗಳು ಸಾಮಾನ್ಯನ ಬಾಯಲ್ಲಿ ಹರಿದಾಡುವುದಕ್ಕೆ ಪ್ರಾರಂಭವಾಗಿ ಅದು ಮಾಧ್ಯಮಗಳಿಗೂ ಆಹಾರವಾಗಿ ಹೀಗಂತೆ…. ಹಾಗಂತೆ… ಗಳು ಹುಟ್ಟಿಕೊಳ್ಳುತ್ತವೆ.
ಸಾಮಾನ್ಯವಾಗಿ ಕೆಲವು ವಿಶೇಷ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳ ಈ ತರಹದ ನಡೆಗಳು ಮತ್ತು ಅದು ನಡೆಸುತ್ತಿರುವ ತನಿಖೆಯ ದಿಕ್ಕನ್ನು ಗಮನಿಸಿದಾಗಲೇ ನ್ಯಾಯಾಲಯಗಳಲ್ಲಿ ಸಿಗಬಹುದಾದ ನ್ಯಾಯದಾನದ ಆಂತರ್ಯ ಗೊತ್ತಾಗಿಬಿಡುತ್ತದೆ. ಏಕೆಂದರೆ ಕಾನೂ ಇರುವುದು ಪುಸ್ತಕದ ರೋಪದಲ್ಲಿ ಹಾಗಾಗಿ ಬಲ್ಲವನೊಬ್ಬ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಗತಿಯನ್ನು ಕಾನೂನಿನ ಒರೆಗೆ ಹಚ್ಚಿ ಅಲ್ಲಿ ಸಿಗಬಹುದಾದ ನ್ಯಾಯದ ತೀರ್ಮಾನವನ್ನು ಮೊದಲೇ ಹೇಳಬಲ್ಲ. ಆದರೂ ಅದು ನ್ಯಾಯ ಎಂದೆನಿಸಿಕೊಳ್ಳುವುದಿಲ್ಲ.. ಕೇವಲ ಸಮಾಧಾನ ಎಂದಾಗಬಹುದು ಅಷ್ಟೇ.

ನಮ್ಮಲ್ಲಿ ಕೆಲವರಿಗೆ… ಜನರ ಮೇಲೆ ನಂಬಿಕೆ ಇಲ್ಲ ಅವರು ಹೇಳಿದ್ದು ಸುಳ್ಳು ಅಥವಾ ಅವರೇ ಸರಿ ಇಲ್ಲ..!. ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ.. ಅದು ಸರಿಯಾಗಿ ತನಿಖೆಯನ್ನೇ ಮಾಡಿಲ್ಲ.. ( ತನ್ನ ಪರವಾಗಿ ತನಿಖೆಯ ಅಂತ್ಯ ಕಾಣದಾದಾಗ..!) ತನಿಖೆ ನಡೆಸಿದ್ದೇ ಸರಿ ಇಲ್ಲ. ಎಂದೆಲ್ಲ ಹೇಳುವಾಗ ನ್ಯಾಯಾಲಯ ಕೊಟ್ಟ ತೀರ್ಪು ಸತ್ಯವಾಗಿರುತ್ತದೆ ಎಂದು ನಂಬಿಕೆ ಇಡುತ್ತಾರಲ್ಲಾ… ಹೆಹ್ಹೆಹ್ಹೇ.. ಏಕೆಂದರೆ ನ್ಯಾಯಾಲಯವೂ ಈ ತನಿಖಾ ಸಂಸ್ಥೆಗಳ ವರದಿಯ ಆಧಾರದಿಂದಲೇ ಅಲ್ಲವೇ ತೀರ್ಪನ್ನು ಕೊಡುವುದು.. ಅಂದಮೇಲೆ ತನಿಖಾ ಸಂಸ್ಥೆಗಳ ವರದಿಯಲ್ಲಿ ಸತ್ಯವಡಗಿದೆ ಎಂದಾಯಿತಲ್ಲವೇ..? ಹಾಗಾದಾಗ ವರದಿಯ ಮುಖ್ಯಾಂಶಗಳನ್ನರಿತ ಜನಸಾಮಾನ್ಯನೊಬ್ಬ ನ್ಯಾಯಾಲಯಗಳಿಂದ ಬರಬಹುದಾದ ತೀರ್ಪಿನ ಹೊಳಹನ್ನು ಅರಿಯಬಹುದಲ್ಲವೇ..?

ಒಂದು ವೇಳೆ ನ್ಯಾಯಾಲಯಗಳೇ ತನಿಖಾ ಸಂಸ್ಥೆಗಳ ವರದಿಯನ್ನು ನಂಬುವುದಿಲ್ಲವೆಂದಾದರೆ ಮುಂದೆ ತನಿಖಾ ಸಂಸ್ಥೆಗಳ ಅಸ್ತಿತ್ವ ಮತ್ತು ಅವುಗಳ ಸಿಂಧುತ್ವದ ಬಗ್ಗೆಯೇ ಯೋಚಿಸಬೇಕಾಗುತ್ತದಲ್ಲವೇ..?
……
ಇದು ಚರ್ಚೆಗಾಗಿ ಮಾತ್ರ

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

ಇಂದಿಗೆ ತುಮರಿ ಸೋತುಹೋದ.

ಇಂದಿಗೆ ತುಮರಿ ಸೋತುಹೋದ.

ಈ ಕೆಳಗಿನ ಲೇಖನವನ್ನು ಗಮನಿಸಿ. ಇದು ತುಮರಿ ಬರೆದಿದ್ದಲ್ಲ. ಈ ಜನಪದ ಹಾಡು ಕತೆ ಎಷ್ಟು ಸತ್ಯವೋ ಗೊತ್ತಿಲ್ಲ. ದೇಶದ ಮೊಟ್ಟಮೊದಲ ಮಠ ಮತ್ತು ಆಮ್ನಾಯ ಮಠವಾದ ಶೃಂಗೇರಿ ಮಠವನ್ನೇ ಇದರಲ್ಲಿ ಅವಹೇಳನ ಮಾಡಿದ್ದಾರೆ. ಇಂತಹ ಸಾಹಿತ್ಯ ನಿಜಕ್ಕೂ ’ಬುದ್ಧಿಜೀವಿಗಳ’ ಕೈವಾಡವೇ ಸರಿ. ಈ ಲೇಖನವನ್ನು ನೀವು ’ಕಣಜ’ ಜಾಲತಾಣದಲ್ಲಿ ನೋಡಬಹುದು.

ಕರ್ನಾಟಕದ ಜನಪದ ಆಚರಣೆಗಳು : ಸಿದ್ಧವೇಶ [ http://kanaja.in/archives/52888 ]

ಸುಳ್ಯ ಪರಿಸರದ ಗೌಡ ಜನವರ್ಗದ ನೃತ್ಯ ಪ್ರಧಾನವಾದ ಆಚರಣೆ. ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿ ಪರಿಸರದಲ್ಲಿ ಪ್ರಚಲಿತವಿರುವ ಧಾರ್ಮಿಕ ವಿಧಿ ಕ್ರಿಯೆಯಾಗಿ ಆಚರಣೆಗೊಳ್ಳುತ್ತದೆ. ಪ್ರತಿ ವರ್ಷ ಸುಗ್ಗಿ ಹುಣ್ಣಿಮೆಯ ಸಂದರ್ಭದಲ್ಲಿ ‘ಸಿದ್ಧವೇಶ’ ಧರಿಸಿದ ವ್ಯಕ್ತಿಗಳು ಪ್ರದರ್ಶನ ನೀಡುತ್ತಾರೆ.

ಸುಗ್ಗಿಯ ದಿನಗಳಲ್ಲಿ ತಮಗೆ ಅನುಕೂಲಕರವಾದ ದಿನವೊಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಊರಿನ ಹಿರಿಯನ ನಾಯಕತ್ವದಲ್ಲಿ ಆಸಕ್ತ ಗೌಡ ಯುವಕರು ಊರಿನ ಭೂತದ ಚಾವಡಿಯಲ್ಲೋ, ಪ್ರತಿಷ್ಠಿತ ಗೌಡನೊಬ್ಬನ ಮನೆ ಅಂಗಳದಲ್ಲಿಯೋ ಸೇರುತ್ತಾರೆ. ಸಿದ್ಧವೇಷ ಹಾಕುವ ಉತ್ಸಾಹಿಗಳಾದ ಆರು ಅಥವಾ ಏಳು ಗೌಡ ಯುವಕರು ಕುಣಿತಕ್ಕೆ ವೇಷ ಕಟ್ಟಲು ಸಿದ್ಧರಾಗುತ್ತಾರೆ. ಅದರಲ್ಲೊಬ್ಬ ಹಾಸ್ಯ ಪ್ರಜ್ಞೆ ಇರುವವನು ‘ಬ್ರಾಹ್ಮಣ’ ವೇಷ ಧರಿಸುತ್ತಾನೆ. ವಯಸ್ಸಾದವನೊಬ್ಬ ‘ದಾಸಯ್ಯ’ನ ಪಾತ್ರವನ್ನು, ಅತ್ಯಂತ ಉತ್ಸಾಹಿಯೂ, ಕ್ರಿಯಾಶೀಲನೂ ಆಗಿರುವ ಯುವಕನೊಬ್ಬ ‘ಸನ್ಯಾಸಿ’ಯ ವೇಷ ಹಾಕಿರುತ್ತಾನೆ. ಉಳಿದಂತೆ ತಲೆಗೆ ಕೆಂಪು ಬಣ್ಣದ ಮುಂಡಾಸನ್ನು ಭುಜಕ್ಕೆ ತಗಲುವಂತೆ ಹಾಕಿ, ದೊಗಳೆ ಅಂಗಿ ಧರಿಸಿ, ಕಚ್ಚೆ ಹಾಕಿ ಅಂಗಿಯ ಮೇಲಿಂದ ಸೊಂಟಕ್ಕೆ ಗಟ್ಟಿಯಾಗಿ ‘ದಟ್ಟಿ’ಯೊಂದನ್ನು ಬಿಗಿಯಾಗಿ ಕಟ್ಟಿರುತ್ತಾನೆ. ದಾಸ್ಯಯನ ಪಾತ್ರಧಾರಿ ಕೆಂಪು ಶಾಲು ಹೊದ್ದು, ಕೈಯಲ್ಲಿ ಶಂಖ ಮತ್ತು ಜಾಗಟೆ ಹಿಡಿದಿರುತ್ತಾನೆ. ಜುಟ್ಟು ಬಿಟ್ಟು, ಗೋಣಿ ನಾರಿನಿಂದ ಹೊಸೆದು ಮಾಡಿದ ದೊಡ್ಡ ಜನಿವಾರ ಧರಿಸಿ, ಅದರ ತುದಿಗೆ ಗಂಟು ಹಾಕಿರುತ್ತಾನೆ. ಮೈಗೆ ಗಂಧ, ಹಣೆಗೆ ನಾಮ ಹಾಗೂ ಬಿಳಿಯ ಬಣ್ಣದ ದೊಗಳೆ ಅಂಗಿ, ಕಚ್ಚೆ ಧರಿಸಿರುತ್ತಾನೆ. ಒಣಗಿದ ಬಾಳೆ ಎಲೆಗಳನ್ನು ಮೈ ತುಂಬಾ ಕಟ್ಟಿಕೊಂಡ ‘ಸನ್ಯಾಸಿ’ ವೇಷಧಾರಿ ತಲೆಗೆ ಹಾಳೆಯ ಕಿರೀಟ ಧರಿಸಿರುತ್ತಾನೆ. ಬಾಳೆ ಎಲೆಗಳಿಂದಲೇ ಮುಖದ ಸಿಂಗಾರ ಮಾಡಿಕೊಂಡಿರುತ್ತಾನೆ. ಸೊಂಟದ ಮುಂಭಾಗದಲ್ಲಿ ತಳ್ಳನೇ ಬೆತ್ತಗಳಿಂದ ಹೆಣೆದು ಮಾಡಿದ ನಿಗುರಿ ನಿಂತ ಶಿಶ್ನವನ್ನು ಕಟ್ಟಿ, ಕೈಯಲ್ಲೊಂದು ದೊಣ್ಣೆ ಹಾಗೂ ಭಸ್ಮದ ಪಾತ್ರೆಯನ್ನು ಹಿಡಿದಿರುತ್ತಾನೆ.

ಹೀಗೆ ಸಿದ್ಧವಾದ ‘ಸಿದ್ಧವೇಷ’ ತಂಡ ರಾತ್ರಿಯಾಗುತ್ತಲೇ ಊರು ಸುತ್ತಲೂ ಹೊರಡುತ್ತಾರೆ. ನಡಿಗೆಯ ಉಲ್ಲಾಸಕ್ಕಾಗಿ ‘ಡಿಂಮಿ ಸಾಲೆ’ ಎಂಬ ಹಾಡಿನ ಸೊಲ್ಲನ್ನು ಹೇಳುತ್ತಾರೆ. ಪ್ರದರ್ಶನ ನೀಡುವ ಮನೆಯ ಅಂಗಳಕ್ಕೆ ಸನ್ಯಾಸಿಯ ವೇಷದವನನ್ನುಳಿದು ಉಳಿದ ಪಾತ್ರಧಾರಿಗಳು ಮೊದಲು ಪ್ರವೇಶ ಮಾಡಿ ಮನೆ ಮಂದಿಯನ್ನು ಎಬ್ಬಿಸುತ್ತಾರೆ. ವೃತ್ತಾಕಾರವಾಗಿ ಕುಣಿಯಲು ಆರಂಭಿಸಿದ ಅವರು “ಸಿದ್ಧಲಿಂಗ ಮುದ್ದುಲಿಂಗ, ಸಿದ್ಧವೇಸೋ, ನಾವು ಯಾವೂರು ಯಾವ ತಳ, ಸಿದ್ಧವೇಸೋ, ನಾವು ಕಾಶೀಯ ತಳದವ್ರ, ಸಿದ್ಧವೇಸೋ” ಎಂದು ಹಾಡುತ್ತಿರುತ್ತಾರೆ.

‘ಶೃಂಗೇರಿ ಮಠದಿಂದ’ ಎಂಬ ಹಾಡಿನ ಸೊಲ್ಲಿನ ವೇಳೆಗೆ ಅಡಗಿ ಕುಳಿತಿರುವ ‘ಸನ್ಯಾಸಿ’ ವೇಷದ ಪಾತ್ರಧಾರಿ ಪ್ರತ್ಯಕ್ಷನಾಗಿ, ದೊಣ್ಣೆಯನ್ನು ನೆಲಕ್ಕೆ ಕುಟ್ಟುತ್ತಾ ಕುಂಟನಂತೆ ನಟಿಸುತ್ತಾನೆ. ಆ ಸಂದರ್ಭದಲ್ಲಿ ಬ್ರಾಹ್ಮಣನು ಅಂಗಳದ ಬಲಬದಿಗೂ, ದಾಸಯ್ಯನು ಅಂಗಳದ ಎಡ ಬದಿಗೂ ಬಂದು ಕುಳಿತುಕೊಳ್ಳುತ್ತಾರೆ. ನಂತರ ಎಲ್ಲರೂ ಸೇರಿ ಕುಣಿಯುತ್ತಾರೆ. ಸನ್ಯಾಸಿ ವೇಷಧಾರಿ ಬ್ರಾಹ್ಮಣ ಹಾಗೂ ದಾಸಯ್ಯನಿಗೆ ತನ್ನ ಶಿಶ್ನವನ್ನು ಮುಟ್ಟಿಸಲು ಓಡುತ್ತಾನೆ. ಶಿಶ್ನದಿಂದ ಪಾರಾಗಲು ಇಬ್ಬರು ಓಡಿ ಮರೆಯಾಗುತ್ತಾರೆ.

ಶಿಶ್ನವನ್ನು ಕೈಯಲ್ಲಿ ಹಿಡಿದುಕೊಂಡ ‘ಸನ್ಯಾಸಿ’ ‘ಎದ್ದು ನಿಂತಿದೆ…. ಸಾಟಿ ಇಲ್ಲ…. ಒಂದೇ ಕುತ್ತಿಗೆ ಒಂಬತ್ತು ಮಕ್ಕಳಾಗಬೇಕು’ ಎಂದು ಹೇಳುತ್ತಾನೆ. ಮತ್ತೆ ಸ್ವಲ್ಪ ಕುಣಿದು “ಹೊಳೆ ಬದಿಗೆ ಹೋಗಬೇಕು…. ಲಕ್ಡಿ (ಶಿಶ್ನ) ಪೂಜೆ ಮಾಡಬೇಕು” ಎಂದು ಕುಣಿಯುತ್ತಿರುತ್ತಾನೆ. ತಕ್ಷಣ ಮರೆಯಾದ ಎಲ್ಲಾ ವೇಷಗಾರರು ಕುಣಿತದಲ್ಲಿ ಸೇರಿಕೊಳ್ಳುತ್ತಾರೆ. ಕೊನೆಯಲ್ಲಿ ಮನೆಯವರು ನೀಡಿದ ಅಕ್ಕಿ, ಹಣ್ಣು ಇತ್ಯಾದಿ ವಸ್ತುಗಳನ್ನು ಪಡೆದು ಮುಂದಿನ ಮನೆಯ ಅಂಗಳಕ್ಕೆ ನಡೆಯುತ್ತಾರೆ. ಹೀಗೆ ಸಂಗ್ರಹವಾದ ಹಣ ಮತ್ತು ದವಸಧಾನ್ಯಗಳಿಂದ ನಿಗದಿತ ದಿನದಂದು ಊರಿನವರನ್ನು ಆಹ್ವಾನಿಸಿ, ‘ಪುರುಷರ’ ಪೂಜೆ ಮಾಡುತ್ತಾರೆ. ಅಂದು ಕೋಳಿ, ಕೊಟ್ಟೆ, ಹೆಂಡ ಇತ್ಯಾದಿಗಳಿಂದ ನೈವೇದ್ಯ ಅರ್ಪಿಸಿ, ಎಲ್ಲರೂ ಸಹಭೋಜನ ಮಾಡುತ್ತಾರೆ.

ಪುಸ್ತಕ: ಕರ್ನಾಟಕದ ಜನಪದ ಆಚರಣೆಗಳು
ಲೇಖಕರು: ಡಾ. ಸ.ಚಿ. ರಮೇಶ್
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ

ಬ್ರಾಹ್ಮಣರನ್ನು ಇಷ್ಟೆಲ್ಲ ಗೇಲಿಯಾಡುವ ಮಂದಿ ಇದ್ದಾರೆ ಎಂಬುದನ್ನು ಅರಿತು ತುಮರಿಗೆ ಬಹಳ ಬೇಸರವಾಯ್ತು. ಅದರಲ್ಲೂ ಸಮಾಜದ ಸ್ಥಾನಮಾನವನ್ನು ಸಂಪೂರ್ಣ ಹಾಳುಗೆಡವಿದ ಕಚ್ಚೆಹರುಕನ ನೆನಪಾಗಿ ಕೋಪ ಬಂತು.

ಚಿತ್ರದಲ್ಲಿರುವ ಎಸ್.ಎಲ್.ಭೈರಪ್ಪನವರ ಹೇಳಿಕೆಯನ್ನು ನೀವೆಲ್ಲ ಗಮನಿಸಬೇಕು. ಆಡಿಕೊಳ್ಳುವ ಜನರ ಮುಂದೆ ಇನ್ನಷ್ಟು ನಗೆಪಾಟಲಿಗೆ ಈಡುಮಾಡಿದ ಕಚೆಹರುಕರನ್ನೆಲ್ಲ ಆದಷ್ಟು ಬೇಗ ಓಡಿಸಬೇಕು. ಅಂತವರಿಗೆ ಶಿಕ್ಷೆಯಾಗಬೇಕು. ನಮ್ಮ ಸಮಾಜದ ಕುರಿಗಳು ಬದಲಾಗಬೇಕು.

slb

Thumari Ramachandra

source: https://www.facebook.com/groups/1499395003680065/permalink/1607876626165235/

ಕವಳದ ಗೋಪಣ್ಣ ’ಸನ್ಯಾಸಿ’ ಆಗ್ತಾನಂತೆ

ಕವಳದ ಗೋಪಣ್ಣ ’ಸನ್ಯಾಸಿ’ ಆಗ್ತಾನಂತೆ

ಕವಳದ ಗೋಪಣ್ಣ ಹೇಳಿದ್ದನ್ನು ಅವನದೇ ಆಡುಭಾಷೆಯಲ್ಲಿ ಹೇಳಿದರೆ ಎಲ್ಲರಿಗೂ ಅರ್ಥವಾಗಲಿಕ್ಕಿಲ್ಲ. ತಾನೇಕೆ ಸನ್ಯಾಸಿಯಾಗಬಾರದು ಎಂಬುದು ಅವನ ಪ್ರಶ್ನೆ.

ಹಳ್ಳಿಗಳಲ್ಲಿ ಕೃಷಿ ಕೆಲಸಕ್ಕೆ ಜನ ಸಿಗೋದಿಲ್ಲ. ದನಗಳನ್ನು ಸಾಕೋದು ಕಷ್ಟವಾಗಿದ್ರಿಂದ ಗೊಬ್ಬರದ ಸಮಸ್ಯೆಯೂ ಇದೆ. ಸಕಾಲಕ್ಕೆ ಮಳೆಬೀಳದೆ ಕಾಲಮಾನವೇ ಬದಲಗ್ತಾ ಇದೆ. ಬಿದ್ರೆ ಬಿತ್ತು ಇಲ್ಲಾಂದ್ರೆ ಇಲ್ಲ. ನೇಪಾಳದಲ್ಲಿ ನೋಡದ್ರೆ ಭೂಕಂಪ.

ಇದನ್ನೆಲ್ಲ ನೋಡಿ ಗೋಪಣ್ಣನಿಗೆ ವೈರಾಗ್ಯ ಹುಟ್ಟಿಬಿಟ್ಟಿದೆ.

“ಅಲ್ದನ ರಾಮು ಬುಸ್ ಹಾಂವನವ ಊರಕಡಿಗೆ ಬಂದ್ರೆ ಈಗ ಎಷ್ಟೋ ಕಡಿಗೆ ಕಾಡಾನೆ ಗುಂಪು ಊರೊಳಗೆ ನುಗ್ಗದ ರೀತಿಲಿ ನೋಡ್ತಾರ ಮಾರಾಯ. ಇನ್ನಿನ್ನು ಓಡ್ಸದೊಂದೆ ಬಾಕಿ ಇದ್ದು.

ಮೊನ್ನೆ ಇತ್ಲಾಗಿ ಬೆಂಗಳೂರಿಂದ ಊರ್ಕಡಿಗೆ ಹೋಯ್ದ ಹೇಳಿ ಕೇಳಿದ್ದಿ. ಅಲ್ಲೆಲ್ಲೋ ಒಂದ ಕಡಿಗೆ ಎರಡು ತಾಸು ’ವಿಶ್ರಾಂತಿ’ ಇತ್ತಡ. ’ವಿಶ್ರಾಂತಿ’ ಗೊತ್ತಿದ್ದಲ? ಹಾಂ…ಅದೇಯ.

ಪಾಪ ಕುರಿಮೆಂದೆಯವೆಲ್ಲ “ದರ್ಶನ ಭಾಗ್ಯ” “ದರ್ಶನ ಭಾಗ್ಯ” ಹೇಳ್ಕೆಂಡು ಕುಣಿತಾ ಇದ್ದಿದ್ವಡ. ಲಾಲೂ ಪ್ರಸಾದ್ ಯಾದವು ಮುಲಾಯಂ ಸಿಂಗ್ ಯಾದವು ಎಲ್ಲರಿಗೂ ಸರ್ಕಾರ ಮಾಡಲೆ ಬೆಂಬಲ ಕೊಡೊ ಜನ ಅವರನ್ನ ಗೆಲ್ಸೋ ಜನ ಇಲ್ಯನ? ಇದೂ ಒಂದ್ ರೀತಿ ಹಾಂಗೇಯ.

ಸನ್ಯಾಸಿ ಅಗ್ಬುಟ್ರೆ ಆರಾಮು ತಗಳ. ಹಾವಿನಾಟ ಬೇಕಾದ್ರೂ ಆಡ್ಲಕ್ಕು ಗೋವಿನಾಟ ಬೇಕಾದ್ರೂ ಆಡ್ಲಕ್ಕು. ಎಲ್ಲಾ ನಮಸ್ಕಾರ ಹಾಕ್ಕೆಂಡು ಕಾಣಿಕೆ ಹಾಕ್ತ. ಒಬ್ಬ ಬಾವಯ್ಯನ್ನ ಜೊತಿಗಿಟ್ಕಂಡ್‍ಬುಟ್ರೆ ಬೇಕ್ ಬೇಕಾದ ಯೋಜನೆ ಮಾಡ್ಕೆಂಡು ಹಣ ಯಾವ ರೀತಿ ಬೇಕಾದ್ರೂ ಎತ್ತಲಡ್ಡಿಲ್ಲೆ.

ಯಾವ್ದೂ ಟ್ಯಾಕ್ಸು ಪಾಕ್ಸು ಎಂತದೂ ಇಲ್ಲೆ. ಆರಾಮಾಗಿ ಎರಡು ಹೊತ್ತು ಸ್ನಾನ ಹೊಡ್ಕಂಡು ಬೇಕಾದಾಗೆಲ್ಲ ’ಏಕಾಂತ’ ಮಾಡ್ಕೆಂಡು ಹಾಯಾಗಿ ಇದ್ಬುಡದು ಹೆಂಗೆ?

ಆದರೆ ಯನಗೊಂದು ಕಷ್ಟಿದ್ದು ಮಾರಾಯ. ಯನಗೆ ತಂಬಾಕು ಅಂದ್ರೆ ಜೀವ. ಕವಳಕ್ಕೆ ಪಲ್ಯಕಾಪಷ್ಟೆ ತಂಬಾಕು ತಂದಿಟ್ಕತ್ತಿ ಆನು. ಬೀನ್ಸ್ ಕೊಚ್ಚಿದ ಹಾಗೆ ಕೊಚ್ಚಿಟ್ಕತ್ತಿ. ಈಗ ಹಂಸ ಮಧು ಎಲ್ಲ ಬೈಂದನ. ಎನಗದ್ಕಿಂತಾ ಬಾಂದ್ಲಿ ತಂಬಾಕೆ ಇಷ್ಟ್ವ.

ಮಿಕ್ಕಿದ್ದೆಲ್ಲಾ ಹೆಂಗೂ ಏಕಾಂತದಲ್ಲಿ ಆಗೋಗ್ತನ, ತಂಬಾಕಿನ ಕವಳವೊಂದು ಬಹಿರಂಗದಲ್ಲೂ ಬಿಡಲೆ ಸಾಧ್ಯ ಇಲ್ಲೆ ಯನಗೆ. “ಶ್ರೀಸಂಸ್ಥಾನದವರು ಉತ್ತಮವಾದ ಕವಳ ಹಾಕಿಕೊಂಡಿದ್ದರಿಂದ ಇಂದಿನ ಪ್ರವಚನವನ್ನು ನಾಳೆಗೆ ಮುಂದೂಡಲಾಗಿದೆ. ಭಕ್ತ ಮಹಿಳೆಯರು ಇಂದು ಇಲ್ಲೇ ಇದ್ದು ಏಕಾಂತ ದರ್ಶನವನ್ನು ಪಡೆಯಬಹುದು” ಅಂತ ಮೈಕಗೆ ಹೇಳಿಸ್ಬುಡದು ಹೆಂಗೆ?”

ನಾನು ಹೇಳಿದೆ, “ಗೋಪಣ್ಣಾ, ಅದು ಅಷ್ಟೆಲ್ಲ ಸುಲಭದ ಕೆಲಸ ಅಲ್ಲ ಮಾರಾಯ. ನಿಂಗೆ ಒಳಗಡೆಗೆ ಒಂದ್ ರೀತಿ ಹೊರಗಡೆಗೆ ಶ್ರೀರಾಮಚಂದ್ರನ ರೀತಿ ಇರಲೆ ಬತ್ತಿಲ್ಲೆ. ಕ್ಯಾಮರಾಕ್ಕೆ ನಗ್ತ ನಗ್ತ ಪೋಸ್ ಕೊಡಲೂ ಬತ್ತಿಲ್ಲೆ. ಎಂತಾರು ವಿಷಯ ನೆನಪಾದ್ರೆ ಮೈಮೇಲೆಲ್ಲ ಕವಳ ಪುರ್ ಗುಡಸ್ಕೆಂಡ್ಬುಡ್ತಿ.

ಕಾವಿ ಮೇಲೆ ಕವಳ ಬಿದ್ರೆ ತೀರಾ ಗೊತ್ತಾಗದೆ ಇದ್ರೂ ಜನ ಅದನ್ನೆ ದೊಡ್ಡ ಇಶ್ಯೂ ಮಾಡ್ತ ಮಾರಾಯ. ಮತ್ತೆ ನಿಂಗೆ ಹಾಂವ್ ಬಿಡೊ ಅಭ್ಯಾಸವೂ ಇದ್ದಂಗಿಲ್ಲೆ. ಇದ್ದನ ಮತೆ? ಹಾಂವ್ ಬಿಡದೂ ಒಂದ್ ಕಲೆ. ಅದು ಎಲ್ಲರಿಗೂ ಬತಲ್ಲೆ. ಅದಕ್ಕೆ ಅಂತಂತಾ ಕಲಾವಿದರೇ ಆಯಕು.

ಹಾಂವ್ ಬಿಡ್ತಾ ಇದ್ದ ಮೇಲೆ ತಿಂಗಳಿಗೊಂದ ಸಲ ಇಂಜೆಕ್ಷನ್ ಬೇರೆ ತಗಳವು. ಮೇಲಾಗಿ ಸುಳ್ಳು ಸತ್ಯ ಮತ್ತು ನಿಜವಾದ ಸತ್ಯ ಹೇಳಿ ಸತ್ಯದಲ್ಲೆ ಎರಡು ಭಾಗ ಸ್ಟಡಿ ಮಾಡ್ಕೆಳವು.

ನಿನ್ನ ಪಾಪದ ಮುಖ ನೋಡಿರೆ ಹೆಣ್ಣ ಮಕ್ಕಳು ಬರದೂ ಕಷ್ಟ. ನೀನೇ ಖುದ್ದಾಗಿ ಕಣ್ ಹೊಡೆದು ಕರೆದ್ರೂ ಎಲ್ಲರೂ ಓಡಿ ಹೋಗ್ತ ಬಿಟ್ರೆ ’ಏಕಾಂತ’ಕ್ಕೇನ್ ಬರದಿಲ್ಲೆ. ಮೇಲಾಗಿ ಬಾಗಲಗೆಲ್ಲ ಬ್ರಹ್ಮರಾಕ್ಷಸ ಇದ್ನ ಎಂತು? ಎಲ್ಲೆಲ್ಲಿ ಯಾರ್‍ಯಾರಿದ್ದ? ಯಾವ ರೀತಿ ಹಾಂವ್ ಬಿಟ್ರೆ ಏನ್ ಪರಿಣಾಮ ಆಗ್ಲಕ್ಕು ಇದೆಲ್ಲ ಐಡಿಯಾ ಮಾಡ್ಕಳಕೆ ಬರವು.

ಕಿತಾಪತಿ ಬಾವಯ್ಯ ತಾನು ಮೊದಲು ಅಂದ್ರೆ ಅವಂಗೆ ಮೊದಲು ಹಾರಕ್ಕೆ ಬಿಡವು. ನಂತ್ರ ನೀ ಹಾರವು. ನಿಂಗಿದೆಲ್ಲ ಆಗದಲ್ಲ. ಸುಮ್ನೇ ಕಷ್ಟವೋ ಸುಖವೋ ಇಷ್ಟದಿನ ಇದ್ದಂಗೆ ಇದ್ಬುಡು”

“ನೀ ಏನೇ ಹೇಳು ರಾಮು, ಆನೊಂದ್ ಸಲ ಪ್ರಯತ್ನ ಮಾಡೋದ್ ಮಾಡ್ತಿ. ಸಕ್ಸೆಸ್ ಆದರೆ ಆಗಲಿ. ಇಲ್ದಿದ್ರೆ ಎಲ್ಲಾರ್ಜೊತಿಗೂ ರಾಜಿ ಮಾಡ್ಕೆಂಡು “ಮಾಜಿ ಶ್ರೀಸಂಸ್ಥಾನ” ಆಗ್ಬುಡ್ತಿ. ಮಾಜಿ ಆದ್ರೂ ಒಂದ್ ರೀತಿ ಮಾಜಿ ಎಂ.ಎಲ್.ಎ ಇದ್ದಂಗೆ ಇರ್ತು ಮಾರಾಯ. ಹೀಂಗಾಗಿ ಯನಗೆ ನೀನು ಇಂಗ್ಲೀಷು ಹಿಂದಿ ಹೇಳ್ಕೊಡವು. ಈಗಲೇ ಕತೆಯೆಲ್ಲ ಹೊಡ್ಯದಿಲ್ಲೆ ಅದನ್ನ ಆಮೇಲ್ ನೋಡ್ಕಳನ.”

ಗೋಪಣ್ಣ ನನ್ನ ಸಲಹೆಯ ಜೊತೆಗೆ ರಾಜಿಯಾಗುವ ಮೂಡ್‍ನಲ್ಲಿ ಇದ್ದ ಹಾಗಿರಲಿಲ್ಲ. “ಆಯ್ತಪ್ಪ ನಿನ್ನಿಷ್ಟ” ಅಂತ ಸ್ಕೈಪ್ ಆಫ್ ಮಾಡಿದೆ.

Thumari Ramachandra

source: https://www.facebook.com/groups/1499395003680065/permalink/1607249146227983/

Swamiji raped woman 154 times

Swamiji raped woman 154 times

Posted April 27th, 2015, 07:24 PM IST

source: http://english.tupaki.com/enews/view/Swamiji-raped-woman-154-times/100061

ಸ್ತ್ರೀ ಕಾಮಚಂದಿರನೆ ಸ್ತ್ರೀಲೋಲ ಸುಂದರನೆ ಸ್ತ್ರೀಗಳ್ಳರಾಯಣ ಕಾಮ್ ಕಾಮ್ ಕಾಮ್

ಸ್ತ್ರೀ ಕಾಮಚಂದಿರನೆ ಸ್ತ್ರೀಲೋಲ ಸುಂದರನೆ ಸ್ತ್ರೀಗಳ್ಳರಾಯಣ ಕಾಮ್ ಕಾಮ್ ಕಾಮ್

“ಯಾವ ಮಂತ್ರವನ್ನು ಉಪಯೋಗಿಸಿದರೆ ಶೀಘ್ರ ಫಲದೊರೆಯುತ್ತದೆ ಎಂದು ನೋಡುತ್ತಿದ್ದೇವೆ ನಾವು. ಸಾಗರದ ನಮ್ಮ ಸಮಾಜಕ್ಕೆ ನಮ್ಮ ಹಳದೀ ತಾಲಿಬಾನ್ ಹೀಗೆ ಹೇಳಿದೆ, “ನೋಡ್ರಪಾ ನಿಂಗಳ ಕೈಲಿ ಎಷ್ಟೆಷ್ಟಾಗ್ತೊ ಮಾಡಿ ಹನುಮಾನ ಚಾಲೀಸಾ. ಒಟ್ಟು ಹತ್ತುಲಕ್ಷ ಮಾಡವು. ಇವತ್ತು ಅಂದರೆ ಇವತ್ತೇ ಮುಗದ್ರೆ ಬರ್ತಿ ಒಳ್ಳೇದು. ಆ ರಾಗ ಈ ರಾಗ ಅಂತಿಲ್ಲೆ. ಯಾವ್ದೋ ಒಂದು ರಾಗ ಹಿಡ್ಕಂಡು ಮಾಡಿ ಲೆಕ್ಕಕೊಡಿ. ಹಾಗಂತ ಅಪ್ಪಣೆ ಆಯ್ದು.”

’ಅಪ್ಪಣೆ’ ’ಅರ್ಪಣೆ’ ಎಂಬ ಪದಗಳ ಮೌಲ್ಯವನ್ನೆಲ್ಲ ಕಳೆದುಬಿಟ್ಟಿದ್ದೇವೆ ನಾವು. ನಮ್ಮ ಹಾವಾಡಿಗತನದಿಂದ ಹಳ್ಳ ಹಿಡಿದ ಸಂಸ್ಥಾನದ ವ್ಯವಸ್ಥೆಯನ್ನು ಪುನಾರಚಿಸಿಕೊಳ್ಳಲಿಕ್ಕೆ ಒದ್ದಾಡುತ್ತಿದ್ದೇವೆ. “ಅಪ್ಪಣೆಯಾಗಿದೆ” ಎಂದರೆ ಈಗೀಗ ಯಾರೂ ಬೆಲೆ ಕೊಡುತ್ತಿಲ್ಲ. “ಹೀಂಗೆ ವಿನಂತಿ ಮಾಡ್ಕೈಂದ” ಅಂದ್ರೆ ಸ್ವಲ್ಪನಾದ್ರೂ ಕೆಲಸವಾದೀತು.

ದಶಕದ ಹಿಂದೆ “ಅಪ್ಪಣೆಯಾಗಿದೆ” ಎಂದರೆ ಸಾಕಾಗಿತ್ತು. ಎಲ್ಲರೂ ಭಕ್ತಿ ಶ್ರದ್ಧೆಯಿಂದ ಹೇಳಿದ್ದನ್ನು ಮಾಡ್ತಿದ್ರು. ಈಗ “ಅಪ್ಪಣೆಯಾಗಿದೆ” ಅಂದ್ರೆ “ಅಪ್ಪಣೆ ಮಾಡ್ತ ಅಪ್ಪಣೆಯ…ಇಂವನ ಹಾದರಕ್ಕೆ ನಾವು ಸಾಯವು” ಎಂದು ಗೊಣಗಿದವರೂ ಇದ್ದಾರಂತೆ.

ಉರಿಮೂತ್ರದ ನೋವಿನ ಉಪಶಮನಕ್ಕೆ ಎಳನೀರು, ಶರಬತ್ತು, ಮಜ್ಜಿಗೆ, ನೀರು ಇನ್ನೇನೇನೋ ಕಂಡಿದ್ದನ್ನೆಲ್ಲ ಕುಡಿದರಂತೆ ಅನ್ನೋ ಹಾಗೆ ನಮ್ಮ ಪರಪ್ಪನವನ ವಾಸವನ್ನು ತಪ್ಪಿಸಿಕೊಳ್ಳಲಿಕ್ಕಾಗಿ ನಾವು ಮಾಡದೇ ಬಿಟ್ಟ ಕಸರತ್ತಿಲ್ಲ. ವೈದಿಕ ಮತ್ತು ಅವೈದಿಕ[ತಾಂತ್ರಿಕ] ಎರಡೂ ಮಾರ್ಗಗಳಲ್ಲಿ ಸಿಗುವ ಎಲ್ಲಾ ವಿಧಾನಗಳನ್ನು ನಡೆಸುತ್ತಿದ್ದೇವೆ ನಾವು.

ಹನುಮಾನ್ ಚಾಲೀಸಾ ಎಂಬುದು ಉತ್ತರಭಾರತದಲ್ಲಿ ಹೆಚ್ಚಿಗೆ ಬಳಸಲ್ಪಡುವ ಒಂದು ವಿಧದ ಹಾಡು. ಅದರಲ್ಲಿ ಆಂಜನೇಯನನ್ನು ಹಲವಾರು ವಿಧದಲ್ಲಿ ಹೊಗಳಿ ತಮಗೆ ರಕ್ಷಣೆ ಒದಗಿಸು ಎಂದು ಪ್ರಾರ್ಥಿಸಲಾಗುತ್ತದೆ. ಗೋಸ್ವಾಮಿ ತುಲಸೀದಾಸರು ಅದನ್ನು ರಚಿಸಿದರಂತೆ. ಅದು ಬಹಳ ಪರಿಣಾಮಕಾರಿ ಎಂದು ಉತ್ತರದವರು ಹೇಳಿದರು. ಅದಕ್ಕೆ ಅದನ್ನು ಜಪಿಸಲು ಹೇಳಿದ್ದೇವೆ.

ನಮ್ಮ ಸಲುವಾಗಿ ಅನೇಕ ಕುರಿಗಳು ಕಳೆದ ೬-೭ ತಿಂಗಳಿಂದ ಸರಿಯಾಗಿ ನಿದ್ರೆ ಊಟ ಮಾಡದೆ ಜಪ ತಪ ನಡೆಸುತ್ತಿವೆ. ನಾವು ಹೇಳಿದ ಮತ್ತು ಅವುಗಳಿಗೆ ತೋಚಿದ ಎಲ್ಲ ಜಪತಪ ಪೂಜೆ ಪುನಸ್ಕಾರಗಳನ್ನು ಮಾಡುತ್ತ ನಮ್ಮ ಮರ್ಯಾದೆ ಕಾಪಾಡುವಂತೆ ಪ್ರಾರ್ಥಿಸುತ್ತಿವೆ.

ನೀವೀಗ ಕೇಳಬಹುದು. ದೇವರಿಗೆ ತನ್ನಲ್ಲೇ ತಾಕತ್ತಿಲ್ಲವೇ? ಬೇರೆ ಜಪತಪ ಯಾಕೆ ಎಂದು. ರಾಮಾಯಣದಲ್ಲಿ ರಾವಣನನ್ನು ವಧಿಸುವ ಮೊದಲು ಅಗಸ್ತ್ಯ ಮುನಿಗಳು ಉಪದೇಶಿಸಿದ ಆದಿತ್ಯ ಹೃದಯವನ್ನು ಪಠಿಸಿದನಂತೆ. ಅಂದಹಾಗೆ ನಮ್ಮ ತಾಲೀಬಾನಿಗೆ ಮುಂದಿನ ಅಪ್ಪಣೆ “ಏ ಎಲ್ಲರಿಗೂ ಆದಿತ್ಯ ಹೃದಯ ಮಾಡದಕ್ಕೆ ಹೇಳ್ರಪ್ಪಾ” ಅಂತ.

ನಮ್ಮ ಪವಾಡವನ್ನು ಮಾತ್ರ ನೀವು ಮೆಚ್ಚಲೇಬೇಕು. ಅವನ್ಯಾರೋ ತುಮರಿ ರಾಮಚಂದ್ರ ಅನ್ನೋ ಬ್ರಹ್ಮರಾಕ್ಷಸ ನಮ್ಮ ಬಗ್ಗೆ ಬಹಳ ಬರೆದಿದ್ದಾನಂತೆ. ಅದಕ್ಕೆ ನಾವು ಶಾಪ ಕೊಟ್ಟುಬಿಟ್ಟಿದ್ದೇವೆ. ಶಾಪ ಕೊಟ್ಟಿದ್ದೇ ತಡ ಆತನ ಲ್ಯಾಪ್ ಟಾಪು ಕ್ರಾಷ್ ಆಗಿಬಿಟ್ಟಿತಂತೆ. [ಅಮೇಲೆ ಮತ್ತೆ ಸರಿಯಾಯ್ತಂತೆ ಅದು ಇಲ್ಲಿ ಬೇಡ]

ನಮ್ಮ ಕುರಿಗಳಿಗೆ ದೊಡ್ಡ ದೊಡ್ಡ ಆಸೆ ಹುಟ್ಟಿಸಬೇಕೆಂಬುದು ನಮ್ಮ ಇಚ್ಛೆ ಅದಕ್ಕೆ ಕೋಟಿಕೋಟಿಗಳ ಹೊಸ ಹೊಸ ಪ್ರಾಜೆಕ್ಟ್ ಮುಂದೆ ಇಟ್ಟಿದ್ದೇವೆ. ಅದನ್ನು ನೋಡಿಕೊಂಡಾದರೂ ಅವರೆಲ್ಲ ಸೇರಿ ನಮ್ಮ ಪರಪ್ಪನವನ ವಾಸವನ್ನು ತಪ್ಪಿಸಬಹುದು ಎಂಬುದು ನಮ್ಮ ಒಳಗುಟ್ಟು.

ಅದೇನೋ ಹಾಡುಗಳ ಸೀಡಿಯಂತೆ, ನಮ್ಮ ಹಳದೀ ತಾಲಿಬಾನಿನವರು ಬಿಡುಗಡೆ ಮಾಡಲು ಅಡ್ಡಿಪಡಿಸುತ್ತೇವೆ ಅಂತಿದ್ರು. ಆಮೇಲೆ ಮತ್ತೆ ಬೇರೆ ಕೇಸು ಜಡೀತಾರೆ ಅಂತ ನಾವೇ ಬೇಡ ಅಂದ್ವಿ. ನಮ್ಮ ವಿರುದ್ಧ ಯಾರೂ ಸೊಲ್ಲೆತ್ತಕೂಡದು. ಏನಾದರೂ ಹೇಳಿದ್ದಾರೆಂದರೆ ಅವರು ಜೀವನಪೂರ್ತಿ ಕಷ್ಟದಲ್ಲೇ ಕಳೆಯುವಂತೆ ಮಾಡುತ್ತಾರೆ ನಮ್ಮ ತಾಲೀಬಾನ್ ಭಕ್ತರು.

ನಮ್ಮ ವಿರೋಧಿಗಳಾದ ಆ ಹುಲುಮಾನವರಿಗೆ ನಾವು ಹೇಳುವುದೇನಿದೆ? “ಕಾಮಾತುರಾಣಾಂ ನ ಭಯಂ ನ ಲಜ್ಜಾ” ಎಂದು ಶಂಕರ ಭಗವತ್ಪಾದರು ಹೇಳಿದ್ದನ್ನು ಪ್ರಾಕ್ಟಿಕಲ್ ಮಾಡಿ ತೋರಿಸುತ್ತಿರುವ ಸಾಧಕರು ನಾವು. ಇದನ್ನು ಅರ್ಥಮಾಡಿಕೊಳ್ಳಲಾರದ ಜನರಿಗೆ ಏನೆನ್ನೋಣ?

ವಿ.ಸೂ. ನಿಮ್ಮಲ್ಲಿ ಮುಖಂಡರಿಗೆ ಯಾರಿಗಾದರೂ ಪಕ್ಷಾಂತರ ಮಾಡುವ ಇಚ್ಛೆಯಿದ್ದರೆ ಬರಬಹುದು. ನಿಮ್ಮ ಕರ್ಚಿಗೆ ವ್ಯವಸ್ಥ ಮಾಡಲಾಗುತ್ತದೆ. ನಿಮ್ಮಲ್ಲಿ ವಿಶೇಷ ಫಲವುಳ್ಳ ಯಾವುದಾದರೂ ಮಂತ್ರವಿದ್ದರೆ ತಿಳಿಸಿ. ಇದು ಸಂಸ್ಥಾನದ ಮರ್ಯಾದೆ ಪ್ರಶ್ನೆ. ಸಂಸ್ಥಾನ ಉಳಿದರೆ ನೀವೂ ಸಹ ಉಳಿಯುತ್ತೀರಿ.

ಅವನ್ಯಾರೋ ಚಂದ್ರಶೇಖರ ಇಟ್ಲನಂತೆ. ಬೆಂಗಳೂರು, ಚೆನ್ನೈ, ಹೈದರಾಬಾದು ಸುತ್ತಮುತ್ತಲ ಎಲ್ಲ ಏರ್ ಪೋರ್ಟಿನಲ್ಲೂ ಅವನ ಜನರನ್ನು ಇಟ್ಟಿದ್ದಾನಂತೆ. ನಮಗೆ ಹಾರಿ ಹೋಗಿ ತಪ್ಪಿಸಿಕೊಳ್ಳಲೂ ಆಗುತ್ತಿಲ್ಲ. ಈಗೇನಿದ್ದರೂ ಕೇರಳದ ಮಾಂತ್ರಿಕರೇ ಗತಿ. ಬರನಾಡಿಗ ಜನರಿಗೆ ಹೇಳಿ ಅವರನ್ನೆಲ್ಲ ಕರೆಸಿಕೊಳ್ತೇವೆ. ದೂರದಲ್ಲಿರುವವರನ್ನು ಕರೆಸಬೇಕೆಂದರೆ ಈ ಬರನಾಡಿಗರು ಬಹಳ ಹೆಲ್ಪ್ ಮಾಡ್ತಾರೆ.

ಮತ್ತೇನಿಲ್ಲ ಈಗ ಮಲ್ಲಿಕ ತೋತಾಪುರಿ ನೀಲಂ ಸೀಸನ್ ಬಂದಿದೆ. ಮತ್ತೆ ನಳನಳಿಸುವ ರಸಭರಿತ ಬಣ್ಣಬಣ್ಣದ ರಸಗುಲ್ಲಗಳಂತ ಹಣ್ಣುಗಳು. ಈ ಜನ್ಮದಲ್ಲಿ ಮತ್ತೆ ನಮಗೆ ಅವುಗಳನ್ನೆಲ್ಲ ರುಚಿನೋಡಲು ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ.

ವಸಂತಮಾಸದಲ್ಲಿ ಹಣ್ಣುಗಳನ್ನು ಕಂಡಾಗ ಹಾವುಗಳೂ ಹೊರಗೆ ಬರುವುದು ಹೆಚ್ಚು. ಮನ್ಮಥನ ಬಾಣಕ್ಕೆ ಇಡೀ ಪರಿಸರವೇ ಹೂ ಹಣ್ಣುಗಳು ಮತ್ತು ಚಿಗುರು ಹೊಸ ಎಲೆಗಳಿಂದ ಸಂಭ್ರಮಿಸುವಾಗ ಅಲ್ಲಲ್ಲಿ ಮೆಲ್ಲಮೆಲ್ಲಗೆ ಮುದ್ದಾದ ಹೆಜ್ಜೆಗಳನ್ನಿಟ್ಟು ಓಡಾಡುವ ’ಹರಿಣಿ’ಗಳನ್ನು ಕಂಡಾಗಲಂತೂ ’ಹಾವಾಡಿಗ’ ತನ್ನನ್ನೇ ಮರೆಯುತ್ತಾನೆ.

ತೆಳ್ಳನ ’ಜಿಂಕೆಗಳ’ನ್ನು ಬಿಟ್ಟು ದಪ್ಪದ ’ಆನೆಗಳು’ ಬಂದರೆ ನಾವು ’ಹಾವಾಡಿಗ’ ಇದ್ದವರು ’ಕಾವಾಡಿಗ’ರಾಗಿಬಿಡ್ತೇವೆ. ಒಟ್ನಲ್ಲಿ ಯಾವ ಆಕಾರ ಬಣ್ಣ ನಮಗೆ ಮುಖ್ಯವಲ್ಲ. ’ಸೂರ್ಯಚಂದ್ರ’ರು ಇದ್ದರೆ ಸಾಕು. ಹೊಲಗಳಲ್ಲಿ ಹಾವಿಗೆ ಬಿಲಗಳಿದ್ದರೆ ಸಾಕು.

ಸದ್ಯ ಯಾಕೋ ಕಾಮನೆಗಳು ಹೆಚ್ಚುತ್ತಿವೆ. ಈಗ ಒಟ್ಟಾಗಿ ಸೇರಿ ಕಾಮನ ಭಜನೆ ಮಾಡೋಣ.

ಸ್ತ್ರೀ ಕಾಮಚಂದಿರನೆ ಸ್ತ್ರೀಲೋಲ ಸುಂದರನೆ ಸ್ತ್ರೀಗಳ್ಳರಾಯಣ ಕಾಮ್ ಕಾಮ್ ಕಾಮ್
..ಕಾಮನೆ ನಿಸ್ಸೀಮನೆ ….ಕಾಮನೆ ನಿಸ್ಸೀಮನೆ
….
ಲೋಕೈಕ ಸುಂದರನೆ ಆ ರತಿ ವಲ್ಲಭನೆ
ಸುಂದರಿಯರ ಸಪ್ಲೈ ಮಾಡು ಕಾಮ್ ಕಾಮ್ ಕಾಮ್.”

Thumari Ramachandra

source: https://www.facebook.com/groups/1499395003680065/permalink/1606749559611275/