ಸುಲಗ್ನೇ ಸಾವಧಾನ, ಸುಮುಹೂರ್ತೇ ಸಾವಧಾನ, ತನ್ಮಧ್ಯೆ ತೊನೆಯಪ್ಪ ಧ್ಯಾನ ಸಾವಧಾನ…….!

ಸುಲಗ್ನೇ ಸಾವಧಾನ, ಸುಮುಹೂರ್ತೇ ಸಾವಧಾನ, ತನ್ಮಧ್ಯೆ ತೊನೆಯಪ್ಪ ಧ್ಯಾನ ಸಾವಧಾನ…….!

ತುಮರಿ ಬರೆಯಲಿಲ್ಲ; ಬರೆದರೂ ಅಷ್ಟೆ ಬಿಟ್ಟರೂ ಅಷ್ಟೆ ಎಂಬುದು ತುಮರಿಯ ಅನಿಸಿಕೆ. ಮೂರೂ ಬಿಟ್ಟವನಿಗೆ ಯಾವುದೂ ನಾಟುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಸನಾತನ ಧರ್ಮ ಸಂವರ್ಧಿನೀ ಸಭಾದವರು ಝಾಡಿಸಿ ಹೊರಗೆ ಹಾಕಿದ ಮೇಲೆ ತುಮರಿಗೂ ಬಹಳ ಖುಷಿಯಾಗಿದೆ. ಇಲ್ಲಿಯವರೆಗೆ ಯಾರೂ ಹೇಳೋರು ಕೇಳೋರು ಇಲ್ಲ, ತಾನು ನಡೆದದ್ದೇ ದಾರಿ, ತನ್ನನ್ನು ಎದುರುಹಾಕಿಕೊಂಡು ಬದುಕುವವರುಂಟೇ ಎಂದು ಮೆರೆಯುತ್ತಿದ್ದ, ಈಗ ಬಾಲ ಕಟ್ ಮಾಡಿದ್ದಾರೆ!

ಅಮುಲ್ ಮಾಂತ್ರಿಕ ವರ್ಗೀಸ್ ಕುರಿಯನ್ ಬಗ್ಗೆ ನೀವು ಕೇಳಿರಬಹುದು; ಕೇರಳ ಮೂಲದ ವ್ಯಕ್ತಿ ಉದ್ದೇಶ ಸಾಫಲ್ಯಕ್ಕಾಗಿ ಜೀವನ ನಡೆಸಿದ್ದು, ಸಾಧಿಸಿದ್ದು ಎಲ್ಲವೂ ದೂರದ ಗುಜರಾತ್ ನಲ್ಲಿ. ಅವರು ಅಲ್ಲಿಗೆ ಹೋದ ಆ ಕಾಲದಲ್ಲಿ ಡೈರಿ ನಿರ್ಮಾಣಕ್ಕೆ ಯಾವ ಅನುಕೂಲವೂ ಇರಲಿಲ್ಲ. ಕೃಷಿಕರಿಗೆ ನಂಬಿಕೆಯೂ ಇರಲಿಲ್ಲ. ಹೊಸದೊಂದು ಅಲೆಯನ್ನು ಎಬ್ಬಿಸಿ, ಕ್ಷೀರಕ್ರಾಂತಿ ಎಂಬ ಹೆಸರಿನಲ್ಲಿ ಡೈರಿಯನ್ನು ಕಟ್ಟಿ, ಬೆಳೆಸಿ, ರೈತರಿಗೂ, ದೇಶಕ್ಕೂ ಉಪಕಾರಿಯಾದವರು ಕುರಿಯನ್. ಅವರ ಜನ್ಮಕ್ಕೆ ಅದೊಂದು ದೊಡ್ಡ ತಪಸ್ಸಾಗಿತ್ತು. ಅಂತಹ ತಪಸ್ಸಿನ ಗುರಿತಲುಪಿ ಜಗದ್ವಿಖ್ಯಾತರಾದವರು ಕುರಿಯನ್.

ಪ್ರತಿಯೊಬ್ಬ ಸನ್ಯಾಸಿಗೂ ಹಾಗೇ ಗುರಿಯಿರುತ್ತದೆ. ಸನ್ಯಾಸಿಯ ಗುರಿ ಸ್ವಾತ್ಮೋದ್ಧಾರದ ಜೊತೆಗೆ ಶಿಷ್ಯಗಡಣವನ್ನು ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆಸುವುದು. ಸ್ವಾತ್ಮೋದ್ಧಾರ ಮಾಡಿಕೊಳ್ಳುವುದು ಎಂದರೆ ಈರುಳ್ಳಿ ಉಪ್ಪಿಟ್ಟು, ಪಕೋಡ, ಬಜೆ ತಿಂದಷ್ಟು ಸುಲಭವಲ್ಲ. ಸನ್ಯಾಸಿ ಸನ್ಯಾಸ ಧರ್ಮವನ್ನು ಚಾಚೂತಪ್ಪದೆ ಪಾಲಿಸಬೇಕು. ಅಷ್ಟೈಶ್ವರ್ಯ ತುಂಬಿದ ಪರಿಸರದಲ್ಲಿ ಲೌಕಿಕ ಸುಖೋಪಭೋಗಗಳನ್ನು ತೊರೆದು ಪರಿವ್ರಾಜಕನಾಗುವುದು ಸುಲಭಸಾಧ್ಯವಲ್ಲ.

ವೈದಿಕರು ವೇದಘೋಷ ಮಾಡುವಾಗ, ಕಾವಿಹಾಕಿಕೊಂಡು, ತೊನೆಯುತ್ತ ಪೂಜೆ ಮಾಡೋದು, ಆರತಿ ಎತ್ತೋದು, ಎದುರು ಕುಳಿತ ಜನರೆಡೆಗೆ ’ಪವರ್ ಫುಲ್’ ಕಣ್ಣು ಬಿಡೋದು ಇಂಥಾದ್ನೆಲ್ಲ ಯಾರಾದರೂ ಮಾಡಬಹುದು. ಪೂಜೆಮಾಡುವಾಗಲೂ ಎದುರು ಕುಳಿತವರಲ್ಲಿ ಏಕಾಂತಕ್ಕೆ ಬೇಕಾದವರನ್ನು ಹುಡುಕೋದೂ ನಡೆಯಬಹುದು. ಸನ್ಯಾಸ ಅಂದರೆ ಅದಲ್ಲ, ಸನ್ಯಾಸದ ನ್ಯಾಸವೇ ವಿರಕ್ತಿ ಆಧಾರಿತ. ಅಲ್ಲಿ ಕಾಮಿನಿ, ಕಾಂಚಾಣಗಳ ಆಸೆಯಿರುವುದಿಲ್ಲ. ಅಷ್ಟೇ ಅಲ್ಲ, ಲೌಕಿಕವಾದ ಯಾವ ಆಸೆಯನ್ನೂ ಸನ್ಯಾಸಿಯಾದವ ಇಟ್ಟುಕೊಳ್ಳೋದಿಲ್ಲ. ಅವನ ಗುರಿಯೊಂದೇ-ಮೋಕ್ಷ ಸಾಧನೆ.

ಬಹಳದಿನಗಳಿಂದ ಗುಮ್ಮಣ್ಣ ಹೆಗಡೇರು ಸಿಕ್ಕಿರಲಿಲ್ಲ. ಅಂತೂ ಎರಡು ದಿನಗಳ ಹಿಂದೆ ವಾಟ್ಸಾಪ್ ಮೂಲಕ ಅವರ ಸಂವಹನ ಆಯಿತು. ಬೆಂಗಳೂರಿನಲ್ಲಿ ಬ್ರಾಹ್ಮಣ ಸಮಾವೇಶ ಬಹಳ ಚೆನ್ನಾಗಿ ನಡೆಯಿತಂತೆ. ಅದಕ್ಕೆ ಹಾಜರಿದ್ದವರಲ್ಲಿ ಗುಮ್ಮಣ್ಣ ಹೇಗಡೇರೂ ಒಬ್ಬರು. ಭಾನುವಾರದ ಮಧ್ಯಾಹ್ನದಲ್ಲಿ ಯದುಗಿರಿ ಯತಿರಾಜ ನಾರಾಯಣ ಜೀಯರ್ ಸ್ವಾಮಿಗಳು ಬಹಳ ಅದ್ಭುತ ಪ್ರವಚನವನ್ನು ನಡೆಸಿದರಂತೆ. ಅಂಥವರನ್ನೆಲ್ಲ ನೋಡಿಯಾದರೂ ತೊನೆಯಪ್ಪ ಸನ್ಯಾಸ ಧರ್ಮವನ್ನು ಅರ್ಥಮಾಡಿಕೊಳ್ಳಬಹುದಿತ್ತು, ಅರ್ಥಮಾಡಿಕೊಳ್ಳೋದು ಹಾಗಿರಲಿ, ತೊನೆಯಪ್ಪ ಪೀಠವನ್ನು ಆಕ್ರಮಿಸಿಕೊಂಡ ಉದ್ದೇಶವೇ ಬೇರೆ ಇತ್ತು ಎಂಬುದು ಈಗೀಗ ಇಡೀ ಸಮಾಜಕ್ಕೆ ಅರ್ಥವಾಗಿದೆ.

ಸಮಾವೇಶಕ್ಕೆ ಹೋಗಿದ್ದ ಗುಮ್ಮಣ್ಣ ಹೆಗಡೇರಿಗೆ ಬೇರೆ ಬೇರೆ ಪ್ರಾಂತದ ಹಲವಾರು ಜನ ಸಿಕ್ಕಿದ್ದರಂತೆ, ಸಮಾವೇಶದ ಸಭಾಂಗಣದಲ್ಲಿ ಉಳಿದೆಲ್ಲ ಸ್ವಾಮಿಗಳ ಭಾವಚಿತ್ರಗಳಿದ್ದವು, ಉಚ್ಚಾಟಿತ ತೊನೆಯಪ್ಪನ ಭಾವಚಿತ್ರ ಮಾತ್ರ ಅಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಜನ ತೊನೆಯಪ್ಪನ ಉಚ್ಚಾಟನೆಯ ಸುದ್ದಿಯನ್ನೇ ಮಾತಾಡಿಕೊಳ್ಳುತ್ತಿದ್ದರಂತೆ. ಹಿಂದೂ ಸಮಾಜಕ್ಕೆ ಇಂತಹ ಕಳ್ಳ ಸನ್ಯಾಸಿಗಳೊಂದು ಕಳಂಕ ಎಂದು ಹೇಳುತ್ತಿದ್ದರಂತೆ. ’ಸಾಮಾನು ಸ್ವಾಮಿ’ಯ ಬಗ್ಗೆ ಯಾರ ಬಾಯಲ್ಲಿ ಕೇಳಿದರೂ ಛೀ ಥೂ ಎಂಬ ಛೀತ್ಕಾರವೇ ಕೇಳಿಬರುತ್ತಿತ್ತು ಎಂದರು.

“ಆಂಟಿಯ ಪ್ಯಾಂಟಿಗೆ ಗಮ್ಮು ಅಂಟಿಕೊಂಟಿದೆ ಅಂತ ಹೇಳಿದಾಗ ಕಂಗಾಲಾಗಿದ್ದನಂತೆ ಮುಂಡೆಗಂಡ, ಆಗಲೇ ಪೀಠ ಬಿಟ್ಟು, ಹಿಮಾಲಯಕ್ಕೋ ಮತ್ತೊಂದಕ್ಕೋ ಹೋಗಿದ್ದರೆ ಬಚಾವಾಗ್ತಿದ್ದ, ಈಗ ಖಂಡಿತ ಬಚಾವಾಗೋದಿಲ್ಲ. ಪೀಠ ಬಿಟ್ಟು ಹೋದರೆ, ಹೋದಮೇಲೆ ತಾನಿರೋ ಊರ ತುಂಬೆಲ್ಲ ಹಾದರ ನಡೆಸಿ ಮಕ್ಕಳನ್ನು ಮಾಡಿಕೊಂಡಿದರೂ ನಮಗೆ ಸಂಬಂಧವಿರಲಿಲ್ಲ. ಆದರೆ ತಾನು ಮಾಡಿದ್ದೇ ಸರಿ, ತನ್ನನ್ನು ಯಾರೂ ವಿರೋಧಿಸಿ ಗೆಲ್ಲಲು ಸಾಧ್ಯವಿಲ್ಲ ಅಂದ್ಕಂಡು ಗಟ್ಟಿ ಕೂತ. ಈಗ ಉರುಳು ಹತ್ತಿರ ಬರ್ತಾ ಇದೆ. ಪಾಪಿಗೆ ತಕ್ಕ ಶಿಕ್ಷೆ ಆಗೇ ಆಗ್ತದೆ” ಎಂದರು ಗುಮ್ಮಣ್ಣ ಹೆಗಡೇರು.

ಅಂದಹಾಗೆ ಜಗದ್ಗುರು ಶೋಭರಾಜಾಚಾರ್ಯರ ಕುರಿವಾಡೆ ಮಠದ ಆವಾರದಲ್ಲಿ ನಾಳೆ ಒಂದು ಮದುವೆ. ಅದೇ-ಕಳೆದ ದಸರಾದಲ್ಲಿ ತೊನೆಯಪ್ಪನವರು ಖುದ್ದಾಗಿ ನಿಂತು ಗಿಂಡಿಯೊಂದಿಗೆ ಭಕ್ತೆಯೋರ್ವಳ ವಿವಾಹ ನಿಶ್ಚಿತಾರ್ಥ ನಡೆಸಿದ್ದರಲ್ಲ, ಆ ಮದುವೆ. ಪ್ರಿಯವದನೆಯ ಅಪ್ಪ ಅಮ್ಮಂದಿರು ಮಠದ ಹೋರಿಯ ಖಾಸಾ ಭಕ್ತರು. ಅದಕ್ಕೆಂತಲೇ ಊರಕಡೆಗೆ ಆ ದಂಪತಿಯನ್ನು ಇನ್ನಷ್ಟು ಕಾಡಿನ ಮೂಲೆಗೆ ಸೇರಿಸಿ ಕೃತಾರ್ಥರನ್ನಾಗಿ ಮಾಡಿದ್ದಾನೆ ತೊನೆಯಪ್ಪ ಎಂದು ಗುಮ್ಮಣ್ಣ ಹೆಗಡೇರು ನಗುತ್ತಿದ್ದರು. ಹುಡುಗಿಗೆ ಗಿಂಡಿ ಇಷ್ಟವೇ ಇಲ್ಲವಂತೆ; ಆದರೂ ಅಪ್ಪ-ಅಮ್ಮ ಹೇಳಿದಂತೆ ಕೇಳಬೇಕಲ್ಲ? ಹೀಗಾಗಿ ನಾಳೆ ಕುರಿವಾಡೆ ಮಠದಲ್ಲಿ ಸುಲಗ್ನೇ ಸಾವಧಾನ, ಸುಮುಹೂರ್ತೇ ಸಾವಧಾನ….ತನ್ಮಧ್ಯೆ ತೊನೆಯಪ್ಪ ಧ್ಯಾನ ಸಾವಧಾನ!

“ತೊನೆಯಪ್ಪ ಜೈಲುಪಾಲಾದ ಮೇಲೆ ಅವನು ಬಲವಂತವಾಗಿ ಮಾಡಿಸಿದ ಅಷ್ಟೂ ಮದುವೆಗಳು ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತವೆ. ಹಲವು ಹುಡುಗೀರು ಪೀಡೆ ತೊಲಗಿತೆಂದು ನಿಟ್ಟುಸಿರುಬಿಡ್ತಾರೆ. ನಿಕ್ಕಿ ಬೇಜಾರು ಮಾಡಿಕೊಳ್ಳೋರು ಏಕಾಂತದ ಆಂಟೀರು ಮಾತ್ರ. ಇದ್ದಾರಲ್ಲ ನೀತಾ ಗುಂಜಪ್ಪ, ಅನುರಾಗ, ಮಾದಕ್ಕಿ ತಿಮ್ಮಕ್ಕನ ಕತೆಯಂತು ಮುಗಿದು ಹೋಗಿದೆ, ಪಾಪ ಆಕೆ ಬರಬಾರದ ಕಾಯಿಲೆ ಅಂಟಿಕೊಂಡಿದ್ಯಂತೆ. ಏಕಾಂತದ ಆಂಟೀರಿಗೆ ಮುಂದೆ ತೆವಲು ತೀರಿಸಿಕೊಳ್ಳಲು ಮಠದಲ್ಲಿ ಅವಕಾಶವಿರೋದಿಲ್ಲ” ಅಂತಿದ್ರು ಗುಮ್ಮಣ್ಣ ಹೆಗಡೇರು.

“ತೊನೆಯಪ್ಪ ಪೀಠ ಇಳಿದು ಹೋದರೆ ಅಥವಾ ಒಳಗೆ ಹೋದರೆ ತಮ್ಮ ಬೇಳೆ ಬೇಯೋದಿಲ್ಲ ಅಂತ ಗೊತ್ತಿರುವ ಒಂದಷ್ಟು ಸಮಾನ ಮನಸ್ಕರು ಹಳದೀ ತಾಲೀಬಾನ್ ಮುಂಚೂಣಿಯಲ್ಲಿದ್ದಾರೆ. ಅವರೇ ಮಾಧ್ಯಮಗಳಿಗೆ ಹೇಳಿಕೆ ಕೊಡ್ತಾರೆ. ಪ್ರಚಾರ ಕೈಗೊಳ್ತಾರೆ, ಜೈಕಾರ ಹಾಕ್ತಾರೆ, ಯಾತ್ರೆಗಳನ್ನು ಆಯೋಜಿಸುತ್ತಾರೆ ಇನ್ನೂ ಏನೇನೋ….ಎಲ್ಲದರಲ್ಲೂ ದುಡ್ಡು ಹೊಡ್ಕಳ್ಳೋದು ಅವರ ಮುಖ್ಯ ಗುರಿ. ಏನೂ ಇಲ್ಲದೆ ಮಠಕ್ಕೆ ಬಂದಿದ್ದ ಅಂತಹ ಕೆಲವರು ಇಂದು ಕಬ್ಬಿಣದ ರಾಡ್ ಗಾತ್ರದ ಬಂಗಾರದ ಸರಗಳನ್ನು ಹಾಕಿಕೊಂಡಿದ್ದಾರೆ, ಮನೆ ಕಟ್ಟಿದ್ದಾರೆ, ಫ್ಲಾಟ್ ಖರೀದಿಸಿದ್ದಾರೆ. ಹಾಗೆ ತೊನೆಯಪ್ಪನ ಸೇವೆಯಲ್ಲಿರುವ ಬಹುತೇಕ ಮಂದಿ ತೊನೆಯಪ್ಪನಂತೆ ಕಚ್ಚೆಹರುಕರೇ. ಮೇಲಾಗಿ ಉಂಡಾಡಿಗಳು, ಮೈಗಳ್ಳರು. ಮಠದಲ್ಲಿ ಮೇಯಲು ಸಿಗ್ತದೆ ಅಂತ ಗೊತ್ತಾಗೇ ಮಠಕ್ಕೆ ಸೇರ್ಕೊಂಡು ಈ ಹಂತಕ್ಕೆ ತಂದಿಟ್ಟಿದ್ದಾರೆ” ಗುಮ್ಮಣ್ಣರು ಭೋರ್ಗರೆಯುತ್ತಿದ್ದರು.

“ಉತ್ತರಕ್ಕೆ ಹೋಗಿದ್ನಲ್ರೀ, ಯಾಕ್ ಹೋಗಿದ್ದಾಂತ ತಿಳಿದಿದ್ದ್ರಿ? ಮುಂದೆ ಬರ್ತಾ ಇರೋ ಸರ್ವೋಚ್ಚ ಉರುಳಿನಿಂದ ತಪ್ಪಿಸಿಕೊಳ್ಳೋ ಸಲುವಾಗಿ ಬಲೆ ಹೆಣೀಲಿಕ್ಕೆ ಹೋಗಿದ್ದ. ಇಲ್ದಿದ್ರೆ ಹಸುವಿನ ಕಿವಿಯೂರಿನ ಜಾತ್ರೆ ಸಮಯದಲ್ಲಿ ಅಲ್ಲಿಗೆ ಹೋಗ್ದೆ ದಿಡೀರನೆ ಉತ್ತರಕ್ಕೆ ಯಾಕೆ ಹೋಗ್ತಿದ್ದ? ಅಲ್ಲಿ ಒಂದ್ ಲೆವೆಲ್ಲಿಗೆ ವ್ಯವಸ್ಥೆ ಆಯ್ತು ಅಂತ ಅಂದ್ಕಂಡು ಮರಳಿ ಬಂದಿದಾನೆ. ಅಲ್ಲೆಲ್ಲ ಇಲ್ಲಿನ ಹಾಗ ಆಗೋದಿಲ್ಲ. ಇವನ ಹಣ, ವಶೀಲಿ ಎಲ್ಲ ಅಲ್ಲಿ ನಡೆಯೋದಿಲ್ಲ. ಸರಿಯಾಗಿ ಇಡ್ತಾರೆ ನೋಡಿ ಮುಂಡೆಗಂಡಂಗೆ”ಗುಮ್ಮಣ್ಣರ ಘರ್ಜನೆ ಮುಂದುವರಿದಿತ್ತು.

ಹಾಗಾದರೆ ತೊನೆಯಪ್ಪ ಜೈಲು ಸೇರೋದು ನಿಶ್ಚಿತ ಅಂತಾಯ್ತಲ್ಲ. ಅದಕ್ಕೂ ಅದೇ ಮಂತ್ರ-ಸುಲಗ್ನೇ ಸಾವಧಾನ, ಸುಮುಹೂರ್ತೇ ಸಾವಧಾನ, ತನ್ಮಧ್ಯೆ ತೊನೆಯಪ್ಪ ಧ್ಯಾನ ಸಾವಧಾನ…….!

Thumari Ramachandra
04/03/2018

source: https://www.facebook.com/groups/1499395003680065/permalink/2118940531725506/

source: https://thumari.wordpress.com

Advertisements

ಶೃಂಗೇರಿ ಮಠದ ಖಡಕ್ ನಿರ್ಧಾರ – ರೇಪಿಸ್ಟ್ ಸ್ವಾಮಿಗೆ ಸರಿಯಾಗಿಯೇ ಇಕ್ಕಿದರು

ಶೃಂಗೇರಿ ಮಠದ ಖಡಕ್ ನಿರ್ಧಾರ – ರೇಪಿಸ್ಟ್ ಸ್ವಾಮಿಗೆ ಸರಿಯಾಗಿಯೇ ಇಕ್ಕಿದರು

 

9PM News With Shashidhar Bhat – 21st February 2018 – ಶಶಿಧರ್ ಭಟ್ | ಸುದ್ದಿ ಟಿವಿ

9PM News With Shashidhar Bhat – 21st February 2018 – ಶಶಿಧರ್ ಭಟ್ | ಸುದ್ದಿ ಟಿವಿ

Suddi TV | ಸುದ್ದಿ ಟಿವಿ Kannada
Published on 21 Feb 2018

source: https://www.youtube.com/watch?v=75dG7myCDRQ

ಸನಾತನ ಧರ್ಮ ಸಂವರ್ಧಿನೀ ಸಭಾದ ಸಭೆ – ಅನೈತಿಕ ಸಂಬಂಧ; ಸ್ವಾಮೀಜಿ ಕೈಬಿಡಲು ನಿರ್ಣಯ

ಶಾರದಾ ಪೀಠ: ಸನಾತನ ಧರ್ಮ ಸಂವರ್ಧಿನೀ ಸಭಾದ ಸಭೆ
ಅನೈತಿಕ ಸಂಬಂಧ; ಸ್ವಾಮೀಜಿ ಕೈಬಿಡಲು ನಿರ್ಣಯ

ಪ್ರಜಾವಾಣಿ ವಾರ್ತೆ
18 Feb, 2018

ಶಾರದಾ ಪೀಠದಲ್ಲಿ ಭಾರತೀ ತೀರ್ಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮಠಾಧೀಶರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಶಂಕರ ಪೀಠ ಪರಂಪರೆಯ ಯತಿಗಳು ಪಾಲ್ಗೊಂ ಡಿದ್ದರು. ನಿರ್ಣಯದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಶಾರದಾ ಪೀಠದಲ್ಲಿ ಭಾರತೀ ತೀರ್ಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಶೃಂಗೇರಿ (ಚಿಕ್ಕಮಗಳೂರು): ಅತ್ಯಾ ಚಾರ, ಅನೈತಿಕ ಸಂಬಂಧದಂತಹ ಗಂಭೀರ ಆರೋಪಗಳನ್ನು ಹೊತ್ತಿರುವ ಮಠಾಧೀಶರನ್ನು ಸನಾತನ ಧರ್ಮ ಸಂವರ್ಧಿನೀ ಸಭಾದಿಂದ ಕೈಬಿಡಲು ಶಾರದಾಪೀಠದಲ್ಲಿ ಶನಿವಾರ ನಡೆದ ಮಠಾಧೀಶರ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಶಾರದಾ ಪೀಠದಲ್ಲಿ ಭಾರತೀ ತೀರ್ಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮಠಾಧೀಶರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಶಂಕರ ಪೀಠ ಪರಂಪರೆಯ ಯತಿಗಳು ಪಾಲ್ಗೊಂ ಡಿದ್ದರು. ನಿರ್ಣಯದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಸನಾತನ ಧರ್ಮ ಸಂವರ್ಧನೆಗಾಗಿ ಸಭಾ ಪ್ರಯತ್ನಿಸುತ್ತಿದೆ. ಸನ್ಯಾಸಾಶ್ರಮ ಧರ್ಮಪಾಲನೆಗೆ ವೇದೋಪನಿಷತ್ತು, ಶಂಕರರಿಂದ ವಿರಚಿತವಾದ ಮಠಾಮ್ನಾಯ ಪ್ರಮಾಣಕ್ಕೆ ವ್ಯತಿರಿಕ್ತವಾದ ಜೀವನ ನಡೆಸುವ ಮಠಾಧೀಶರನ್ನು ಸಂಸ್ಥೆಯಿಂದ ಕೈಬಿಡಲು ನಿರ್ಧರಿಸಲಾಗಿದೆ. ಮಠಗಳು ಯೋಗ್ಯರಾದ ನಿಷ್ಕಳಂಕ ವ್ಯಕ್ತಿಗಳಿಂದ ಮುಂದುವರಿಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಶಂಕರಾಚಾರ್ಯರು ಸಂಚರಿಸಿದ ಶ್ರೀಶೈಲದಂಥ ಕ್ಷೇತ್ರಗಳಲ್ಲಿ ಸನಾತನ ಧರ್ಮ ಸಂವರ್ಧನೆಗಾಗಿ ಸ್ಮಾರಕಗಳನ್ನು ನಿರ್ಮಿಸಬೇಕು. ಮಧ್ಯಪ್ರದೇಶ ಸರ್ಕಾ ರವು ಶಂಕರಾಚಾರ್ಯರು ಸಾರಿದ ಏಕಾತ್ಮಕತೆಯನ್ನು ಸಮಾಜಕ್ಕೆ ತಿಳಿಸಲು ಅಲ್ಲಿನ ಪ್ರತಿ ಜಿಲ್ಲೆಯಲ್ಲೂ ಕಾರ್ಯಕ್ರಮ ಆಯೋಜಿಸಿದಂತೆ ಇತರ ರಾಜ್ಯಗಳಲ್ಲೂ ಏರ್ಪಡಿಸುವುದು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಶಾರದಾಪೀಠದ ವಿಧುಶೇಖರ ಭಾರತೀ ಸ್ವಾಮೀಜಿ, ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಯಡತೊರೆ ಮಠದ ಶಂಕರಭಾರತೀ ಸ್ವಾಮೀಜಿ, ಹರಿಹರಪುರ ಮಠದ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ, ಶಿವಗಂಗಾ ಮಠದ ಪುರುಷೋತ್ತಮ ಭಾರತೀ ಸ್ವಾಮೀಜಿ, ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿ ಸಭೆಯಲ್ಲಿದ್ದರು.

source: http://www.prajavani.net/news/article/2018/02/18/554810.html

‘Seers facing adultery charges to be expelled’

‘Seers facing adultery charges to be expelled’

DH News Service, Bengaluru, Feb 19 2018, 0:56 IST

Seers and heads of mutts, who are facing serious charges like rape and adultery, will be excluded from Sanatana Dharma Samvardhini Sabha.

A decision to this effect taken in a meeting of pontiffs headed by Bharati Thirtha Swami, the pontiff of Sringeri Sharada Peetham.

The minutes of the meeting, which lists four decisions taken by seven seers, including the pontiff, says two other seers who were not present have also supported the decision.

“For seers, Shankara’s ‘Mathamnaya’ is the touchstone. It was decided to expel the seers living a life that strays from the path and facing serious charges of rape and adultery,” the minutes say, stressing the need for restoring the status of such mutts. It is to be seen how the decision will affect Raghaveshwara Bharati of Ramachandrapur Mutt, who is facing charges of adultery.

Apart from Bharati Thirtha Swami, Vidhushekhara Bharati Swami of Sringeri Sharada Peetham, Gangadharendra Saraswati Swami of Svarnavalli Mutt, Shankarabharati Swami of Yadatore Mutt, Sachchidananda Saraswati of Hariharapura Mutt among others were present in the meeting.

source: http://www.deccanherald.com/content/660271/seers-facing-adultery-charges-expelled.html

 

NEWS9
17 February at 07:58 ·

RAMACHANDRAPURA MUTT SEER OUSTED

Ramachandrapura mutt seer Raghaveshwara Bharathi has been ousted from Sanathana Dharma Samvardhini Sabha. The meeting was attended by the seers of Shankara Peeta and the decision was supported by 13 seers, including the Shringeri mutt seer. The decision was allegedly taken in the wake of rape and illicit affair allegations against the Ramachandrapura mutt seer.

source: https://www.facebook.com/news9live/photos/a.529348037132868.1073741827.202067876527554/1708975412503452/?type=3

ಅತ್ಯಾಚಾರ ಆರೋಪ ಇರೋ ಮಠಾಧೀಶರನ್ನು ಕೈಬಿಟ್ಟ ಸನಾತನ ಧರ್ಮ ಸಂವರ್ಧಿನೀ ಸಭಾ

ಅತ್ಯಾಚಾರ ಆರೋಪ ಇರೋ ಮಠಾಧೀಶರನ್ನು ಕೈಬಿಟ್ಟ ಸನಾತನ ಧರ್ಮ ಸಂವರ್ಧಿನೀ ಸಭಾ

Sunday, 18.02.2018, 3:52 PM

ಚಿಕ್ಕಮಗಳೂರು: ಶೃಂಗೇರಿಯಲ್ಲಿ ನಡೆದ ಸನಾತನ ಧರ್ಮ ಸಂವರ್ಧಿನೀ ಸಭಾದ ಸಭೆಯಲ್ಲಿ ಅತ್ಯಾಚಾರ ಆರೋಪ ಹೊತ್ತ ಸ್ವಾಮೀಜಿಗಳನ್ನು ಸಭಾದಿಂದ ಕೈಬಿಡಲು ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಶ್ರೀ ಮಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸನಾತನ ಧರ್ಮ ಸಂವರ್ಧನೆಗೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮಠಗಳು ಯೋಗ್ಯರಾದ ನಿಷ್ಕಳಂಕ ವ್ಯಕ್ತಿಗಳಿಂದ ಮುಂದುವರಿಯಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಸಭೆಯಲ್ಲಿ ಶೃಂಗೇರಿಯ ಶಾರದಾಪೀಠದ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ, ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿ, ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಯಡತೊರೆ ಕೃಷ್ಣರಾಜನಗರದ ಮಠದ ಶಂಕರಭಾರತೀ ಸ್ವಾಮೀಜಿ, ಹರಿಪುರ ಮಠದಿಂದ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ. ಶಿವಗಂಗಾ ಮಠದಿಂದ ಪರುಷೋತ್ತಮಭಾರತೀ ಸ್ವಾಮೀಜಿ, ಎಡನೀರು ಮಠದಿಂದ ಕೇಶವಾನಂದ ಭಾರತೀ ಸ್ವಾಮಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು:
ಸನಾತನ ಧರ್ಮದ ಉದ್ಧಾರಕ್ಕಾಗಿ ಶ್ರೀ ಶಂಕರಭಗವತ್ಪಾದಕರು ನಮ್ಮ ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಿಂದ ಸಂಚರಿಸಿ ಧರ್ಮಜಾಗೃತಿಯ ಜೊತೆ ರಾಷ್ಟ್ರದಲ್ಲಿ ಏಕತೆಯನ್ನೂ ಸಾಧಿಸಿದರು. ಈ ರೀತಿ ಸಂಚಾರದ ಸಂದರ್ಭದಲ್ಲಿ ಶ್ರೀ ಶಂಕರರು ಸಂಚರಿಸಿದ ಶ್ರೀಶೈಲ ಮುಂತಾದ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಸನಾತನ ಧರ್ಮ ಸಂವರ್ಧನೆಗಾಗಿ ವಿಶೇಷ ಸ್ಮಾರಕಗಳನ್ನು ನಿರ್ಮಿಸಲು ತೀರ್ಮಾನ.

ಇತ್ತೀಚೆಗೆ ಮಧ್ಯಪ್ರದೇಶ ಸರ್ಕಾರ ಶ್ರೀ ಶಂಕರರ ಸಾರಿದ ಏಕಾತ್ಮಕತೆಯನ್ನು ಸಮಾಜಕ್ಕೆ ತಿಳಿಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಾರ್ಯಕ್ರಮ ಹಮ್ಮಿಕೊಂಡಂತೆ ನಮ್ಮ ದೇಶದ ಉಳಿದ ರಾಜ್ಯಗಳಲ್ಲೂ ಹಮ್ಮಿಕೊಳ್ಳುವುದು ದೇಶದ ದೃಷ್ಟಿಯಿಂದ ಅತ್ಯಂತ ಅವಶ್ಯಕ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಮನುಷ್ಯನ ಶ್ರೇಯಸ್ಸಿಗೆ ವೇದೋಪನಿಷತ್ತುಗಳೇ ಪ್ರಮಾಣ ಎಂದು ಭಗವಂತ ಗೀತೆಯಲ್ಲಿ ಉಪದೇಶಿಸಿದ್ದಾನೆ. ಇಂತಹ ಉಪದೇಶಗಳನ್ನು ತಿಳಿಸಿ, ಸನಾತನ ಧರ್ಮ ಸಂವರ್ಧನೆಗಾಗಿ ಸನಾತನ ಧರ್ಮ ಸಂವರ್ಧಿನಿ ಸಭಾ ಪ್ರಯತ್ನಿಸುತ್ತಿದೆ. ಸಂನ್ಯಾಸಾಶ್ರಮ ಧರ್ಮಪಾಲನೆಗೆ ವೇದೋಪನಿಷತ್ತು ಮೊದಲಾದವುಗಳು ಪ್ರಮಾಣ ಹಾಗೂ ಮಠಾಧೀಶರಾಗಿರುವುವವರಿಗೆ ಶ್ರೀ ಶಂಕರರಿಂದ ವಿರಚಿತವಾದ ಮಠಾಮ್ನಾಯ ಪ್ರಮಾಣ. ಇದಕ್ಕೆ ವ್ಯತಿರಿಕ್ತವಾದ ಜೀವನ ನಡೆಸುವ ಹಾಗೂ ಅತ್ಯಾಚಾರ, ಅನೈತಿಕ ಸಂಬಂಧ ಮೊದಲಾದ ಗಂಭೀರ ಆರೋಪಗಳನ್ನು ಹೊತ್ತ ಮಠಾಧೀಶರನ್ನು ನಮ್ಮ ಸಂಸ್ಥೆಯಿಂದ ಕೈಬಿಡಲು ತೀರ್ಮಾನಿಸಲಾಯಿತು. ಆದರೆ ಆ ಮಠಗಳು ಯೋಗ್ಯರಾದ ನಿಷ್ಕಳಂಕ ವ್ಯಕ್ತಿಗಳಿಂದ ಮುಂದುವರಿಯಬೇಕೆಂದು ಸಂಸ್ಥೆ ಅಭಿಪ್ರಾಯ ಪಟ್ಟಿದೆ.

ವೈಶಾಖ ಶುಕ್ಲ ಪಂಚಮಿ ಶ್ರೀ ಶಂಕರಜಯಂತ್ಯುತ್ಸವ. ಈ ಉತ್ಸವದಲ್ಲಿ ಶ್ರೀ ಶಂಕರರ ಅಷ್ಟೋತ್ತರ ಪಾರಾಯಣದ ಜೊತೆ ಭಾಷ್ಯ-ಪ್ರಕರಣಗ್ರಂಥ-ಸ್ತೋತ್ರ ಹಾಗೂ ಶಂಕರ ದಿಗ್ವಿಜಯಗಳ ಪಾರಾಯಣವನ್ನು ಐದು ದಿನಗಳ ಕಾಲ ಎಲ್ಲ ಆಸ್ತಿಕರು ಮಾಡುವಂತೆ ತಮ್ಮ ತಮ್ಮ ಮಠಗಳ ಶಿಷ್ಯರುಗಳಲ್ಲಿ ಜಾಗೃತಿ ಮೂಡಿಸಬೇಕೆಂದು ನಿರ್ಣಯವನ್ನು ಕೈಗೊಳ್ಳಲಾಯಿತು.

http://publictv.in/chikkamagaluru-swamijies-in-sanatan-dharma-samvardhini-sabha-sringeri-mutt/

Other links: http://policevarthe.com/18-02-2018-03/

ರಾಘವೇಶ್ವರ ಪ್ರಕರಣ: ಮುಂದುವರಿದ ಶೀಲಗೆಟ್ಟ ಸಂಬಂಧ

ರಾಘವೇಶ್ವರ ಪ್ರಕರಣ: ಮುಂದುವರಿದ ಶೀಲಗೆಟ್ಟ ಸಂಬಂಧ

ಸಂಪಾದಕೀಯ
ವಾರ್ತಾ ಭಾರತಿ : 15 Jan, 2018
Varthabharathi

ಸ್ವತಃ ನ್ಯಾಯಾಧೀಶರೇ ಶೀಲಗೆಟ್ಟ ಸಂಬಂಧವೆಂದು ಅನುಮಾನ ವ್ಯಕ್ತಪಡಿಸಿರುವ ರಾಘವೇಶ್ವರ ಸ್ವಾಮೀಜಿಯ ಪ್ರಕರಣದ ವಿಚಾರಣೆಯೆಂಬ ಕಣ್ಣು ಮುಚ್ಚಾಲೆಯಾಟದಲ್ಲಿ ಇನ್ನೋರ್ವ ನ್ಯಾಯಾಧೀಶರು ತಮ್ಮ ಕಣ್ಣಿಗೆ ಪಟ್ಟಿಕಟ್ಟಿ ಆಟದಿಂದ ಹೊರಬಿದ್ದಿದ್ದಾರೆ. ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಹೊಸನಗರ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳನ್ನು ಆರೋಪ ಮುಕ್ತಗೊಳಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಹಿಂದೆ ಸರಿದಿದ್ದಾರೆ. ಈ ಮೂಲಕ ಸುಮಾರು ಏಳು ಮಂದಿ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿದಂತಾಯಿತು. ಈ ಮೂಲಕ ತಮ್ಮ ನ್ಯಾಯ ವ್ಯವಸ್ಥೆಯೆನ್ನುವುದು ಒಬ್ಬ ಮಠಾಧೀಶರ ಪೀಠಕ್ಕಿಂತ ದೊಡ್ಡದಲ್ಲ ಎಂಬ ಪರೋಕ್ಷ ತೀರ್ಪೊಂದನ್ನು ನೀಡಿದ್ದಾರೆ.

ಈ ವಿಚಾರಣೆಯಿಂದ ಹಿಂದೆ ಸರಿದವರಲ್ಲಿ ನಾಲ್ವರಂತೂ, ತಾವು ವಿಚಾರಣೆಯಿಂದ ಹಿಂದೆ ಸರಿದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನೇ ತಿಳಿಸಲಿಲ್ಲ. ವಿಪರ್ಯಾಸವೆಂದರೆ ನ್ಯಾ. ಕೆ.ಎನ್. ಫಣೀಂದ್ರ ಯಾಕೆ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ ಎನ್ನುವುದನ್ನು ಸ್ವತಃ ಮಠದ ಶ್ರೀಗಳ ಮಾಧ್ಯಮ ಕಾರ್ಯದರ್ಶಿ ತಮ್ಮದೊಂದು ಪ್ರಕಟನೆಯನ್ನು ನೀಡಿ ಸಮರ್ಥಿಸಿಕೊಂಡಿದ್ದಾರೆ. ಅಂದರೆ ನ್ಯಾಯಾಧೀಶರ ಪರವಾಗಿ ಆರೋಪಿ ಸ್ಥಾನದಲ್ಲಿರುವ ಸ್ವಾಮೀಜಿಯೇ ವಕಾಲತಿಗಿಳಿದಿದ್ದಾರೆ. ದೂರುದಾರ್ತಿಗೆ ನ್ಯಾಯಾಧೀಶರ ಮೇಲಿರುವ ಅವಿಶ್ವಾಸವೇ ಫಣೀಂದ್ರ ಅವರು ವಿಚಾರಣೆಯಿಂದ ಹಿಂದೆ ಸರಿಯುವುದಕ್ಕೆ ಕಾರಣ ಎಂದು ಅವರು ಹೇಳಿಕೆ ನೀಡಿದ್ದಾರೆ. ಸ್ವಾಮೀಜಿಯನ್ನು, ನ್ಯಾಯಾಧೀಶರನ್ನು ಜೊತೆ ಜೊತೆಗೇ ಈ ಪ್ರಕಟನೆಯಲ್ಲಿ ಸಮರ್ಥಿಸಿಕೊಳ್ಳಲಾಗಿದೆ. ಕುಂಬಳಕಾಯಿ ಕದ್ದವ ಹೆಗಲು ಮುಟ್ಟಿ ನೋಡಿದಂತಿದೆ ಈ ಮಾಧ್ಯಮ ಪ್ರಕಟನೆೆ.

ಒಂದಂತೂ ಸತ್ಯ. ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಶ್ರೀಗಳನ್ನು ಈ ಹಿಂದೆ ನ್ಯಾಯಾಲಯ ಆರೋಪ ಮುಕ್ತಗೊಳಿಸಿರಬಹುದು. ಆದರೆ ರಾಘವೇಶ್ವರ ಸ್ವಾಮೀಜಿಗೂ ಮಹಿಳೆಗೂ ಇರುವ ಸಂಬಂಧವನ್ನು ಅದು ನಿರಾಕರಿಸುವ ಧೈರ್ಯ ಮಾಡಿರಲಿಲ್ಲ. ಅತ್ಯಾಚಾರದ ಬದಲಿಗೆ ಅದನ್ನು ಶೀಲಗೆಟ್ಟ ಸಂಬಂಧ ಎಂಬುದಾಗಿ ನಾಜೂಕಾಗಿ ಕರೆದರು. ಸ್ವಾಮೀಜಿಯಂತಹ ಉನ್ನತ ಸ್ಥಾನದಲ್ಲಿರುವವರು ಶೀಲಗೆಡುವುದು ‘ಅಪರಾಧ’ ಅಲ್ಲವಾಗಿರುವುದರಿಂದ, ರಾಘವೇಶ್ವರರು ಆರೋಪ ಮುಕ್ತರಾಗಿದ್ದಾರೆ ಎಂದು ಅವರ ಭಕ್ತರು ಪಟಾಕಿ ಸಿಡಿಸಿ ಸಂಭ್ರಮವನ್ನೂ ಪಟ್ಟಿದ್ದಾರೆ. ‘ಅತ್ಯಾಚಾರ ಆರೋಪ’ ಹೊತ್ತು ಜೈಲು ಸೇರುವುದಕ್ಕಿಂತ, ‘ಶೀಲಗೆಡುವ’ ಶಿಕ್ಷೆಯನ್ನು ಹೊತ್ತು ಪೀಠದಲ್ಲಿ ಮುಂದುವರಿಯುವುದು ಅವರಿಗೆ ಹೆಮ್ಮೆಯ ವಿಷಯವೆನಿಸಿರಬಹುದು. ಮುಖ್ಯವಾಗಿ, ಈ ಶೀಲ ಎನ್ನುವುದು ಕೇವಲ ಹೆಣ್ಣಿಗಷ್ಟೇ ಸೀಮಿತವಾದಂತಹ ಪದವಲ್ಲ. ಶೀಲ ದೇಹಕ್ಕಷ್ಟೇ ಸಂಬಂಧಪಡುವುದಿಲ್ಲ. ಅದು ವ್ಯಕ್ತಿಯ ಚಾರಿತ್ರಕ್ಕೆ ಸಂಬಂಧಪಟ್ಟದ್ದು. ಆದುದರಿಂದ ಇದು ಗಂಡಿಗೂ ಅನ್ವಯವಾಗುತ್ತದೆ. ಅಷ್ಟೇ ಅಲ್ಲ, ಶೀಲವೆನ್ನುವುದು ಬೇರೆ ಬೇರೆ ಸ್ಥಾನ- ಮಾನಗಳಿಗೂ ಅನ್ವಯವಾಗುತ್ತದೆ. ಒಬ್ಬ ಸ್ವಾಮೀಜಿಯ ಶೀಲ, ಒಂದು ನ್ಯಾಯ ವ್ಯವಸ್ಥೆಯ ಶೀಲ, ರಾಜಕಾರಣದ ಶೀಲ ಹೀಗೆ ಆಯಾಯ ಸ್ಥಾನಗಳೂ ಶೀಲವನ್ನು ತನ್ನದಾಗಿಸಿಕೊಂಡಿದ್ದು, ಅದು ಕೆಡದಂತೆ ನೋಡಿಕೊಳ್ಳುವುದು ಆ ಸ್ಥಾನವನ್ನು ಅಲಂಕರಿಸಿದವರ ಕರ್ತವ್ಯ. ಇಲ್ಲಿ ಸ್ವಾಮೀಜಿಯ ಶೀಲದ ಬಗ್ಗೆ ನಾಡು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ನ್ಯಾಯವ್ಯವಸ್ಥೆ ಮಾತ್ರ ಸಂವಿಧಾನೇತರ ಶಕ್ತಿಗಳ ಜೊತೆಗೆ ಶೀಲಗೆಟ್ಟ ಸಂಬಂಧವನ್ನು ಹೊಂದುವುದು ಆತಂಕಕಾರಿ ವಿಷಯ.

ರಾಘವೇಶ್ವರ ಶ್ರೀ ಪ್ರಕರಣದಲ್ಲಿ ಇಂತಹದೊಂದು ಶೀಲಗೆಟ್ಟ ಸಂಬಂಧ ಕೆಲಸ ಮಾಡಿದೆಯೇ ಎನ್ನುವ ಆತಂಕವನ್ನು ನಾಡಿನ ಹಲವು ಸಂವಿಧಾನ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ರಾಘವೇಶ್ವರ ಸ್ವಾಮಿಯನ್ನು ಆರೋಪ ಮುಕ್ತಗೊಳಿಸಿದ ವಿಧಾನವನ್ನೇ ನಾವು ಗಮನಿಸೋಣ. ರಾಘವೇಶ್ವರ ಪ್ರಕರಣದಲ್ಲಿ, ಶೀಲ ಎನ್ನುವುದನ್ನು ನ್ಯಾಯಾಲಯ ಕೇವಲ ದೈಹಿಕ ಸಂಬಂಧಗಳಿಗೆ ಸಂಬಂಧಿಸಿ ಹೇಳಲು ಪ್ರಯತ್ನ ಮಾಡಿದೆ. ಶೀಲದ ಹೆಸರಿನಲ್ಲಿ ಅದು ಹೆಣ್ಣನ್ನು ಮುಖ್ಯವಾಗಿ ಸಂತ್ರಸ್ತೆಯನ್ನು ಗುರಿಯಾಗಿಸಲು ಯತ್ನಿಸಿದೆ. ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿರುವುದನ್ನು ಸಾರಾಸಗಟಾಗಿ ನ್ಯಾಯಾಲಯನಿರಾಕರಿಸಿದರೂ, ರಾಘವೇಶ್ವರ ಸ್ವಾಮೀಜಿ ಮತ್ತು ಮಹಿಳೆಯ ನಡುವೆ ಲೈಂಗಿಕ ಸಂಬಂಧ ವಿರುವುದನ್ನು ನಿಜ ಎಂದು ಒಪ್ಪಿಕೊಂಡಿದೆ. ಅದು ಶೀಲಗೆಟ್ಟ ಸಂಬಂಧವಾಗಿರುವುದರಿಂದ ರಾಘವೇಶ್ವರ ಶ್ರೀ ಪ್ರಕರಣದಲ್ಲಿ ಅವರು ನಿರಪರಾಧಿಗಳು ಎಂಬ ತೀರ್ಮಾನವೊಂದಕ್ಕೆ ನ್ಯಾಯಾ ಲಯ ಬಂದಿದೆ. ಹಲವು ತಿಂಗಳುಗಳಿಂದ ಈ ಅನೈತಿಕ ಸಂಬಂಧ ಮುಂದುವರಿದುಕೊಂಡು ಬಂದಿರುವುದರಿಂದ, ನ್ಯಾಯಾಲಯ ಇದನ್ನು ಅತ್ಯಾಚಾರ ಎಂದು ನಂಬಲು ಸಿದ್ಧವಿಲ್ಲ.

ಒಂದು ಹೆಣ್ಣಿನ ಮೇಲೆ ಅತ್ಯಾಚಾರವೆಸಗಲು ದೈಹಿಕ ಬಲ ಮಾತ್ರವಲ್ಲ, ತನ್ನ ಸುತ್ತಮುತ್ತಲಿರುವ ಧಾರ್ಮಿಕ, ರಾಜಕೀಯ ಬಲವನ್ನೂ ಬಳಸಿಕೊಳ್ಳಬಹುದು ಎನ್ನುವ ಅಂಶವನ್ನು ನ್ಯಾಯಾಲಯ ಉದ್ದೇಶಪೂರ್ವಕವಾಗಿ ಗಮನಕ್ಕೆ ತೆಗೆದುಕೊಂಡಿಲ್ಲ. ಈ ಶಕ್ತಿಗಳ ಮುಂದೆ ಹೆಣ್ಣಿನ ಧ್ವನಿ ಎಷ್ಟು ಕ್ಷೀಣವಾಗಿರುತ್ತದೆ ಮತ್ತು ಹೆಣ್ಣು ಎಷ್ಟು ಅಸಹಾಯಕಳಾಗಬೇಕಾಗುತ್ತದೆ ಎಂಬ ಬಗ್ಗೆ ನ್ಯಾಯಾಲಯ ಜಾಣ ಕುರುಡುತನವನ್ನು ಪ್ರದರ್ಶಿಸಿದೆ. ಹಾಗೆ ನೋಡಿದರೆ ರಾಘವೇಶ್ವರರ ಜೊತೆಗೆ ಶೀಲಗೆಟ್ಟ ಸಂಬಂಧವನ್ನು ಹೊಂದಿದವರು ಅಸಹಾಯಕ ಮಹಿಳೆಯಷ್ಟೇ ಅಲ್ಲ ಎನ್ನುವುದು ಈ ಪ್ರಕರಣದ ವಿಚಾರಣೆಯ ಇತಿಹಾಸ ನೋಡಿದರೆ ಬಹಿರಂಗವಾಗುತ್ತದೆ.

ಈ ನಾಡಿನ ಪತ್ರಿಕೆಗಳು, ನ್ಯಾಯ ವ್ಯವಸ್ಥೆಯೊಳಗಿನ ಜನರು, ರಾಜಕಾರಣಿಗಳು ರಾಘವೇಶ್ವರ ರೊಂದಿಗೆ ಇಟ್ಟುಕೊಂಡ ಲಜ್ಜೆಗೆಟ್ಟ, ಶೀಲಗೆಟ್ಟ ಸಂಬಂಧಗಳನ್ನು ನಾವು ಗುರುತಿಸಬಹುದು.ರಾಘವೇಶ್ವರ ಸ್ವಾಮೀಜಿಯ ಮೇಲೆ ಅತ್ಯಾಚಾರ ಪ್ರಕರಣವನ್ನು ದಾಖಲಿಸುವ ಸಂದರ್ಭದಲ್ಲೇ ಸಂತ್ರಸ್ತೆ ಸಂಕಟಗಳನ್ನು, ಸಂಕಷ್ಟಗಳನ್ನು ಎದುರಿಸಬೇಕಾಯಿತು. ಆರೋಪಿಸಿದ ಸಂತ್ರಸ್ತೆಯೇ ಜೈಲು ಸೇರಬೇಕಾದಂತಹ ವಿಪರ್ಯಾಸವನ್ನು ನಾಡಿನ ಜನರು ನೋಡಬೇಕಾಯಿತು. ಅಷ್ಟೇ ಅಲ್ಲ, ಹೊರಗಿನ ತೀವ್ರ ಒತ್ತಡದ ಕಾರಣದಿಂದ, ಆಕೆಯ ಕುಟುಂಬದ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಯಿತು.ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಜನರು ಯಾರು ಎನ್ನುವು ದನ್ನು ಬಹಿರಂಗಪಡಿಸಲು ನಮ್ಮ ಕಾನೂನು ವ್ಯವಸ್ಥೆಗೆ ಸಾಧ್ಯವಾಗಲಿಲ್ಲ. ರಾಘವೇಶ್ವರ ಸ್ವಾಮೀಜಿ ಯ ಜೊತೆಗೆ ಪೊಲೀಸರು ಶೀಲಗೆಟ್ಟ ಸಂಬಂಧವನ್ನು ಹೊಂದಿರುವುದಕ್ಕೆ ತನಿಖೆಯ ಕುರಿತು ದೂರು ದಾಖಲಿಸುವ ಸಂದರ್ಭ ದಲ್ಲಿ ಅವರ ನಡವಳಿಕೆಯೇ ಸಾಕ್ಷಿ. ಇದರ ಬೆನ್ನಿಗೇ ವಿಚಾರಣೆ ನಡೆಸಿ ನ್ಯಾಯ ನೀಡಬೇಕಾದ ನ್ಯಾಯಾಧೀಶರೇ ಕಾರಣಗಳಿಲ್ಲದೆ ವಿಚಾರಣೆಯಿಂದ ಹಿಂದೆ ಸರಿದರೇ?

ನ್ಯಾಯವ್ಯವಸ್ಥೆ ಯಾವುದೇ ಖಾಸಗಿ ಸಂಸ್ಥೆಯಲ್ಲ. ಅದು ಜನರ ತೆರಿಗೆಯ ಹಣದಿಂದಲೇ ನಿಂತಿದೆ. ನ್ಯಾಯಾಧೀಶರು ತಮಗೆ ತೀರ್ಪು ನೀಡಲು ಇಷ್ಟವಿಲ್ಲದ ಪ್ರಕರಣದಿಂದ ಸಾರಾಸಗ ಟಾಗಿ ಹಿಂದೆ ಸರಿಯುವುದು ಅಥವಾ ಪ್ರಕರಣದಲ್ಲಿ ವೈಯಕ್ತಿಕ ನಿಲುವು, ನಂಬಿಕೆಗಳನ್ನು ಜೋಡಿಸಿಕೊಳ್ಳುವುದು ನ್ಯಾಯವ್ಯವಸ್ಥೆಗೆ ಮಾಡುವ ಅವಮಾನ. ಈ ದೇಶದಲ್ಲಿ ಸ್ವಾಮೀಜಿಗಳಿಗೊಂದು, ಜನಸಾಮಾನ್ಯರಿಗೊಂದು ನ್ಯಾಯವಿಲ್ಲ. ಆದುದರಿಂದ, ರಾಘವೇಶ್ವರ ಸ್ವಾಮೀಜಿಯ ಅತ್ಯಾಚಾರ ಪ್ರಕರಣದಲ್ಲಿ ವೈಯಕ್ತಿಕವಾದ ನಿಲುವುಗಳನ್ನೆಲ್ಲ ಪಕ್ಕಕ್ಕಿಟ್ಟು ಅದನ್ನು ವಿಚಾರಣೆ ನಡೆಸುವುದು ನ್ಯಾಯಾಧೀಶರ ಕರ್ತವ್ಯವಾಗಿತ್ತು. ಆದರೆ ಅವರೇ ವಿಚಾರಣೆಗೆ ಹಿಂಜರಿಕೆ ವ್ಯಕ್ತಪಡಿಸುವ ಮೂಲಕ, ರಾಘವೇಶ್ವರರ ಜೊತೆಗೆ ಶೀಲಗೆಟ್ಟ ಸಂಬಂಧವನ್ನು ಹೊಂದಿರುವ ಇನ್ನಷ್ಟು ಜನರ ಮುಖಗಳು ಹೊರ ಬಿದ್ದವು.

ಒಬ್ಬ ಸ್ವಾಮೀಜಿಯ ಮೇಲಿನ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೊದಲೇ ಅದರಿಂದ ನ್ಯಾಯಾಧೀಶರು ಹಿಂದೆ ಸರಿಯುತ್ತಿರುವುದು ಪದೇ ಪದೇ ನಡೆದಾಗ ಅದರ ಕುರಿತಂತೆ ಜನರು ಅನುಮಾನ ವ್ಯಕ್ತಪಡಿಸುವುದು, ನ್ಯಾಯವ್ಯವಸ್ಥೆಯ ವಿಶ್ವಾಸಾರ್ಹತೆ ಪ್ರಶ್ನೆಗೊಳಗಾಗುವುದು ಸಹಜವಾಗಿದೆ. ರಾಘವೇಶ್ವರ ಪ್ರಕರಣದಲ್ಲಿ ಇಂದು ಸಂತ್ರಸ್ತೆಯಾಗಿ ಬರೇ ರಾಮಕಥಾ ಗಾಯಕಿ ಪ್ರೇಮಲತಾ ನಿಂತಿಲ್ಲ. ಅವರ ಜೊತೆ ಜೊತೆಗೆ ನ್ಯಾಯವ್ಯವಸ್ಥೆಯೂ ತನಗಾಗಿರುವ ಅನ್ಯಾಯಕ್ಕೆ ನ್ಯಾಯಕೇಳುವಂತಹ ಸ್ಥಿತಿಯಲ್ಲಿ ನಿಂತಿದೆ. ಇತ್ತೀಚೆಗೆ ನಮ್ಮ ಉನ್ನತ ನ್ಯಾಯವ್ಯವಸ್ಥೆಯೊಳಗಿನ ಬಿರುಕುಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅದರೊಳಗೆ ನಡೆಯುತ್ತಿರುವ ಹಸ್ತಕ್ಷೇಪಗಳನ್ನು ಪ್ರತಿಭಟಿಸಿ ನಾಲ್ವರು ಹಿರಿಯ ನ್ಯಾಯಾಧೀಶರೇ ಬೀದಿಗೆ ಬಂದಿ ದ್ದಾರೆ. ರಾಘವೇಶ್ವರ ಸ್ವಾಮೀಜಿಯ ಪ್ರಕರಣದಲ್ಲಿ ನ್ಯಾಯಾಧೀಶರ ಅನುಮಾನಾಸ್ಪದ ನಡಿಗೆ ಹೀಗೇ ಮುಂದುವರಿದರೆ, ನ್ಯಾಯಾಧೀಶರ ವಿರುದ್ಧವೇ ಹಿರಿಯ ಸಂವಿಧಾನ ತಜ್ಞರು, ರಾಜ್ಯದ ವಕೀಲರು ಬೀದಿಗೆ ಬರುವ ಸನ್ನಿವೇಶ ನಿರ್ಮಾಣವಾಗಬಹುದು. ಅದಕ್ಕೆ ಮೊದಲು, ಈ ನ್ಯಾಯ ವ್ಯವಸ್ಥೆಯೊಳಗಿನ ಕೆಲವು ಶೀಲಗೆಟ್ಟ ಸಂಬಂಧಗಳನ್ನು ಗುರುತಿಸಿ ಸರಿಪಡಿಸಬೇಕಾದ ಅಗತ್ಯವಿದೆ.

source: http://m.varthabharati.in/article/2018_01_15/113938