ಬೇತಾಳ ಕಥೆ ಸಂಚಿಕೆ

ಬೇತಾಳ ಕಥೆ ಸಂಚಿಕೆ -೧೯
……………………………………….
ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಚಿಂತನೆಯನ್ನು ನಿನ್ನ ಮುಂದಿಡುತ್ತೇನೆ
ಗುರುವೊಬ್ಬನ ನಂಬಿಕೆ ಹೇಗೆ ಹುಸಿಯಾಗುತ್ತದೆ, ನಾಲಗೆ ಮೂರೇ ಅಂಗುಲವಿದ್ದರೂ,ಅದು ಆರು ಅಡಿ ಮನುಷ್ಯನನ್ನು ಹೇಗೆ ಕೊಲ್ಲುತ್ತದೆ ಎಂಬುದನ್ನು ಹೇಳುತ್ತೇನೆ ಕೇಳು.!
ಧೀರ್ಘಕಾಲದ ಸಾಧನೆಯಿಂದ ಹಲವಾರು ಸಿದ್ದಿಗಳನ್ನು ಮಾಡಿಕೊಂಡ ಸ್ವಯಂಘೋಷಿತ ದೇವಮಾನವ ಸನ್ಯಾಸಿಯೊನ್ಬನಿದ್ದ. ಅವನಿಗೆ 1500 ಮಂದಿ ಶಿಷ್ಯರಿದ್ದರು. ತಮ್ಮ ಗುರುವಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಅವರು ಸಿದ್ದರಿದ್ದರು. (ಈಗಿನ ಕೆಲವೊಂದು ಗುರುಗಳೂ ಹಾಗೇ ಬಾವಿಸಿದ್ದಾರೆ)
ಆ ಸನ್ಯಾಸಿ ಜ್ಞಾನದೇವರು ಎಂಬ ಒಬ್ಬ ಮಹಾಗುರುಗಳ ಶಿಷ್ಯನಾಗಲು ಬಯಸಿದ. ಅವರಾದರೋ ದೊಡ್ಡ ಪವಾಡ ಪುರುಷರಾಗಿದ್ದರು.! ಹಲವು ಪವಾಡಗಳನ್ನು ಮಾಡಿ ಮಹಾಪುರುಷರು ಎನಿಸಿಕೊಂಡಿದ್ದರು.
ಜ್ಞಾನ ದೇವರ ಭೇಟಿಗಾಗಿ ತನ್ನ 1500 ಶಿಷ್ಯರನ್ನೂ ಕೂಡಿಕೊಂಡು ಆ ಸನ್ಯಾಸಿ ಹೊರಟ. ಅದೂ ಹೇಗೆ ಭಯಂಕರ ಹುಲಿಯ ಬೆನ್ನೇರಿ, ಅದನ್ನು ನಿಯಂತ್ರಿಸಲು ಅತ್ಯಂತ ಭೀಕರ ನಾಗರಹಾವಿನ ಚಾವಟಿ.!
(ತನ್ನ ಆಡಂಬರದ,ಶೋಕಿಯ ಪ್ರದರ್ಶನಕ್ಕೆ ಈಗ ಆಡಿ ಕಾರಿನಲ್ಲಿ ಪಯಣಿಸಿದಂತೆ!)
ಜ್ಞಾನದೇವರು ತಮ್ಮ ಮನೆಯಲ್ಲಿ ಮಣ್ಣಿನ ಗೋಡೆಯ ಮೇಲೆ ಕುಳಿತು ಧ್ಯಾನ ನಿರತರಾಗಿದ್ದರು. ಅ ಸನ್ಯಾಸಿ ಬರುವುದನ್ನು ಅಲ್ಲಿಂದಲೇ ಗಮನಿಸಿದರು. ಅವನನ್ನು ಸ್ವಾಗತಿಸಲು ತಾವು ಕುಳಿತಿದ್ದ ಗೋಡೆಗೆ ಚಲಿಸಲು ಆದೇಶ ನೀಡಿದರು. ಆ ಅಚೇತನ ಗೋಡೆ ಜ್ಞಾನದೇವರು ಹಾಗೂ ಆ ಮನೆಯಲ್ಲಿರುವ ಸಕಲ ವಸ್ತುಗಳ ಸಹಿತ ಚಲಿಸಲು ಆರಂಭಿಸಿತು.! ಈ ಅದ್ಭುತ ಪವಾಡವನ್ನು ಕಣ್ಣಾರೆ ಕಂಡ ಆ ಸನ್ಯಾಸಿ ತಾನು ಕುಳಿತಿದ್ದ ಹುಲಿಯ ಮೇಲಿಂದ ಇಳಿದು ನೇರವಾಗಿ ಜ್ಞಾನದೇವರ ಪಾದಗಳ ಮೇಲೆ ಬಿದ್ದನು. ಹುಲಿ ಹಾಗೂ ನಾಗರ ಹಾವು ಕಣ್ಮರೆಯಾದವು.
ಮರುದಿನ ಮುಂಜಾನೆ ಶುಭ ಮುಹೂರ್ತದಲ್ಲಿ ಶಿಷ್ಯದೀಕ್ಷೆ ನೀಡುವುದಾಗಿ ಜ್ಞಾನದೇವರು ಆ ಸನ್ಯಾಸಿಗೆ ಹೇಳಿದರು.
ಆದರೆ ಒಂದು ಷರತ್ತು ವಿಧಿಸಿದರು.!
ತಮ್ಮ 1500 ಮಂದಿ ಶಿಷ್ಯರಲ್ಲಿ ಒಬ್ಬನು ತಮ್ಮ ಸಲುವಾಗಿ ಪ್ರಾಣಾರ್ಪಣೆ ಮಾಡಬೇಕು! .ಎಂದು ತಿಳಿಸಿದರು.
ಆ ಸನ್ಯಾಸಿಗೋ ತಮ್ಮ ಶಿಷ್ಯರಲ್ಲಿ ಬಹಳ ನಂಬಿಕೆ.ಒಬ್ಬರೇನು ಎಲ್ಲರೂ ತನಗೋಸ್ಕರ ಪ್ರಾಣಾರ್ಪಣೆ ಮಾಡಲು ಸಿದ್ಧರು ಎಂದೇ ಭಾವಿಸಿದ್ದರು. ಹಾಗಾಗಿ ಷರತ್ತಿಗೆ ಒಪ್ಪಿ ನೇರವಾಗಿ ತಾವು ರಾತ್ರಿ ತಂಗಿದ್ದ ಶಿಬಿರಕ್ಕೆ ಹೋದರು, ತಮ್ಮ ಶಿಷ್ಯರನ್ನೆಲ್ಲ ಕರೆದು ಜ್ಞಾನದೇವರ ಆಶಯವನ್ನು ತಿಳಿಸಿದರು.
ತಮ್ಮ ಸಲುವಾಗಿ ಪ್ರಾಣಾರ್ಪಣೆ ಮಾಡಬಯಸುವ ಶಿಷ್ಯರನ್ನು ಆಯ್ಕೆ ಮಾಡಲು ತಿಳಿಸಿ ,ಏಕಾಂತಕ್ಕೆ ತೆರಳಿದರು!.
ಮರುದಿನ ಮುಂಜಾನೆ ಆ ಸನ್ಯಾಸಿ ಎದ್ದು ಹೊರಬಂದು ನೋಡುತ್ತಾನೆ.ಅವನಿಗೆ ಅಚ್ಚರಿಯೊಂದು ಕಾದಿತ್ತು.!
ಆ ಅಚ್ಚರಿ ಏನಿರಬಹುದು.?1500 ಮಂದಿಯೂ ಪ್ರಾಣತ್ಯಗಕ್ಕೆ ಸಿದ್ದರರಾಗಿದ್ದರೇ.? ಅಥವಾ ಎಲ್ಲರೂ ಓಡಿಹೋಗಿದ್ದರೇ..?
ಆ 1500 ಮಂದಿಯಲ್ಲಿ ಒಂದಷ್ಟು ಗಿಂಡಿಗಳಿರಬಹುದು, ಪರಿವಾರದವರಿರಬಹುದು, ಬಾಲಬಡುಕ ಹೊಗಳುಭಟರಿದ್ದಿರಬಹುದು.,ಆದರೆ ಆ ಸನ್ಯಾಸಿಯ ಕೊನೆಯ ಘಳಿಗೆಯ ಸನ್ನಿವೇಶ ಹೇಗಿದ್ದಿರಬಹುದು..?
ಕೊನೆಗೂ ತನ್ನ ಹಿಂಬಾಲಕರನ್ನು ನಂಬಿದ ಸನ್ಯಾಸಿಗೆ ಜ್ಞಾನೋದಯವಾಯಿತೇ.?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!! ಎಂದು ಬೇತಾಳ ಹೇಳಿತು.

ಬೇತಾಳ ಕಥೆ ಸಂಚಿಕೆ -೧೮
……………………………………….
ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಚಿಂತನೆಯನ್ನು ನಿನ್ನ ಮುಂದಿಡುತ್ತೇನೆ
ಗುರುವೊಬ್ಬ. ಶಿಷ್ಯರನ್ನು ಯಾವ ರೀತಿಯಾಗಿ ಮೋಸಗೊಳಿಸಿ ತನ್ನ ಪೀಠವನ್ನು ಭದ್ರಗೊಳಿಸುತ್ತಾನೆ ಎಂಬುದನ್ನು ಹೇಳುತ್ತೇನೆ ಕೇಳು.
ಒಂದೂರಿನಲ್ಲ್ಲಿ ಮಹಾನ್ ಪ್ರಚಂಡ ಗುರುವೊಬ್ಬನಿದ್ದ. ಅವನಿಗೆ ಈರ್ವರು ಶಿಷ್ಯರಿದ್ದರು. ಒಂದೊಮ್ಮೆ ಗುರುವಿಗೆ ಈರ್ವರನ್ನು ಪರೀಕ್ಷಿಸುವ ಹಂಬಲವಾಯ್ತು.
ಮೊದಲ ಶಿಷ್ಯನಿಗೆ ಸನಿಹದಲ್ಲೇ ಹುಲ್ಲು ಮೇಯುತ್ತಿದ್ದ ಕುದುರೆಯನ್ನು ತೋರಿಸಿ,”ಅದು ಕತ್ತೆಯಲ್ಲವೇ,?” ಎಂದು ಪ್ರಶ್ನಿಸಿದರು. ಅದಕ್ಕೆ ಶಿಷ್ಯ ,”ಅಲ್ಲ ಗುರುಗಳೇ ಅದು ಕುದುರೆ” ಎಂದನು.ಪುನಃ ಗುರುಗಳು,”ಮೂರ್ಖಾ ಅದು ಖಂಡಿತವಾಗಿಯೂ ಕತ್ತೆ ತಿಳಿಯಿತೆ” ಅಂದರು.” ಇಲ್ಲ ಗುರುಗಳೇ ಅದೆಂದಿಗೂ ಕತ್ತೆಯಾಗಲು ಸಾಧ್ಯವೇ ಇಲ್ಲ ನಿಮ್ಮ ಕಣ್ಣಿಗೆ ಮೋಸವಾಗಿರಬಹುದು, ಆದರೆ ನನ್ನ ಕಣ್ಣಿಗೆ ಮೋಸವಾಗಲು ಸಾಧ್ಯವಿಲ್ಲ ಅದು ಖಂಡಿತವಾಗಿಯೂ ಕುದುರೆಯೇರಿ ಸರಿ.” ಶಿಷ್ಯನೆಂದನು.
ಆಗ ಸನಿಹದಲ್ಲೇ ಇದೆಲ್ಲವನ್ನೂ ಗಮನಿಸುತ್ತಿದ್ದ ಎರಡನೆಯ ಶಿಷ್ಯನಲ್ಲಿ ಕೇಳಿದರು “ಅದೋ ಅಲ್ಲಿ ನಿಂತಿರುವುದು ಕತ್ತೆಯಲ್ಲವೇ?” “ತಮ್ಮ ಕಣ್ಣಿಗೆ ಹಾಗೆಂದು ಗೋಚರಿಸಿದರೆ ಖಂಡಿತವಾಗಿಯೂ ಅದು ಕತ್ತೆಯೇ ಸರಿ ಗುರುಗಳೇ”. ಹಾಗೆಂದು ಉತ್ತರಿಸಿದ ಎರಡನೆಯ ಶಿಷ್ಯ.!
ತಕ್ಷಣ ಅಲ್ಲಿಯೇ ನಿಂತಿದ್ದ ಮೊದಲ ಶಿಷ್ಯ
ಎರಡನೆಯವನನ್ನು ಕುರಿತು,”ಏನು ಮಿತ್ರ ನಿನ್ನ ಕಣ್ಣುಗಳು ಸರಿಯಾಗಿ ಕಾಣುತ್ತಿಲ್ಲವೆ?ಅದು ಕತ್ತೆಯಲ್ಲ ಕುದುರೆ ಎಂದು ನೀನಾದರೂ ಗುರುಗಳಿಗೆ ಹೇಳಬಹುದಲ್ಲವೇ?”ಎಂದ. ಎರಡನೆಯ ಶಿಷ್ಯ ಹೇಳಿದ,” ಗೆಳೆಯ ನೀನು ಹೇಳಿದ ಮಾತು ನಿಜ,ಆದರೆ ವಿಚಾರ ಮಾಡಲು ನನ್ನದೆನ್ನುವ ಬುದ್ದಿ ಶಕ್ತಿ,ಮನಸ್ಸು ಯಾವುದೂ ನನ್ನ ಬಳಿ ಇಲ್ಲ ಎಲ್ಲವನ್ನೂ ಗುರುಗಳಿಗೆ ಸಮರ್ಪಣೆ ಮಾಡಿಯಾಗಿದೆ”.
ಈಗ ಹೇಳು,ವಿಚಾರ ಮಾಡುವ ಮೊದಲ ಶಿಷ್ಯನ ವರ್ತನೆಯನ್ನು ಖಂಡಿಸಬೇಕೊ? ಪುರಸ್ಕರಿಸಬೇಕೊ?
ಅಥವಾ ಗುರು ಹೇಳಿದ್ದೆಲ್ಲವನ್ನೂ ಒಪ್ಪುವ ಎರಡನೆಯ ಶಿಷ್ಯನೇ ನಿಜವಾದ ಗುರು ಭಕ್ತ ಎನಿಸುವನೊ?
ಎರಡನೇ ಶಿಷ್ಯ ಹೇಳಿದ್ದೇ ಸರಿಯೆಂದಾದರೆ ಅಂತಹ ಗುರು-ಶಿಷ್ಯರ ಪರಂಪರೆಯಿಂದ ಸಮಾಜಕ್ಕೆ ಏನು ಸಂದೇಶವನ್ನು ಕೊಡಬಹುದು?
ಒಂದು ವೇಳೆ “ನಾನೇ “ಅವನು”,ಪ್ರೇರಣೆಯಾಗಿದೆ,ಅವಳು ನನ್ನವಳೆ, ಕಳುಹಿಸುವುದು ನಿನ್ನ ಧರ್ಮ”! ಎಂದರೂ ಶಿಷ್ಯ ಕಳುಹಿಸಿ ಕಣ್ಣು ಮುಚ್ಚಿ ಕೂರಬೇಕೆ? ಪ್ರತಿಭಟಿಸಬೇಕೆ?
ಇಂಥ ಕುರುಡು ಭಕ್ತಿಯಿಂದ ಗಳಿಸುವುದೇನಿದೆ.?ಪ್ರತಿಭಟಿಸಿದರೆ ಬಹಿಷ್ಕಾರ ! ಬೆಂಬಲಿಸಿದರೆ ಪುರಸ್ಕಾರ !
ಇಂದಿನ ಸಮಾಜಕ್ಕೆ ಅಗತ್ಯವಿರುವುದು ಕೇವಲ ಕುರುಡು ಭಕ್ತಿಯೋ,? ಅಥವಾ ತಾರ್ಕಿಕ ನಿಲುವೋ,?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!! ಎಂದು ಬೇತಾಳ ಹೇಳಿತು.

ಬೇತಾಳ ಕಥೆ ಸಂಚಿಕೆ -೧೭
……………………………………….
ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಚಿಂತನೆಯನ್ನು ನಿನ್ನ ಮುಂದಿಡುತ್ತೇನೆ
ತ್ಯಾಗದ ಮಹತ್ವವನ್ನು ನಿರೂಪಿಸುವ ಕಥೆ ಇದು.
ಒಬ್ಬ ಬ್ರಹ್ಮಚಾರಿ ಇದ್ದ. ಸಕಲವನ್ನೂ ತ್ಯಾಗ ಮಾಡಿದ ಮಹಾ ವಿರಕ್ತನೆಂದು ಆತ ಭಾವಿಸಿಕೊಂಡಿದ್ದ. ಎಲ್ಲವನ್ನೂ ತ್ಯಜಿಸಿದ ಬಳಿಕ ಕೊನೆಗೆ ಅವನ ಬಳಿ ಇದ್ದುದು ಧರಿಸಿದ ಒಂದು ತುಂಡು ವಸ್ತ್ರ, ಕುಳಿತುಕೊಳ್ಳಲು ಮರದ ಮಣೆ,ನೀರು ತುಂಬಿಡಲು ಮಣ್ಣಿನ ಕುಡಿಕೆ ಇಷ್ಟೇ.
ಆದರೆ ನಿಜವಾದ ತ್ಯಾಗವೆಂದರೇನು ಎಂಬುದನ್ನು ಆತನಿಗೆ ಅರಿವು ಮಾಡಿಕೊಡಲು ಅವನ ಗುರು ನಿರ್ಧರಿಸಿದ.
ಗುರು ಕೇಳಿದ..”ನೀನು ಏನನ್ನು ತ್ಯಾಗ ಮಾಡಿದೆ? ,ಏನನ್ನೂ ತ್ಯಾಗ ಮಾಡಿಲ್ಲ ಎಂದು ನನಗನಿಸುತ್ತದೆ.”!
ಆಗ ಆ ಬ್ರಹ್ಮಚಾರಿ ತನ್ನಲ್ಲುಳಿದಿರುವ ಆ ಮೂರು ವಸ್ತುಗಳನ್ನೂ ಬೆಂಕಿಗೆ ಹಾಕಿದ.!
ಈಗ ತಾನು ನಿಜವಾಗಿಯೂ ವಿರಕ್ತ ಎಂದುಕೊಂಡ.!
ಆಗ ಗರು ಹೇಳಿದ.”ನೀನು ಏನನ್ನೂ ತ್ಯಜಿಸಿಲ್ಲ,ಈ ಮೂರು ವಸ್ತುಗಳೂ ಪ್ರಕೃತಿಗೆ ಸೇರಿದವುಗಳು,ಪ್ರಕೃತಿಯಿಂದಲೇ ನಿರ್ಮಾಣವಾದವು.ನಿನ್ನ ಸ್ವಂತದ್ದೇನೂ ಅಲ್ಲ.!”
ಬ್ರಹ್ಮಚಾರಿ ಮತ್ತೆ ಯೋಚಿಸಿದ ನನ್ನ ಸ್ವಂತದ್ದೇನಿದೆ? ನಿಜ ಈ ಶರೀರ,ಅದು ಸ್ವಂತದ್ದು. ಅದನ್ನೇ ತ್ಯಜಿಸಿ ಬಿಟ್ಟರೆ ಬೇರೆ ಯಾವುದೇ ಚಿಂತೆಯಿಲ್ಲ.!ಎಂದು ಯೋಚಿಸಿದ. ಹಾಗೇ ತನ್ನ ದೇಹವನ್ನು ಅಗ್ನಿಗೆ ಅರ್ಪಿಸಲು ಸಿದ್ಧನಾದ.!
ಬ್ರಹ್ಮಚಾರಿ ಇನ್ನೇನು ಅಗ್ನಿಗೆ ದುಮುಕಬೇಕೆನ್ನುವಷ್ಟರಲ್ಲಿ ಗುರು ಅವನನ್ನು ತಡೆದ.!
“ಒಂದು ಕ್ಷಣ ತಡೆ,ಈ ದೇಹ ನಿನಗೆ ಸೇರಿದ್ದೇ? ನಿನ್ನ ತಂದೆ-ತಾಯಿಯರು ಸಂಯೋಗದಿಂದ ಈ ದೇಹ ರೂಪು ಗೊಂಡಿತು.ಈ ದೇಹಕ್ಕೂ ನಿನಗೂ ಏನು ಸಂಬಂಧ?”
ಹಾಗಾದರೆ ನಿಜವಾದ ತ್ಯಾಗವೆಂದರೇನು.?
ಸದಾ ಹೋಗಳು ಭಟ ಭಟ್ಟಂಗಿಗಳಿಂದ ಜೈಕಾರ ಹಾಕಿಸಿದವನು ತ್ಯಾಗಿಯೆನಿಸುವನೆ.?
ತನ್ನ ಮಣೆಯಲ್ಲಿ ಗಟ್ಟಿಯಾಗಿ ಕುಳಿತಿದ್ದು,ಭೂಗಳ್ಳತನದಲ್ಲೂ ಭಾಗಿಯಾದವನು ತ್ಯಾಗಿಯೆನಿಸುವನೇ.?
ಭಯದಿಂದ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ತನ್ನ ಸುತ್ತ ಒಂದು ಸೇನಾಪಡೆಯನ್ನು ನಿರ್ಮಿಸಿಕೊಂಡವನು ತ್ಯಾಗಿಯೇ..?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!! ಎಂದು ಬೇತಾಳ ಹೇಳಿತು.

ಬೇತಾಳ ಕಥೆ ಸಂಚಿಕೆ -೧೬
……………………………………….
ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಚಿಂತನೆಯನ್ನು ನಿನ್ನ ಮುಂದಿಡುತ್ತೇನೆ
ಒಮ್ಮೆ ಒಂದೂರಿನ ಹಳ್ಳಿಯ. ರಸ್ತೆಯಲ್ಲಿ ಮೋಟಾರ್ ಸೈಕಲ್ ಸವಾರನೊಬ್ಬ ವೇಗವಾಗಿ ತನ್ನ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ. ಅವಾಗ ರಸ್ತೆಗಡ್ಡವಾಗಿ ಹರಿಯುತ್ತಿದ್ದ ಸರ್ಪವೊಂದನ್ನು ನೋಡಿ, ಥಟ್ಟನೆ ಬ್ರೇಕ್ ಹಾಕಿ ತನ್ನ ವಾಹನ ನಿಲ್ಲಿಸಿದ. ಅದು ತನ್ನ ಪಥದಿಂದ ತನ್ನ ಪಾಡಿಗೆ ದೂರ ತೆವಳಿಕೊಂಡು ಹೋಗುತ್ತಿರಲು ಸವಾರ ಮುಂದೆ ಹೊರಡಲನುವಾದ….
ಕ್ಷಣಾರ್ಧದಲ್ಲಿ ಎಲ್ಲಿಂದಲೋ ಬಂದ ಗಿಡುಗವೊಂದು ಹಾವಿನ ಮೇಲೆರಗಿ, ಕುಕ್ಕಿ ಅದನ್ನೆತ್ತಿಕೊಂಡು ಹಾರತೊಡಗಿತು …
ವಿಲವಿಲನೆ ಒದ್ದಾಡುತ್ತಿದ್ದ ಆ ಹಾವು ಹೇಗೋ ಗಿಡುಗನ ಹಿಡಿತದಿಂದ ಜಾರಿ ಬಿದ್ದದ್ದು ..ನಿಧಾನವಾಗಿ ಸಾಗುತ್ತಿದ್ದ ಆ ಮೋಟಾರ್ ಸೈಕಲ್ ಸವಾರನ ಮೇಲೆ.!
ಆತ ಕಿಟಾರನೆ ಕಿರುಚಿ ವಾಹನ ಸಹಿತ ಬಿದ್ದುಬಿಟ್ಟ.! ಹಾವು ಅವನಿಗೆ ಕಡಿದಿತ್ತು.
ಆತ ಸಾವನ್ನಪ್ಪಿದ.!
ಈಗ ಹೇಳು ಆತನ ಸಾವಿಗೆ ಕಾರಣವೇನು.?
ಶಾಪವೇ..? ವಿಧಿಯ ಆಟವೇ.?
ಮೋಟಾರ್ ಸೈಕಲ್ ಸವಾರನ ದಯೆಯಿಂದ ಹಾವು ಗಿಡುಗನಿಂದ ಸಂಭವಿಸಬಹುದಾದ ಸಾವಿನ ದವಡೆಯಿಂದಲೂ ಪಾರಾಗಿ ಬಂದು ಅವನ ಮೃತ್ಯುವಿಗೇ ಕಾರಣವಾಯ್ತಲ್ಲ.?
ಅದಕ್ಕೇ ಹೇಳುವುದು ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.!
ಯಾರೋ ಕೊಡುವ. “ಶಾಪ”..”ವರ”
ಇದೆಲ್ಲ ಹುಚ್ಚು ಮನಸ್ಸಿನ ಹತ್ತು ಭ್ರಮೆಗಳಲ್ಲವೇ.?
ಯಮಧರ್ಮನೆಂಬ ಒಬ್ಬ ಶಾಸಕನಿದ್ದಾನೆ.ನಿಮ್ಮನ್ನು ಬಿಡಿಸಲು ಅಲ್ಲಿಗೆ ರಾಜ್ಯದ ಯಾವ ಶಾಸಕನಾದರೂ ಬರುತ್ತಾನೆಯೇ.?
ಎರಡು ದಿವಸದ ಬಾಳು,ಅದರಲ್ಲಿ ಅಧಿಕಾರ,ಕೀರ್ತಿ ಏನು ಅರ್ಥವಿದೆ..?
ಅಧರ್ಮಕ್ಕೆ ಏಕೆ ಕೈ ಹಾಕಬೇಕು.?
ಅನೀತಿಯಿಂದ ಏಕೆ ನಡೆಯಬೇಕು.?
ಮನುಷ್ಯನ ಮನಸ್ಸು ಅದೆಷ್ಟು ಮೋಸದ್ದಾಗಿರುತ್ತದೆ.!
ಇನ್ನೊಬ್ಬರನ್ನು ಅಷ್ಟೇ ಅಲ್ಲ ತನ್ನನ್ನು ಕೂಡಾ ತಾನೇ ಮೋಸ ಮಾಡಿಕೊಳ್ಳುತ್ತಾ ಏಕೆ ಹೋಗಬೇಕು.?
ಹರಿಶ್ಚಂದ್ರ ಮಹಾರಾಜನಿಗೆ ಕಾಲ ಕರ್ಮ ಸಂಯೋಗದಿಂದಾಗಿ ಸ್ಮಶಾನದಲ್ಲಿ ಕಾವಲು ಕಾಯಬೇಕಾದ ಕರ್ಮ ಕೂಡಾ ಮಾಡಬೇಕಾಗಿ ಬಂತು. ಅವನು ಸಂತೋಷದಿಂದ ನಿಷ್ಠೆಯಿಂದ ಆ ಕರ್ಮ ಮಾಡಿದನಲ್ಲವೇ.?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!! ಎಂದು ಬೇತಾಳ ಹೇಳಿತು.

ಬೇತಾಳ ಕಥೆ ಸಂಚಿಕೆ -೧೫
……………………………………….
ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಚಿಂತನೆಯನ್ನು ನಿನ್ನ ಮುಂದಿಡುತ್ತೇನೆ
ತನಗಿಂತ ದುರ್ಬಲರನ್ನು ಹೆದರಿಸುವ ಭಂಡರಿಗೆ ನಾವು ಯಾವ ರೀತಿಯಲ್ಲಿ ನಮ್ಮ ಪ್ರತಿಭಟನೆಯ ಮೂಲಕ ಉತ್ತರಿಸಬೇಕು ಎಂಬುದಕ್ಕೆ ಒಂದು ಕಥೆಯನ್ನು ಹೇಳುತ್ತೇನೆ ಕೇಳು..
ಒಮ್ಮೆ ಒಂದು ಬೆಕ್ಕು ತನ್ನ ಮರಿಯನ್ನು ಕರೆದುಕೊಂಡು ವಿಹಾರಕ್ಕೆ ಹೊರಟಿತ್ತು. ದಾರಿಯಲ್ಲಿ ಎದುರಾದ ನಾಯಿಯೊಂದು ಜನ್ಮಾಂತರದ ದ್ವೇಷವೋ ಎಂಬಂತೆ ವಿನಾಕಾರಣ ಬೆಕ್ಕಿನ ಮೇಲೇರಿ ಬರುವಂತೆ ಬೊಗಳಿ ಹೆದರಿಸತೊಡಗಿತು. ಮರಿಗೆ ಹೆದರಿಕೆಯಿಂದ ಹೆದರಿಕೆ. ತಾಯಿ ಬೆಕ್ಕು ಅಂಜಲಿಲ್ಲ ಅಳುಕಲಿಲ್ಲ. ತನ್ನ ಸಹಜ ಸುಂದರ “ಮಿಯಾಂವ್” ಎಂಬ ಕೂಗನ್ನು ಆಶ್ರಯಿಸದೆ ಸೆಟೆದು ನಿಂತು ತಾನೂ “ಭೌ ..ಭೌ” ಎಂದು ಬೊಗಳಿ ನಾಯಿಯತ್ತ ದುರುಗುಟ್ಟಿ ನೋಡಿತು.! ಬೆಕ್ಕು ‘ಭೌ ಭೌ’ ಎಂದಿದ್ದೆ ತಡ, ನಾಯಿ ಬಾಲ ಮುದುರಿಸಿ ಓಡಿ ಹೋಯ್ತು.!
ಮರಿ ಬೆಕ್ಕು ತಾಯಿ ಬೆಕ್ಕನ್ನು ಕೇಳಿತು “ನೀನ್ಯಾಕೆ ಹಾಗೆ ನಾಯಿ ಭಾಷೆಯಲ್ಲಿ ಭೌ ಭೌ ಅಂದಿದ್ದು..”?
ಈ ಪ್ರಶ್ನೆಗೆ ತಾಯಿ ಬೆಕ್ಕು ಏನು ಹೇಳಿರಬಹುದು..?
ಅದು ಯಾವ ಉದ್ದೇಶದಿಂದ ತನ್ನ ನೈಜ ಭಾಷೆಯನ್ನು ಬಿಟ್ಟು ನಾಯಿ ಭಾಷೆಯನ್ನು ಬಳಸಿರಬಹುದು..?
ಈಗಿನ ಕೆಲ ಭಂಡರಿಗೂ ಅದೇ ಭಾಷೆಯಲ್ಲಿ ಉತ್ತರಿಸಿದರೆ ಏನಾದೀತು..?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!! ಎಂದು ಬೇತಾಳ ಹೇಳಿತು.

ಬೇತಾಳ ಕಥೆ ಸಂಚಿಕೆ -೧೪
……………………………………….
ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಜಿಜ್ಞಾಸೆಯನ್ನು ನಿನ್ನ ಮುಂದಿಡುತ್ತೇನೆ
” ಎಲೈ ಮಾನವ ಆತ್ಮೋದ್ಧಾರದ ಮಾರ್ಗವನ್ನು ಈ ದಿನ ಹೇಳುತ್ತೇನೆ ಕೇಳು”
ಬಹುದೊಡ್ಡ ಪುಣ್ಯವೆಂಬ ಬೆಲೆಯನ್ನು ತೆತ್ತು ಈ ಮನುಷ್ಯ ದೇಹವೆಂಬ ಹಡಗನ್ನು ಕೊಂಡುಕೊಂಡಿದ್ದಿಯ.ಈ ದೇಹವನ್ನು ಕೊಂಡುಕೊಂಡದ್ದು ಈ ಸಂಸಾರ ಸಾಗರವನ್ನು ದಾಟುವುದಕ್ಕಾಗಿ.ಈ ಹಡಗು ಒಡೆದು ಹೋಗುವುದರೊಳಗಾಗಿ ಈ ಸಾಗರವನ್ನು ದಾಟಿಬಿಡು.!
ಮನುಷ್ಯ ಜೀವನದ ಗುರಿ ಯಾವುದು? ಧರ್ಮ,ಅರ್ಥ,ಕಾಮ,ಮೋಕ್ಷ ಇವು ನಾಲ್ಕು ಪುರುಷಾರ್ಥಗಳೆಂದು ಜ್ಞಾನಿಗಳು ಹೇಳಿದ್ದಾರೆ.ಪುರುಷಾರ್ಥಗಳೆಂದರೆ ಮನುಷ್ಯನು ಸಾಧಿಸಬೇಕಾದವುಗಳು.ಇವೇ ಜೀವನದ ಗುರಿಗಳು.ಧರ್ಮ ಯಾವುದೆಂಬುದನ್ನು ಶಾಸ್ತ್ರ ತಿಳಿಸಿಕೊಡುತ್ತದೆ.ಅರ್ಥವೆಂದರೆ ಹಣ,ಧನ ಸಂಪಾದನೆ.ಕಾಮವೆಂದರೆ ಆಸೆ-ಸುಖಕ್ಕೆ ಬೇಕಾದ ಭೋಗ ಸಾಮಾಗ್ರಿ. ಮೋಕ್ಷವೆಂದರೆ ಸಂಸಾರ ಬಂಧನದಿಂದ ಬಿಡುಗಡೆ.ಶಾಶ್ವತವಾದ ಸುಖ,ಮೋಕ್ಷವೇ ಪರಮ ಪುರುಷಾರ್ಥ.ಇದನ್ನು ಪಡೆಯುವುದೇ ಆತ್ಮೋದ್ಧಾರ.
ಅರ್ಥ,ಕಾಮಗಳಿಗಾಗಿ ಹಂಬಲಿಸುವುದು ಜನರಿಗೆ ಅರ್ಥಾತ್ ಸಂಸಾರಿಗಳಿಗೆ ಸಹಜವಾಗಿ ಪ್ರಾಪ್ತವಾದವು.
ಆದರೆ ಸಂಸಾರದಿಂದ ವಿಮುಖರಾಗಿ ಆತ್ಮ ಶ್ರಾರ್ಧ ಮಾಡಿಕೊಂಡ ಯತಿಗಳಿಗೆ ಇದೆಲ್ಲಾ ಅನ್ವಯವಾಗುವುದೇ..?
ಪೂರ್ವಾಶ್ರಮದ ಸಂಬಂಧಗಳನ್ನು ಕಡಿದುಕೊಳ್ಳಳಾಗದೆ ಸುಖಕ್ಕೆ ಬೇಕಾದ ಭೋಗ ಸಾಮಾಗ್ರಿಗಳನ್ನು ಕೂಡಿಟ್ಟುಕೊಳ್ಳುವ ಕೆಲವೊಂದು ಯತಿಗಳು ಆತ್ಮೋಧ್ಧಾರವೆಂದರೆ ತನ್ನ ಉದ್ಧಾರವೆಂದು ಅರಿತು ಕೊಂಡಿದ್ದಾರೆಯೇ.?
ದೇಹದ ಉದ್ಧಾರವನ್ನು ವೈದ್ಯರು,ಬಂಧು ಮಿತ್ರರು ಮಾಡಬಹುದು.ಆತ್ಮದ ಉದ್ಧಾರವನ್ನು ಮಾತ್ರ ತಾನೇ ಮಾಡಿಕೊಳ್ಳಬೇಕು. ಎಂಬುದನ್ನು ಅವರು ಅರಿತಿಲ್ಲವೇ..?
ಅದನ್ನೇ “ಉದ್ಧರೇದಾತ್ಮನಾತ್ಮಾನಂ” ಎಂದು ಭಗವದ್ಗೀತೆಯಲ್ಲಿ ಹೇಳಿರುವುದು.
ಆದರೆ ಸದಾ ಬಂಧು ಮಿತ್ರರೊಂದಿಗೆ ತನ್ನಾಪ್ತರೊಡಗೂಡಿ ….ಇರುವನೊಬ್ಬ.!
ಅವನೋ… ಎದ್ದೆದ್ದು ಬೀಳುತಿಹ, ಗುದ್ದಾಡಿ ಸೋಲುತಿಹ,
ಗದ್ದಲವ ತುಂಬಿ ಪ್ರಸಿದ್ಧನಾಗುತಿಹ,
ಉದ್ಧರಿಪೆನೀಜಗವನೆಂದು ಹೊರಟಿಹ,
ಸ್ತ್ರೀ ಲೋಲನಾತ.!!! ..ಇನ್ನು…ಅವನುದ್ಧಾರವೆಷ್ಟಾಯ್ತೋ.???
ಈ ಹಡಗು ಓಡೆದು ಹೋಗುವುದರೊಳಗಾಗಿ ದಾಟಿ ಬಿಡಲಾಗುವುದೇ ಅವನಿಗೆ..?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!! ಎಂದು ಬೇತಾಳ ಹೇಳಿತು.

ಬೇತಾಳ ಕಥೆ ಸಂಚಿಕೆ -೧೩
……………………………………….
ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಚಿಂತನೆಯನ್ನು ನಿನ್ನ ಮುಂದಿಡುತ್ತೇನೆ
ದಶರಥ ಚಕ್ರವರ್ತಿಯ ಪ್ರೀತಿಯ ಪುತ್ರನಾದ ಶ್ರೀರಾಮ, ರತ್ನ ಸಿಂಹಾಸನದ ಮೇಲೆ, ಶ್ವೇತಚ್ಛತ್ರದ ನೆರಳಿನಲ್ಲಿ ಕುಳಿತು, ನವಯುವತಿಯರು ವಯ್ಯಾರದಿಂದ ಬೀಸುವ ಶೃಂಗಾರ-ಚಾಮರದ ತಂಪಾದ ತಂಗಾಳಿಯ ಸುಖವನ್ನು ಅನುಭವಿಸುತ್ತಾ,ರಾಜವೈಭವದ ಭೋಗ-ಭಾಗ್ಯಗಳಲ್ಲಿ ಮೆರೆಯಬೇಕಾಗಿದ್ದ ಮಹಾಪುರುಷನಲ್ಲವೇ? ಆದರೆ ಅವನು ಅದೆಲ್ಲವನ್ನೂ ತೊರೆದು, ಸಂತೋಷದಿಂದ ಕಾಡಿಗೆ ನಡೆದನು. ಕಲ್ಲು ಮುಳ್ಳುಗಳನ್ನು ತುಳಿಯುತ್ತಾ ಬರಿಗಾಲಿನಲ್ಲಿ ಪಾದಚಾರಿಯಾಗಿ ಸಂಚರಿಸಿದನು.ಮರದ ನೆರಳಿನಲ್ಲಿ ಹರಡಿರುವ ತರಗೆಲೆಗಳಲ್ಲಿ ಮಲಗಿ ಇರುಳನ್ನು ಕಳೆದನು.ಕೇವಲ ಗಡ್ಡೆ-ಗೆಣಸುಗಳನ್ನು, ಮರದ ಕೆಳಗೆ ಉದುರಿರುವ ಫಲಗಳನ್ನು ಮಾತ್ರ ಆಹಾರವಾಗಿ ಸ್ವೀಕರಿಸಿದನು.ಕ್ರೂರ ಮೃಗಗಳ ದಾಳಿಗಳಿಗೆ ಒಳಗಾದನು. ಈ ರೀತಿಯಾಗಿ ಶಾರೀರಿಕ ಕಷ್ಟಗಳನ್ನು ಮಾತ್ರವಲ್ಲದೆ, ಪ್ರೇಮದ ಪುತ್ಥಳಿಯಂತಿದ್ದ ಪ್ರೀತಿ ಪಾತ್ರಳಾದ ಧರ್ಮಪತ್ನಿಯನ್ನು ಕಳೆದುಕೊಂಡು ಮಾನಸಿಕ ಹಿಂಸೆಯನ್ನು ಅನುಭವಿಸಿದನು.
ಆದರೆ ಈ ಕಲಿಯುಗದಲ್ಲಿ ನಕಲಿ ರಾಮನೊಬ್ಬ ತಾನೇ ರಾಮನ ಅಪರಾವತಾರವೆಂದು ಹೇಳಿಕೊಳ್ಳುತ್ತಾ,ತನಗೊದಗಿದ ಸಿಂಹಾಸನದಲ್ಲಿ ತಾನೇ ವಯ್ಯಾರದಿಂದ ಆಸೀನನಾಗಿ ಹವಾನಿಯಂತ್ರಣದಿಂದ ಬರುವಂಥ ತಂಗಾಳಿಯ ಸುಖವನ್ನು ಅನುಭವಿಸಿ,ಯಾರೋ ಬರೆದಿರುವ ಕಥೆಗಳನ್ನು ಹೇಳಿ ,ಗಂಡು -ಹೆಣ್ಣೆನ್ನದೆ ಹಲವರನ್ನು ಕುಣಿಸಿರುವಾಗ ,ಮಹಾಪುರುಷನಾಗಲು ಸಾಧ್ಯವೇ.?
ಆ ರಾಮನು ರಾಜ ವೈಭವದ ಭೋಗ-ಭಾಗ್ಯಗಳನ್ನೆಲ್ಲಾ ಮರೆತು ಬರಿಗಾಲಿನಲ್ಲಿ ಕಾಡಿಗೆ ಹೋಗಿರುವನು,ಆದರೆ ಭೋಗ-ಭಾಗ್ಯಗಳನ್ನೆಲ್ಲ. ,ಅನುಭವಿಸುತ್ತಾ ಈರುಳ್ಳಿ ಪಕೋಡ ಸವಿಯುವ ಸದಾ ಐಷಾರಾಮಿ ವಾಹನಗಳಲ್ಲೇ ಪಯಣಿಸುವ ಇನ್ಯಾರಾದರೂ ಮಹಾಪುರುಷನಾಗಲು ಸಾಧ್ಯವೇ.?
ಆತ ಧರ್ಮಪತ್ನಿಯನ್ನೇ ಕಳೆದು ಕೊಂಡವ, ಆದರೆ ಪರಪತ್ನಿಯರನ್ನೇ ನನ್ನವಳೆಂದು ಹೇಳಿಕೊಳ್ಳುವ ಇನ್ಯಾರಾದರೂ ಮಹಾಪುರುಷನಾಗಲು ಸಾಧ್ಯವೇ.?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!! ಎಂದು ಬೇತಾಳ ಹೇಳಿತು.

ಬೇತಾಳ ಕಥೆ ಸಂಚಿಕೆ -೧೨
……………………………………….
ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಮಧ್ಯರಾತ್ರಿ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಚಿಂತನೆಯನ್ನು ನಿನ್ನ ಮುಂದಿಡುತ್ತೇನೆ
ಮಾಡಿದ ಪಾಪವು ತಕ್ಷಣವೇ ಮಾಡಿದಾತನಿಗೆ ಫಲ ಕೊಡದಿದ್ದರೆ ಅವನ ಮಕ್ಕಳಿಗೆ ಕೊಡುತ್ತದೆ ಮಕ್ಕಳಿಗೆ ಫಲ ಕೊಡದಿದ್ದರೆ ಮೊಮ್ಮಕ್ಕಳಿಗೆ ಕೊಡುತ್ತದೆ.ಮಾಡಿದ ಪಾಪದ ಫಲವು ಫಲಕೊಡಲಾರದೆ ಎಂದಿಗೂ ಇರಲಾರದು.
ಎಂದು ಮನುಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.
ಈ ಮಾತು ಸಂಸಾರಿಯಾದವನಿಗೆ ಅನ್ವಯವಾಗುತ್ತದೆ.
ಆದರೆ ಸನ್ಯಾಸಿಯೆನಿಸಿಕೊಂಡವನೊಬ್ಬ ಹಲವಾರು ಅಮಾಯಕ ಹರೆಯದ ಹೆಣ್ಮಕ್ಕಳನ್ನು ಏಮಾರಿಸಿ ವಂಚಿಸಿದರೆ,ಭೂ ಅತಿಕ್ರಮಣ ಮಾಡಿ ವಂಚಿಸಿದರೆ,..ಇತ್ಯಾದಿತ್ಯಾದಿ…ವಂಚನೆಗಳಿಂದ ಗಳಿಸಿದ ಪಾಪ ಯಾರಿಗೆ ಹಂಚಿಕೆಯಾಗುತ್ತದೆ.?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!! ಎಂದು ಬೇತಾಳ ಹೇಳಿತು.

ಬೇತಾಳ ಕಥೆ ಸಂಚಿಕೆ -೧೧
……………………………………….
ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಚಿಂತನೆಯನ್ನು ನಿನ್ನ ಮುಂದಿಡುತ್ತೇನೆ
ಸಿಧ್ಧಾರೂಢ ಮಹಾರಾಜರು ಅವರ ಗುರುಗಳು-ಗಜದಂಡ ಸ್ವಾಮಿಗಳ ಆಜ್ಞೆಯಂತೆ ತೀರ್ಥಯಾತ್ರೆ ಮಾಡುತ್ತಾ ಉತ್ತರ ಭಾರತದ ಒಂದು ಊರೊಳಗೆ ಹೋದರು. ಆ ಸಮಯದಲ್ಲಿ ಭಾರೀ ಗಾಳಿ ಮಳೆ ಬರಲಾರಂಬಿಸಿತು.ಆದ್ದರಿಂದ ಅವರು ಒಂದು ಬಂಗಲೆಯೊಳಕ್ಕೆ ಪ್ರವೇಶಿಸಿ ಆಶ್ರಯಕ್ಕೆ ನಿಂತರು.ಆ ಬಂಗಲೆಯು ಒಬ್ಬ ಲಕ್ಷಾಧೀಶ ಸಾಹುಕಾರನದಾಗಿತ್ತು.
ಅಷ್ಟರಲ್ಲಿ ಸಾಹುಕಾರನು ಹೊರಗೆ ಬಂದು,”ಏ ಸಾಧು, ಇದು ಧರ್ಮಛತ್ರ ಅಲ್ಲ. ನನ್ನ ಬಂಗಲೆ ನಡೆ ಇಲ್ಲಿಂದ” ಎಂದನು.!
ಆಗ ಸ್ವಾಮಿಗಳು “ಈಗ ಇಲ್ಲಿ ಯಾರು ವಾಸಿಸುತ್ತಾರೆ”? ಸಾಹುಕಾರನೆಂದನು “ನಾನು ವಾಸಿಸುತ್ತೇನೆ”!
“ನೀನು ಹುಟ್ಟುವುದಕ್ಕೆ ಮೊದಲು..?
“ನೀನು ಹುಟ್ಟುವುದಕ್ಕೆ ಮುಂಚೆ ಯಾರು ವಾಸಿಸುತ್ತಿದ್ದರು?” “ನಮ್ಮ ತಂದೆ” ಅದಕ್ಕೂ ಮುಂಚೆ ಯಾರು ಇರುತ್ತಿದ್ದರು.”? “ನನ್ನ ಅಜ್ಜ” , ಇದನ್ನು ಕೇಳಿ ಸಿದ್ದಾರೂಢರೆಂದರು “ಅಂದರೆ ಇಲ್ಲಿಯವರೆಗೆ ಈ ಮನೆಯಲ್ಲಿ ಎಷ್ಟೋ ಜನ ವಾಸ ಮಾಡಿದರು ಹಾಗೂ ಹೊರಟು ಹೋದರು. ಇನ್ನು ಮುಂದೆಯು ಕೂಡಾ ಹೀಗೆಯೇ ನಡೆಯುತ್ತದೆ.!”
ಆಗ ತನ್ನ ಮೂರ್ಖತನದ ಬಗ್ಗೆ ಸಾಹುಕಾರನು ಲಜ್ಜಿತನಾಗಿ ಕ್ಷಮೆಕೋರಿದನು.!
ಆದರೆ ಲಜ್ಜಾರಹಿತನಾದ ಕಪಟಿಯೊಬ್ಬ ಭರತಖಂಡದ ಶಿಖರ ನಗರದಲ್ಲಿದ್ದು.ಸಾವಿರಾರು ವರ್ಷಗಳ ಇತಿಹಾಸವಿರುವ ಮಠವನ್ನು “ಇದೆಲ್ಲವೂ ತನ್ನದೇ,” ಅಂದುಕೊಂಡಿರುವನಂತೆ!ತನಗಿಂತ ಹಿಂದಿನವರ ಸತ್ಕಾರ್ಯಗಳನ್ನೆಲ್ಲ ಮರೆತ ಈತ ಮಠವನ್ನು ತನ್ನ ಮನೆಯನ್ನಾಗಿ ಮಾಡಿ ಅತ್ಯಾಚಾರ ಅನಾಚಾರಗಳಿಗೆ ಎಡೆ ಮಾಡಿಕೊಟ್ಟಿದ್ದಾನೆ. ಅಂದು ಕೊಂಡದ್ದೆಲ್ಲಾ ಅವನ ಯೋಚನೆ ನಿರ್ದೇಶನದಂತಯೇ ನಡೆಯುತ್ತಿರಬೇಕಾದರೆ…
ಇದು ಹಿಂದೆಯೂ ತನ್ನದಲ್ಲ ,ಮುಂದೆಯೂ ತನ್ನದಲ್ಲ…ಇಲ್ಲಿರುವ ನಾನು ನಾನಲ್ಲ.”ಎಂಬ ಭಾವನೆ ಆತನಿಗೇಕೆ ಬರುತ್ತಿಲ್ಲ..? ಇವನಿಂದ ಆ ಸ್ಥಾನಕ್ಕೆ ಬಂದ ಕಳಂಕ ನಿವಾರಿಸುವ ಪರಿಯೇನು..?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!! ಎಂದು ಬೇತಾಳ ಹೇಳಿತು.

ಬೇತಾಳ ಕಥೆ ಸಂಚಿಕೆ -೧೦
……………………………………….
ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಜಿಜ್ನಾಸೆಯನ್ನು ನಿನ್ನ ಮುಂದಿಡುತ್ತೇನೆ
ದೇಹ ಬಿಡುವ ಕಾಲದಲ್ಲಿ ಭಕ್ತನು ಯಾವ ಭಗತ್ವರೂಪವನ್ನು ಸ್ಮರಣೆ ಮಾಡುತ್ತಾನೋ,ಚಿಂತಿಸುತ್ತಾನೋ ಆ ರೂಪದಲ್ಲೇ ಭಗವಂತ ಅವನಿಗೆ ದರ್ಶನ ನೀಡುತ್ತಾನೆ.ಭಗವದ್ಗೀತೆಯ ಎಂಟನೇ ಅಧ್ಯಾಯದಲ್ಲಿ ಭಗವಂತ ಅರ್ಜುನನಿಗೆ ಬೋದಿಸಿದ ಉಪದೇಶವಿದು.
ಅಂತ್ಯ ಕಾಲ ಪ್ರತಿಯೊಬ್ಬರಿಗೂ ಬಂದೇ ಬರುತ್ತದೆ.ಮೃತ್ಯು ನಮಗೆ ಮುನ್ನೆಚ್ಚರಿಕೆ ಕೊಟ್ಟು ಕಾದಿದ್ದು ಆಮೇಲೆ ಬರುವುದಿಲ್ಲ.ಅದು ಹೇಳದೆ ಕೇಳದೆ ಬರುತ್ತದೆ.ಆದುದರಿಂದ ವಿವೇಕಿಯಾದವನು ಯಾವಾಗಲೂ ಒಳ್ಳೆಯ ವಿಚಾರಗಳನ್ನು ಚಿಂತಿಸುತ್ತಾ ಅದಕ್ಕೆ ಸಿದ್ದನಾಗಿರುತ್ತಾನೆ..
ನಮ್ಮ ಭವಿಷ್ಯ ಉಜ್ವಲವಾಗಬೇಕಾದರೆ ನಾವು ಒಳ್ಳೆಯದನ್ನು ಉದಾತ್ತ ವಿಚಾರಗಳನ್ನು ಚಿಂತಿಸಬೇಕು.
“ಇನ್ನೊಬ್ಬರಿಗೆ ಒಳಿತನ್ನು ಬಯಸುವವನು,ತನ್ನ ಹೃದಯದಲ್ಲಿ ಇನ್ನೊಬ್ಬರ ಬಗ್ಗೆ ಒಳ್ಳೆಯ ವಿಚಾರಗಳನ್ನು ತುಂಬಿಕೊಂಡಿರುವವನು ಜೀವನದಲ್ಲಿ ಉನ್ನತ ಸಾಧನೆ ಮಾಡಲು ಕಷ್ಟವಾಗಲಾರದು.”
ಇಷ್ಟೆಲ್ಲ ಹೇಳಿದ ಬೇತಾಳ ಮತ್ತೆ ಕೇಳಿತು..
“ಎಲೈ ರಾಜನೇ,ಅದರೆ ಭರತಖಂಡದ ಶಿಖರನಗರ ಎಂಬ ಪ್ರದೇಶದಲ್ಲಿ ಸ್ತ್ರೀ ಲೋಲ ಸುಂದರನೆಂಬ ಚೋರ ಗುರುವೊಬ್ಬನಿದ್ದಾನಂತೆ.!ಕಚ್ಚೆ ಹರುಕನಾದ ಈತ ಮಾಡಿದ ಹಾದರ ಲೆಕ್ಕವಿಲ್ಲದಷ್ಟು.!
ಇವನು ತನ್ನ ಅಂತ್ಯ ಕಾಲದಲ್ಲಿ ಏನು ಯೋಚಿಸುವನೋ,? ಭಗವಂತ ಈತನಿಗೆ ಯಾವ ರೂಪದಲ್ಲಿ ಗೋಚರಿಸುವನೋ.? ಎನ್ನುವುದನ್ನು ಹೇಳುವುದೇ ಕಷ್ಟವಾಗಿದೆ…ಏಕೆಂದರೆ,ಲೋಕದ ಭವಿಷ್ಯದ ಬಗ್ಗೆ ಚಿಂತಿಸಬೇಕಾದವನಿಗೆ ತನಗೊದಗಿದ ತೊಡಕುಗಳನ್ನು ನಿವಾರಿಸುವ ಬಗ್ಗೆಯೇ ಚಿಂತಿಸುವ ದುರ್ಗತಿ ಬಂದಿದೆ.ಅದಕ್ಕಾಗಿ ತನ್ನಾಯುಷ್ಯವನ್ನೆಲ್ಲಾ ಈ ಯೋಚನೆಯಲ್ಲೇ ಕಳೆವಾಗ ಭಗವಂತನ ರೂಪ ಆತನಿಗೆ ಯಾವರೀತಿಯ ಕಂಡೀತು.?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!! ಎಂದು ಬೇತಾಳ ಹೇಳಿತು.

ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಜಿಜ್ನಾಸೆಯನ್ನು ನಿನ್ನ ಮುಂದಿಡುತ್ತೇನೆ
ಮನುಷ್ಯನ ಜೀವನದಲ್ಲಿ ವಿಧಿ ಪ್ರಮುಖ ಪಾತ್ರ ವಹಿಸುತ್ತದೆ.ನಾವು ಇನ್ನೊಬ್ಬರಿಗೆ ಎಸಗಿದ ಮೋಸ,ವಂಚನೆ, ಅನ್ಯಾಯ,ಹಿಂಸೆಯನ್ನು ವಿಧಿ ಲೆಕ್ಕವಿಡುತ್ತದೆ.ಒಂದಲ್ಲ ಒಂದು ದಿನ ನಾವು ಅದನ್ನು ಅನುಭವಿಸಬೇಕಾಗುತ್ತದೆ.ವಿಧಿಯ ಕ್ರೌರ್ಯದಿಂದ ಪಾರಾಗಲು ನಾವು ಯಾವತ್ತೂ ಇನ್ನೊಬ್ಬರಿಗೆ ಕೇಡು ಬಯಸಬಾರದು.ಒಳಿತನ್ನು ಎಸಗಬೇಕು.’ಮುಗ್ಧತೆ ಮತ್ತು ಸತ್ಯದ ಕಣ್ಣುಗಳಿಂದ ಪ್ರಪಂಚವನ್ನು ಅವಲೋಕಿಸಬೇಕಾಗುತ್ತದೆ. ಕೆಡುಕು ಮತ್ತು ದುಷ್ಟ ಚಿಂತನೆಗಳನ್ನು ಮನಸ್ಸಿನಲ್ಲಿ ತುಂಬಿಕೊಳ್ಳಬಾರದು.”
ಹಾಗೇ ಬೇತಾಳವು ಮುಂದುವರಿಸುತ್ತಾ ಹೇಳಿತು..
ಆತ್ಮವಿಶ್ವಾಸವಿಲ್ಲದ ,ಸದಾ ಆತ್ಮವಂಚನೆ ಮಾಡಿಕೊಳ್ಳುತ್ತಿರುವ ನಕಲಿ ಸಾಧುವೊಬ್ಬ ಭೂಲೋಕದ ಶಿಖರನಗರದಲ್ಲಿದ್ದಾನೆ. ಆತನಿಗೆ ಇದರ ಅರಿವಿಲ್ಲವೇ.?ವಿಧಿಯ ಲೆಕ್ಕಾಚಾರ ಏನಿರಬಹುದು.?ವಿಧಿಯ ಕ್ರೌರ್ಯದಿಂದ ಪಾರಾಗಲು ಅವನಿಗೆ ಸಾಧ್ಯವೇ..?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!! ಎಂದು ಬೇತಾಳ ಹೇಳಿತು.

ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಜಿಜ್ನಾಸೆಯನ್ನು ನಿನ್ನ ಮುಂದಿಡುತ್ತೇನೆ.
ಭೂಲೋಕದ ಜನರು ಗುರುವನ್ನು ಬಹಳ ಗೌರವಿಸುತ್ತಾರೆ,ಪೂಜಿಸುತ್ತಾರೆ,ಭಯವನ್ನೂ ಪಡುತ್ತಾರೆ.
ಹಿಮಾಲಯದ ಅಘೋರಿ ಸಾಧುವೊಬ್ಬ ಹೇಳುತ್ತಾನೆ…
“ನಿಮಗೆ ಗುರು ಬೇಕಿದ್ದರೆ ನಿಜವಾದ ಗುರುವನ್ನೇ ಹುಡುಕಿಕೊಳ್ಳಿ, ನಕಲಿ ಸಾಧುಗಳನ್ನಲ್ಲ.!ಏಕಲವ್ಯ ತನ್ನ ಗುರುವನ್ನು ಹೇಗೆ ಹುಡುಕಿಕೊಂಡ.? ಅಲ್ಲಿ ಸಾಧನೆಯ ಛಲವಿತ್ತು.ಉದ್ದೇಶ ಉತ್ತಮವಾಗಿತ್ತು. ಅದೆಲ್ಲಾ ಪುರಾಣದ ಕಥೆಯೆಂದು ಮೂಗೆಳೆಯಬೇಡಿ.ಅಂಥವರು ಈಗಲೂ ಇದ್ದಾರೆ.ಆದರೆ ನಿಮಗೆ ಆಸ್ಥೆ ಇರಬೇಕಷ್ಟೆ.
ಗುರುವನ್ನು ಅವನ ಬಾಹ್ಯ ಚರ್ಯೆಗಳಿಗೆ ಬೆರಗಾಗಿ ಆರಿಸಿಕೊಳ್ಳಬೇಡಿ.ಅಂತಃಸತ್ವವನ್ನು ಮಾತ್ರ ಗ್ರಹಿಸಿ ನಿಷ್ಟೆಯಿಂದಿರಿ.”
ಆದರೆ ನಕಲಿ ಸಾಧುವನ್ನೇ ಗುರು ಎಂದು ಒಪ್ಪಿಕೊಂಡರೆ,ಒಂದು ವೇಳೆ ಆ ಸಾಧುವು ಅತ್ಯಂತ ಕಪಟಿಯೂ ವಂಚಕನೂ ಆಗಿದ್ದರೆ.ಅವನು ಮಾಡಿದ ಪಾಪಕರ್ಮಗಳು ಅವನನ್ನು ಗುರು ಎಂದು ಒಪ್ಪಿಕೊಂಡ ಶಿಷ್ಯರನ್ನೂ ಬಾದಿಸುವುದಿಲ್ಲವೇ.?
ಇಂಥಾ ನಕಲಿ ಮಹಾವಂಚಕ ಗುರುವೊಬ್ಬ ಭೂಲೊಕದ ಶಿಖರನಗರದಲ್ಲಿದ್ದಾನಂತೆ.!
ಅವನನ್ನು ಗುರು ಎಂದು ಒಪ್ಪಿಕೊಂಡದ್ದು ಮೌಢ್ಯದಿಂದಲೋ.?ಶಾಪದ ಭಯದಿಂದಲೋ.? ಅಂತಹ ಜನರನ್ನು ಭಯಮುಕ್ತರನ್ನಾಗಿಸಿ,ಮೌಢ್ಯದಿಂದ ಹೊರತರಲು ಸಾಧ್ಯವೇ.?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!!

ಛಲ ಬಿಡದ ತ್ರಿವಿಕ್ರಮ ರಾಜಾ ವಿಕ್ರಮಾದಿತ್ಯನು ಎಂದಿನಂತೆ ಅರಳಿ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಪ್ರಶ್ನೆ ಕೇಳುತ್ತೇನೆ.
ಮನುಷ್ಯ ಜನ್ಮ ತಳೆದ ದಿನದಿಂದ ಅವನ ಪ್ರತಿ ನಿತ್ಯದ ಪಯಣ ಮಸಣದೆಡೆಗೆ ಎನ್ನುವುದು ಸತ್ಯವಾದರೂ, ಇದನ್ನು ಅರಿತಿದ್ದರು ನಮಗದರ ಅರಿವಿಲ್ಲದಂತೆ ವರ್ತಿಸುತ್ತೇವೆ.ಇದು ಅಜ್ನಾನಿಗಳ ವಿಷಯವೆಂದಲ್ಲ,ಮಹಾ ಮೇಧಾವಿಗಳೆನಿಸಿಕೊಂಡವರ ವಿಚಾರವೂ ಹೀಗೆಯೆ.
ಆದರೆ ಕಾಲಚಕ್ರವು ಹಗಲು,ರಾತ್ರಿ,ಬೆಳಗು,ಸಂಜೆ,ಚಳಿಗಾಲ,ಬಿಸಿಲುಕಾಲ,ಹೀಗೆ ಮತ್ತೆ ಮತ್ತೆ ಬದಲಾಯಿಸುತ್ತಾ ತಿರುಗುತ್ತದೆ.ಆಯುಷ್ಯವಂತೂ ಅಡುತ್ತಾಡುತ್ತಾ ಕಳೆದು ಹೋಗುತ್ತದೆ.ಹೀಗಿದ್ದರೂ ಆಸೆಯೆಂಬ ಬಿರುಗಾಳಿ ನಮ್ಮನ್ನು ಬಿಡುವುದಿಲ್ಲ.
“ಜಾತಸ್ಯ ಹಿ ಮರಣೋ ಧ್ರುವಂ”. ಅಂದರೆ ಹುಟ್ಟಿದವನು ಸಾಯುತ್ತಾನೆ.ಇದು ಸತ್ಯ.ಇದನ್ನು ಪಂಡಿತ ಪಾಮರರಾದಿಯಾಗಿ ಎಲ್ಲರೂ ಬಲ್ಲರು.
ಆದರೆ ಇದರ ಬಗ್ಗೆ ತೀವ್ರ ನಿರ್ಲಕ್ಷ್ಯ ತಳೆದ ಪ್ರಚಂಡ ಭಂಡ ಸನ್ಯಾಸಿಯೊಬ್ಬ ಭೂಲೋಕದ ಶಿಖರನಗರದಲ್ಲಿದ್ದಾನಂತೆ.!ಅವನು ಮರಣದ ಬಗ್ಗೆಯಾಗಲಿ, ಜನ್ಮ ಸಾರ್ಥಕ ಪಡಿಸಿಕೊಳ್ಳುವುದರ ಬಗ್ಗೆಯಾಗಲಿ ಗಮನ ಹರಿಸದೆ, ಮೂಢ ಬುಧ್ಧಿಯವನಂತೆ ವರ್ತಿಸಿ,ಅಪಾರ ಕಳಂಕವನ್ನು ಹೊತ್ತುಕೊಂಡಿದ್ದಾನೆ. ಅವನು ಮಿಥ್ಯಾರೋಪ ವಸ್ತುಗಳನ್ನು ಹಿಡಿದುಕೊಳ್ಳುವುದರ ದೆಸೆಯಿಂದ ತನ್ನನ್ನು ಕೊಂದುಕೊಳ್ಳುತ್ತಿದ್ದಾನೆ.ಅಂದರೆ ಆತ್ಮಹತ್ಮಹತ್ಯಾಕಾರನಾಗುತ್ತಿದ್ದಾನೆ.
ಇದು ಪಾಪವೆಂಬುದು ಅವನಿಗೆ ಗೊತ್ತಿಲ್ಲವೇ.?
ವಿರಕ್ತನಾದ ಜ್ನಾನಿಯು ರಾತ್ರಿಯಲ್ಲಿ ಯೋಗಾಭ್ಯಾಸದಿಂದ ಅಂತರ್ಮುಖನಾಗಿ ಕತ್ತಲೆಯಿಂದ ಬಿಡುಗಡೆ ಹೊಂದಬೇಕಂತೆ.ಆದರೆ ಸಕಲ ಭೋಗಗಳನ್ನೂ ರಾತ್ರಿ ಹಗಲೆನ್ನದೆ ಅನುಭವಿಸುವ ಇವನಿಗೆ ಸತ್ಯದ ಅರಿವಾಗುವುದೆಂದು..?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!!

ರಾಜಾ ವಿಕ್ರಮಾದಿತ್ಯನು ಎಂದಿನಂತೆ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಇಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಪ್ರಶ್ನೆ ಕೇಳುತ್ತೇನೆ..
ಯಾವುದೇ ಧರ್ಮದಲ್ಲಿ ಹುಟ್ಟಿದರೂ ಸತ್ಯದ ದಾರಿಯಲ್ಲಿ ನಡೆದು ಪ್ರಕೃತಿಯ ಶಕ್ತಿಯಲ್ಲಿ ಲೀನವಾಗಬೇಕು.ಅದುವೇ ವಿಶ್ವ ಮಾನವ ಧರ್ಮ.ಯಾವ ಧರ್ಮವೂ ಜಗಳವಾಡಿ ಕಿತ್ತಾಡಿ ಸ್ವಾರ್ಥಿಗಳಾಗಿ,ಇನ್ನೊಬ್ಬರನ್ನು ಕೆಳಗೆ ತುಳಿದು ನೀವು ಬೆಳೆಯಿರಿ ಎಂದು ಹೇಳಿಲ್ಲ.ಧರ್ಮಾಚರಣೆ ಮಾಡುವುದು ಎಲ್ಲರಿಗೂ ಒಳ್ಳೆಯದಾಗಲಿ ಎಲ್ಲರೂ ಸಂತೋಷವಾಗಿರಲಿ ಎಂಬ ಉದ್ದೇಶದಿಂದ.ಹೊರತು ಕಿತ್ತಾಡಿ ಸಾಯಲಿ ಅಂತ ಅಲ್ಲ.
ಆದರೆ ಧರ್ಮಕ್ಕೆ ಕೆಟ್ಟ ಹೆಸರು ತರುವ,ಧರ್ಮವನ್ನು ಕೆಳಮಟ್ಟಕ್ಕೆ ತಳ್ಳುವ ಕಳಂಕಿತನಾದ ಕಚ್ಚೆ ಹರುಕ ಸನ್ಯಾಸಿಯೊಬ್ಬ ಭೂಲೋಕದ ಶಿಖರನಗರದಲ್ಲಿದ್ದಾನೆ ಅವನಿಂದ ಧರ್ಮಕ್ಕೆ ಕಳಂಕವಾಗುತಗತ್ತಿದೆ.ಅವನಿಗೇ ಜ್ನಾನೋದಯವಾಗುವುದೋ, ಅಥವ ಅವನಿಂದ ಪೀಠಕ್ಕೆ ಮೋಕ್ಷ ದೊರಕುವುದೊ.?

ನಮ್ಮ ಮನಸ್ಸು ದೇವರು ನಮಗೆ ನೀಡಿರುವ ಒಂದು ಅದ್ಭುತ ಕೊಡುಗೆ,ಈ ಮನಸ್ಸನ್ನು ನಿಯಂತ್ರಿಸಿ,ಅದನ್ನು ನಮ್ಮ ಅಡಿಯಾಳಾಗಿ ಮಾಡಿ ನಾಲ್ಕು ಮಂದಿಗೆ ಪ್ರಯೋಜನವಾಗುವಂತೆ ಸತ್ಕಾರ್ಯಗಳಿಗೆ ಅದನ್ನು ದುಡಿಸಿಕೊಂಡರೆ ಈ ಮನಸ್ಸು ಅದ್ಭುತಗಳನ್ನು ಸಾಧಿಸಬಲ್ಲದು.ಅನಿರ್ಬಂಧಿತ,ಅನಿಯಂತ್ರಿತ ಮನಸ್ಸು ನಮ್ಮ ಬದುಕು,ನಮ್ಮ ವ್ಯಕ್ತಿತ್ವವನ್ನು ಸಂಪೂರ್ಣ ನಾಶಗೊಳಿಸಬಲ್ಲದು.ಮನಸ್ಸಿನ ಮೇಲೆ ಸಂಪೂರ್ಣ ಹತೋಟಿ ಸಾದಿಸುವುದೆಂದರೆ ನಮ್ಮ ಜೀವನದ ಮೇಲೆ ಹತೋಟಿ ಸಾಧಿಸಿದಂತೆ.!
ಆದರೆ ಮನಸ್ಸನ್ನು ಹುಚ್ಚು ಕುದುರೆಯಂತೆ ಹರಿಯಬಿಟ್ಟು,ಕಳಂಕಿತನಾದ ಸನ್ಯಾಸಿಯೊಬ್ಬ ಭೂಲೋಕದ ಶಿಖರನಗರದಲ್ಲಿ ಗಟ್ಟಿಯಾಗಿ ತಳವೂರಿದ್ದಾನೆ. ಜೊತಗೆ ಹಿಂದೆ ಮಾಡಿದ ಕೆಟ್ಟ ಕೆಲಸಗಳಿಂದ ಸದಾ ಆತಂಕದಲ್ಲಿ,ಭಯದ ವಾತಾವರಣದಲ್ಲಿ ಬಾಳುತ್ತಾನೆ.
ಅವನಿಗೂ ಗೊತ್ತಿರಬಹುದು..
ನರಕ್ಕಿರುವಕ್ಕಿರುವ ಬಾಗಿಲುಗಳು ಮೂರು.! ಕಾಮವೊಂದು,ಕ್ರೋಧವೊಂದು,ಲೋಭವೊಂದು.ಇದೇ ಆತ್ಮಕ್ಕೆ ಕೇಡು ಮಾಡತಕ್ಕವು.
ಈಗ ಮನಸ್ಸನ್ನು ನಿಯಂತ್ರಿಸಿ,ತೆರೆದಿರುವ ನರಕದ ಬಾಗಿಲುಗಳನ್ನು ಮುಚ್ಚಲು ಅವನಿಂದ ಸಾಧ್ಯವೇ..? ಅಥವ ಕರ್ಮದ ಫಲಗಳನ್ನು ಅನುಭವಿಸಲೇಬೇಕೆ..? ಅದಕ್ಕೆ ಕಾಲ ಪಕ್ವವಾಗಿದೆಯೇ..?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!!

ರಾಜಾ ವಿಕ್ರಮಾದಿತ್ಯನು ಎಂದಿನಂತೆ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಇಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಪ್ರಶ್ನೆ ಕೇಳುತ್ತೇನೆ..
ಯಾವುದೇ ಧರ್ಮದಲ್ಲಿ ಹುಟ್ಟಿದರೂ ಸತ್ಯದ ದಾರಿಯಲ್ಲಿ ನಡೆದು ಪ್ರಕೃತಿಯ ಶಕ್ತಿಯಲ್ಲಿ ಲೀನವಾಗಬೇಕು.ಅದುವೇ ವಿಶ್ವ ಮಾನವ ಧರ್ಮ.ಯಾವ ಧರ್ಮವೂ ಜಗಳವಾಡಿ ಕಿತ್ತಾಡಿ ಸ್ವಾರ್ಥಿಗಳಾಗಿ,ಇನ್ನೊಬ್ಬರನ್ನು ಕೆಳಗೆ ತುಳಿದು ನೀವು ಬೆಳೆಯಿರಿ ಎಂದು ಹೇಳಿಲ್ಲ.ಧರ್ಮಾಚರಣೆ ಮಾಡುವುದು ಎಲ್ಲರಿಗೂ ಒಳ್ಳೆಯದಾಗಲಿ ಎಲ್ಲರೂ ಸಂತೋಷವಾಗಿರಲಿ ಎಂಬ ಉದ್ದೇಶದಿಂದ.ಹೊರತು ಕಿತ್ತಾಡಿ ಸಾಯಲಿ ಅಂತ ಅಲ್ಲ.
ಆದರೆ ಧರ್ಮಕ್ಕೆ ಕೆಟ್ಟ ಹೆಸರು ತರುವ,ಧರ್ಮವನ್ನು ಕೆಳಮಟ್ಟಕ್ಕೆ ತಳ್ಳುವ ಕಳಂಕಿತನಾದ ಕಚ್ಚೆ ಹರುಕ ಸನ್ಯಾಸಿಯೊಬ್ಬ ಭೂಲೋಕದ ಶಿಖರನಗರದಲ್ಲಿದ್ದಾನೆ ಅವನಿಂದ ಧರ್ಮಕ್ಕೆ ಕಳಂಕವಾಗುತಗತ್ತಿದೆ.ಅವನಿಗೇ ಜ್ನಾನೋದಯವಾಗುವುದೋ, ಅಥವ ಅವನಿಂದ ಪೀಠಕ್ಕೆ ಮೋಕ್ಷ ದೊರಕುವುದೊ.?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!!

ರಾಜಾ ವಿಕ್ರಮಾದಿತ್ಯನು ಎಂದಿನಂತೆ ಮರದ ಬಳಿಗೆ ಹೋಗಿ ತಲೆಕೆಳಗಾಗಿ ನೇತಾಡುತ್ತಿದ್ದ ಶವವನ್ನು ಇಳಿಸಿ ಹೆಗಲ ಮೇಲೆ ಹಾಕಿ ಸ್ಮಶಾನದ ಕಡೆಗೆ ನಡೆದನು.,ಆಗ ಶವದೊಳಗಿದ್ದ ಬೇತಾಳವು ಹೇಳಿತು,”ಎಲೈ ರಾಜನೆ,ನಿನ್ನ ಛಲವನ್ನು ಮೆಚ್ಚಿದೆ,ಆದರೂ ನಿನ್ನ ಆಯಾಸ ಪರಿಹಾರಕ್ಕಾಗಿ ಯೋಚಿಸಲು ಒಂದು ಪ್ರಶ್ನೆ ಕೇಳುತ್ತೇನೆ….
ಭೂಲೋಕದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಮಣಿದು ಜೋರ್ಜನ ತಲೆದಂಡವಾಗಲು ಗುರುಶಾಪವೇ ಕಾರಣವಂತೆ.!! ಹಾಗಾದರೆ ಡಿ.ವಿ.ಎಸ್.ಎಂಬವನ ಸ್ಥಾನ ಪಲ್ಲಟವಾಗಲು ಕಾರಣವೇನು.? ಅವನಿಗೆ ಗುರು ಅನುಗ್ರಹವಿತ್ತಲ್ಲವೇ..? ಹಾಗಾದರೆ ಜಾರ್ಜನಿಗೂ ಅವನೇ ಗುರುವೇ..?
ಈ ಎಲ್ಲಾ ಪ್ರಶ್ಶೆಗಳಿಗೆ ಉತ್ತರಿಸದೇ ಹೋದರೆ ನಿನ್ನ ತಲೆ ಒಡೆದು ಸಾವಿರ ಹೋಳಾಗುವುದು ಎಚ್ಚರ..!!

Kiran Mannaje

Advertisements